
ಲಕ್ನೋ(ಅ.22) ಲೋಕ ಸಭಾ ಚುನಾವಣೆ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೆಶನ್ ಗೆ ಕಾರಣವಾಗಿದ್ದ ರೀನಾ ದ್ವಿವೇದಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.
ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿ ಹಳದಿ ಸೀರೆಯಲ್ಲಿ ಮಿಂಚಿದ್ದರು. ಇವಿಎಂ ಯಂತ್ರವ ಹಿಡಿದು ಹೆಜ್ಜೆ ಹಾಕಿದ್ದ ಪೋಟೋಗಳು ವೈರಲ್ ಆಗಿತ್ತು.
ಹಳದಿ ಸೀರೆಯ ಸಖತ್ ಬೋಲ್ಡ್ ಸ್ಟೆಪ್ಸ್
ಹಲವಾರು ಮಾಧ್ಯಮಗಳಲ್ಲಿ ಇವರ ಬಗ್ಗೆ ವರದಿಗಳು ಪ್ರಕಟವಾದವು. ಮಿಸ್ ಜೈಪುರ ಸ್ಪರ್ಧೆಯಲ್ಲಿಯೂ ರೀನಾ ಪ್ರಶಸ್ತಿ ಮುಡಿಗೇರಿಸಿಕೊಂಡವರು ಎಂಬ ಸಂಗತಿಯೂ ನಂತರ ಗೊತ್ತಾಯಿತು. ನಂತರ ದ್ವಿವೇದಿ ತಾವೇ ಮುಂದಾಗಿ ಬಿಗ್ ಬಾಸ್ ಸೀಸನ್ ನಲ್ಲಿ ಭಾಗವಹಿಸುವ ಇರಾದೆಯನ್ನು ವ್ಯಕ್ತಪಡಿಸಿದ್ದರು.
ಈಕೆಯ ಪೋಟೋ ವೈರಲ್ ಆಗುತ್ತಿದ್ದಂತೆ ಹಳದಿ ಸೀರೆಯಲ್ಲಿ ನಾರಿ ಎಂದು ನೆಟ್ಟಿಗರು ಬಗೆಬಗೆಯ ಕಮೆಂಟ್ ಮಾಡಲು ಆರಂಭಿಸಿದರು. ಆಕೆಯ 9 ನೇ ತರಗತಿ ಮಗ ಸಹ ತನ್ನ ಸ್ನೇಹಿತರಿಗೆ ಅಮ್ಮನನ್ನು ಹಾಗೆ ಕರೆಯುವಂತೆಯೂ ಕೇಳಿಕೊಂಡಿದ್ದ.
ಇದೆಲ್ಲದರ ನಡುವೆ ಆಕೆ 5 ತಿಂಗಳ ಹಿಂದೆ ಅಪ್ ಲೋಡ್ ಮಾಡಿದ್ದ ಪೋಟೋ 1 ಲಕ್ಕಕ್ಕೂ ಅಧಿಕ ಲೈಕ್ಸ್ ಗಿಟ್ಟಿಸಿಕೊಂಡಿತು. ಲೋಕಸಭಾ ಚುನಾವಣೆ ಸದ್ದು ಮುಗಿದ ನಂತರ ಈ ಅಧಿಕಾರಿಯ ಸುದ್ದಿಯೂ ನೇಪಥ್ಯಕ್ಕೆ ಸರಿದಿತ್ತು.
ಹಳದಿ ಸೀರೆಯ ಚುನಾವಣಾಧಿಕಾರಿ; ಕರ್ತವ್ಯಕ್ಕೆ ಸೌಂದರ್ಯವೇ ಮಾರಿ
ಮತ್ತೆ ಈ ಅಧಿಕಾರಿ ಸುದ್ದಿಗೆ ಬರಲು ಕಾರಣವಿದೆ. ಈ ಬಾರಿ ಬಿಳಿ ಸೀರೆಯಲ್ಲಿ ಮಿಂಚಿದ್ದಾರೆ. ಲಕ್ನೋ ಉಪಚುನಾವಣೆ ವೇಳೆ ಕೃಷ್ಣನಗರದಲ್ಲಿ ಮತ್ತೆ ಚುನಾವಣಾ ಕರ್ತವ್ಯಕ್ಕೆ ರೀನಾ ನಿಯೋಜನೆಗೊಂಡಿದ್ದಾರೆ. ಈ ಸಾರಿ ಪಿಂಕ್ ಮತ್ತು ಬಂಗಾರದ ಬಣ್ಣದ ಕಾಂಬಿನೇಶನ್ ಸೀರೆಯಲ್ಲಿ ಮಿಂಚಿದ್ದಾರೆ.
ಜನರು ನನಗೆ ಅಪಾರ ಪ್ರೀತಿ ತೋರಿಸುತ್ತಿದ್ದಾರೆ. ಅವರಿಗೆಲ್ಲ ನಾನು ಆಭಾರಿ. ಜನರು ಪೋಟೋ ತೆಗೆಸಿಕೊಳ್ಳಲು ಬಯಸುತ್ತಾರೆ ಎಂದು ರೀನಾ ಹೇಳುತ್ತಾರೆ.
ಫೇಸ್ ಬುಕ್ ನಲ್ಲಿ 4700 ಫಾಲೋವರ್ಸ್ ಗಳನ್ನು ಹೊಂದಿದ್ದರೆ ಟಿಕ್ ಟಾಕ್ ನಲ್ಲಿ 8700 ಫಾಲೋವರ್ಸ್ ರೀನಾ ಅವರಿಗಿದ್ದಾರೆ. ಅಂದು ಹಳದಿ ಸೀರೆಯುಟ್ಟುಕೊಂಡು ಪೋಸ್ ಕೊಟ್ಟಿದ್ದ ರೀನಾ ಹಸಿರು ವರ್ಣದ ಸೀರೆಯುಟ್ಟು ಸೊಂಟ ಬಳುಕಿಸಿದ್ದು ವೈರಲ್ ಆಗಿತ್ತು.
ಹಿಂದಿ ಬಿಗ್ ಬಾಸ್ ಖ್ಯಾತಿಯ ಹರ್ಯಾಣ ಡಾನ್ಸರ್ ಸಪ್ನಾ ಚೌಧರಿ ಹಾಡಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದ ರೀನಾ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡಿದ್ದರು. ಖುದ್ದು ರೀನಾ ದ್ವಿವೇದಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.