ಕೋಡಿ ಮಠದಿಂದ ಆಪತ್ತಿನ ಭವಿಷ್ಯ, ಟೆಸ್ಟ್ ಸರಣಿ ಭಾರತದ ಕೈವಶ; ಅ.22ರ ಟಾಪ್ 10 ಸುದ್ದಿ!

Published : Oct 22, 2019, 04:47 PM ISTUpdated : Oct 22, 2019, 05:45 PM IST
ಕೋಡಿ ಮಠದಿಂದ ಆಪತ್ತಿನ ಭವಿಷ್ಯ, ಟೆಸ್ಟ್ ಸರಣಿ ಭಾರತದ ಕೈವಶ; ಅ.22ರ ಟಾಪ್ 10 ಸುದ್ದಿ!

ಸಾರಾಂಶ

ಕೋಡಿ ಮಠದ ಸ್ವಾಮೀಜಿ ಮತ್ತೊಂದು ಭವಿಷ್ಯ ನುಡಿದಿದ್ದಾರೆ. ಭಾರಿ ಅನಾಹುತದ ಕುರಿತು ಮುನ್ಸೂಚನೆ ನೀಡಿದ್ದಾರೆ. ಸೌತ್ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯನ್ನು ಭಾರತ 3-0 ಅಂತರದಿಂದ ಗೆದ್ದು ಸಂಭ್ರಮಿಸಿದೆ. ನಮ್ಮ ಕುಟುಂಬ ತಪ್ಪು ಮಾಡಿದೆ ಎಂದು ಮಾಜಿ ಮಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಕಾಂಗ್ರೆಸ್ ಮುಖಂಡ ಪಿ.ಚಿದಂಬರಂಗೆ ಜಾಮೀನು, ಮಗುವಿನೊಂದಿಗೆ ನಟಿ ಸಾವು ಸೇರಿದಂತೆ ಅ.22ರ ಟಾಪ್ 10 ಸುದ್ದಿ ಇಲ್ಲಿವೆ.

1) ನಿಜವಾಗುತ್ತಿದೆ ಕೋಡಿ ಶ್ರೀ ಭವಿಷ್ಯ : ಮತ್ತೆ ಕಾದಿದೆ ಜಗತ್ತೆ ಕಂಡರಿಯದ ಅನಾಹುತ!

ಕೋಡಿ ಮಠದ ಸ್ವಾಮೀಜಿ ಹೇಳಿದ ಭವಿಷ್ಯಗಳು ಒಂದೊಂದೇ ನಿಜವಾಗುತ್ತಿದೆ. ಇದೀಗ ಮತ್ತೊಂದು ಭಾರೀ ಅನಾಹುತವೊಂದು ಕಾದಿದೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಸ್ವಾಮೀಜಿ ಹೇಳಿಕೆ ಸಂಚಲನ ಮೂಡಿಸುತ್ತಿದೆ. 

2) ಐಎನ್‌ಎಕ್ಸ್‌ ಕೇಸಲ್ಲಿ ಚಿದುಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ವಿವಿಧ ಪ್ರಕರಣಗಳಲ್ಲಿ ಕಳೆದ ಕೆಲವು ದಿನಗಳಿಂದ ಜೈಲಿನಲ್ಲಿರುವ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂಗೆ ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಆದರೆ, ಇನ್ನೆರೆಡು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ಈ ಮುಖಂಡರಿನ್ನೂ ಕೆಲವು ದಿನಗಳ ಕಾಲ ಜೈಲು ವಾಸ ತಪ್ಪುವುದಿಲ್ಲ. 

3) ಅನರ್ಹ ಶಾಸಕರಲ್ಲಿ ಕೆಲವರು ಕಾಂಗ್ರೆಸ್‌ಗೆ ವಾಪಸ್?

 ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮರಳಲು ಸಜ್ಜಾಗಿದ್ದಾರೆ ಎನ್ನಲಾದ ಕೆಲ ಅನರ್ಹ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮೂಲ ಕಾಂಗ್ರೆಸ್ಸಿಗರ ಮನವೊಲಿಸುವ ಪ್ರಯತ್ನವೊಂದು ಆರಂಭವಾಗಿದೆ.

4) ನಮ್ಮ ಕುಟುಂಬ ತಪ್ಪು ಮಾಡಿದೆ : ಹಾಸನಾಂಬ ಸನ್ನಿಧಿಯಲ್ಲಿ HDK

ಹಾಸನದ ಅಧಿದೇವತೆ ಹಾಸನಾಂಬ ಜಾತ್ರೋತ್ಸವ ಆರಂಭವಾಗಿದ್ದು, ದೇವೇಗೌಡರ ಕುಟುಂಬ ಸದಸ್ಯರು ದೇವಿ ದರ್ಶನ ಪಡೆದಿದ್ದಾರೆ. ಈ ವೇಳೆ ನಮ್ಮ ಕುಟುಂಬ ತಪ್ಪು ಮಾಡಿದೆ ಎಂದ ದೇವಾಲಯದಲ್ಲಿ ಕುಮಾರಸ್ವಾಮಿ ತಪ್ಪೊಪ್ಪಿಕೊಂಡಿದ್ದಾರೆ.

5) ನಡುರಸ್ತೆಯಲ್ಲಿ, ನೀರಿನ ಮಧ್ಯೆ ಡಿಸಿಎಂಗೆ ಪತ್ರ; ಪುಟ್ಟ ಬಾಲಕಿ ಐಡಿಯಾಗೆ ಇಂಟರ್ನೆಟ್ ಫಿದಾ!

ಬಾಗಲಕೋಟೆ ಜಿಲ್ಲೆಯಲ್ಲಿ ಧಾರಾಕಾರ ಸುರಿಯುತ್ತಿರುವ ಮಳೆ ಒಂದೆಡೆಯಾದರೆ, ಅಧಿಕಾರಿಗಳ ನಿರ್ಲ್ಯಕ್ಷ ಇನ್ನೊಂದೆಡೆ. ಮಹಾಮಳೆಗೆ ಮನೆ, ರಸ್ತೆ, ಮತ್ತು ಗದ್ದೆಗಳು ಜಲಾವೃತವಾಗಿವೆ. ಈ ನಡುವೆ ಪುಟ್ಟ ಬಾಲಕಿಯೊಬ್ಬಳು ಜಲಾವೃತವಾಗಿರುವ ರಸ್ತೆಯಲ್ಲಿ ನಿಂತು ಶಾಸಕ ಮತ್ತು ಅಧಿಕಾರಿಗಳಿಗೆ ಬರೆದ ಪತ್ರ ಓದುತ್ತಿರುವ ವಿಡಿಯೋ ವೈರಲ್ ಆಗಿದೆ. ಪತ್ರದಲ್ಲಿ ಶಾಸಕ ಮತ್ತು ಅಧಿಕಾರಿಗಳಿಗೆ ಮಾರ್ಮಿಕವಾಗಿ ತಿವಿದಿದ್ದಾಳೆ.


6) ಹರಿಣಗಳ ಶಿಕಾರಿ; ಸರಣಿ ಕ್ಲೀನ್ ಸ್ವೀಪ್ ಮಾಡಿದ ಟಿಂ ಇಂಡಿಯಾ 

ಮೂರನೇ ದಿನದಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿದ್ದ ಆಫ್ರಿಕಾ ತನ್ನ ಖಾತೆಗೆ ಕೇವಲ ಒಂದು ರನ್ ಅಷ್ಟೇ ಸೇರಿಸಿ 2 ವಿಕೆಟ್ ಕಳೆದುಕೊಂಡಿತು. ಈ ಮೂಲಕ ಹೀನಾಯವಾಗಿ ಸರಣಿ ಸೋತಿತು.

7) ಗಾಳಿಪಟ 2'ಗೆ ನಾಯಕಿಯರು ಬದಲಾದರು!

ನಿರ್ದೇಶಕ ಯೋಗರಾಜ್ ಭಟ್ ಅವರ ಸಿನಿಮಾ ಸೆಟ್ಟೇರುವ ಮುನ್ನವೇ ದೊಡ್ಡ ಬದಲಾವಣೆ ಆಗಿದೆ. ಚಿತ್ರದ ನಿರ್ಮಾಪಕರು ಹಾಗೂ ನಾಯಕಿಯರು ಬದಲಾಗಿದ್ದಾರೆ. ನಟಿಯರಾದ ಶರ್ಮಿಳಾ ಮಾಂಡ್ರೆ, ನಿಶ್ವಿಕಾ ನಾಯ್ಡು ಹಾಗೂ ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್ ಚಿತ್ರದ ನಾಯಕಿ ಯರಾಗಿ ಆಯ್ಕೆ ಆಗಿದ್ದಾರೆ.

8) ಸಮಯಕ್ಕೆ ಬಾರದ ಅಂಬುಲೆನ್ಸ್; ಮಗುವಿನೊಂದಿಗೆ ನಟಿ ಸಾವು!


ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಸಿಗದೇ ಹೆರಿಗೆಯಾದ ಕೂಡಲೇ ತಾಯಿ, ಮಗು ಸಾವನ್ನಪ್ಪಿದ್ದಾರೆ. ಹೆರಿಗೆಯಾದ ತಕ್ಷಣ ತಾಯಿ- ಮಗುವಿನ ಆರೋಗ್ಯ ಗಂಭೀರವಾಗಿದ್ದರಿಂದ ಕೂಡಲೇ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿತ್ತು. ಆದರೆ ಆಂಬುಲೆನ್ಸ್ ಸಿಗದೇ ಸಾವನ್ನಪ್ಪಿದ್ದಾರೆ.

9) ಫೇಸ್ ಬುಕ್ , ವಾಟ್ಸಪ್ ಬಳಕೆ ಮೇಲೆ ನಿಯಂತ್ರಣ ಅತ್ಯಗತ್ಯ

ಪ್ರಜಾಪ್ರಭುತ್ವ ರಾಜಕೀಯಕ್ಕೆ ಅಂತರ್ಜಾಲ ಊಹಿಸಲೂ ಆಗದಷ್ಟುಹಾನಿ ಉಂಟು ಮಾಡುತ್ತಿದ್ದು, ಫೇಸ್‌ಬುಕ್‌, ವಾಟ್ಸಾಪ್‌ನಂತಹ ಮಧ್ಯವರ್ತಿಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. 

10) ದಕ್ಷಿಣದವರನ್ನು‘ ಮದ್ರಾಸಿ’ ಎಂದ ಇನ್ಫೋಸಿಸ್ ಸಿಇಒ: ಷೇರು ಕುಸಿತಕ್ಕೆ ಲಬೋ ಲಬೋ!

ಇನ್ಫೋಸಿಸ್ ಸಿಇಒ ವಿರುದ್ಧ ಕೇಳಿ ಬಂದ ದೂರಿನ ಹಿನ್ನೆಲೆಯಲ್ಲಿ, ಸಂಸ್ಥೆಯ ಷೇರು ಮೌಲ್ಯ ಭಾರೀ ಕುಸಿತ ಕಂಡಿದೆ. ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಸಂಸ್ಥೆಯ ಆರ್ಥಿಕ ಚಟುವಟಿಕೆ ಬಗ್ಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ವಂಚಿಸಿದ್ದಾರೆ ಎಂದು ಉದ್ಯೋಗಿಯೊಬ್ಬರು ಪತ್ರ ಮುಖೇನ ದೂರಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!