ರಾಜ್ಯ ಬಿಜೆಪಿಯಲ್ಲಿ ಅಸಮಧಾನ, ರೈಲ್ವೇ ಟಿಕೆಟ್ ಹಂಚಿದ ಕಂಗನಾ; ಡಿ.23ರ ಟಾಪ್ 10 ಸುದ್ದಿ!

By Suvarna News  |  First Published Dec 23, 2019, 5:00 PM IST

ಅನರ್ಹ ಶಾಸಕರು ಬಿಜೆಪಿಯಿಂದ ಗೆದ್ದು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಅಸಮಧಾನ ಸ್ಫೋಟಗೊಂಡಿದೆ. ಇತ್ತ ಪೌರತ್ವ ಕಾಯ್ದೆ ವಿರೋಧಿಸಿ ಬೆಂಗಳೂರಲ್ಲೂ ಪ್ರತಿಭಟನೆ ಜೋರಾಗಿತ್ತು. ಮುಂಬೈನ ಛತ್ರಪತಿ ಶಿವಾಜಿ ರೈಲ್ವೇ ನಿಲ್ದಾಣದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ರೈಲ್ವೇ ಟಿಕೆಟ್ ಹಂಚೋ ಮೂಲಕ ಸರ್ಪ್ರೈಸ್ ನೀಡಿದ್ದಾರೆ. ಶ್ರೀಲಂಕಾ ಸರಣಿಯಿಂದ ರೋಹಿತ್‌ಗೆ ರೆಸ್ಟ್, ತುಮಕೂರಿಗೆ ಪ್ರಧಾನಿ ಮೋದಿ ಸೇರಿದಂತೆ ಡಿಸೆಂಬರ್ 23ರ ಟಾಪ್ 10 ಸುದ್ದಿ ಇಲ್ಲಿವೆ.


ಅರ್ಹ ಶಾಸಕರ ಪ್ರಮಾಣವಚನ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ

Tap to resize

Latest Videos

undefined

ಅನರ್ಹ ಶಾಸಕರು ಬಿಜೆಪಿಯಿಂದ ಗೆದ್ದು ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಪಕ್ಷದಲ್ಲಿ ಭಿನ್ನಮತ ಸ್ಫೋಟವಾಗಿದ್ದು, ಕೋಟೆ ನಾಡಿನ ಬಿಜೆಪಿ ಶಾಸಕ ಬಂಡಾಯದ ಬಾವುಟ ಹಾರಿಸಿದ್ದಾರೆ. ಅಷ್ಟೇ ಅಲ್ಲದೇ ಒಂದು ಹೆಜ್ಜೆ ಮುಂದೆ ಹೋಗಿದ್ದು, ಪರೋಕ್ಷವಾಗಿ ಪಕ್ಷ ತೊರೆಯುವ ಸುಳಿವು ನೀಡಿದ್ದಾರೆ. 

ಪೌರತ್ವ ಕಾಯ್ದೆ ಸಮೀಕ್ಷೆ: ತೀವ್ರ ಪ್ರತಿಭಟನೆಯ ನಡುವೆಯೂ ಅಚ್ಚರಿಯ ಜನಮತ!

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ವ್ಯಾಪಕ ಹಿಂಸಾಚಾರ ನಡೆಯುತ್ತಿರುವಾಗಲೇ, ದೇಶದ ಶೇ.62ರಷ್ಟುಜನ ಈ ಕಾಯ್ದೆ ಪರ ಒಲವು ಹೊಂದಿದ್ದಾರೆ ಎಂಬ ಕುತೂಹಲಕರ ಮಾಹಿತಿ ಸಮೀಕ್ಷೆಯೊಂದರಿಂದ ತಿಳಿದುಬಂದಿದೆ.

ಪೌರತ್ವ ಗಲಭೆಕೋರರ ಆಸ್ತಿ ಜಪ್ತಿ, 67 ಅಂಗಡಿಗಳಿಗೆ ಸೀಲ್!

‘ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಗಲಭೆ ನಡೆಸುತ್ತಿರುವ ದಂಗೆಕೋರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತೇವೆ’ ಎಂದು ಹೇಳಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಈಗ ಅದನ್ನು ಕಾರ್ಯರೂಪಕ್ಕೆ ತರುವ ಪ್ರಕ್ರಿಯೆ ಆರಂಭಿಸಿದ್ದಾರೆ.

ಮುಂದುವರಿದ ಹೋರಾಟ: CAA ವಿರುದ್ಧ ಘರ್ಜಿಸಿದ ಬೆಂಗಳೂರು

ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ಸೋಮವಾರವೂ ಮುಂದುವರಿದಿದೆ. ಬೆಂಗಳೂರಿನ ಖುದ್ದೂಸ್ ಸಾಹೇಬ್ ಈದ್ಗಾದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.  ಪ್ರತಿಭಟನೆಯಿಂದ ವಾಹನ ಸವಾರರು ಪರದಾಡಿದರು.

ಜ.3ರಂದು ತುಮಕೂರಿಗೆ ಪ್ರಧಾನಿ ನಮೋ

ಜ.3ರಂದು ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರಿಗೆ ಭೇಟಿ ನೀಡುವ ಸಾಧ್ಯತೆ ಇದೆ. ತುಮಕೂರಿನಲ್ಲಿ ಎರಡನೇ ಹಂತದ ರೈತ ಸಮ್ಮಾನ್‌ ಯೋಜನೆಗೆ ಪ್ರಧಾನಮಂತ್ರಿಗಳು ಚಾಲನೆ ನೀಡಲಿದ್ದು, ಇದೇ ವೇಳೆ ರಾಜ್ಯ ರೈತ ಸಮಾವೇಶ ಹಮ್ಮಿಕೊಳ್ಳಲಾಗುವುದು. ಸಮಾವೇಶದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಳ್ಳಲ್ಲಿದ್ದು, ಪ್ರಧಾನಿ ನಮೋ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮಂಗಳೂರು ಗಲಭೆ: ವಿಡಿಯೋ ಇದ್ರೆ ಕಳಿಸಿ ಎಂದ ಕಮಿಷನರ್ ಹರ್ಷ

ಮಂಗಳೂರು ಗೋಲಿಬಾರ್ ಗಲಭೆಗೆ ಸಂಬಂಧಿಸಿದ ವಿಡಿಯೋ ಇದ್ದರೆ ಕಳಿಸಿಕೊಡುವಂತೆ ಕಮಿಷನರ್ ಐಪಿಎಸ್ ಹರ್ಷ ನಾಗರಿಕರಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಹರ್ಷ ಅವರು ವಿಡಿಯೋ ಇದ್ದಲ್ಲಿ ವಾಟ್ಸಾಪ್ ಮಾಡುವಂತೆ ಕೇಳಿದ್ದಾರೆ.


ಹೊಸ ವರ್ಷದ ಆರಂಭದಲ್ಲಿ ಭಾರತ-ಶ್ರೀಲಂಕಾ ಸರಣಿ; ರೋಹಿತ್‌ಗೆ ರೆಸ್ಟ್?

ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿ ಗೆದ್ದಿರುವ ಟೀಂ ಇಂಡಿಯಾ ಇದೀಗ ವಿಶ್ರಾಂತಿಗೆ ಜಾರಿದೆ. ಹೊಸ ವರ್ಷ ಆರಂಭದಲ್ಲೇ ಲಂಕಾ ವಿರುದ್ಧ ಸರಣಿ ಆಡಲಿದೆ. ಆದರೆ ಈ ಸರಣಿಯಿಂದ ರೋಹಿತ್ ವಿಶ್ರಾಂತಿ ಬಯಸಿದ್ದಾರೆ.

ಕಂಗನಾಗೆ ಇದೆಂಥಾ ಗತಿ! ರೈಲ್ವೇ ಟಿಕೆಟ್ ಹಂಚುವ ಕೆಲಸ ಶುರು ಮಾಡಿದ್ರಾ 'ಕ್ವೀನ್'?...

ಬಾಲಿವುಡ್ ಕ್ವೀನ್ ಕಂಗನಾ ರಾಣಾವತ್ ಛತ್ರಪತಿ ಶಿವಾಜಿ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಟಿಕೆಟ್ ಹಂಚಿದ್ದಾರೆ. ಅರೇ, ಕಂಗಾನ ಯಾಕೆ ಟಿಕೆಟ್ ಹಂಚುವ ಕೆಲಸ ಮಾಡಿದ್ರು ಅಂತ ಆಶ್ಚರ್ಯನಾ? ಇಲ್ಲೇ ಇರೋದು ಟ್ವಿಸ್ಟ್! 


ಮತ್ತಷ್ಟು ಆಕರ್ಷಕ ಲುಕ್; ಯಮಹಾ ಫ್ಯಾಸಿನೋ 125FI ಸ್ಕೂಟರ್ ಲಾಂಚ್!

ಯಮಹಾ ಮೋಟಾರ್ ಇಂಡಿಯಾ ತನ್ನ ನೆಚ್ಚಿನ ಸ್ಕೂಟರ್ ಫ್ಯಾಸಿನೋ ಅಪ್‌ಗ್ರೇಡ್ ಮಾಡಿದೆ. ಸದ್ಯ 113 cc ಯಮಹಾ ಫ್ಯಾಸಿನೋ ಮಾರುಕಟ್ಟೆಯಲ್ಲಿದೆ. ಇದೇ ಸ್ಕೂಟರ್ ಅಪ್‌ಗ್ರೇಡ್ ಮಾಡಿರುವ ಯಮಹಾ ಇದೀಗ ಫ್ಯಾಸಿನೋ 125FI ವರ್ಶನ್ ಬಿಡುಗಡೆ ಮಾಡಿದೆ. ವಿಶೇಷವಾಗಿ ಫ್ಯಾಸಿನೋ ಮತ್ತಷ್ಟು ಆಕರ್ಷಕವಾಗಿದೆ, ಜೊತೆಗೆ ಕೆಲ ಫೀಚರ್ಸ್ ಸೇರಿಸಲಾಗಿದೆ.

ದಾದಾ ಸಾಹೇಬ್ ಪ್ರಶಸ್ತಿ ಸ್ವೀಕರಿಸಲಾಗುತ್ತಿಲ್ಲ; ವಿಷಾದಿಸಿದ ಅಮಿತಾಭ್ ಬಚ್ಚನ್

ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಬಾಲಿವುಡ್ ಬಿಗ್ ಬಿ ಆಯ್ಕೆಯಾಗಿದ್ದಾರೆ. ಆದರೆ ಅನಾರೋಗ್ಯದ ನಿಮಿತ್ತ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಭಾಗಿಯಾಗುತ್ತಿಲ್ಲ. ಇದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
 

click me!