ಡಿಕೆ ಶಿವಕುಮಾರ್ ಅವರ ಅಸಲಿ ಹೆಸರೇನು? ಅವರೇ ಹೇಳಿದ್ದಾರೆ ಕೇಳಿ!

By Suvarna News  |  First Published Dec 28, 2019, 5:40 PM IST

ಯೇಸು ಪ್ರತಿಮೆ ನಿರ್ಮಾಣ ವಿಚಾರ| ಮತ್ತೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್| ಬಿಜೆಪಿಯವರು ಬೇಕಾದರೆ ಭೇಟಿ ಕೊಟ್ಟು ಪರಿಶೀಲನೆ ನಡೆಸಲಿ| ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ನನಗೆ ಏನೂ ಗೊತ್ತಿಲ್ಲ


ರಾಮನಗರ(ಡಿ. 28)  ಕನಕಪುರ ತಾಲೂಕಿನ ಹಾರೋಬೆಲೆ ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ವಿಚಾರ ರಾಜ್ಯಮಟ್ಟದ ಸುದ್ದಿಯಾಗಿ ಬದಲಾಗಿದೆ.

ಕನಕಪುರ ಹಾರೋಹಳ್ಳಿ ಜೈನ್ ಕಾಲೇಜಿನಲ್ಲಿ ಈ ಬಗ್ಗೆ ಡಿಕೆಶಿ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. ಆರ್. ಅಶೋಕ್ ಅವರು ರೆವೆನ್ಯೂ ಮಂತ್ರಿಗಳು. ಅವರು ಬಂದು ಹಾರೋಬೆಲೆಗೆ ಭೇಟಿ ನೀಡಲಿ. ಅಧಿಕಾರಿಗಳನ್ನು ಮಾತ್ರ ಯಾಕೆ ಕಳಿಸುತ್ತಾರೆ? ಕ್ರಿಶ 1600 ಇಸವಿಯಿಂದಲೂ ಆ ಜಾಗಕ್ಕೆ ಒಂದು ಇತಿಹಾಸ ಇದೆ. ಶಿಲೆ, ಪ್ರತಿಮೆ ಎಲ್ಲವೂ ಆ ಸ್ಥಳದಲ್ಲಿ ಇದೆ. ಬಿಜೆಪಿ ನಾಯಕರಿಗೆ ವಿಚಾರ ಗೊತ್ತಿದೆಯೋ ಏನೋ ಗೊತ್ತಿಲ್ಲ ಎಂದು ಹೇಳಿದರು.

Tap to resize

Latest Videos

ಡಿಕೆ ಶಿವಕುಮಾರ್ ವಿರುದ್ಧ ಸರ್ಕಾರಕ್ಕೆ ಏಸು ಅಸ್ತ್ರ!

ಸಿಟಿ ರವಿ, ಆರ್ ಅಶೋಕ್, ಈಶ್ವರಪ್ಪ ಅವರಿಗೆ ಒತ್ತಡ ಇದೆ. ದೊಡ್ಡವರು ಅವರು ಏನೆ ಏನೋ ಮಾತಾಡ್ತಾರೆ ಎಂದು ಅನಂತ್ ಕುಮಾರ್ ಹೆಗಡೆ ಸಾಹೇಬರು ಹೇಳಿದ್ದಾರೆ. ಸ್ಥಳ ವಿಸಿಟ್ ಮಾಡಿ ಪರೀಶೀಲನೆ ನಡೆಸಲಿ ಎಂದು ಸವಾಲು ಹಾಕಿದರು.

ಬಿಜೆಪಿ ಸರ್ಕಾರ ಪ್ರತಿಮೆ ನಿರ್ಮಾಣ ಸ್ಥಳ ವಾಪಸ್ ಪಡೆದುಕೊಂಡ್ರೆ ಎಂಬ ವಿಚಾರದ ಬಗ್ಗೆಯೂ ಮಾತನಾಡಿ,  ಊಹೆ ಮಾಡಿಕೊಂಡು ನಾನು ಯಾಕೆ ಮಾತನಾಡಬೇಕು? ಡಿಕೆ ಶಿವಕುಮಾರ್ ಅವರು ತಮ್ಮ ಹಳ್ಳ ತಾವೇ ತೋಡಿಕೊಳ್ಳುತ್ತಿದ್ದಾರೆ ಎಂಬ ಅಶ್ವತ್ ನಾರಾಯಣ ಹೇಳಿಕೆ ನೀಡುತ್ತಾರೆ. ನಾನು ಹಳ್ಳ ತೊಡಿಕೊಂಡು ಇದ್ದೀನಿ ಅವರು ಬಂದು ಸಮಾಧಿ ಮಾಡಲಿ. ಬಿಜೆಪಿ ನಾಯಕರು ಬೇರೆ ಬೇರೆ ಕಡೆ ಮಾತನಾಡ್ತಾ ಇದ್ದಾರೆ. ಕೆಂಪೇಗೌಡ ಎಂಬ ನನ್ನ ಹೆಸರನ್ನು ಶಿವಕುಮಾರ್ ಎಂದು ಬದಲಾಯಿಸಿಕೊಂಡಿದ್ದೇನೆ. ನಮ್ಮ ಕ್ಷೇತ್ರದ ಶಿವಗಿರಿ ಬೆಟ್ಟವನ್ನು ಕೂಡ ಅಭಿವೃದ್ಧಿ ಮಾಡಿದ್ದೇನೆ. ನನ್ನ ಕ್ಷೇತ್ರದ ಸಾಕಷ್ಟು ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಿದ್ದೇನೆ ಎಂದರು.

ನನ್ನ ಮೇಲೆ ಬಿಜೆಪಿ ನಾಯಕರಿಗೆ ಸಾಕಷ್ಟು ಪ್ರೀತಿ ಇದೆ. ನಮಸ್ತೆ ಸದಾ ವತ್ಸಲೆ ಮಾತೃಭೂಮಿ ಎಂಬ ವಾಕ್ಯ ನನಗೂ ಗೊತ್ತಿದೆ. ಯಾವ ದೇವರು ಯಾವ ಧರ್ಮ  ಯಾರನ್ನು ಆರಾಧನೆ ಮಾಡಬೇಕು ಅಂತಾ ಅವರಿಗೆ ಗೊತ್ತಿದೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ನೇಮಕ ವಿಚಾರ. ಇದರ ಬಗ್ಗೆ ನನಗೇನೂ ಗೊತ್ತಿಲ್ಲ. ನಮ್ಮ ಅಧ್ಯಕ್ಷರು ದಿನೇಶ್ ಗುಂಡೂರಾವ್ ಅವರು ಎಂದು ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರದ ಬಗ್ಗೆ ಹೆಚ್ಚಿಗೆ ಏನನ್ನೂ ಹೇಳಲಿಲ್ಲ.  

click me!