2020-21ರ SSLC ಫಲಿತಾಂಶ ಪ್ರಕಟ, ಬ್ರಿಟಿಷ್ ಹೈಕಮಿಷನರಿಗೆ ಕನ್ನಡ ಪಾಠ; ಆ.9ರ ಟಾಪ್ 10 ಸುದ್ದಿ!

Published : Aug 09, 2021, 04:42 PM ISTUpdated : Aug 09, 2021, 06:52 PM IST
2020-21ರ SSLC ಫಲಿತಾಂಶ ಪ್ರಕಟ, ಬ್ರಿಟಿಷ್ ಹೈಕಮಿಷನರಿಗೆ ಕನ್ನಡ ಪಾಠ; ಆ.9ರ ಟಾಪ್ 10 ಸುದ್ದಿ!

ಸಾರಾಂಶ

ಕೊರೋನಾ ಸವಾಲಿನ ನಡುವೆ ಪರೀಕ್ಷೆ ಬರೆದಿದ್ದ  SSLC ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಂಡಿದೆ. ವಿಧಾನಸಭೆ ಚುನಾವಣೆ ಆರಂಭವಾಗುತ್ತಿದ್ದಂತೆ ರಾಹುಲ್ ಗಾಂಧಿ ಜಮ್ಮು ಕಾಶ್ಮೀರ ಪ್ರವಾಸಕ್ಕೆ ಇಳಿದಿದ್ದಾರೆ. ಬ್ರಿಟಿಷ್‌ ಹೈಕಮಿಷನರ್‌ಗೆ ರಾಹುಲ್ ದ್ರಾವಿಡ್ ಕನ್ನಡ ಪಾಠ ಮಾಡಿದ್ದಾರೆ. ರೈತರಿಗೆ ಆಫರ್ ನೀಡಿದ ಟಾಟಾ ಮೋಟಾರ್ಸ್, ಟಿಎಂಸಿ ವಿರುದ್ಧ ಗಂಭೀರ ಆರೋಪ ಸೇರಿದಂತೆ ಆಗಸ್ಟ್ 9ರ ಟಾಪ್ 10 ಸುದ್ದಿ ಇಲ್ಲಿವೆ.

ಬಿಜೆಪಿ ನಾಯಕನ ಹೆಂಡತಿಯ ಕಿಡ್ನ್ಯಾಪ್, ಗ್ಯಾಂಗ್‌ರೇಪ್: ಟಿಎಂಸಿ ವಿರುದ್ಧ ಗಂಭೀರ ಆರೋಪ!

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರ ಪ್ರಕರಣದ ಕಾವು ತಣ್ಣಗಾಗುವ ಮೊದಲೇ ಸದ್ಯ ಬಿಜೆಪಿ ನಾಯಕನೊಬ್ಬ, ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ತನ್ನ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರದ ನಡೆಸಿದ್ದಾರೆಂಬ ಗಂಭೀರ ಆರೋಪ ಮಾಡಿದ್ದಾರೆ.

Article 370 ರದ್ದಿನ ಬಳಿಕ ರಾಹುಲ್ ಜಮ್ಮು ಕಾಶ್ಮೀರ ಪ್ರವಾಸ: ಹೇಳಿಕೆ ಮೇಲಿದೆ ಎಲ್ಲರ ಚಿತ್ತ!

ವಿಧಾನಸಭೆ ಚುನಾವಣೆ ಆರಂಭವಾಗುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತೆ ಚುರುಕುಗೊಳ್ಳುತ್ತಿವೆ. ಸದ್ಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎರಡು ದಿನಗಳ ಕಣಿವೆ ನಾಡಿನ ಪ್ರವಾಸ ಕೈಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಇಂದು, ಸೋಮವಾರ ಸಂಜೆ ಶ್ರೀನಗರ ತಲುಪಲಿದ್ದಾರೆ.

21ರ ಯುವತಿಯ ಬಟ್ಟೆ ಕಂಡು ಗರಂ ಆದ ತಾಲಿಬಾನಿಯರು, ಗುಂಡು ಹಾರಿಸಿ ಹತ್ಯೆ!

 ಅಫ್ಘಾನಿಸ್ತಾನದ ಉತ್ತರದಲ್ಲಿರುವ ಬಾಲ್ಖ್ ಪ್ರಾಂತ್ಯದಲ್ಲಿ 21 ವರ್ಷದ ಯುವತಿಯನ್ನು ತಾಲಿಬಾನಿಯರು ಹತ್ಯೆಗೈದಿರುವ ಘೋರ ಘಟನೆ ಬೆಳಕಿಗೆ ಬಂದಿದೆ. ಈ ಯುವತಿ ಬಿಗಿಯಾದ ಬಟ್ಟೆಗಳನ್ನು ಧರಿಸಿದ್ದರಿಂದ ಆಕೆಯನ್ನು ಹತ್ಯೆಗೈಯ್ಯಲಾಗಿದೆ ಎಂದು ಅಫ್ಘಾನಿಸ್ತಾನದ ರೇಡಿಯೋ ಆಜಾದಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಕೆಂಪುಕೋಟೆಗೆ ಕಂಟೇನರ್‌ ಕೋಟೆಯ ಭದ್ರತೆ!

ಗಣರಾಜ್ಯೋತ್ಸವದ ವೇಳೆ ರೈತರು ಟ್ರಾಕ್ಟರ್‌ ರಾರ‍ಯಲಿ ನಡೆಸಿ ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದ ಘಟನೆ ಮತ್ತೊಮ್ಮೆ ಮರುಕಳಿಸದಂತೆ ಕಟ್ಟೆಚ್ಚರ ವಹಿಸಿರುವ ದೆಹಲಿ ಪೊಲೀಸರು ಈ ಬಾರಿಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ಬೇಗ ಓಡಿ..! ಬ್ರಿಟಿಷ್‌ ಹೈಕಮಿಷನರ್‌ಗೆ ಕನ್ನಡ ಕಲಿಸಿಕೊಟ್ಟ ಕ್ರಿಕೆಟಿಗ ರಾಹುಲ್ ದ್ರಾವಿಡ್..!

ಇತ್ತೀಚಿನ ದಿನಗಳಲ್ಲಿ ಭಾರತದ ಬ್ರಿಟಿಷ್‌ ಹೈಕಮಿಷನರ್‌ ಅಲೆಕ್ಸ್‌ ಎಲ್ಲಿಸ್ ಕನ್ನಡ ಪದಗಳನ್ನು ಟ್ವಿಟರ್‌ನಲ್ಲಿ ಹೆಚ್ಚಾಗಿ ಬಳಸು ಮೂಲಕ ಗಮನ ಸೆಳೆಯುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಬ್ರಿಟಿಷ್ ಅಧಿಕಾರಿಗೆ ಕನ್ನಡ ಪದ ಕಲಿಸಿಕೊಟ್ಟಿದ್ದಾರೆ.

ಭಾರತವನ್ನು ಪ್ರತಿನಿಧಿಸಿದ ಎಲ್ಲರೂ ಚಾಂಪಿಯನ್‌: ಪ್ರಧಾನಿ ನರೇಂದ್ರ ಮೋದಿ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳು ದೇಶವನ್ನು ಹೆಮ್ಮೆ ಹಾಗೂ ಸಂಭ್ರಮ ಪಡುವಂತೆ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿದ್ದಾರೆ.

ಡಿಕೆ ಶಿವಕುಮಾರ್‌ಗೆ IMA ಸಂಬಂಧ ಇತ್ತಾ? ಜಮೀರ್ ಅಹಮ್ಮದ್ ಖಾನ್ ಟಾಂಗ್

 ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ನಿವಾಸದ ಮೇಲೆ ಇಡಿ ದಾಳಿಯಾಗಿದ್ದು, ಹಲವು ಪ್ರಮುಖ ದಾಖಲೆಗಳನ್ನ ಇಡಿ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ. ಐಎಂಎ ಲಿಂಕ್ ಹಿನ್ನೆಲೆಯಲ್ಲಿ ಇಡಿ ದಾಳಿ ಮಾಡಿದೆ ಎನ್ನಲಾಗುತ್ತಿದೆ. 

ಡಾಲಿ ಧನಂಜಯ್ 'ಹೆಡ್‌ಬುಶ್' ಚಿತ್ರಕ್ಕೆ ಪಾಯಲ್ ನಾಯಕಿ!

ಡಾಲಿಗೆ ಜೋಡಿಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಪಾಯಲ್ ರಜಪೂತ್.

ಕಾರು ಖರೀದಿಗೆ ಟಾಟಾದಿಂದ ಭರ್ಜರಿ ಕೊಡುಗೆ; ರೈತರಿಗೆ 6 ತಿಂಗಳಿಗೊಮ್ಮೆ ಕಂತು ಪಾವತಿ ಸೌಲಭ್ಯ!

ಟಾಟಾ ಮೋಟಾರ್ಸ್ ತನ್ನ ಗ್ರಾಹಕರಿಗೆ ಸುಲಭ ಹಾಗೂ ಆರ್ಥಿಕ ಸಂಕಷ್ಟ ಎದುರಿಸದೆ ಕಾರು ಖರೀದಿಸಲು ಮಹತ್ದ ಹೆಜ್ಜೆ ಇಟ್ಟಿದೆ. ಪ್ಯಾಸೆಂಜರ್ ವಾಹನಗಳ ಮೇಲೆ ವಿಶೇಷ ಕೊಡುಗೆಗಳನ್ನು ನೀಡಲು ಸುಂದರಂ ಫೈನಾನ್ಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆಯೊಂದಿಗೆ ಹಣಕಾಸು ನೆರವು ಘೋಷಿಸಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು
ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!