14 ದಿನ ಕರ್ನಾಟಕ ಲಾಕ್, ಸೇನಾ ಪಡೆ ಜೊತೆ ಮೋದಿ ಟಾಕ್; ಏ.26ರ ಟಾಪ್ 10 ಸುದ್ದಿ!

Published : Apr 26, 2021, 04:45 PM ISTUpdated : Apr 26, 2021, 04:47 PM IST
14 ದಿನ ಕರ್ನಾಟಕ ಲಾಕ್,  ಸೇನಾ ಪಡೆ ಜೊತೆ ಮೋದಿ ಟಾಕ್; ಏ.26ರ ಟಾಪ್ 10 ಸುದ್ದಿ!

ಸಾರಾಂಶ

ಕೊರೋನಾ ಕಾರಣ  14 ದಿನ ಕರ್ನಾಟಕ ಲಾಕ್‌ ಆಗಲಿದೆ ಎಂದು  ಸಿಎಂ ಬಿಎಸ್‌ವೈ ಘೋಷಣೆ ಮಾಡಿದ್ದಾರೆ. 6 ರಿಂದ 10 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಇನ್ನು ಕೊರೋನಾ ಎದುರಿಸಲು ಸೇನಾ ಸಿದ್ಧತೆ ಕುರಿತು ಮೋದಿ ಪರಿಶೀಲನೆ ನಡೆಸಿದ್ದಾರೆ. ಈ ಪರಿಸ್ಥಿತಿಗೆ ಚುನಾವಣಾ ಆಯೋಗ ಕಾರಣ ಎಂದ ಹೈಕೋರ್ಟ್,  ಐಪಿಎಲ್‌ನಿಂದ ಹೊರಬಂದ ಆರ್ ಅಶ್ವಿನ್ ಸೇರಿದಂತೆ ಏಪ್ರಿಲ್ 26ರ ಟಾಪ್ 10 ಸುದ್ದಿ ವಿವರ.

14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ...

ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 14 ದಿನ ಕರ್ನಾಟಕ ಲಾಕ್‌ ಆಗಲಿದೆ ಎಂದು ಸ್ವತಃ ಸಿಎಂ ಬಿಎಸ್‌ವೈ ಘೋಷಣೆ ಮಾಡಿದ್ದಾರೆ. ಇನ್ನೂ ಈ ಲಾಕ್‌ಡೌನ್ ಸಂದರ್ಭದಲ್ಲಿ ಏನು ಇರುತ್ತೆ? ಏನು ಇರಲ್ಲ? ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

14 ದಿನ ಜನತಾ ಕರ್ಫ್ಯೂ: ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ...

ಕೊರೋನಾ ಎದುರಿಸಲು ಸೇನಾ ಪಡೆ ಸಿದ್ಧತೆ ಪರಿಶೀಲಿಸಿದ ಪ್ರಧಾನಿ ಮೋದಿ!...

ಭಾರತದಲ್ಲಿ ಕೊರೋನಾ ವೈರಸ್ ಮೀತಿ ಮೀರಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಭಾರತೀಯ ಸೇನೆ ಅಖಾಡಕ್ಕಿಳಿದಿದೆ. ಇದೀಗ ಪ್ರದಾನಿ  ಮೋದಿ  ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಜೊತೆ ಸೇನಾ ಪಡೆ ಕೈಗೊಂಡಿರುವ ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ. 

ಕೊರೋನಾ ಹೆಚ್ಚಳಕ್ಕೆ ಚುನಾವಣಾ ಆಯೋಗ ಕಾರಣ ಎಂದ ಹೈಕೋರ್ಟ್!...

ಕೊರೋನಾ 2ನೇ ಅಲೆ ಭಾರತದಲ್ಲಿ ಈ ಮಟ್ಟಿಗೆ ಅಬ್ಬರಿಸಲು ಚುನಾವಣಾ ಆಯೋಗವೇ ಕಾರಣ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಕೊರೋನಾ ಸಂಕಷ್ಟ: ಗೂಗಲ್‌ನಿಂದ ಭಾರತಕ್ಕೆ 135 ಕೋಟಿ ನೆರವು...

ಭಾರತದಲ್ಲಿ ಕೋರೋನಾ ಉಲ್ಬಣಗೊಳ್ಳುತ್ತಿರುವುನ್ನು ನೋಡಿ ತಾನು ನೊಂದಿದ್ದೇನೆ. ದೇಶದಲ್ಲಿ ವೈದ್ಯಕೀಯ ಸರಬರಾಜು ಮತ್ತು ಬೆಂಬಲಕ್ಕಾಗಿ 135 ಕೋಟಿ ರೂ.ಗಳ ನೆರವು ವಾಗ್ದಾನ ಮಾಡಿದ್ದೇನೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಸೋಮವಾರ ಹೇಳಿದ್ದಾರೆ.

ಮೊದಲೇ ಎಚ್ಚರಿಸಿದ್ದರೂ ನಿರ್ಲಕ್ಷಿಸಿದ್ದ ಸರ್ಕಾರ?...

ಸಂಸದೀಯ ಸಮಿತಿಯೊಂದು ಆಮ್ಲಜನಕದ ಉತ್ಪಾದನೆ, ದಾಸ್ತಾನು ಹಾಗೂ ಪೂರೈಕೆಯ ಕುರಿತು ಮಹತ್ವದ ಸೂಚನೆಗಳನ್ನು ಸರ್ಕಾರಕ್ಕೆ ನೀಡಿತ್ತು. ಆದರೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನಲಾಗಿದೆ.

ಕುಟುಂಬ ಸದಸ್ಯರಿಗೆ ಕೊರೋನಾ: IPLನಿಂದ ಹೊರ ಬಂದ ಅಶ್ವಿನ್...

ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ IPLನಿಂದ ಭಾನುವಾರ ಹೊರ ಬಂದಿದ್ದಾರೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ತಮ್ಮ ಕುಟುಂಬವನ್ನು ಬೆಂಬಲಿಸಲು ಇಂತಹೊದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ ಅಶ್ವಿನ್.

ಡಾ.ರಾಜ್‌ ಜೊತೆ ಸ್ಟಾರ್ ನಟಿ ಬಾಲ್ಯದ ಪೋಟೋ ವೈರಲ್; ಅಣ್ಣಾವ್ರ ಕುಟುಂಬದ ಜೊತೆ ನಂಟು!...

ಡಾ.ರಾಜ್‌ಕುಮಾರ್ ಹುಟ್ಟು ಹಬ್ಬದ ದಿನ ಹಳೇ ಫೋಟೋವೊಂದನ್ನು ಶೇರ್ ಮಾಡಿಕೊಂಡ ದಕ್ಷಿಣ ಭಾರತದ ಸುಂದರಿ. ರಾಜ್‌ ಕುಟುಂಬದ ಜೊತೆ ಏನು ಸಂಬಂಧ ಎಂದು ಪ್ರಶ್ನಿಸಿದ ನೆಟ್ಟಿಗರು....

ಒಮ್ಮೆ ಚಾರ್ಜ್ ಮಾಡಿದ್ರೆ 100 ಕಿ.ಮೀ.ವರೆಗೆ ಓಡುವ ಇ- ಸೈಕಲ್ ರೋಡ್‌ಲರ್ಕ್ ಬಿಡುಗಡೆ!...

ನೆಕ್ಸ್‌ಜು ಮೊಬಿಲಿಟಿ ಕಂಪನಿಯ ಹೊಸ ಇ-ಸೈಕಲ್ ರೋಡ್‌ಲರ್ಕ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸೈಕಲ್ ಅನ್ನು ನೀವು ಒಮ್ಮೆ ಚಾರ್ಜ್ ಮಾಡಿದರೆ, ಅದು 100 ಕಿ.ಮೀ. ವ್ಯಾಪ್ತಿಯವರೆಗೆ ಓಡುತ್ತದೆ. ಇಷ್ಟೊಂದು ದಕ್ಷತೆಯನ್ನು ಒದಗಿಸುವ ಬೇರೆ ಯಾವುದೇ ಇ-ಸೈಕಲ್ ಭಾರತದಲ್ಲಿಲ್ಲ. ಇದರ ಬೆಲೆ 42 ಸಾವಿರ ರೂಪಾಯಿ ಮಾತ್ರ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌