
ಬುರ್ದ್ವಾನ್(ನ.05): ದೇಸಿ ತಳಿಯ ಗೋವುಗಳಷ್ಟೇ ನಮ್ಮ ತಾಯಿಯಾಗಿದ್ದು, ವಿದೇಶಿ ಗೋವುಗಳು ನಮಗೆ ಆಂಟಿ ಇದ್ದಂತೆ ಎಂದು ಪ.ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದೇಶೀಯ ತಳಿಯ ಗೋವಿನ ಹಾಲಿನಲ್ಲಿ ಚಿನ್ನ ಇರುತ್ತದೆ ಎಂದಿರುವ ದಿಲೀಪ್ ಘೋಷ್, ಇದೇ ಕಾರಣಕ್ಕೆ ಗೋವಿನ ಹಾಲು ಚಿನ್ನದ ಬಣ್ಣದಲ್ಲಿರುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಕರೆದರಷ್ಟೇ ಆದೀತೆ ಗೋಮಾತೆ ಎಂದು?: ಒದ್ದಾಡಿದ್ದಾಳೆ 52 ಕೆಜಿ ಪ್ಲ್ಯಾಸ್ಟಿಕ್ ತಿಂದು!
ದೇಸಿ ಹಸುಗಳ ರಕ್ತನಾಳಗಳು ಸೂರ್ಯನ ಬೆಳಕಿನಿಂದ ಚಿನ್ನ ಉತ್ಪಾದಿಸುತ್ತವೆ. ಹೀಗಾಗಿ ಸ್ಥಳೀಯ ಹಸುಗಳನ್ನು ಮನೆಗಳಲ್ಲಿ ಸಾಕಬೇಕು ಎಂದು ದಿಲೀಪ್ ಸಲಹೆ ನೀಡಿದ್ದಾರೆ.
‘ಗೋವುಗಳು ಸಿಗದಿದ್ದಕ್ಕೆ ಕತ್ತೆಗಳನ್ನು ಕಟ್ ಮಾಡಿ ತಿನ್ನುತ್ತಿದ್ದಾರೆ’
ವಿದೇಶಗಳಿಂದ ಬರುವ ತಳಿಗಳು ಹಸುಗಳಲ್ಲ ಬದಲಿಗೆ ಮೃಗಗಳು ಎಂದಿರುವ ದಿಲೀಪ್, ಅವು ನಮ್ಮ ಗೋಮಾತೆಗಳಲ್ಲ ಆಂಟಿಗಳು ಹೀಗಾಗಿ ಅಂತವುಗಳನ್ನು ಪೂಜಿಸುವುದು ಒಳ್ಳೆಯದಲ್ಲ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಕೆಲ ಬುದ್ದಿಜೀವಿಗಳು ರಸ್ತೆಯಲ್ಲಿ ಗೋಮಾಂಸ ತಿನ್ನುತ್ತಾರೆ. ಅಂತವರು ಮನೆಯಲ್ಲಿ ನಾಯಿ ಮಾಂಸ ತಿನ್ನಲಿ ಎಂದು ದಿಲೀಪ್ ಘೋಷ್ ವ್ಯಂಗ್ಯವಾಡಿದ್ದಾರೆ.
ಗೋಮಾತೆ ಆಮ್ಲಜನಕ ಸೇವಿಸಿ ಆಮ್ಲಜನಕ ಬಿಡ್ತಾಳೆ: ಮುಖ್ಯಮಂತ್ರಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.