BJP ಶಾಸಕರ ಎದೆ ಚುಟು ಚುಟು ಅಂತೈತಿ, ಪಿಗ್ಗಿ ಅವತಾರಕ್ಕೆ ಚುಮು ಚುಮು ಆಗ್ತೈತಿ, ಜ.27ರ ಟಾಪ್ 10 ಸುದ್ದಿ!

By Suvarna News  |  First Published Jan 27, 2020, 5:08 PM IST

ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸಂಪುಟ ರಚನೆ ಬಿಡಿಸಲಾಗದ ಕಗ್ಗಾಂಟಾಗಿದೆ. ಸಚಿವರು ಕುರ್ಚಿ ತ್ಯಾಗ ಮಾಡಲು ಸಿದ್ದರಾದ ಬೆನ್ನಲ್ಲೇ ನೂತನ ಶಾಸಕರ ಎದೆ ಚುಟು ಚುಟು ಎಂದು ಹೊಡೆದುಕೊಳ್ಳುತ್ತಿದೆ. ಇತ್ತ ನಿಕ್ ಜೋನಾಸ್ ಮದುವೆಯ ಬಳಿಕ ಪ್ರಿಯಾಂಕಾ ಚೋಪ್ರಾ ಡ್ರೆಸ್ ಮತ್ತೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಶ್ರೀರಾಮುಲುಗೆ ಕನ್ನಡ ಕಲಿಯಿರಿ ಪುಸ್ತಕ ಗಿಫ್ಟ್, ನಿಖಿಲ್‌ ಕುಮಾರಸ್ವಾಮಿ ಮದುವೆ ಸೇರಿದಂತೆ ಜನವರಿ 27ರ ಟಾಪ್ 10 ಸುದ್ದಿ ಇಲ್ಲಿವೆ.


ನಿಕ್ ಮದುವೆಯಾದ ಮೇಲೆ ಪ್ರಿಯಾಂಕಾ ವೇಷ ನೋಡ್ರಣ್ಣ! ಹುದುಗಿಸಿಟ್ಟ ಎಲ್ಲ ಸೌಂದರ್ಯ ಅನಾವರಣ!...

Tap to resize

Latest Videos

undefined

ಬಿ-ಟೌನ್‌ ಗಾಸಿಪ್‌ ಲಿಸ್ಟಿನ ಹಾಟ್‌ ಕಪಲ್ ಪ್ರಿಯಾಂಕಾ ಚೋಪ್ರಾ- ನಿಕ್ ಜೋನಾಸ್‌ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಗ್ರ್ಯಾಮಿ ಅವಾರ್ಡ್‌ ಕಾರ್ಯಕ್ರಮಕ್ಕೆ ಪ್ರಿಯಾಂಕಾ ಧರಿಸಿದ ಡ್ರೆಸ್ ಬಗ್ಗೆ ಸಕತ್ತೂ ಗುಸು ಗುಸು ಶುರವಾಗಿದೆ. 


ಏನೇನ್ ಅವತಾರ ತಾಳ್ತಾಳೋ ಡಿಪ್ಪಿ? ಇದು ಪದ್ಮಾವತಿಯ ದಶಾವತಾರಗಳು!...

ಬಾಲಿವುಡ್‌ ಡಿಂಪಲ್ ಕ್ವೀನ್‌ ದೀಪಿಕಾ ಪಡುಕೋಣೆ ತಮ್ಮ ಚಿತ್ರದ ಪಾತ್ರ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚೂಸಿ. ಸ್ಯಾಂಡಲ್‌ವುಡ್‌ನ ಐಶ್ವರ್ಯಾ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಡಿಪ್ಪಿ ಬಿ-ಟೌನ್‌ ಬೇಡಿಕೆಯ ನಟಿ. ಕಾಲ್‌ ಶೀಟ್ ಫ್ರೀ ಇಲ್ಲದಷ್ಟು ಬ್ಯುಸಿಯಾಗಿರುವ ಡಿಪ್ಪಿ ಡಿಫರೆಂಟ್‌ ಫಿಲ್ಮ್‌ ಲುಕ್‌ಗಳು ಇಲ್ಲಿವೆ...

ತಪ್ಪಾಗಿ ಕನ್ನಡ ಉಚ್ಛಾರಣೆ: ಶ್ರೀರಾಮುಲುಗೆ ಕನ್ನಡ ಕಲಿಯಿರಿ ಪುಸ್ತಕ ಗಿಫ್ಟ್

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾಡಿದ ಭಾಷಣದಲ್ಲಿ ತಪ್ಪುತಪ್ಪಾಗಿ ಕನ್ನಡ ಮಾತನಾಡಿ ಸುದ್ದಿಗೆ ಗ್ರಾಸವಾಗಿದ್ದ ಸಚಿವ ಬಿ ಶ್ರೀರಾಮುಲು ಅವರಿಗೆ ಕಾಂಗ್ರೆಸ್ ನಾಯಕಿಯೊಬ್ಬರು ಕನ್ನಡ ಪುಸ್ತಕ ಗಿಫ್ಟ್ ನೀಡಿದ್ದಾರೆ.


ಲವ್‌ ಜಿಹಾದ್‌ ನಿರ್ಲಕ್ಷ್ಯ ಮೌನ ಸಮ್ಮತಿ ಇದ್ದಂತೆ: ಕೇರಳ ಪಾದ್ರಿ

ವ್‌ ಜಿಹಾದ್‌ ಎಂಬುದು ವಾಸ್ತವ. ಆ ವಿಚಾರವಾಗಿ ನಿರ್ಲಕ್ಷ್ಯ ವಹಿಸಿದರೆ ಮೌನ ಸಮ್ಮತಿ ಕೊಟ್ಟಂತೆ ಎಂದು ಕೇರಳದ ಫಾದ್ರಿಯೊಬ್ಬರು ಹೇಳಿದ್ದಾರೆ. ತನ್ಮೂಲಕ ಲವ್‌ ಜಿಹಾದ್‌ ಚರ್ಚೆ ಮುಂದುವರಿಯುವಂತೆ ಮಾಡಿದ್ದಾರೆ.

ಮುಗಿಯದ ಸಂಪುಟ ಸಂಕಟ; ಸಿಎಂ ದೆಹಲಿಗೆ ದೌಡು.

ಸಂಪುಟ ಸಂಕಟ ಕೇಸರಿ ಪಾಳಯದಲ್ಲಿನ್ನು ಬಗೆಹರಿದಿಲ್ಲ. ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳಿ ಜೆ ಪಿ ನಡ್ಡಾರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ವಚನಭ್ರಷ್ಟ ಎಂಬ ಕಳಂಕ ಅಂಟಿಸಿಕೊಳ್ಳದಿರಲು ಮುಂದಾಗಿದ್ದು ಗೆದ್ದ 11 ಶಾಸಕರನ್ನು ಮಂತ್ರಿ ಮಾಡಲು ಮುಂದಾಗಿದ್ದಾರೆ. ಉಳಿದ 5 ಸ್ಥಾನಗಳ ಬಗ್ಗೆ ಹೈ ಕಮಾಂಡ್ ಜೊತೆ ಚರ್ಚಿಸಲಿದ್ದಾರೆ. 

ಮೇ 17, 18ಕ್ಕೆ ನಿಖಿಲ್‌ ಕುಮಾರಸ್ವಾಮಿ ಮದುವೆ!

ಸ್ಯಾಂಡಲ್‌ವುಡ್‌ ನಾಯಕ ನಟ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿಗೆ ಕಂಕಣಭಾಗ್ಯ ಕೂಡಿ ಬಂದಿದ್ದು, ಬರುವ ಮೇ 17 ಮತ್ತು 18ರಂದು ವಿವಾಹಕ್ಕೆ ಮುಹೂರ್ತ ನಿಗದಿಪಡಿಸಲಾಗಿದೆ.

ಬಾಸ್ಕೆಟ್‌ಬಾಲ್ ದಿಗ್ಗಜ ಕೋಬ್ ಬ್ರೆಯಾಂಟ್ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನ

NBA ಬಾಸ್ಕೆಟ್ ಬಾಲ್ ದಿಗ್ಗಜ ಕೋಬ್ ಬ್ರೆಯಾಂಟ್(41) ಹೆಲಿಕ್ಯಾಪ್ಟರ್ ಅಪಘಾತದಲ್ಲಿ ಅಸುನೀಗಿದ್ದಾರೆ. ಭಾನುವಾರು ಕ್ಯಾಲಿಫೋರ್ನಿಯಾದ ಕ್ಯಾಲಬಾಸಸ್ ಎಂಬಲ್ಲಿ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಕೋಬ್ ಬ್ರೆಯಾಂಟ್ 13 ವರ್ಷದ ಮಗಳು ಗಿಯನ್ನ ಹಾಗೂ ಪತ್ನಿ ಸೇರಿದಂತೆ 9 ಮಂದಿ ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ.

ವಿದೇಶಿ ಷೇರುಪೇಟೆಯಲ್ಲಿ ಭಾರತೀಯ ಕಂಪನಿಗಳ ನೋಂದಣಿಗೆ ಅವಕಾಶ?

ವಿದೇಶಿ ಷೇರುಪೇಟೆಯಲ್ಲಿ ನೋಂದಾಯಿಸಿಕೊಳ್ಳಲು ಭಾರತೀಯ ಕಂಪನಿಗಳಿಗೆ ಅನುಮತಿ ನೀಡುವ ಕುರಿತು ಕೇಂದ್ರ ಸರ್ಕಾರ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

BS6 ಮಾರುತಿ ಅಲ್ಟೋ S ಬಿಡುಗಡೆ; ಕಡಿಮೆ ಬೆಲೆಯ CNG ಕಾರು!

 ಮಾರುತಿ ಸುಜುಕಿ ಎಸ್ CNG ಟೆಕ್ನಾಲಜಿ BS6 ಎಂಜಿನ್ ಕಾರು ಬಿಡುಗಡೆಯಾಗಿದೆ.  LXI S-CNG ಹಾಗೂ LXI (O) S-CNG ಎಂಬ ಎರಡು ವೇರಿಯೆಂಟ್ ಕಾರು ಮಾರುಕಟ್ಟೆ ಪ್ರವೇಶಿಸಿದೆ. ನೂತನ ಕಾರು ಡ್ಯುಯೆಲ್ ಇಂಟರ್ ECUs (Electronic Control Units) ಹೊಂದಿದೆ. ಹೀಗಾಗಿ ಪ್ರತಿ ಕೆಜಿಗೆ ಬರೋಬ್ಬರಿ 31.59 km ಮೈಲೇಜ್ ನೀಡಲಿದೆ.

ಬ್ಯಾಂಕ್ ಲಾಕರ್‌ ನಲ್ಲಿ ಬಾಂಬರ್ ಆದಿತ್ಯ ಇಟ್ಟಿದ್ದ ವಸ್ತು ಕಂಡು ಪೊಲೀಸರೇ ದಂಗು!

ಮಂಗಳೂರು ಬಾಂಬರ್ ಆದಿತ್ಯಗೆ ಸಂಬಂಧಿಸಿದ ಒಂದೊಂದೇ ಮಾಹಿತಿಗಳು ಬಹಿರಂಗ ಆಗುತ್ತಿವೆ. ಬಾಂಬರ್ ಆದಿತ್ಯನ ಲಾಕರ್ ನಲ್ಲಿ ಸೈನೆಡ್ ಇತ್ತು ಎಂಬ ಮಾಹಿತಿ ಪತ್ತೆಯಾಗಿದೆ.  ಎಫ್ ಎಸ್ ಎಲ್ ಪ್ರಾಥಮಿಕ ವರದಿಯಲ್ಲಿ ಈ ಅಂಶ ಹೇಳಲಾಗಿದೆ. ಜತೆಗೆ ಆದಿತ್ಯ ಆನ್ ಲೈನ್‌ ನಲ್ಲಿ ಯಾವ ವ್ಯವಹಾರ ನಡೆಸಿದ್ದ ಎಂಬ ವಿವರ ಸಂಗ್ರಹ ಮಾಡಲಾಗುತ್ತಿದೆ.

click me!