ಮೇ.3ರ ಬಳಿಕವೂ ಕುಡುಕರಿಗೆ ಲಾಕ್‌ಡೌನ್, ಅಮೀರ್‌ಗೆ ಎಚ್ಚರಿಸಿದ್ದ ಕಿಂಗ್ ಖಾನ್; ಏ.27ರ ಟಾಪ್ 10 ಸುದ್ದಿ!

By Suvarna News  |  First Published Apr 27, 2020, 4:50 PM IST

ಮಾರಕ ಕೊರೋನಾ ವೈರಸ್‌ಗೆ ದೇಶದಲ್ಲಿ ಮೊದಲ ರಾಜಕಾರಣಿ ಬಲಿಯಾಗಿದ್ದಾರೆ. ಇತ್ತ ಮೇ.3ರ ಬಳಿಕವೂ ಮದ್ಯ ಮಾರಾಟಕ್ಕೆ ಕರ್ನಾಟಕದಲ್ಲಿ ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಬ್ಲೀಘಿಗಳು ಇದೀಗ ತಮಗೆ ನಾನ್ ವೆಜ್ ಆಹಾರ ನೀಡುವಂತೆ ದಾಂಧಲೆ ನಡೆಸಿದ್ದಾರೆ. ಟೀಂ ಇಂಡಿಯಾದಲ್ಲಿ ಅನ್ಯಾಯಕ್ಕೊಳಗಾಗಿರುವ ಆರ್ ಅಶ್ವಿನ್‌ಗೆ ಐಪಿಎಲ್ ಟೂರ್ನಿಯಲ್ಲೂ ಅನ್ಯಾಯವಾಗಿದೆ. ಕಾಜೋಲ್ ಜೊತೆ ನಟಿಸಬೇಡ ಎಂದು ಅಮೀರ್ ಖಾನ್‌ಗೆ ನಟ ಶಾರುಖ್ ಖಾನ್ ಎಚ್ಚರಿಕೆ, ಶ್ರೀಮಂತರಿಗೆ ಕೊರೋನಾ ತೆರಿಗೆ ಸೇರಿದಂತೆ ಏಪ್ರಿಲ್ 27ರ ಟಾಪ್ 10 ಸುದ್ದಿ.


ಎಣ್ಣೆ ಪ್ರಿಯರಿಗೆ ಮತ್ತೆ ನಿರಾಸೆ: ಮೇ. 15ವರೆಗೆ ಮದ್ಯ ಸಿಗಲ್ಲ!...

Tap to resize

Latest Videos

ಇಂದು ಸೋಮವಾರ ಪ್ರಧಾನಿ ಮೋದಿ ಜೊತೆ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಈ ವೇಳೆ ಬಹುತೇಕ ರಾಜ್ಯಗಳು ಲಾಕ್‌ಡೌನ್ ವಿಸ್ತರಣೆಗೆ ಒಲವು ತೋರಿಸಿದ್ದಾರೆ. ಕರ್ನಾಟಕದದಿಂದ ವಲಯವಾರು ವಿಸ್ತರಣೆ ಮಾಡಿ ಲಾಕ್‌ಡೌನ್ ಮುಂದುವರೆಸುವ ಮನವಿ ಮಾಡಲಾಗಿದೆ. ಅಲ್ಲದೇ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಪುನರುಚ್ಚರಿಸಿದ್ದಾರೆ.


ಪಾಕ್ ಕುಮ್ಮಕ್ಕು: ಭಾರತದೊಳಕ್ಕೆ ನುಗ್ಗಲು 300 ಉಗ್ರರು ಸಜ್ಜು! ...

ಕೊರೋನಾ ವೈರಸ್‌ನಿಂದ ಪಾಕಿಸ್ತಾನದಲ್ಲಿ ನೂರಾರು ಜನರು ಸಾಯುತ್ತಿದ್ದರೂ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಕೈಗೊಳ್ಳುವ ಹಳೆಯ ಚಟವನ್ನು ಮಾತ್ರ ಆ ದೇಶ ಬಿಟ್ಟಿಲ್ಲ. ಕಾಶ್ಮೀರದ ಗಡಿಯಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರದ ಗುಂಟ 16 ಲಾಂಚ್‌ ಪ್ಯಾಡ್‌ಗಳನ್ನು ಪಾಕಿಸ್ತಾನ ಇತ್ತೀಚೆಗೆ ಸಕ್ರಿಯಗೊಳಿಸಿದ್ದು, ಸುಮಾರು 300 ಉಗ್ರರು ಭಾರತದ ಗಡಿಯೊಳಗೆ ನುಸುಳಲು ಕಾಯುತ್ತಿದ್ದಾರೆ ಎಂದು ಗುಪ್ತಚರ ಮೂಲಗಳು ಹೇಳಿವೆ.

ಮಾರಕ ಕೊರೋನಾಗೆ ದೇಶದ ಮೊದಲ ರಾಜಕಾರಣಿ ಬಲಿ!...

ಮಾರಕ ಕೊರೋನಾ ವೈರಸ್‌ಗೆ ಗುಜರಾತ್‌ ಕಾಂಗ್ರೆಸ್‌ ಹಿರಿಯ ಮುಖಂಡ ಹಾಗೂ ಅಹಮದಾಬಾದ್‌ ನಗರಪಾಲಿಕೆ ಹಿರಿಯ ಸದಸ್ಯ ಬದ್ರುದ್ದೀನ್‌ ಶೇಖ್‌ ಅವರು ಬಲಿಯಾಗಿದ್ದಾರೆ. ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ರಾತ್ರಿ ನಿಧನರಾಗಿದ್ದಾರೆ. 

ನಾನ್‌ವೆಜ್‌ ಆಹಾರ ಕೊಡಿ: ಕಾನ್ಪುರ ಆಸ್ಪತ್ರೆಯಲ್ಲಿ ತಬ್ಲೀಘಿ ದಾಂಧಲೆ!

ತಬ್ಲೀಘಿ ಜಮಾತ್‌ನಲ್ಲಿ ಪಾಗ್ಲೊಂಡು ಕೊರೋನಾ ಸೋಂಕು ದೃಢಪಟ್ಟು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ವರ್ತನೆ ಮಿತಿ ಮೀರಿದೆ. ಈ ಹಿಂದೆ ವೈದ್ಯರ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿ, ಉಗಿದದಿದ್ದ ತಬ್ಲೀಘಿ ಸದಸ್ಯರು ಈಗ ನಾನ್‌ವೆಜ್‌ ಆಹಾರಕ್ಕಾಗಿ ಕಾನ್ಪುರ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದಾರೆ.

ಡ್ರಾಪ್ ಮಾಡಿ ಬೆಂಚ್ ಕಾಯಿಸಿದರು, ಕೊನೆಗೆ ಹೊರದಬ್ಬಿದರು; CSK ಸೀಕ್ರೆಟ್ ಬಿಚ್ಚಿಟ್ಟ ಆರ್ ಅಶ್ವಿನ್!

ಸ್ಪಿನ್ನರ್ ಆರ್ ಅಶ್ವಿನ್‌ಗೆ ಟೀಂ ಇಂಡಿಯಾದಲ್ಲಿ ಅನ್ಯಾಯವಾಗುತ್ತಿದೆ ಅನ್ನೋ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಟೆಸ್ಟ್‌ಗೆ ಮಾತ್ರ ಸೀಮಿತಗೊಳಿಸಿ ಆರ್ ಅಶ್ವಿನ್ ಕಡೆಗಣಿಸಲಾಗುತ್ತಿದೆ ಅನ್ನೋ ಆರೋಪವಿದೆ. ಇದೀಗ ಐಪಿಎಲ್ ಟೂರ್ನಿಯಲ್ಲೂ ಅಶ್ವಿನ್‌ಗೆ ಬಹುದೊಡ್ಡ ಅನ್ಯಾವಾಗಿದೆ ಅನ್ನೋದು ಬಯಲಾಗಿದೆ. 


ಕಾಜೋಲ್‌ ಜೊತೆ ನಟಿಸಬೇಡ; ಅಮೀರ್‌ಗೆ ಶಾರುಖ್‌ ಕೊಟ್ಟ ಎಚ್ಚರಿಕೆ?...

90ರ ದಶಕದ ಹಿಟ್ ಜೋಡಿಗಳ ನಡುವೆ ಪೈಪೋಟಿ. ಅವಕಾಶ ಗಟ್ಟಿಸಿಕೊಳ್ಳಲು ಮಾಡಿದ ಪ್ರ್ಯಾಂಕ್ ಫೋನ್‌ ಕಾಲ್  ಬಗ್ಗೆ ಕೊನೆಗೂ ಬಾಯಿಬಿಟ್ಟ ಶಾರುಖ್‌.


ವೋಡಾಫೋನ್-ಐಡಿಯಾ ಡೇಟಾ ಡಬಲ್ ಧಮಾಕಾ...

ಈ ದುನಿಯಾವೇ ಹಾಗೆ ಎಲ್ಲ ಚೌಕಾಸಿ. ಕಡಿಮೆ ದರದಲ್ಲಿ ಯಾವುದು ಬೆಸ್ಟ್ ಸಿಗುತ್ತದೆ ಎಂಬುದನ್ನು ನೋಡುವ ಕಾಲವಿದು. ಅದೂ ಈ ಕೊರೋನಾ ಸಂಕಷ್ಟದಲ್ಲಂತೂ ಕೇಳಬೇಕೆ? ಎಷ್ಟು ಉಳಿಸಿಕೊಳ್ಳುತ್ತೇವೆಯೋ ಅಷ್ಟು ಗಳಿಸಿಕೊಂಡಂತೆ ಎನ್ನುವಂತೆ ಪಾಠ ಕಲಿಸಿಕೊಟ್ಟಿದೆ. ಹೀಗಾಗಿ ಉದ್ಯಮಗಳೂ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಆಫರ್ ನೀಡಬೇಕಾದ ಅನಿವಾರ್ಯತೆ ಇದೆ. ಈಗ ಜಿಯೋ ಯುಗದಲ್ಲಿ ಉಳಿದುಕೊಳ್ಳಲು ಹೆಣಗಾಡುತ್ತಿರುವ ವೋಡಾಫೋನ್-ಐಡಿಯಾ ಡಬಲ್ ಡೇಟಾ ಆಫರ್ ಕೊಟ್ಟಿದೆ. 

ಕೊರೋನಾ ನಿಧಿ ಸಂಗ್ರಹಿಸಲು ಶ್ರೀಮಂತರಿಗೆ 40% ತೆರಿಗೆ?...

ಕೊರೋನಾದಿಂದ ಉಂಟಾದ ಆರ್ಥಿಕ ಬಿಕ್ಕಟ್ಟು ಎದುರಿಸುವುದಕ್ಕೆ ನಿಧಿ ಸಂಗ್ರಹಿಸಲು ಶ್ರೀಮಂತರಿಗೆ ಶೇ.40ರಷ್ಟು‘ಸೂಪರ್‌ ರಿಚ್‌’ ತೆರಿಗೆ ವಿಧಿಸಬೇಕು, ಕೊರೋನಾ ಸೆಸ್‌ ಹೇರಬೇಕು ಎಂದು 50 ಉನ್ನತ ತೆರಿಗೆ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಆದರೆ ಈ ಶಿಫಾರಸಿಗೆ ಕೇಂದ್ರ ಸರ್ಕಾರ ತೀವ್ರ ಕಿಡಿಕಾರಿದೆ. ಅಧಿಕಾರಿಗಳ ಈ ವರ್ತನೆ ತಪ್ಪುಗ್ರಹಿಕೆಯಿಂದ ಕೂಡಿದೆ. ಇದು ಅಶಿಸ್ತಿನ ವರ್ತನೆ ಜತೆಗೆ ಸೇವಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಲಾಕ್‌ಡೌನ್ ನಡುವೆ ಪೊರ್ಶೆ ಕಾರಿನಲ್ಲಿ ಸುತ್ತಾಟ, ಬಸ್ಕಿ ಹೊಡೆಸಿದ ಪೊಲೀಸ್!

ವೀಕ್‌ಎಂಡ್, ರಜಾ ದಿನಗಳಲ್ಲಿ ಹೈವೇ, ನಗರದ ಹೊರವಲಯಗಳಲ್ಲಿ ಸದ್ದು ಮಾಡುವ ದುಬಾರಿ, ಐಷಾರಾಮಿ, ಸ್ಪೋರ್ಟ್ಸ್ ಕಾರುಗಳು ಇದೀಗ ಲಾಕ್‌ಡೌನ್ ಕಾರಣ ಅನಿವಾರ್ಯವಾಗಿ ಮನೆಯಲ್ಲಿ ನಿಂತಿದೆ. ಕೋಟಿ ಕೋಟಿ ಮೌಲ್ಯದ ಕಾರನ್ನು ಹಾಗೇ ನಿಲ್ಲಿಸಿದರೆ ಮಾಲೀಕನ ಮನಸ್ಸು ಕೇಳಬೇಕಲ್ಲ. ಹೀಗೆ ಪೊರ್ಶೆ ಕಾರು ಮಾಲೀಕ ಲಾಕ್‌ಡೌನ್ ನಡುವೆ ಕಾರು ತೆಗೆದು ಒಂದು ರೌಂಡ್ ಹೊರಟಿದ್ದಾನೆ. ಆದರೆ ಪೊಲೀಸರಿಗೆ ಕೈಗೆ ಸಿಕ್ಕಿ ಹೈರಾಣಾಗಿದ್ದಾನೆ.


1 ಸಾವಿರ ಪಿಪಿಇ ಕಿಟ್ ದಾನ ಮಾಡಿದ ಪುಲ್ವಾಮಾ ಹುತಾತ್ಮನ ಪತ್ನಿ!...

ಪುಲ್ವಾಮಾದಲ್ಲಿ ನಡೆದಿದ್ದ ಉಗ್ರ ದಾಳಿಯ ಹುತಾತ್ಮನ ಪತ್ನಿ ನಿಕಿತಾ ಕೌಲ್ ದೌಂಡಿಯಾಲ್ ಬರೋಬ್ಬರಿ ಒಂದು ಸಾವಿರ ಪಿಪಿಇ ಕಿಟ್‌ಗಳನ್ನು ಹರ್ಯಾಣ ಪೊಲೀಸ್ ಇಲಾಖೆಗೆ ನೀಡಿದ್ದಾರೆ. ಈ ಮೂಲಕ ಕೊರೋನಾ ಯೋಧರಿಗೆ ಈ ಸಮರದಲ್ಲಿ ಮತ್ತಷ್ಟು ಬಲ ತುಂಬಿದ್ದಾರೆ.

click me!