ಅರ್ಧಶತಕ ಸಿಡಿಸಿ ಪ್ರಾಣಬಿಟ್ಟ ಕ್ರಿಕೆಟಿಗ; ಬಂಧನ ಭೀತಿಯಲ್ಲಿ ಕಾಂಗ್ರೆಸ್ಸಿಗ; ನ.18ರ ಟಾಪ್ 10 ಸುದ್ದಿ!

By Web Desk  |  First Published Nov 18, 2019, 4:53 PM IST

ಬ್ಯಾಟ್ಸ್‌ಮನ್‌ಗೆ ಅರ್ಧಶತಕ ಮಹತ್ವಗ ಮೈಲಿಗಲ್ಲು. ಆದರೆ ಹಾಫ್ ಸೆಂಚುರಿ ಸಿಡಿಸಿದ ಬೆನ್ನಲ್ಲೇ ಪ್ರಾಣಬಿಟ್ಟ ಘಟನೆ ನಡೆದಿದೆ. ಇತ್ತ ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಬಂಧನಕ್ಕೆ ಮುಹೂರ್ತ ಫಿಕ್ಸ್ ಆಗಿದೆ ಅನ್ನೋ ಮಾಹಿತಿ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಮಾಜಿ ಶಾಸಕ ತನ್ವೀರ್ ಸೇಠ್ ಮೇಲೆ ಯುವಕನೋರ್ವ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಜೊತೆ ಜೊತೆಯಲಿ ಧಾರವಾಹಿಯಲ್ಲಿ ಮಹತ್ವದ ಬದಲಾವಣೆ, ಧೋನಿ ವಿರುದ್ಧ ಗೌತಮ್ ಗಂಭೀರ್ ಆರೋಪ ಸೇರಿದಂತೆ ನವೆಂಬರ್ 18 ರ ಟಾಪ್ 10  ಸುದ್ದಿ ಇಲ್ಲಿವೆ.


1) ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಬಂಧನಕ್ಕೆ ಮುಹೂರ್ತ ಫಿಕ್ಸ್?

Latest Videos

undefined

ಉತ್ತರ ಕರ್ನಾಟಕದ ಪ್ರಭಾವಿ ಕಾಂಗ್ರೆಸ್ ನಾಯಕ, ಮಾಜಿ ಸಚಿವ ವಿನಯ್‌ ಕುಲಕರ್ಣಿ ಶೀಘ್ರದಲ್ಲಿ ಬಂಧನಕ್ಕೊಳಗಾಗುವ ಲಕ್ಷಣಗಳು ಕಾಣಿಸುತ್ತಿವೆ. ಧಾರವಾಡ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ CBIಗೆ ಮಹತ್ವದ ಮಾಹಿತಿಯನ್ನು ಕಲೆಹಾಕಿದೆ.        


2) ಶಾಸಕ ತನ್ವೀರ್ ಸೇಠ್‌ಗೆ ಚಾಕು ಇರಿತ: ಆಸ್ಪತ್ರೆಗೆ ದಾಖಲು

 ಮದುವೆ ಕಾರ್ಯಕ್ರಮವೊಂದರಲ್ಲಿ ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ತನ್ವೀರ್ ಸೇಠ್ ಮೇಲೆ ಯುವಕನೊಬ್ಬ ಭಾನುವಾರ ರಾತ್ರಿ ಮಟನ್ ಕತ್ತರಿಸುವ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ. ತೀವ್ರ ಗಾಯಗೊಂಡಿದ್ದ ಶಾಸಕರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೀಗ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಮುಂದಿನ 48 ಗಂಟೆಯವರೆಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

3) ಠಾಕ್ರೆಗೆ ನಮಿಸಲು ಬಂದ ಫಡ್ನವೀಸ್‌ಗೆ ಮುಜುಗರ!

ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ಮಧ್ಯೆಯೂ ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಸಮಾಧಿಗೆ ನಮಿಸಲು ಬಂದಿದ್ದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರನ್ನು ಶಿವಸೇನೆ ಕಾರ್ಯಕರ್ತರು ಮುಜುಗರಕ್ಕೀಡು ಮಾಡಿದ್ದಾರೆ.

4) ಹೈದರಾಬಾದ್ ದೇಶದ ಎರಡನೇ ರಾಜಧಾನಿಯಾಗುತ್ತಾ? ಕೇಂದ್ರ ಸಚಿವರ ಸ್ಪಷ್ಟನೆ

ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಹಾಗೂ ಹೈದರಾಬಾದ್ ದೇಶದ ಎರಡನೇ ರಾಜಧಾನಿಯನ್ನಾಗಿಸುವ ವಿಚಾರ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದೆ. ಇಂತಹ ಮಸೂದೆ ಜಾರಿಗೊಳಿಸಲು ಸರ್ಕಾರ ತಯಾರಿ ನಡೆಸುತ್ತಿದೆ ಎಂಬ ಮಾತುಗಳು ಸದ್ದು ಮಾಡುತ್ತಿವೆ. ಇಂತಹ ಅಂತೆ ಕಂತೆಗಳ ನಡುವೆ ಕೇಂದ್ರ ಸಚಿವ ಕೆ. ಕೃಷ್ಣನ್ ರೆಡ್ಡಿ ಈ ಸಂಬಂಧ ಸ್ಪಷ್ಟನೆ ನೀಡುತ್ತಾ ಸರ್ಕಾರ ಇಂತಹ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದಾರೆ.

5) ಹಿರೇಕೆರೂರು ಉಪಚುನಾವಣೆಯಲ್ಲಿ ಅಚ್ಚರಿ ಬೆಳವಣಿಗೆ‌:ಸ್ವಾಮೀಜಿಗೆ JDS ಗಾಳ

ಹಾವೇರಿಯ ಹಿರೇಕೆರೂರು ಕ್ಷೇತ್ರದ ಉಪಚುನಾವಣೆ ಅಖಾಡದಲ್ಲಿ ಅಚ್ಚರಿಯ ಬೆಳವಣಿಗೆ‌ ನಡೆದಿದೆ. ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಿಢೀರ್ ಬದಲಾವಣೆಯಾಗಿದೆ.  ಜೆಡಿಎಸ್ , ದಿಢೀರ್ ಅಂತ ಉಜಿನಪ್ಪ ಕೋಡಿಹಳ್ಳಿ ಅವರನ್ನ ಬದಲಿಸಿ ಸ್ವಾಮೀಜಿಗೆ ಟಿಕೆಟ್ ನೀಡಿದೆ ಎಂದು ಮಾಹಿತಿ ತಿಳಿದುಬಂದಿದೆ.

6) ಜೀತಕ್ಕಿದ್ದವರ ಮಾಹಿತಿ ಪಡೆಯಲು ವ್ಯಾಪಾರಿಯಂತೆ ಹೋಗಿದ್ದ ಎಸಿ!

ಎಸಿ ಡಾ.ಶಿವಣ್ಣ ಟೊಮೆಟೋ ವ್ಯಾಪಾರಿ ಸೋಗಿನಲ್ಲಿ ತೆರಳಿ, ಅಲ್ಲಿದ್ದ ಕಾರ್ಮಿಕರ ಜೊತೆಗೆ ಪಕ್ಕದ ತೋಟದಲ್ಲಿ ಟೊಮೆಟೋ ಖರೀದಿಗಿದೆಯಾ ಎಂದು ಮಾತನಾಡಿಸಿ, ಮಾಹಿತಿ ಸಂಗ್ರಹಿಸಿದ್ದರು. ಬಳಿಕ ಜೀತ ಪದ್ಧತಿ ಖಚಿತವಾಗುತ್ತಿದ್ದಂತೆ ಅಧಿಕಾರಿಗಳ ತಂಡದೊಂದಿಗೆ ತೆರಳಿ ಜೀವ ಮುಕ್ತಗೊಳಿಸಿದರು.

7) ವಿಶ್ವ​ಕಪ್‌ನಲ್ಲಿ ಶತಕ ತಪ್ಪಿಸಿದ್ದೇ ಧೋನಿ..! ’ಗಂಭೀರ’ ಆರೋಪ

2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗೌತಮ್ ಗಂಭೀರ್ ಕೇವಲ 3 ರನ್‌ಗಳಿಂದ ಶತಕ ವಂಚಿತರಾಗಲು ಧೋನಿಯೇ ಕಾರಣ ಎಂದು ’ಗಂಭೀರ’ ಆರೋಪ ಮಾಡಿದ್ದಾರೆ. ಅಷ್ಟಕ್ಕೂ ಅಂದು ಆಗಿದ್ದೇನು ಎನ್ನುವ ರಹಸ್ಯವನ್ನು ಎಡಗೈ ಬ್ಯಾಟ್ಸ್‌ಮನ್ ಬಯಲು ಮಾಡಿದ್ದಾರೆ.

8) ಅಯ್ಯೋ ವಿಧಿಯೇ... ಅರ್ಧ ಶತಕ ಬಾರಿಸಿ ಪ್ರಾಣಬಿಟ್ಟ ಕ್ರಿಕೆಟಿಗ..!

ಕ್ರಿಕೆಟ್‌ನಲ್ಲಿ ಏನೂ ಬೇಕಾದರೂ ಸಂಭವಿಸಬಹುದು, ಅದೃಷ್ಟ ಕೆಟ್ಟರೇ ಪ್ರಾಣವೂ ಹೋಗಬಹುದು ಎನ್ನುವುದಕ್ಕೆ ಮತ್ತೊಂದು ಆಘಾತಕಾರಿ ಘಟನೆ ಸಾಕ್ಷಿಯಾಗಿದೆ. ಜೀವ ನೀರ ಮೇಲಿನ ಗುಳ್ಳೆ ಎನ್ನುವುದಕ್ಕೆ ಹೈದರಬಾದ್‌ನಲ್ಲಿ ನಡೆದ ಕ್ರಿಕೆಟ್ ಪಂದ್ಯ ಇನ್ನೊಂದು ಸಾಕ್ಷಿಯಾಗಿದೆ. 

9) ಸೀರಿಯಲ್ ಲೋಕದ ಸೆನ್ಸೇಷನ್ 'ಜೊತೆ ಜೊತೆಯಲಿ' ಯಲ್ಲಿ ಭಾರೀ ಬದಲಾವಣೆ?

'ಜೊತೆ ಜೊತೆಯಲಿ' ಧಾರಾವಾಹಿ ಕುತೂಹಲ ಘಟ್ಟಕ್ಕೆ ಬಂದು ತಲುಪಿದೆ. ಅನು- ಆರ್ಯವರ್ಧನ್ ಮದುವೆ ಬಗ್ಗೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಮನಸ್ಸಾಗಿದೆ. ಅದು ಇಬ್ಬರಿಗೂ ಗೊತ್ತಿದೆ. ಹೇಗೆ ಹೇಳಿಕೊಳ್ಳುತ್ತಾರೆ ಎಂಬುದೇ ಮುಂದಿರುವ ಕುತೂಹಲ. ದಿನೇ ದಿನೇ ಕುತೂಹಲ ಮೂಡಿಸುತ್ತಿರುವ, ವೀಕ್ಷಕರ ಮನಗೆದ್ದಿರುವ ಈ ಧಾರಾವಾಹಿಯಲ್ಲಿ ಪ್ರಮುಖ ಬದಲಾವಣೆ ತರುವ ಸಾಧ್ಯತೆಯಿದೆ ಎನ್ನಲಾಗಿದೆ.


10 ) 'ಬಿಗಿಲ್'ನ ರಾಣಿ ನಯನತಾರಾ ನಟಿಯಾಗದಿದ್ದರೆ ಏನ್ ಮಾಡ್ತಿದ್ರು ಗೊತ್ತಾ?...

'ಮನಸ್ಸಿನಕ್ಕರೆ' ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡಿದ ನಯನತಾರಾ ಸಿನಿ ಜರ್ನಿ ಶುರು ಮಾಡಿದ ರೀತಿಯೇ ರೋಚಕ. ನೋಡೋಕೆ ತುಂಬಾ ಸಿಂಪಲ್ ಆದ್ರೆ ರಿಯಲ್ ಲೈಫ್‌ನಲ್ಲೂ ಹೀಗೆ ಇರ್ತಾರಾ?  ನಯನ ಬಗ್ಗೆ ತಿಳಿಯದ ವಿಚಾರಗಳು  ಈ ಸ್ಟೋರಿಯಲ್ಲಿ.

click me!