ಲಾಕ್‌ಡೌನ್ ಘೋಷಣೆ ಬೆನ್ನಲ್ಲೇ ಸಿಎಂ ಮುಂದೆ ಮಹತ್ವದ ಬೇಡಿಕೆ ಇಟ್ಟ ಡಿಕೆಶಿ

By Suvarna News  |  First Published Apr 26, 2021, 4:40 PM IST

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು 14 ದಿನ ಕರ್ನಾಟದಕಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.


ಬೆಂಗಳೂರು, (ಏ.26): ಕರ್ನಾಟಕದಲ್ಲಿ 14 ದಿನ ಲಾಕ್‌ಡೌನ್ ಘೋಷಣೆ ಮಾಡಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿಎಂ ಯಡಿಯೂರಪ್ಪ ಅವರ ಬಳಿ ಮಹತ್ವದ ಮನವಿ ಮಾಡಿಕೊಂಡಿದ್ದಾರೆ.

 ಸಿಎಂ ಯಡಿಯೂರಪ್ಪ ಲಾಕ್‌ಡೌನ್ ಎಂಬ ಪದವನ್ನು ಮಾತ್ರ ಬಳಸಿಲ್ಲ. ಆದರೆ, ಪರಿಸ್ಥಿತಿ ಕೈಮೀರಿದೆ ಎಂದು ಒಪ್ಪಿಕೊಂಡಿದ್ದಾರೆ. ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ದೇಶದಲ್ಲೇ ಬೆಂಗಳೂರು ನಗರ ಅಗ್ರಸ್ಥಾನದಲ್ಲಿದೆ. ಸರ್ಕಾರ ಕೊವಿಡ್ ಸಾವಿನ ಸಂಖ್ಯೆ ಮುಚ್ಚಿಡುತ್ತಿದೆ. ಸರ್ಕಾರ ಆರೋಗ್ಯ ದೃಷ್ಟಿಯಿಂದ ಏನಾದರೂ ಮಾಡಲಿ. ಆದರೆ ತೊಂದರೆಗೊಳಗಾದವರಿಗೆ ಪರಿಹಾರ ನೀಡಲಿ. ಕನಿಷ್ಠ ಬ್ಯಾಂಕ್‌ಗಳ ಬಡ್ಡಿಯನ್ನಾದರೂ ಮನ್ನಾ ಮಾಡಲಿ. ಆದಷ್ಟು ಬೇಗ ಆರ್ಥಿಕ ಪ್ಯಾಕೇಜ್ ಘೋಷಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರವನ್ನು ಆಗ್ರಹಿಸಿದರು.

Latest Videos

undefined

14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ

ಇಡೀ ದೇಶದಲ್ಲೇ ರಾಜ್ಯ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಅಗ್ರಸ್ಥಾನಕ್ಕೆ ಹೋಗುತ್ತಿದೆ. ಆದರೆ, ಆ ಅಂಕಿಅಂಶಗಳು ಸಹ ಸರಿ ಇಲ್ಲ. ಸಾಕಷ್ಟು ಜನ ಸಾಯುತ್ತಿದ್ದಾರೆ. ಅದನ್ನು ಸರ್ಕಾರ ಮುಚ್ಚಿಡುತ್ತಿದೆ. ಆರೋಗ್ಯದ ದೃಷ್ಟಿಯಿಂದ ಏನಾದರೂ ಮಾಡಲಿ, ತೊಂದರೆಗೆ ಒಳಗಾಗ್ತಾ ಇರುವವರಿಗೆ ಪರಿಹಾರ ನೀಡಲಿ. ಕೊನೆ ಪಕ್ಷ ಬ್ಯಾಂಕ್ ಬಡ್ಡಿಯನ್ನಾದರೂ ನೀಡಲಿ. ಆದಷ್ಟು ಬೇಗ ಆರ್ಥಿಕ ಪ್ಯಾಕೇಜ್ ಘೋಷಿಸಲಿ ಎಂದು ಅವರು ಆಗ್ರಹಿಸಿದರು.

ಕರ್ನಾಟಕದಲ್ಲಿ ಕೊರೊನಾ ಸೊಂಕಿನ ಎರಡನೇ ಅಲೆ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಹೀಗಾಗಿ 14 ದಿನಗಳ ಕಾಲ ಕರ್ನಾಟಕವನ್ನು ಲಾಕ್​ಡೌನ್ ಮಾಡಲು ನಿರ್ಧರಿಸಿದ್ದು, ನಾಳೆ ಸಂಜೆಯಿಂದ ಲಾಕ್​ಡೌನ್ ಜಾರಿಯಾಗಲಿದೆ. 15 ದಿನಗಳ ಕಾಲ ಈ ಕಠಿಣ ನಿಯಮ ಮುಂದುವರೆಯಲಿದೆ ಎಂದು ಸರ್ಕಾರ ತಿಳಿಸಿದೆ.

click me!