ಮುಂದುವರೆದ ಬಿಜೆಪಿ-ಶಿವಸೇನೆ ನಡುವಿನ ಸರ್ಕಾರ ರಚನೆಯ ಹಗ್ಗ ಜಗ್ಗಾಟ| ಅಧಿಕಾರ ಹಂಚಿಕೆ ವಿಷಯದಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗದ ಮಿತ್ರಪಕ್ಷಗಳು| ನಾಯಕರ ಹೇಳಿಕೆಗಳೇ ಸುಗಮ ಅಧಿಕಾರ ಹಂಚಿಕೆಗೆ ತೊಡಕು| ನವೆಂಬರ್ 7ರೊಳಗೆ ಸರ್ಕಾರ ರಚನೆಯಾಗದಿದ್ದಲ್ಲಿ ರಾಷ್ಟ್ರಪತಿ ಆಡಳಿತ| ಬಿಜೆಪಿ ನಾಯಕ ಸುಧೀರ್ ಮುಂಗಂತಿವಾರ್ ಎಚ್ಚರಿಕೆ| ಮಹಾರಾಷ್ಟ್ರದಲ್ಲಿ ಚುನಾವಣಾ ಫಲಿತಾಂಶ ಪ್ರಕಟವಾಗಿ 8 ದಿನಗಳು ಕಳೆದಿವೆ| ಇನ್ನುಳಿದ 7 ದಿನಗಳೊಳಗೆ ಸರ್ಕಾರ ರಚನೆಯಾಗದಿದ್ದಲ್ಲಿ ರಾಷ್ಟ್ರಪತಿ ಆಡಳಿತ| ಅಕ್ಟೋಬರ್ 21ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟ|
ಮುಂಬೈ(ನ.01): ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ನಡುವಿನ ಸರ್ಕಾರ ರಚನೆಯ ಹಗ್ಗ ಜಗ್ಗಾಟ ಮುಂದುವರೆದಿದ್ದು, ಅಧಿಕಾರ ಹಂಚಿಕೆ ವಿಷಯದಲ್ಲಿ ಎರಡೂ ಪಕ್ಷಗಳೂ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
ಒಂದೆಡೆ ಬಿಜೆಪಿ ದೇವೇಂದ್ರ ಫಡ್ನವೀಸ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿ, ಸರ್ಕಾರ ರಚನೆಗಾಗಿ ಕಾದು ಕುಳಿತಿದೆ. ಇನ್ನೊಂದೆಡೆ ತಮ್ಮದೇ ಅಭ್ಯರ್ಥಿ ಮುಖ್ಯಮಂತ್ರಿಯಾಗಬೇಕು ಎಂದು ಶಿವಸೇನೆ ಪಟ್ಟು ಹಿಡಿದು ಕುಳಿತಿದೆ.
50-50ಕ್ಕೆ ಲಿಖಿತ ಭರವಸೆ ಕೊಡಿ: ಅಪನಂಬಿಕೆಯ ಹಗ್ಗದ ಮೇಲೆ ಬಿಜೆಪಿ-ಶಿವಸೇನೆ ಜೋಡಿ!
ಈ ಮಧ್ಯೆ ಎರಡೂ ಪಕ್ಷಗಳ ನಾಯಕರು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಾ, ಪರಿಸ್ಥಿತಿಯನ್ನು ಮತ್ತಷ್ಟು ಗೊಂದಲಮಯ ಮಾಡುತ್ತಿದ್ದಾರೆ. ನಾಯಕರ ಈ ಹೇಳಿಕೆಗಳೇ ಸುಗಮ ಅಧಿಕಾರ ಹಂಚಿಕೆಗೆ ತೊಡಕಾಗಿದೆ ಎಂದು ಹೇಳಬಹುದು.
ನವೆಂಬರ್ 7 ರೊಳಗೆ ಸರ್ಕಾರ ರಚನೆಯಾಗದಿದ್ದರೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕ ಸುಧೀರ್ ಮುಂಗಂತಿವಾರ್ ಎಚ್ಚರಿಸಿದ್ದಾರೆ.
ಇನ್ನೂ ಮುಗಿಯದ ಮಹಾ ಬಿಕ್ಕಟ್ಟು; ಅಧಿಕಾರ ಹಂಚಿಕೆಗೆ ಪಟ್ಟು ಬಿಡದ ಬಿಜೆಪಿ-ಶಿವಸೇನೆ
ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆ ಇದ್ದು,ಕೂಡಲೇ ಸರ್ಕಾರ ರಚನೆಗೆ ಎರಡೂ ಪಕ್ಷಗಳು ಮುಂದಾಗಬೇಕು ಎಂದು ಸುಧೀರ್ ಮನವಿ ಮಾಡಿದ್ದಾರೆ.
ಚುನಾವಣಾ ಫಲಿತಾಂಶ ಪ್ರಕಟವಾಗಿ 8 ದಿನಗಳು ಕಳೆದಿದ್ದು, ಇನ್ನುಳಿದ 7 ದಿನಗಳೊಳಗೆ ಅಂದರೆ ನವೆಂಬರ್ 7ರೊಳಗೆ ಸರ್ಕಾರ ರಚನೆಯಾಗದಿದ್ದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆ ಇದೆ ಎಂದು ಸುಧೀರ್ ಎಚ್ಚರಿಕೆ ನೀಡಿದ್ದಾರೆ.
ಶಿವಸೇನೆಯೇ 'ಮಹಾ ಮುಖ್ಯಸ್ಥ': ಸಂಜಯ್ ರಾವುತ್ ಹೇಳಿಕೆ ಅಸ್ತವ್ಯಸ್ತ!
ಕಳೆದ ಅಕ್ಟೋಬರ್ 21ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.