ರಾಜ್ಯದೆಲ್ಲೆಡೆ ಕನ್ನಡ ಹಬ್ಬ, ಇಲಿಯಾನಾ ಫೋಟೋಗೆ ಫ್ಯಾನ್ಸ್ ಸ್ತಬ್ದ; ನ.1ರ ಟಾಪ್ 10 ಸುದ್ದಿ!

By Web Desk  |  First Published Nov 1, 2019, 5:13 PM IST

ರಾಜ್ಯದೆಲ್ಲೆಡೆ 64ನೇ ಕನ್ನಡ ರಾಜ್ಯೋತ್ಸವದ ಕಂಪು ಪಸರಿಸಿದೆ. ಕನ್ನಡ ಹಬ್ಬದ ದಿನವೂ ರಾಜ್ಯ ರಾಜಕೀಯ ಚುರುಕುಗೊಂಡಿದೆ. ಡಿಕೆ ಶಿವಕುಮಾರ್ ಹಾಗೂ ಅನರ್ಹ ಶಾಸಕ ಡಾ.ಕೆ ಸುಧಾಕರ್ ಮೆಡಿಕಲ್ ಕಾಲೇಜ್ ಫೈಟ್ ಹೊಸ ತಿರುವು ಪಡೆದುಕೊಂಡಿದೆ. ಮೆಮು ಟ್ರೈನ್ ಮುಂದೆ ಬಂದ ವಿಚಾರಕ್ಕೆ ಸಂಸದೆ ಸುಮಲತಾ ಸ್ಪಷ್ಟನೆ ನೀಡಿದ್ದಾರೆ. ಇದರ ನಡುವೆ ಸೊಂಟದ ಸುಂದರಿ ಇಲಿಯಾನ ಬಿಕಿನಿ ಫೋಟೋ ಬಹಿರಂಗಗೊಂಡಿದೆ. ಕನ್ನಡ ರಾಜ್ಯೋತ್ಸವದ ದಿನ(ನ.01) ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ.


1) ಅನರ್ಹ ಶಾಸಕ ಸುಧಾಕರ್‌ಗೆ ಡಬಲ್ ಧಮಾಕ: ತೀವ್ರ ಕುತೂಹಲ ಮೂಡಿಸಿದ ಡಿಕೆಶಿ ಮುಂದಿನ ನಡೆ

Tap to resize

Latest Videos

undefined

ಮಾಜಿ ಸಚಿವ ಡಿ.ಕೆ ಶಿವಕುಮಾರ್​​ ಹಾಗೂ ಕಾಂಗ್ರೆಸ್ ಅನರ್ಹ ಶಾಸಕ ಡಾ.ಕೆ. ಸುಧಾಕರ್ ರಾಜಕೀಯ ಪ್ರತಿಷ್ಠೆಗೆ ಕಾರಣವಾಗಿದ್ದ ಮೆಡಿಕಲ್ ಕಾಲೇಜಿಗೆ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಇತಿಶ್ರೀ ಹಾಡಿದೆ.  ಕಾಲೇಜು ಯುದ್ಧದಲ್ಲಿ ಕೊನೆಗೂ ಸುಧಾಕರ್ ಗೆದ್ದಿದ್ದಾರೆ. ಇದರ ಜತೆಗೆ ಸುಧಾಕರ್ ಗೆ ಮತ್ತೊಂದು ಗಿಫ್ಟ್ ಸಿಕ್ಕಿದೆ. 

2) ಸುಮಲತಾಗಾಗಿ ಮುಂದೆ ಬಂದ ಟ್ರೈನ್: ನಾನ್ ಮಾಡಿದ್ದು ತಪ್ಪಲ್ಲ ಎಂದ ಸಂಸದೆ

ಸುಮಲತಾಗಾಗಿ ಮೆಮು ಟ್ರೈನ್ ಮುಂದೆ ಬಂದ ವಿಚಾರಕ್ಕೆ ಸಂಸದೆ ಮಂಡ್ಯದಲ್ಲಿ ಪ್ರತಿಕ್ರಿಯಿಸಿದ್ದಾರೆ. ಟ್ರೈನ್ ಮುಂದೆ ಬಂದು ನಿಂತ ವಿಚಾರವಾಗಿ ಪ್ರತಿಕ್ರಿಯಿಸಿದ ಸುಮಲತಾ ಅಂಬರೀಶ್ ಅವರು ನಾನು ಮಾಡಿದ್ದು ತಪ್ಪಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.ನನ್ನ ಬಗೆಗೆ ವಿರೋಧ ಸುದ್ದಿಗಳು ಬರಬಾರದು ಎಂದು ನಾನು ಅಂದು ಕೊಂಡಿಲ್ಲ. ನಾನು ತಪ್ಪು ಮಾಡಿದ್ದನ್ನು ವಿರೋಧ ಮಾಡಿದ್ರೆ ಬೇಸರವಿಲ್ಲ ಎಂದು ಹೇಳಿದ್ದಾರೆ.

3) ನೆರವು ಕೇಳಿದ ಬಡ ಮಕ್ಕಳಿಗೆ ₹100 ಕೊಟ್ಟ ಸಚಿವ ಸೋಮಣ್ಣ!

ಕನ್ನಡ ರಾಜ್ಯೋತ್ಸವ ಸಮಾರಂಭ ಮುಗಿದ ನಂತರ ಕಾರಿನಲ್ಲಿ ಹೊರಟ ಸಚಿವ ಸೋಮಣ್ಣ ಬಳಿ ಬಡ ಮಕ್ಕಳು ಸಹಾಯ ಕೇಳಿದರು. ಸೋಮಣ್ಣ ಯಾರೂ ಅನ್ನುವ  ಮಾಹಿತಿಯು ಇಲ್ಲದ ಆ ಮಕ್ಕಳು ಕಾರನ್ನು ಅಡ್ಡಗಟ್ಟಿದರು.  ಮತ್ತೊಂದು ಕಾರ್ಯಕ್ರಮಕ್ಕೆ ಹೋಗುವ ಧಾವಂತದಲ್ಲಿದ್ದ ಸಚಿವರು 100ರೂ. ಕೊಟ್ಟು ಮಾನವೀಯತೆ ಮೆರೆದರು.

4) ಹಿಗ್ಗಬೇಡ ಅಮೆರಿಕ: ಐಸಿಸ್ ಹೊಸ ಮುಖ್ಯಸ್ಥನ ಸೇಡಿನ ಸಂದೇಶ

ಐಸಿಸ್ ಮುಖ್ಯಸ್ಥ ಅಬುಕ್ ಬಕರ್ ಅಲ್ ಬಾಗ್ದಾದಿಯನ್ನು ಹತ್ಯೆ ಮಾಡಿ ಸಂಭ್ರಮದಲ್ಲಿರುವ ಅಮೆರಿಕಕ್ಕೆ, ಈ ಸಂತೋಷ ಬಹಳ ದಿನ ಇರಲ್ಲ ಎಂಬ ಎಚ್ಚರಿಕೆ ಸಂದೇಶವನ್ನು ಐಸಿಸ್ ರವಾನಿಸಿದೆ. ಸಂತೋಷ ಬಹಳ ದಿನ ಇರಲ್ಲ  ಎಂದು ಐಸಿಸ್ ಹೇಳಿದೆ.

5) ಕಂಠೀರವದಲ್ಲಿ ಕನ್ನಡದ ಕಲರವ : ಅದ್ಧೂರಿಯಾಗಿ ನಡೆದ ಕನ್ನಡಮ್ಮನ ಹಬ್ಬ

ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಕನ್ನಡದ ಕಲರವ ಜೋರಾಗಿತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಧ್ವಜಾರೋಹಣ ನೆರವೇರಿಸಿದರು. ಇಲ್ಲಿ ಶಾಲಾ ಮಕ್ಕಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಅದ್ದೂರಿಯಾಗಿ ಕನ್ನಡಮ್ಮನ ಹಬ್ಬವನ್ನು ಮಾಡಲಾಯಿತು.

6) ಕಾಂಗ್ರೆಸ್‌ನ 45 ಅಭ್ಯರ್ಥಿಗಳ ಘೋಷಣೆ : BJPಗೆ ಸೆಡ್ಡು ಹೊಡೆಯಲು ಪ್ಲಾನ್

ಎರಡನೇ ಅವಧಿಗೆ ಅಧಿಕಾರದ ಗದ್ದುಗೆ ಹಿಡಿಯಲು ಮುಂದಾಗಿರುವ ಕಾಂಗ್ರೆಸ್‌ ಪಕ್ಷವು ತನ್ನ ಅನುಭವಿ ಸದಸ್ಯರ ಜೊತೆಗೆ ಗೆಲ್ಲುವ ಸಾಮರ್ಥ್ಯವಿರುವ ಹೊಸ ಮುಖ, ಯುವಕರಿಗೆ ಆದ್ಯತೆ ನೀಡುವ ಮೂಲಕ ಬಿಜೆಪಿಗೆ ಸೆಡ್ಡು ಹೊಡೆದಿದೆ.

7) ಕ್ರಿಕೆಟ್‌ನಿಂದ ದೂರ ಸರಿದ ಆಸಿಸ್ ಆಲ್ರೌಂಡರ್ ಮ್ಯಾಕ್ಸ್‌ವೆಲ್‌

ಆಸಿಸ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ದಿಢೀರ್ ಆಗಿ ಕ್ರಿಕೆಟ್‌ನಿಂದ ದೂರ ಸರಿದ್ದಾರೆ. ಮಾನಸಿಕ ಸಮಸ್ಯೆ ಎದುರಿಸುತ್ತಿರುವ ಮ್ಯಾಕ್ಸ್‌ವೆಲ್ ಕೆಲದಿನಗಳ ಮಟ್ಟಿಗೆ ಕ್ರಿಕೆಟ್‌ನಿಂದ ಬ್ರೇಕ್ ಪಡೆದಿದ್ದಾರೆ. ಮ್ಯಾಕ್ಸಿಗೆ ಕ್ರಿಕೆಟ್ ಆಸ್ಟ್ರೇಯಾ ಬೆಂಬಲ ವ್ಯಕ್ತಪಡಿಸಿದೆ.

8) ಸೊಂಟದ ಸುಂದರಿ ಬಿಕಿನಿ ಫೋಟೋ ವೈರಲ್!

ಬಾಲಿವುಡ್‌ ಸೆಕ್ಸ್‌ ಬಾಡಿ ಗರ್ಲ್‌ ಎಂದೇ ಖ್ಯಾತರಾದ ಇಲಿಯಾನಾ ಡಿಸೋಜಾ ಫ್ರೆಂಡ್ಸ್‌ ಜೊತೆ ಬರ್ತಡೇ ಪಾರ್ಟಿ ಆಚರಿಸಿಕೊಂಡಿದ್ದಾರೆ. ಆಗ ಪೂಲ್ ಬಿಕಿನಿ ಧರಿಸಿದ ಫೋಟೋವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ವೈರಲ್ ಆಗುತ್ತಿದೆ. 33ರ ಹರೆಯದ ಬಹುಭಾಷಾ ನಟಿ ಇಲಿಯಾನಾ ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ಆದ ನಂತರವೂ ಬಿಕಿನಿಯಲ್ಲಿ ಫೋಟೋ ಶೋಟ್ ಮಾಡಿಸಿಕೊಂಡು ಬಿ-ಟೌನ್ ಸೆನ್ಸೇಷನಲ್ ನಟಿಯಾಗಿದ್ದಾರೆ.

9) ಸಮಾರಂಭದಲ್ಲಿ ಕುಣಿಯಲು ರಣವೀರ್ ರೆಡಿ: ಬುಕ್ಕಿಂಗ್‌ ಹೆಂಡ್ತಿನೇ ಮಾಡ್ಬೇಕು!

ಇನ್‌ಸ್ಟಾಗ್ರಾಂ ಖಾತೆಯಲ್ಲಿ ನೀಲಿ ಶೇರ್‌ವಾನಿಯಲ್ಲಿ ಮಿಂಚುತ್ತಿರುವ ರಣವೀರ್‌ ಸಿಂಗ್ 'ಶಾದಿ ಸೀಸನ್‌ ಬರುತ್ತಿದೆ! ಮನೋರಂಜನೆಗೆ ನಾನು ಸಿದ್ದ. ಮದುವೆ, ಫ್ರೆಂಡ್‌ ಪಾರ್ಟಿ, ಮುಂಡನ್ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ...' ಎಂದು ಬರೆದುಕೊಂಡಿದ್ದಾರೆ. ಪೋಸ್ಟ್‌ ನೋಡಿದ ತಕ್ಷಣ 'ಬುಕ್ಕಿಂಗ್‌ಗೆ ದೀಪಿಕಾಳನ್ನು ಸಂಪರ್ಕಿಸಿ' ಎಂದು ದೀಪಿಕಾ ಕಾಮೆಂಟ್ ಮಾಡಿದ್ದಾರೆ.

10) ಈ ಕ್ಷೇತ್ರದಲ್ಲಿ ಸರ್ಕಾರದ ಕಳಪೆ ಸಾಧನೆ: ವರದಿಯಿಂದ ಮೋದಿಗೆ ವೇದನೆ!

ಭಾರತದ ಉತ್ಪಾದನಾ ಬೆಳವಣಿಗೆ ಕಳೆದ 2 ವರ್ಷಗಳಲ್ಲೇ ಅತ್ಯಂತ ಕಳಪೆಯಾಗಿದ್ದು, ಸರ್ಕಾರ ಈ ಕ್ಷೇತ್ರದತ್ತ ತುರ್ತು ಗಮನಹರಿಸುವ ಅವಶ್ಯಕತೆ ಇದೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ. ಕಾರ್ಖಾನೆಗಳ ಉತ್ಪಾದನಾ ದರ ಕ್ಷೀಣಿಸಿದ್ದು, 2 ವರ್ಷಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದ ಬೆಳವಣಿಗೆ ದಾಖಲಿಸಿದೆ ಎಂದು ಐಹೆಚ್ಎಸ್ ಇಂಡಿಯಾ ಮ್ಯಾನಿಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ ಇಂಡೆಕ್ಸ್ (ಪಿಎಂಐ) ಸಮೀಕ್ಷೆ ಹೇಳಿದೆ. 
 

click me!