ಲೂಡೋ ಗೇಮ್‌ನಲ್ಲಿ ಸೋಲಿಸಿದ ಹೆಂಡತಿ ಬೆನ್ನುಮೂಳೆ ಮುರಿದ ಗಂಡ!

By Suvarna News  |  First Published Apr 27, 2020, 4:35 PM IST

ಲಾಕ್‌ಡೌನ್ ನಡುವೆ ಆನ್‌ಲೈನ್‌ ಗೇಮ್‌ಗೆ ಭಾರೀ ಡಿಮ್ಯಾಂಡ್| ಆನ್‌ಲಲೈನ್‌ ಗೇಮ್‌ ಲೂಡೋದಲ್ಲಿ ನಿರಂತರ ಮೂರು ಬಾರಿ ಪತಿಯನ್ನು ಸೋಲಿಸಿದ ಪತ್ನಿ| ಕುಪಿತಗೊಂಡು ಪತ್ನಿಯ ಬೆನ್ನುಮೂಳೆಯನ್ನೇ ಮುರಿದ ಗಂಡ


ವಡೋದರಾ(ಏ.27): ಕೊರೋನಾ ವೈರಸ್ ತಡೆಯುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಹೀಗಿರುವಾಗ ಮನೆಯಲ್ಲೇ  ಉಳಿದಿರುವ ಜನ ವಿವಿಧ ರೀತಿಯಲ್ಲಿ ಸಮಯ ಕಳಡಯುತ್ತಿದ್ದಾರೆ. ಕೆಲವರು ಪುಸ್ತಕ ಓದುವುದನ್ನು ಆರಂಭಿಸಿದ್ದರೆ, ಇನ್ನು ಕೆಲವರು ಅಡುಗೆ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಇನ್ನು ಕೆವರು ಆನ್‌ಲೈನ್ ಗೇಮ್ಸ್‌ ಮೊರೆ ಹೋಗಿದ್ದಾರೆ. ಮನೆಯಲ್ಲೇ ಉಳಿದುಕೊಳ್ಳುವ ಪರಿಣಾಮ ಹೀಗಿರುವಾಗ ಶೋಷಣೆ, ಹಿಂಸಾಚಾರವೂ ಹೆಚ್ಚಿದೆ. ಸದ್ಯ ಗುಜರಾತ್‌ನ ವಡೋದರಾದಲ್ಲಿ ಪತಿಯೊಬ್ಬ ತನ್ನ ಪತ್ನಿಆನ್‌ಲೈನ್ ಗೇಮ್‌ ಲೂಡೋದಲ್ಲಿ ಸೋಲಿಸಿದಳೆಂಬ ಕಾರಣದಿಂದ ಕೋಪಗೊಂಡು ಆಕೆಯ ಬೆನ್ನುಮೂಳಡಯನ್ನೇ ಮುರಿದಿರುವ ಘಟನೆ ಬೆಳಕಿಗೆ ಬಂದಿದೆ.

ಮದುವೆಯಾಗುವುದಾಗಿ ನಂಬಿಸಿ ದ್ರೋಹ: ಪ್ರಿಯಕರನಿಂದಲೇ ಹತ್ಯೆ ಯತ್ನ!

Tap to resize

Latest Videos

ವಡೋದರಾದ 24 ವರ್ಷದ ಮಹಿಳೆ ತನ್ನ ಪತಿಯನ್ನು ಆನ್‌ಲೈನ್‌ ಲೂಡೋ ಗೇಮ್‌ನಲ್ಲಿ ನಿರಂತರ ಮೂರರಿಂದ ನಾಲ್ಕು ಬಾರಿ ಸೋಲಿಸಿದ್ದಾಳೆ. ಇದಾದ ಬಳಿಕ ಇಬ್ಬರ ನಡುವೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವೇರ್ಪಟ್ಟಿದ್ದು, ಗಂಡ ತನ್ನ ಹೆಂಡತಿಯ ಮೇಲೆ ಕೈ ಮಾಡಿದ್ದು, ಆಕೆಯ ಬೆನ್ನುಮೂಳೆಯನ್ನೇ ಮುರಿದಿದ್ದಾನೆ. 

ಪತಿ ಖಾಸಗಿ ಇಲೆಕ್ಟ್ರಾನಿಕ್ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದು, ಮಹಿಳೆ ಬ್ಯೂಟಿಷಿಯನ್ ಕೋರ್ಸ್ ಮಾಡಿದ್ದಾಳೆ. ಲಾಕ್‌ಡೌನ್ ಹಿನ್ನೆಲೆ ಈಕೆ ಮಕ್ಕಳಿಗೆ ಟ್ಯೂಷನ್‌ ಕೊಡುವ ಕೆಲಸ ಮಾಡುತ್ತಿದ್ದಳು. ಇನ್ನು ಈ ಜಗಳದ ಬಳಿಕ ಗಂಡ ತನ್ನ ಹೆಂಡತಿ ಬಳಿ ಕ್ಷಮೆ ಯಾಚಿಸಿದ್ದು, ಆಕೆ ಪೊಲೀಸರಿಗೆ ದೂರು ನೀಡಲು ನಿರಾಕರಿಸಿದ್ದಾಳೆ.

ದಂಪತಿಗಳನ್ನು ಒಂದು ಮಾಡಲು ಬಂದು ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ

ಈ ಸಂಬಂಧ ಪ್ರತಿಕ್ರಿಯಿಸಿರುವ ಕೌನ್ಸಲರ್ 'ತನ್ನ ಪತ್ನಿ ಗೇಮ್‌ನಲ್ಲಿ ಸೋಲಿಸಿದ್ದುದರಿಂದ ಗಂಡನ ಅಹಂಗೆ ಪೆಟ್ಟು ಬಿದ್ದಂತಾಗದೆ. ಇದನ್ನು ಸ್ವೀಕರಿಸಲು ತಯಾರಿಲ್ಲದ ಆತ ಸಿಟ್ಟಾಗಿ ಈ ಕೃತ್ಯ ಎಸಗಿದ್ದಾನೆ' ಎಂದಿದ್ದಾರೆ.

click me!