ನಾವಿರೋದೆ ಹೀಗೆ ಎಂದ ವಚನಾನಂದ ಸ್ವಾಮಿ, ಕೃಷ್ಣ ಭೇಟಿಯಾದ ಡಿಕೆಶಿ: ಟಾಪ್ 10 ಸುದ್ದಿ!

By Suvarna NewsFirst Published Jan 15, 2020, 6:56 PM IST
Highlights

ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಹತ್ತು ಹಲವು ಘಟನಾವಳಿಗಳು| ಸುದ್ದಿಯ ಸಾರವರಿತು ಸುದ್ದಿಯ ವಿಶ್ಲೇಷಿಸುವ ನಿಮ್ಮ ಸುವರ್ಣನ್ಯೂಸ್.ಕಾಂ| ದಿನದ ಟಾಪ್ 10 ಸುದ್ದಿಗಳು ನಿಮಗಾಗಿ| ಜ. 15ರ ರಂದು ನಡೆದ ವಿವಿಧ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ|

ಬೆಂಗಳೂರು(ಜ.15): ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ. ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ. ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.

ನಾವಿರೋದೆ ಹೀಗೆ ಕಣ್ರಿ: ಬೇಡಿಕೆ-ಬೆದರಿಕೆಯ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ ವಚನಾನಂದ ಸ್ವಾಮಿ

ವಚನಾನಂದ ಸ್ವಾಮೀಜಿ  ಬೇಡಿಕೆ ಮತ್ತು ಬಿ.ಎಸ್. ಯಡಿಯೂರಪ್ಪ ರಿಯಾಕ್ಷನ್ ರಾಜ್ಯ ರಾಜಕಾರಣದಲ್ಲಿ ಬಿಸಿಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ. ಪಂಚಮಸಾಲಿ ಶ್ರೀಗಳ ನಡೆಗೆ ಒಂದು ಕಡೆ ಮೆಚ್ಚುಗೆ ವ್ಯಕ್ತವಾದರೆ ಇನ್ನೊಂದು ಕಡೆ  ಟೀಕೆಗಳು ಕೇಳಿಬಂದಿವೆ. ಈ  ಬಗ್ಗೆ ಸುವರ್ಣನ್ಯೂಸ್ ಜೊತೆ ಮಾತನಾಡಿದ ವಚನಾನಂದ ಸ್ವಾಮೀಜಿ, ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅದರ ಹಿಂದಿನ ಕಾರಣವನ್ನೂ ಬಿಚ್ಚಿಟ್ಟಿದ್ದಾರೆ.


ಅತ್ತ ದೆಹಲಿಯಲ್ಲಿ KPCC ಅಧ್ಯಕ್ಷ ಆಯ್ಕೆ ಚರ್ಚೆ: ಇತ್ತ ಬಿಜೆಪಿ ಮುಖಂಡನ ಮನೆಯಲ್ಲಿ ಡಿಕೆಶಿ

ಅತ್ತ ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ಕಸರತ್ತು ನಡೆಯುತ್ತಿದೆ. ಆದ್ರೆ ಇತ್ತ ಕೆಪಿಸಿಸಿ ಅಧ್ಯಕ್ಷ ಪ್ರಬಲ ಆಕಾಂಕ್ಷಿ ಡಿಕೆ ಶಿವಕುಮಾರ್ ಬಿಜೆಪಿ ಹಿರಿಯ ನಾಯಕ ಎಸ್‌.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದ್ದಾರೆ.

ನಿರ್ಭಯಾ ದೋಷಿಗಳಿಗೆ ತಾತ್ಕಾಲಿಕ ಜೀವದಾನ: ಜ.22ರಂದು ಗಲ್ಲು ಜಾರಿ ಇಲ್ಲ!


ನಿರ್ಭಯಾ ಅತ್ಯಾಚಾರ ಅಪರಾಧಿಗಳು ಸಲ್ಲಿಸಿದ್ದ ಕ್ಯುರೇಟಿವ್ ಆರ್ಜಿ ವಿಚಾರಣೆ ರದ್ದುಗೊಳಿಸಿದ ಬೆನ್ನಲ್ಲೇ, ನಾಲ್ವರೂ ಜನವರಿ ಜನವರಿ 22ರಂದೇ ಗಲ್ಲಿಗೇರುವುದು ಖಚಿತವಾಗಿತ್ತು. ಆದರೀಗ ಸರ್ಕಾರದ ಪರ ವಕೀಲರು ದೋಷಿಗಳನ್ನು ಅಂದು ಗಲ್ಲಿಗೇರಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಗೆ ತಿಳಿಸಿದ್ದಾರೆ.

370 ರದ್ದತಿ ನಕಲಿ ಯುದ್ಧ ನಿಲ್ಲಿಸಿದೆ: ಭೂಸೇನಾ ಮುಖ್ಯಸ್ಥ!


ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಪರಿಣಾಮ, ಪಾಕಿಸ್ತಾನ ಪ್ರೇರಿತ ನಕಲಿ ಯುದ್ಧಕ್ಕೆ ತಡೆ ನೀಡಿದೆ ಎಂದು ನೂತನ ಸೇನಾ ಮುಖ್ಯಸ್ಥ ಜನರಲ್ ಮುಕುಂದ್ ನರವಣೆ ಹೇಳಿದ್ದಾರೆ. ಭೂಸೇನೆಯ 72ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಜನರಲ್ ನರವಣೆ, ಭಾರತೀಯ ಸಶಸ್ತ್ರ ಪಡೆಗಳು ಭಯೋತ್ಪಾದನೆ ವಿರುದ್ಧ 'ಜಿರೋ ಟಾಲರೆನ್ಸ್' ನೀತಿಯನ್ನು ಅನುಸರಿಸಲಿವೆ ಎಂದು ಭರವಸೆ ನೀಡಿದರು.

'ಚಪಕ್' ಬೆನ್ನಲ್ಲೇ ದೀಪಿಕಾಗೆ ಮತ್ತೊಂದು ಆಘಾತ!


ಡಿಂಪಲ್ ಕ್ವೀನ್ ದೀಪಿಕಾಗೆ ಜಾಹೀರಾತು ವಿಚಾರದಲ್ಲೂ ಹಿನ್ನಡೆಯುಂಟಾಗಿದೆ. JNU ಭೇಟಿ ಬಳಿಕ ಟಿವಿಯಲ್ಲಿ ಅವರ ಜಾಹೀರಾತುಗಳು ಮಾಯವಾಗಲಾರಂಭಿಸಿವೆ. ಸೋಶಿಯಲ್ ಮೀಡಿಯಾದಲ್ಲಿ ಹುಟ್ಟಿಕೊಂಡಿರುವ ವಿವಾದದಿಂದ ಅವರ ಜಾಹೀರಾತುಗಳನ್ನು ಬಿತ್ತರಿಸಲು ವಾಹಿನಿಗಳು ಹಿಂದೇಟು ಹಾಕಿವೆ. ಏನಿಲ್ಲವೆಂದರೂ ಈ ವಿವಾದ ತಣ್ಣಗಾಗುವವರೆ ವಾಹಿನಿಗಳು ಜಾಹೀರಾತು ನೀಡುವ ಸಾಧ್ಯತೆಗಳಿಲ್ಲ ಎಂದು ವರದಿಗಳು ತಿಳಿಸಿವೆ. 

ಅಂಬಾದೇವಿ ರಥೋತ್ಸವಕ್ಕೆ ಸ್ವಾಗತ ಕೋರುವವರು 'ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಳಿ'


ಊರು ಜಾತ್ರೆ, ಹಬ್ಬ ಹರಿದಿನಗಳು ಬಂದ್ರೆ ಹಳ್ಳಿ ಕಡೆಗಳಲ್ಲಿ ಯುವಕರು  ಫ್ಲೆಕ್ಸ್ ಹಾಕಿಸುವುದು ಟ್ರೆಂಡ್ ಆಗ್ಬಿಟ್ಟಿದೆ. ಆದ್ರೆ, ಇಲ್ಲೊಂದು ಗ್ರಾಮದ ಪಡ್ಡೆ ಹುಡುಗರು  ವಿಭಿನ್ನವಾಗಿ ಬ್ಯಾನರ್ ಹಾಕಿಸಿ ಎಲ್ಲರ ಗಮನಸೆಳೆದಿದ್ದಾರೆ.  ಹಿಂದೆ ಯಾರು ಕೂಡ ಇಂತಹ ಬ್ಯಾನರ್ ಹಾಕಿರಬಾರದು. ಮುಂದೆಯೂ ಬ್ಯಾನರ್ ಹಾಕಬೇಕಾದರೆ ಯೋಚನೆ ಮಾಡ್ಬೇಕೆಂದು ವಿಚಿತ್ರ ಬ್ಯಾನರ್‌ವೊಂದನ್ನು ಹಾಕಿದ್ದಾರೆ.

ರೋಹಿತ್, ಕೊಹ್ಲಿ ಪಾಲಾದ ICC ಪ್ರತಿಷ್ಠಿತ ಪ್ರಶಸ್ತಿಗಳು


2019ನೇ ಸಾಲಿನ ಐಸಿಸಿ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಪಿರಿಟ್ ಆಫ್  ಆಫ್ ಕ್ರಿಕೆಟ್ ಪ್ರಶಸ್ತಿ ಜಯಿಸಿದರೆ, ರೋಹಿತ್ ಶರ್ಮಾ ವರ್ಷದ ಏಕದಿನ ಬ್ಯಾಟ್ಸ್‌ಮನ್ ಪ್ರಶಸ್ತಿ ಬಾಚಿಕೊಂಡಿದ್ದಾರೆ. 

ಸೂಟ್‌ಕೇಸ್‌ನಲ್ಲಿ 1 ಬಿಲಿಯನ್ ಡಾಲರ್ ಇಟ್ಕೊಂಡು ಭಾರತಕ್ಕೆ ಬಂದ ಅಮೆಜಾನ್ ಮುಖ್ಯಸ್ಥ!


ಭಾರತ ಪ್ರವಾಸದಲ್ಲಿರುವ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್, ಆನ್‌ಲೈನ್ ಆಧಾರಿತ ಸಣ್ಣ ಮತ್ತು ಮಧ್ಯಮ ವಾಣಿಜ್ಯ ಕಂಪನಿಗಳನ್ನು ಆರಂಭಿಸಲು ದೇಶದಲ್ಲಿ 1 ಬಿಲಿಯನ್ ಅಮೆರಿಕನ್ ಡಾಲರ್(7,100 ಕೋಟಿ ರೂ.) ಹೂಡಿಕೆ ಮಾಡುವ ಘೋಷಣೆ ಮಾಡಿದ್ದಾರೆ. ಅಮೆಜಾನ್‌ಗೆ ಭಾರತದಲ್ಲಿ ಉತ್ತಮ ಮಾರುಕಟ್ಟೆ ಇದ್ದು, ಇದನ್ನು ವಿಸ್ತರಿಸುವ ಉದ್ದೇಶದೊಂದಿಗೆ 1 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿರುವುದಾಗಿ ಜೆಫ್ ಬೆಜೋಸ್ ಘೋಷಿಸಿದರು.

ಇಂದಿನಿಂದ ಚಿನ್ನ ಖರೀದಿಸಲು ಹೊಸ ರೂಲ್ಸ್: ಪಾಲನೆ ಕಡ್ಡಾಯ!


ಹಾಲ್ಮಾರ್ಕ್ ಇರದ ಚಿನ್ನದ ಮಾರಾಟವನ್ನು 2021ರಿಂದ ಸಂಪೂರ್ಣವಾಗಿ ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇಂದಿನಿಂದ ಹಾಲ್ಮಾರ್ಕ್ ಇರುವ ಚಿನ್ನದ ಮಾರಾಟವನ್ನು ಕಡ್ಡಾಯಗೊಳಿಸಿದೆ.ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಗ್ರಾಹಕ ವ್ಯವಹಾರ ಖಾತೆ ಸಚಿವೆ ರಾಮ್ ವಿಲಾಸ್ ಪಾಸ್ವಾನ್, ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಸ್'ನಲ್ಲಿ ರೆಜಿಸ್ಟರ್ ಮಾಡುವ ಮೂಲಕ ಹಾಲ್ಮಾರ್ಕ್ ಸರ್ಟಿಫಿಕೆಟ್ ಪಡೆಯುವುದು ಕಡ್ಡಾಯ ಎಂದು ಹೇಳಿದ್ದಾರೆ.

ಆಕೆ ಬಿಕಿನಿ ಧರಿಸಿದರೆ ಜಗತ್ತೇ ಖುಷಿಯಾಗುವುದೇಕೆ?


ಅವಳ ಹೆಸರು ಜಾಝ್ ಜೆನ್ನಿಂಗ್ಸ್. ವಯಸ್ಸು ಹದಿನೆಂಟು ವರ್ಷ. ಮೊದಲ ಬಾರಿಗೆ ಆಕೆ ಬಿಕಿನಿ ಧರಿಸಿ ಓಡೋಡಿ ಹೋಗಿ ಸಮುದ್ರದಲೆಗಳ ಮಧ್ಯೆ ಆಡಿದಾಗ ಅವಳಿಗಾದ ಆನಂದ ಬಣ್ಣಿಸಲು ಸಾಧ್ಯವಿಲ್ಲ. ಮತ್ತು, ಆಕೆಯ ಸಂಭ್ರಮವನ್ನು ಇಡೀ ಅಮೆರಿಕಾ ನೋಡಿ ಕಣ್ತುಂಬಿಕೊಂಡಿತು! ಆಕೆ ಇಷ್ಟೊಂದು ಸಂಭ್ರಮಿಸಲು ಕಾರಣ, ಈ ಮೊದಲು ಆಕೆ ಬಿಕಿನಿ ಧರಿಸಿದವಳಲ್ಲ. ಯಾಕೆಂದರೆ ಆಕೆ ಗಂಡಸರ ಶಾರ್ಟ್ಸ್, ಅಂಗಿಯಲ್ಲಿದ್ದಳು! ಅರ್ಥಾತ್, ಗಂಡಸಾಗಿದ್ದಳು. ಇದು ಜಾಝ್ ಜೆನ್ನಿಂಗ್ಸ್ ಎಂಬ ಹುಡುಗ ಅಲಿಯಾಸ್ ಹುಡುಗಿಯ ಹೃದಯಂಗಮ ಓಪನ್ ಶೋ ಕತೆ.

ಈ ಚಾರ್ಟ್ ಫಾಲೋ ಮಾಡಿದ್ರೆ ನಾಳೆ ನೀವೂ ಹೀರೋಯಿನ್ ಆಗ್ಬಹುದು!


ಬಹಳ ಸರಳವಾಗಿ ಯಾರು ಬೇಕಿದ್ರೂ ಫಾಲೋ ಮಾಡಬಹುದಾದ ಹೆಲ್ದೀ ಚಾರ್ಟ್ ಇದು. ನಿಮ್ಮ ದೇಹ ಮಾತ್ರ ಅಲ್ಲ, ಮನಸ್ಸನ್ನೂ ಖುಷಿ ಖುಷಿಯಾಗಿಡೋ ಸೀಕ್ರೆಟ್ ಗಳೆಲ್ಲ ಇದರಲ್ಲಿವೆ.

click me!