ಸಂಪುಟ ವಿಸ್ತರಣೆ ಮತ್ತೆ ವಿಳಂಬ, ಅಕ್ಷಯ್ ಕಾನೂನು ಹೋರಾಟ ಆರಂಭ; ನ.19ರ ಟಾಪ್ 10 ಸುದ್ದಿ!

Published : Nov 19, 2020, 05:02 PM ISTUpdated : Nov 19, 2020, 05:15 PM IST
ಸಂಪುಟ ವಿಸ್ತರಣೆ ಮತ್ತೆ ವಿಳಂಬ, ಅಕ್ಷಯ್ ಕಾನೂನು ಹೋರಾಟ ಆರಂಭ; ನ.19ರ ಟಾಪ್ 10 ಸುದ್ದಿ!

ಸಾರಾಂಶ

ಬಹುನಿರೀಕ್ಷಿತ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.  ಬೆಂಗಳೂರು ತಂತ್ರಜ್ಞಾನ ಮೇಳವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಕಾಂಗ್ರೆಸ್ ನಾಯಕತ್ವದ ಬಗ್ಗೆ ಪ್ರಶ್ನೆ ಎತ್ತಿದ್ದ  ಹಿರಿಯ ನಾಯಕ ಕಪಿಲ್ ಸಿಬಲ್ ಇದೀಗ ಅಸಮಧಾನ ಹೊರಹಾಕಿದ್ದಾರೆ. ಯೂಟ್ಯೂಬರ್ ವಿರುದ್ಧ ನಟ ಅಕ್ಷಯ್ ಕುಮಾರ್ ಮಾನನಷ್ಟ ಮೊಕದ್ದಮೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪುತ್ರಿ ಅದ್ದೂರಿ ನಿಶ್ಚಿತಾರ್ಥ ಸೇರಿದಂತೆ ನವೆಂಬರ್ 19ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಬೆಂಗಳೂರು ತಂತ್ರಜ್ಞಾನ ಮೇಳ ಉದ್ಘಾಟಿಸಿದ ಮೋದಿ, ವಿದೇಶಗಳಿಗೆ ತಲುಪಿಸಲು ಇದು ಸಕಾಲ

ಇದೇ ಮೊತ್ತಮೊದಲ ಬಾರಿಗೆ ವರ್ಚ್ಯುಯಲ್ ಆಗಿ ನಡೆಯಲಿರುವ ಮೂರು ದಿನಗಳ “ಬೆಂಗಳೂರು ತಂತ್ರಜ್ಞಾನ ಮೇಳ” (ಬಿಟಿಎಸ್-2020)ವನ್ನು ಗುರುವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

'ಕೈ' ಬೇಗುದಿ ಸ್ಫೋಟ, ಅಂದು ನಾಯಕತ್ವ ಬದಲಾವಣೆ, ಇಂದು ಹಿರಿಯರ ಕಿತ್ತಾಟ!

ಕಾಂಗ್ರೆಸ್ ನಾಯಕತ್ವದ ಬಗ್ಗೆ ಪ್ರಶ್ನೆ ಎತ್ತಿದ್ದ  ಹಿರಿಯ ನಾಯಕ ಕಪಿಲ್ ಸಿಬಲ್ ಕಡೆಯಿಂದ ಮತ್ತೊಂದು ವಿಚಾರ ಸ್ಫೋಟವಾಗಿದೆ...

ಡಿ.7ರಿಂದ 15ರ ವರೆಗೂ ಬೆಂಗಳೂರಲ್ಲಿ ಅಧಿವೇಶನ...

ವಿಧಾನಮಂಡಲ ಅಧಿವೇಶನವನ್ನು ಡಿಸೆಂಬರ್‌ 7ರಿಂದ 15ರವರೆಗೆ ಬೆಂಗಳೂರಿನಲ್ಲೇ ನಡೆಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಯೂಟ್ಯೂಬರ್ ವಿರುದ್ಧ ಮಾನನಷ್ಟ ಮೊಕದ್ದಮೆ, 500 ಕೋಟಿ ಕೇಳಿದ ಅಕ್ಷಯ್...

ಬಾಲಿವುಡ್ ನಟ ಅಕ್ಷಯ್ ಕುಮಾರ್ ಖ್ಯಾತ ನಟ. ಭಾರತ ಮಾತ್ರವಲ್ಲ ವಿದೇಶದಲ್ಲಿಯೂ ನಟನಿಗೆ ಸಿಕ್ಕಾಪಟ್ಟೆ ಫ್ಯಾನ್ ಬೇಸ್ ಇದೆ. ಇದೀಗ ಯೂಟ್ಯೂಬರ್ ವಿರುದ್ಧ ನಟ ಮಾನನಸ್ಟ ಮೊಕದ್ದಮೆ ಹೂಡಿದ್ದಾರೆ

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪುತ್ರಿ ಅದ್ದೂರಿ ನಿಶ್ಚಿತಾರ್ಥ - ಕಾಫಿ ಡೇ ಮಾಲಿಕನೊಂದಿಗೆ ಎಂಗೇಜ್...

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಹಿರಿಯ ಪುತ್ರಿ ಐಶ್ವರ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಅಳಿಯ, ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ದಾರ್ಥ ಹೆಗ್ಡೆ ಅವರ ಹಿರಿಯ ಪುತ್ರ ಅಮಾರ್ಥ್ಯ ಹೆಗ್ಡೆ ಅವರ ವಿವಾಹ ನಿಶ್ಚಿತಾರ್ಥ ಅದ್ದೂರಿಯಾಗಿ ನಡೆಯಿತು

ಗ್ರಾಹಕರಿಗೆ ಟಾಟಾದಿಂದ ದೂಸ್ರಿ ದೀಪಾವಳಿ; ಹಬ್ಬ ಮುಗಿದರೂ ಆಫರ್ ಮುಗಿದಿಲ್ಲ!...

ತನ್ನ ಗ್ರಾಹಕರಿಗೆ ಹಬ್ಬದ ದಿನಗಳಲ್ಲಿ ಮತ್ತು ಸಂಭ್ರಮವನ್ನು ಹೆಚ್ಚಿಸುತ್ತಿರುವ ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಟಾಟಾ ಮೋಟಾರ್ಸ್ ‘ಇಂಡಿಯಾಕಿ ದೂಸ್ರಿ ದೀಪಾವಳಿ’ ಅಭಿಯಾನವನ್ನು ಆರಂಭಿಸಿದೆ. ಕಳೆದ ವರ್ಷ ಅತ್ಯಂತ ಯಶಸ್ವಿ ಮುನ್ನಡೆಯ ನಂತರ, ದೀಪಾವಳಿಯ ನಂತರವೂ ಹಬ್ಬದ ಮೆರಗು ಹರಡಲು ಟಾಟಾ ಮೋಟಾರ್‌  ಅಭಿಯಾನವನ್ನು ಪ್ರಾರಂಭಿಸಿತು.

ಸಂಪುಟ ವಿಸ್ತರಣೆ ಯಾವಾಗ ಎಂದು ಕಾದು ನೋಡಿ: ಬಿಜೆಪಿ ಸಾರಥಿ ಅಚ್ಚರಿ ನುಡಿ..!...

ಬಹುನಿರೀಕ್ಷಿತ ಸಂಪುಟ ವಿಸ್ತರನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ. ಬಿಎಸ್‌ ವೈ ಹೈಕಮಾಂಡ್ ಭೇಟಿಯಾದ್ರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಈ ಬಗ್ಗೆ ಬಿಜೆಪಿ ಸಾರಥಿ ಹೇಳಿದ್ದು ಹೀಗೆ...

ಜಮ್ಮು ಹೆದ್ದಾರಿಯಲ್ಲಿ ಉಗ್ರರ ಮೇಲೆ ಗುಂಡಿನ ಸುರಿಮಳೆ; ಮೈ ಜುಮ್ಮೆನಿಸುವ ವಿಡಿಯೋ!...

ಜಮ್ಮು ಮತ್ತು ಕಾಶ್ಮೀರದ ಶಾಂತಿ ಕದಡಲು ಸಜ್ಜಾಗಿದ್ದ ಉಗ್ರರ ತಂಡದ ಮೇಲೆ ಭಾರತೀಯ ಸೇನೆ ಗುಂಡಿನ ಮಳೆಗೆರೆದಿದೆ. ಪುಲ್ವಾಮಾ ರೀತಿಯಲ್ಲಿ ಮತ್ತೊಂದು ದಾಳಿಗೆ ಹೊಂಚು ಹಾಕಿದ್ದ ಘೋರ ಕೃತ್ಯವನ್ನು ಭಾರತೀಯ ಸೇನೆಯ ಸಾಹಸಕ್ಕೆ ನಿಷ್ಕ್ರೀಗೊಳಿಸಿದೆ.

ರಾಜ್ಯದ ಒಪ್ಪಿಗೆ ಇಲ್ಲದೆ CBI ಅಧಿಕಾರ ವ್ಯಾಪ್ತಿ ವಿಸ್ತರಣೆ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್!...

CBI ಅಧಿಕಾರ ವ್ಯಾಪ್ತಿ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಇದು ಕೇಂದ್ರ ಸರ್ಕಾರಕ್ಕೆ ಕೊಂಚ ಹಿನ್ನಡೆಯಾಗಿದೆ. ಬಿಜಿಪಿಯೇತರ ರಾಜ್ಯಗಳಲ್ಲಿ CBI ಅಸ್ತ್ರ ಪ್ರಯೋಗಿಸಲು ಇನ್ನು ಸಾಧ್ಯವಿಲ್ಲ. 

'ಎಲ್ಲ ವಿಚಾರಗಳಲ್ಲಿಯೂ ತಾ ಮುಂದೆ ಎನ್ನುವ ನಟಿ' ಕಂಗನಾ ಯಾಕೆ ಹೀಗಾದ್ರು?

 

ಸೋಶಿಯಲ್ ಮೀಡಿಯಾದಲ್ಲಿ ಕಂಗನಾ ಅವತಾರ/ ಸುಶಾಂತ್ ಸಾವಿನ  ವಿಚಾರಿಂದ ಐಪಿಎಸ್ ಅಧಿಕಾರಿ ಟ್ವೀಟ್ ವರೆಗೆ/ ಬೇಕು-ಬೇಡವಾದ್ದಕ್ಕೆಲ್ಲ ಪ್ರತಿಕ್ರಿಯೆ/ ಕಂಗನಾ ರಣಾವತ್  ಯಾಕೆ ಹೀಗೆ ಮಾಡ್ತಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಲ್ವಾನ್‌ ಹಿಂಸೆ ನಡೆದ ಸ್ಥಳದಲ್ಲಿ ವಿಶ್ವದ ಎತ್ತರದ ಯುದ್ಧ ಸ್ಮಾರಕ!
ಮೊಬೈಲಲ್ಲಿ ಲೋಕೇಷನ್‌ ಆನ್‌ಕಡ್ಡಾಯಕ್ಕೆ ಕೇಂದ್ರಕ್ಕೆ ಶಿಫಾರಸು