JDSಗೆ ದೇವೇಗೌಡರ ಶಾಕ್; ಹುಟ್ಟು ಹಬ್ಬದ ಸಂಭ್ರಮದಲ್ಲಿ ವಿರಾಟ್; ನ.05ರ ಟಾಪ್ 10 ಸುದ್ದಿ!

By Web Desk  |  First Published Nov 5, 2019, 4:40 PM IST

ನಾನು ತಾಂತ್ರಿಕವಾಗಿ JDSನಲ್ಲಿದ್ದೇನೆ ಹೊರತು ಮಾನಸಿಕವಾಗಿ ಇಲ್ಲ ಅನ್ನೋ ಜಿಟಿ ದೇವೇಗೌಡರ ಹೇಳಿಕೆಗೆ ಪಕ್ಷ ಕಂಗಾಲಾಗಿದೆ.   JDS ವರಿಷ್ಠ ದೇವೇಗೌಡರೇ ಡಿಕೆಶಿ ಅರೆಸ್ಟ್‌ಗೆ ಕಾರಣ ಅನ್ನೋ ಮಾತು ರಾಜ್ಯ ರಾಜಕೀಯದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ. ಇತ್ತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 31ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದರೆ, ಚಿತ್ರ ರಂಗದ ಕರಾಳ ಮುಖವನ್ನು ನಟಿ ಇಷಾ ಕೊಪ್ಪಿಕರ್ ಬಯಲು ಮಾಡಿದ್ದಾರೆ. ಹೀಗೆ ನ.05ರಂದು ಓದುಗರ ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ.


1) ‘ಡಿಕೆಶಿ ವಿರುದ್ಧ ಇಡಿಗೆ ಅರ್ಜಿ ಬರೆದಿದ್ದೆ ದೇವೇಗೌಡರು’

Latest Videos

ಕಾಂಗ್ರೆಸ್ ಪ್ರಭಾವಿ ಮುಖಂಡ ಡಿಕೆ ಶಿವಕುಮಾರ್ ಜೈಲು ಸೇರಲು ಪಕ್ಷದೊಳಗಿನವರೇ ಕಾರಣ ಅನ್ನೋ ಮಾತುಗಳ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ಹೊಸ ಬಾಂಬ್ ಸಿಡಿಸಿದ್ದಾರೆ. ಡಿಕೆಶಿ ವಿರುದ್ದ ಇಡಿಗೆ ಪತ್ರ ಬರೆದಿದ್ದು ದೇವೇಗೌಡರು ಅನ್ನೋ ವಿಚಾರ ಇದೀಗ ರಾಜ್ಯ ರಾಜಕೀಯದಲ್ಲೇ ಹೊಸ ಸಂಚಲನ ಮೂಡಿಸಿದೆ.

2) ನಾನು ತಾಂತ್ರಿಕವಾಗಿ JDSನಲ್ಲಿದ್ದೇನೆ ಹೊರತು ಮಾನಸಿಕವಾಗಿ ಇಲ್ಲ : ದೇವೇಗೌಡ

ನಾನು ತಾಂತ್ರಿಕವಾಗಿ ಜೆಡಿಎಸ್ ನಲ್ಲಿ ಇದ್ದೇನೆಯೇ ಹೊರತು ಮಾನಸಿಕವಾಗಿ ಇಲ್ಲ ಎನ್ನುವ ಮೂಲಕ ದೇವೇಗೌಡರು ತಮ್ಮ ಮುಂದಿನ ರಾಜಕೀಯದ ಬಗ್ಗೆ ಸಣ್ಣ ಸುಳಿವೊಂದನ್ನು ನೀಡಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿಯೂ ಬಿಜೆಪಿ ಮುಖಂಡರೊಂದಿಗೆ ಕಾಣಿಸಿಕೊಂಡಿರುವ ದೇವೇಗೌಡ ಹೇಳಿಕೆ ಜೆಡಿಎಸ್ ಆಘಾತ ನೀಡಿದೆ.


3)

ಸಿನಿಮಾದಲ್ಲಿ ತೋರಿಸಲ್ಪಡೋ ದೃಶ್ಯಗಳನ್ನು ಜನ ಹೇಗೆ ಸ್ವೀಕರಿಸುತ್ತಾರೆಂಬುದು ಅವರವರಿಗೆ ಬಿಟ್ಟಿದ್ದು. ಭಾರೀ ಸೌಂಡ್ ಮಾಡಿದ್ದ KGF ಸಿನಿಮಾ ನೋಡಿ ಅನುಕರಿಸಿ ತಂದೆಯೊಬ್ಬ ಮಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ.

4) IPL ಇತಿಹಾಸದಲ್ಲೇ ಹೊಸ ಪ್ರಯೋಗ: ಇನ್ಮುಂದೆ ಪವರ್ ಪ್ಲೇಯರ್ ಆಟ..?

IPL ಕ್ರಿಕೆಟ್ ಇತಿಹಾಸದಲ್ಲೇ ಕ್ರಾಂತಿಕಾರಕ ಹೆಜ್ಜೆಯಿಡಲು ಬಿಸಿಸಿಐ ಮುಂದಾಗುವ ಸಾಧ್ಯತೆಯಿದೆ. ಹೀಗಾದರೆ 11 ಆಟಗಾರರ ಬದಲಿಗೆ 15 ಆಟಗಾರರು ಕ್ರಿಕೆಟ್ ಆಡುವ ಸಾಧ್ಯತೆಯಿದೆ. ‘ಪ​ವರ್‌ ಪ್ಲೇಯರ್‌’ ಎನ್ನುವ ಹೊಸ ಪರಿ​ಕಲ್ಪನೆಯನ್ನು ಪರಿ​ಚ​ಯಿ​ಸಲು ಪ್ರಸ್ತಾ​ಪಿ​ಸ​ಲಾ​ಗಿದೆ. 

5) ರನ್ ಮಷೀನ್ ವಿರಾಟ್ ಕೊಹ್ಲಿ ಬರ್ತ್ ಡೇ @31

ಟೀಂ ಇಂಡಿಯಾದ ನಾಯಕ, ರನ್ ಮಷೀನ್ ವಿರಾಟ್ ಕೊಹ್ಲಿ 31ನೇ ವಸಂತಕ್ಕೆ ಕಾಲಿರಿಸಿದ್ದಾರೆ.  ನವೆಂಬರ್ 5, 1988ರಲ್ಲಿ ಜನಿಸಿದ ವಿರಾಟ್ ಕೊಹ್ಲಿ, ಇದೀಗ 21 ಶತಮಾನ ಕಂಡ ದಿಗ್ಗಜ ಕ್ರಿಕೆಟಿಗನಾಗಿ ಬೆಳೆದು ನಿಂತಿದ್ದಾರೆ. ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಒಂದು ದಶಕದಲ್ಲಿ ಹಲವು ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದಾರೆ. ವಿರಾಟ್ ಕೊಹ್ಲಿಗೆ ಸುವರ್ಣ ನ್ಯೂಸ್.ಕಾಂ ನಿಂದಲೂ ಹುಟ್ಟುಹಬ್ಬದ ಶುಭಾಶಯಗಳು.

6) ಏಕಾಂಗಿಯಾಗು ಸಿಗು ಅಂತ ನಟನೊಬ್ಬ ನನ್ನನ್ನು ಕರೆದಿದ್ದ; ಸೂರ್ಯವಂಶ ನಟಿ

ಏಕಾಂಗಿಯಾಗಿ ಭೇಟಿ ಮಾಡಬೇಕೆಂಬ ನಟರೊಬ್ಬರ ಕೋರಿಕೆಗೆ ಒಪ್ಪದಿದ್ದಕ್ಕೆ ಸಿನಿಮಾದಲ್ಲಿ ನಟಿಸುವ ಅವಕಾಶ ತಪ್ಪಿ ಹೋಯಿತು ಎಂದು ಕನ್ನಡ ಸೇರಿ ವಿವಿಧ ಭಾಷೆಗಳಲ್ಲಿ ನಟಿಸಿರುವ ಚಿತ್ರ ನಟಿ ಇಶಾ ಕೊಪ್ಪಿಕ್ಕರ್‌ ಹೇಳಿದ್ದಾರೆ. ಆ ಮೂಲಕ ತಣ್ಣಗಾಗಿದ್ದ ಮೀಟೂ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ.

7) 'ರಾಧಾ ಕಲ್ಯಾಣ' ರಾಧೆಗೆ ಕಂಕಣ ಭಾಗ್ಯ; ಮನಸೋತ ಕೃಷ್ಣಯಾರು?

ರಾಮನಂತ ಹುಡುಗಬೇಕೆನ್ನುವ ಕನಸು ಈಕೆಯದು, ಆದರೆ ಒಲಿಯುವುದು ಮಾತ್ರ ಕೃಷ್ಣನಂತ ಹುಡುಗ. ಎಸ್, ಇವರೇ ಕರಾವಳಿಯ ಮುದ್ದು ಮುಖದ ಚೆಂದುಳ್ಳಿ ಚೆಲುವೆ ರಾಧಾ ಅಲಿಯಾಸ್‌ ರಾಧಿಕಾ ರಾವ್.

8) ಏರ್‌ಟೆಲ್‌ ರೀಚಾರ್ಜ್ ಮಾಡಿಸಿದರೆ 4 ಲಕ್ಷ ಜೀವ ವಿಮೆ ಉಚಿತ!

 ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರತಿ ಏರ್‌ಟೆಲ್‌ ಮತ್ತೆ ಪಾರುಪತ್ಯ ಸಾಧಿಸಲು ಮುಂದಾಗಿದ್ದು, 599 ರು. ಗಳ ಪ್ರೀಪೇಯ್ಡ್‌ ಪ್ಲಾನ್‌ ಖರೀದಿ ಮಾಡುವವರಿಗೆ 4 ಲಕ್ಷ ರು. ಮೌಲ್ಯದ ಜೀವ ವಿಮೆ ನೀಡುವುದಾಗಿ ಸೋಮವಾರ ಘೋಷಣೆ ಮಾಡಿದೆ.

9) 20 ಸಾವಿರ ಕೋಟಿ ಕೊಡದ ಬಿಎಸ್ಸೆನ್ನೆಲ್‌ಗೆ ‘ದಿವಾಳಿ’ ಸಂಕಷ್ಟ

ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಹಾಗೂ ಎಂಟಿಎನ್‌ಎಲ್‌ ಸಂಸ್ಥೆಗಳನ್ನು ವಿಲೀನ ಮಾಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಎರಡೂ ಸಂಸ್ಥೆಗಳ ವಿರುದ್ಧ ದಿವಾಳಿ ಕ್ರಮ ಕೈಗೊಳ್ಳುವಂತೆ ಕೋರಿಕೆ ಇಡಲು ಎರಡೂ ಸಂಸ್ಥೆಗಳಿಗೆ ಸಾಮಗ್ರಿ ಪೂರೈಕೆ ಮಾಡುತ್ತಿದ್ದ ಕಂಪನಿಗಳು ಮುಂದಾಗಿವೆ.

10) BSY ಆಡಿಯೋ ಸ್ಫೋಟ: ನಳಿನ್ ಕುಮಾರ್ ಕಟೀಲ್ ಆಪ್ತನ ಬೆಂಬಲಿಗರ ಮೇಲೆ ಅನುಮಾನ

ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅನರ್ಹ ಶಾಸಕರ ಪರವಾಗಿ ಮಾತನಾಡಿರುವ ಆಡಿಯೋ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಆಪ್ತನ ಬೆಂಬಲಿಗರ ಮೇಲೆ ಅನುಮಾನಗಳು ವ್ಯಕ್ತವಾಗಿದೆ.

click me!