
ದೇಶಾದ್ಯಂತ ಲಾಕ್‌ಡೌನ್ ಹೇರಿರುವಾಗ ದೆಹಲಿಯಲ್ಲಿ ಧಾರ್ಮಿಕ ಸಭೆ; ಬೇಕಿತ್ತಾ ಇವೆಲ್ಲಾ?
ಕೊರೋನಾ ನಿಗ್ರಹಕ್ಕೆ ದೇಶಾದ್ಯಂತ ಲಾಕ್‌ಡೌನ್ ಹೇರಿರುವಾಗಲೇ, ದೆಹಲಿಯ ಮಸೀದಿಯೊಂದು ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯೊಂದು ಇಡೀ ದೇಶಕ್ಕೆ ವ್ಯಾಪಕವಾಗಿ ಕೊರೋನಾ ಹಬ್ಬಿಸಿರುವ ಆತಂಕಕಾರಿ ಬೆಳವಣಿಗೆ ನಡೆದಿದೆ.
ಕೊರೋನಾ ತಾಂಡವ: ಯಾವ ಮಾಸ್ಕ್ ಎಷ್ಟು ಸೇಫ್? ಇಲ್ಲಿದೆ ವಿವರ
ಚೀನಾದ ವುಹಾನ್‌ನಿಂದ ಹಬ್ಬಿದ ಕೊರೋನಾ ವೈರಸ್ ಸದ್ಯ ವಿಶ್ವದ ಇನ್ನೂರು ರಾಷ್ಟ್ರಗಳಿಗೆ ವ್ಯಾಪಿಸಿದ್ದು, ಮರಣ ಮೃದಂಗ ಬಾರಿಸುತ್ತಿದೆ. ಇಟಲಿ, ಸ್ಪೇನ್, ಅಮೆರಿಕಾ ಹಾಗೂ ಇರಾನ್‌ನಲ್ಲಿ ಕೊರೋನಾ ತಾಂಡವಕ್ಕೆ ಅನೇಕ ಮಂದಿ ಜೀವ ಕಳೆದುಕೊಂಡಿದ್ದಾರೆ. ಹೀಗಿರುವಾಗ ಕೊರೋನಾದಿಂದ ರಕ್ಷಿಸಿಕೊಳ್ಳಲು ಜನರು ಮಾಸ್ಕ್ ಹಾಗೂ ಸ್ಯಾನಿಟೈಸರ್ ಮೊರೆ ಹೋಗುತ್ತಿದ್ದಾರೆ. ಹಾಗಾದ್ರೆ ಯಾವ ಮಾಸ್ಕ್ ಬೆಸ್ಟ್? ಯಾವುದನ್ನು ಮುಖಕ್ಕೆ ಹಾಕಿಕೊಂಡರೆ ಕಡಿಮೆ ಅಪಾಯ? ಇಲ್ಲಿದೆ ಸಂಪೂರ್ಣ ವಿವರ
ರೋಗಿಗಳ ಮನೆ ಬಾಗಿಲಿಗೆ ಮದ್ಯ ಪೂರೈಕೆಗೆ ಸರ್ಕಾರ ನಿರ್ಧಾರ!...
ಲಾಕ್‌ಡೌನ್‌ನಿಂದಾಗಿ ಮದ್ಯ ಸಿಗದೇ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ, ಮೇಘಾಲಯ ಸರ್ಕಾರ ಮನೆ ಬಾಗಿಲಿಗೇ ಮಧ್ಯ ಪೂರೈಕೆಗೆ ಮುಂದಾಗಿದೆ.
ದೇಶದಲ್ಲಿ ಕೊರೋನಾಕ್ಕೆ ಮತ್ತೆ 3 ಬಲಿ, ಹೊಸದಾಗಿ 220 ಜನರಿಗೆ ಸೋಂಕು!...
ಜಗತ್ತಿನಾದ್ಯಂತ ಭಾರೀ ನಡುಕ ಹುಟ್ಟಿಸಿರುವ ಕೊರೋನಾ ದೇಶದ ವಿವಿಧ ಭಾಗಗಳಲ್ಲಿ ಮಂಗಳವಾರ ಮೂವರನ್ನು ಬಲಿಪಡೆದಿದೆ. ಇದರೊಂದಿಗೆ ದೇಶಾದ್ಯಂತ ಕೊರೋನಾ ಮಾರಿಗೆ ಬಲಿಯಾದವರ ಸಂಖ್ಯೆ 42 ಆಗಿದೆ. ಮಂಗಳವಾರ ಪಶ್ಚಿಮ ಬಂಗಾಳ, ಪಂಜಾಬ್ ಹಾಗೂ ಕೇರಳದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ಧೋನಿ,ಕೊಹ್ಲಿ ವಿರುದ್ಧ ಅಸಮಾಧಾನ ಹೊರಹಾಕಿದ ಯುವರಾಜ್; ನಿಜವಾಗುತ್ತಿದೆ ಅಪ್ಪನ ಆರೋಪ!...
ಯುವರಾಜ್ ಸಿಂಗ್ ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ಆಲ್ರೌಂಡರ್, ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಕ್ರಿಕೆಟಿಗ. ಆದರೆ ಯುವಿ ವಿದಾಯ ಯಾವ ಅಭಿಮಾನಿಯೂ ಸಹಿಸಲಾರ. ಟೀಂ ಇಂಡಿಯಾ, ಬಿಸಿಸಿಐ, ಆಯ್ಕೆ ಸಮಿತಿಯ ನಿರ್ಲಕ್ಷ್ಯದಿಂದ ಯುವರಾಜ್ ಸಿಂಗ್ ವಿದಾಯ ಹೇಳಿದ್ದರು. ಇದೀಗ ಮೊದಲ ಬಾರಿಗೆ ನಾಯಕ ಎಂ.ಎಸ್.ಧೋನಿ ಹಾಗೂ ವಿರಾಟ್ ಕೊಹ್ಲಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದೀಗ ಯುವಿ ಮಾತುಗಳು, ಯುವಿ ತಂದೆ ಯೋಗರಾಜ್ ಮಾಡುತ್ತಿದ್ದ ಆರೋಪಕ್ಕೂ ಹೋಲಿಕೆ ಕಂಡುಬರುತ್ತಿದೆ.
ಸೆಲೆಬ್ರಿಟಿಗಳ ಜತೆ ಫ್ಲರ್ಟ್ ಮಾಡೋದು ಇಷ್ಟವಿಲ್ಲ: ಸುಷ್ಮಾ ರಾವ್...
ನನ್ನದೇನಿದ್ದರೂ ಡೀಸೆಂಟ್ ನಿರೂಪಣೆ. ಹಾಸ್ಯ ಇರುತ್ತೆ. ಆದರೆ ಅತಿಥಿಗಳನ್ನು ಫ್ಲರ್ಟ್ ಮಾಡುತ್ತಾ, ಕೆಟ್ಟಕೆಟ್ಟಜೋಕ್ ಮಾಡೋದು ನನ್ನ ಸ್ಟೈಲ್ ಅಲ್ಲ’ ಅನ್ನುವ ಸುಷ್ಮಾಗೆ, ಆ್ಯಂಕರಿಂಗ್ ನಲ್ಲಿ ಸಹಜವಾಗಿ ಇರೋದಿಷ್ಟ. ಸಹಜತೆ ಮೂಲಕವೇ ಜನರನ್ನು ರೀಚ್ ಆಗೋದಿಷ್ಟ. ಅದರಲ್ಲಿ ಇಲ್ಲದ ಗಿಮಿಕ್ ಮಾಡೋದು ಅಷ್ಟಾಗಿ ಹಿಡಿಸಲ್ಲ.
ಫ್ಯಾಮಿಲಿ ಜೊತೆ ಸೀರಿಯಲ್ ನೋಡಿದ 'ರಾಮಾಯಣ'ದ ರಾಮ..!
ದೂರದರ್ಶನ ವೀಕ್ಷಕರ ಮನ ಗೆದ್ದಿದ್ದ ರಾಮಾಯಣದ ಶ್ರೀರಾಮ ಇದೀಗ ಕುಟುಂಬ ಸಮೇತ ಸೀರಿಯಲ್ ನೋಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇಎಂಐ ಪಾವತಿ 3 ತಿಂಗಳು ಮುಂದೂಡಿಕೆ; ಈ ಅವಧಿಗೂ ಬಡ್ಡಿ ಉಂಟು!
ಕೊರೋನಾ ವೈರಸ್ ದಾಳಿಯ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಗ್ರಾಹಕರ ನೆರವಿಗೆ ಮುಂದಾಗಿರುವ ಬಹುತೇಕ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಸಾಲದ ಕಂತುಗಳನ್ನು 3 ತಿಂಗಳ ಕಾಲ ಮುಂದೂಡಿವೆ.
ಕೊರೋನಾ ಎಫೆಕ್ಟ್: ಸದ್ಯದಲ್ಲೇ ತಲೆ ಬೋಳಿಸಿಕೊಳ್ತಾರಾ ವಿರಾಟ್ ಕೊಹ್ಲಿ..?
ವಿರಾಟ್ ಕೊಹ್ಲಿ, ಕೊರೋನಾಗಾಗಿ ಇದೀಗ ತಲೆ ಬೋಳಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸ್ಟೈಲೀಷ್ ಕಿಂಗ್ ವಿರಾಟ್ ಕೊಹ್ಲಿ ತಲೆಗೂದಲು ಹಾಗೂ ಗಡ್ಡದ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಇಟ್ಟುಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಹೀಗಿರುವ ವಿರಾಟ್ ಕೊಹ್ಲಿ ತಲೆ ಬೋಳಿಸಿಕೊಳ್ಳುತ್ತಾರಾ ಎಂದರೆ ನಿಜಕ್ಕೂ ಅಚ್ಚರಿ ಆಗಬಹುದು.
ರೈತರ ನೆರವಿಗೆ ಧಾವಿಸಿದ ಸಿಎಂ: ಇಂದಿನ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ಇಂತಿವೆ...
ಕೊರೋನಾ ಮಾಹಾಮಾರಿ ಬಂದು ಬಡ, ನಿರ್ಗತಿಕರ ಅನ್ನ ಕಸಿದುರುವುದ ಮಾತ್ರವಲ್ಲದೇ ರೈತರ ಬದುಕಿನ ಮೇಲೆ ಬರೆ ಹಾಕಲಾರಂಬಿಸಿದೆ. ಅನ್ನದಾತ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾನೆ. ಅಲ್ಲದೇ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಇದರಿಂದ ಎಚ್ಚೆತ್ತ ಸಿಎಂ ಬಿಎಸ್ ಯಡಿಯೂರಪ್ಪ ಅವರು ತುರ್ತು ಸಭೆ ಕರೆದು ರೈತರಿಗೆ ಅನುಕೂಲವಾಗುವಂತ ಕೆಲ ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಅವುಗಳು ಈ ಕೆಳಗಿನಂತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.