ಗಾಂಧಿ ಕುಟುಂಬದ ಟ್ರಸ್ಟ್‌ಗೆ ಚೀನಾ ಹಣ, ರಾಜ್ಯದಲ್ಲಿ ಅಬ್ಬರಿಸುತ್ತಿದ್ದಾನೆ ವರುಣ; ಜು.9ರ ಟಾಪ್ 10 ನ್ಯೂಸ್!

By Suvarna News  |  First Published Jul 9, 2020, 4:48 PM IST

ಕೊರೋನಾ ಹೆಚ್ಚಾಗುತ್ತಿರುವ ಬೆನ್ನಲ್ಲೇ ಲಾಕ್‌ಡೌನ್ ಮಾತು ಕೇಳಿ ಬರುತ್ತದೆ. ಆದರೆ ರಾಜ್ಯ ಸರ್ಕಾರ ಲಾಕ್‌ಡೌನ್ ಕುರಿತು ಸ್ಪಷ್ಟನೆ ನೀಡಿದೆ. ರಾಜೀವ್‌ ಗಾಂಧಿ ಪ್ರತಿಷ್ಠಾನಕ್ಕೆ ಚೀನಾದಿಂದ ಹಣ ಹರಿದುಬಂದಿದೆ ಎಂದು ಬಿಜೆಪಿ ಆರೋಪಿಸಿದೆ. ಫೇಸ್‌ಬುಕ್ ಸೇರಿದಂತೆ 89 ಆ್ಯಪ್ ಡೀಲೀಟ್ ಮಾಡುವಂತೆ ಸೇನೆಗೆ ಸೂಚನೆ ನೀಡಲಾಗಿದೆ. ಕರಾವಳಿ, ಮಲೆನಾಡಲ್ಲಿ ವರುಣನ ಅಬ್ಬರ, ಲವ್ ಸೀಕ್ರೆಟ್ ಬಿಚ್ಚಿಟ್ಟ ನಟಿ ಭಾವನ ಸೇರಿದಂತೆ ಜುಲೈ 9ರ ಟಾಪ್ 10 ಸುದ್ದಿ ಇಲ್ಲಿವೆ.


ಸಿಎಂ ಯಡಿಯೂರಪ್ಪ ಕೈಯಲ್ಲಿ ಲಾಕ್‌ಡೌನ್ ಭವಿಷ್ಯ..!.

Tap to resize

Latest Videos

undefined

ಬೆಂಗಳೂರು ಸೇರಿದಂತೆ ಕೆಲವೆಡೆ ಕೊರೋನಾ ಕೈತಪ್ಪಿ ಹೋಗಿದೆ ಎಂದು ವಿಧಾನಸೌಧದಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ನಾಳೆ(ಜು.10) ಈ ವಿಚಾರದ ಕುರಿತಂತೆ ಸುದ್ದಿಘೋಷ್ಠಿಯಲ್ಲಿ ಸವಿವರವಾಗಿ ತಿಳಿಸುವುದಾಗಿ ಹೇಳಿದ್ದಾರೆ.

ಜಮ್ಮು ಕಾಶ್ಮೀರ BJP ಮುಖಂಡರ ಕೊಲೆ ಪ್ರೀ ಪ್ಲಾನ್..? 10 ಜನ ಪೊಲೀಸರ ಬಂಧನ.

ಜಮ್ಮು ಕಾಶ್ಮೀರದ ಬಿಜೆಪಿ ಮುಖಂಡ ಶೇಖ್ ವಾಸಿಂ ಬಾರಿ ಹಾಗೂ ಅವರ ಕುಟುಂಬದ ಇನ್ನಿಬ್ಬರು ಕುಟುಂಬ ಸದಸ್ಯರು ಕೊಲೆಯಾದ ಬೆನ್ನಲ್ಲೇ ಅವರ ಭದ್ರತೆ ಕರ್ತವ್ಯಕ್ಕೆ ನಿಯೋಜಿತರಾಗಿದ್ದ 10 ಜನ ಪೊಲೀಸರನ್ನು ಬಂಧಿಸಲಾಗಿದೆ.

ಸೋನಿಯಾ ಕುಟುಂಬದ ಟ್ರಸ್ಟ್‌ನಲ್ಲಿ ವಿದೇಶಿ ಹಣ..? ತನಿಖೆಗೆ ಸಚಿವರ ತಂಡ ರೆಡಿ

ರಾಜೀವ್‌ ಗಾಂಧಿ ಪ್ರತಿಷ್ಠಾನಕ್ಕೆ ಚೀನಾದಿಂದ ಹಣ ಹರಿದುಬಂದಿದೆ ಎಂದು ಬಿಜೆಪಿ ಆರೋಪಿಸಿದ ಬೆನ್ನಲ್ಲೇ ಈಗ ನೆಹರು- ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಮೂರು ಟ್ರಸ್ಟ್‌ಗಳ ಹಣಕಾಸು ವ್ಯವಹಾರಗಳ ತನಿಖೆಗೆ ಅಂತರ್‌-ಸಚಿವಾಲಯ ತಂಡವೊಂದನ್ನು ಕೇಂದ್ರ ಸರ್ಕಾರ ರಚಿಸಿದೆ.

ಕ್ಯಾಪ್ಟನ್ ಕೊಹ್ಲಿಗೆ ನೀರ್‌ ದೋಸೆ ಕೊಟ್ಟ ಶ್ರೇಯಸ್‌ ಅಯ್ಯರ್‌!

ಟೀಂ ಇಂಡಿಯಾ ವಿರಾಟ್ ಕೊಹ್ಲಿ ನಿವಾಸದಿಂದ ಕೇವಲ ಅರ್ಧ ಕಿಲೋ ಮೀಟರ್ ದೂರದಲ್ಲಿರುವ ಶ್ರೇಯಸ್ ಅಯ್ಯರ್ ಅಮ್ಮ ಮಾಡಿಕೊಟ್ಟ ನೀರ್ ದೋಸೆಯನ್ನು ನೀಡಿದ್ದಾರೆ. ಇದರ ಮಧ್ಯೆ ಸ್ಪಿನ್ನರ್ ವಿಶೇಷ ಮನವಿಯನ್ನು ಮಾಡಿಕೊಂಡಿದ್ದಾರೆ. 

#MyRomeo;ಅಂತು ಇಂತೂ ಲವ್‌ ಮ್ಯಾಟರ್‌ ಬಿಚ್ಚಿಟ್ಟ ಜಾಕಿ ನಟಿ ಭಾವನ!

ಜಾಕಿ ಚಿತ್ರದ ನಟಿ ಭಾವನ ಲವ್ ಮ್ಯಾರೇಜ್‌ ಆಗಿರುವ ವಿಚಾರ ಎಲ್ಲರಿಗೂ ಗೊತ್ತಿರುವುದೇ. ಇವರ ಪ್ರೀತಿಗೆ ಎಷ್ಟು ವರ್ಷ ಆಗಿದೆ ಗೊತ್ತಾ? ಸೀಕ್ರೆಟ್ ಕಹಾನಿ ಬಿಚ್ಚಿಟ್ಟ ಭಾವನ.

ಫೇಸ್‌ಬುಕ್‌ ಸೇರಿದಂತೆ 89 ಆ್ಯಪ್‌ ಡಿಲೀಟ್‌ಗೆ ಸೇನಾ ಸಿಬ್ಬಂದಿಗೆ ಸೂಚನೆ

ಸೂಕ್ಷ್ಮ ಮಾಹಿತಿಗಳು ಸೋರಿಕೆ ಆಗುವುದನ್ನು ತಡೆಯುವ ಉದ್ದೇಶದಿಂದ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಸೈನಿಕರಿಗೆ ಹಾಗೂ ಅಧಿಕಾರಿಗಳಿಗೆ ಫೇಸ್‌ಬುಕ್ ಸೇರಿದಂತೆ 89 ಆ್ಯಪ್‌ ಡಿಲೀಟ್ ಮಾಡಲು ಸೂಚಿಸಲಾಗಿದೆ. 

ಗ್ರಾಹಕರಿಗೆ ಬಂಪರ್ ಆಫರ್ ಘೋಷಿಸಿದ KMF

ನಂದಿನಿ ಚೀಸ್ ಉತ್ಪನ್ನಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಬಂಪರ್ ಆಫರ್ ಘೋಷಿಸಿದೆ. 200 ಗ್ರಾಂ ನಂದಿನಿ ಪನ್ನೀರ್ ಖರೀದಿಸಿದ್ರೆ ಚೀಸ್ ಸ್ಪೈಸ್ ಉಚಿತವಾಗಿ ನೀಡಲು ಮುಂದಾಗಿದೆ. ಈ ಆಫರ್ 5 ದಿನಗಳವರೆಗೆ ಇರಲಿದ್ದು, ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ತಿಂಗಳಿಗೆ 899 ರೂ. EMI, ಹೊಸ ಆಫರ್ ಘೋಷಿಸಿದ ಮಾರುತಿ ಸುಜುಕಿ!.

ಕೊರೋನಾ ವೈರಸ್ ನಡುವೆ ಆಟೋಮೊಬೈಲ್ ಕಂಪನಿಗಳು ಗ್ರಾಹಕರಿಗಾಗಿ ಹಲವು ಆಫರ್ ಘೋಷಿಸಿದೆ. ಸಾಮಾಜಿಕ ಅಂತರ, ಸಾರಿಗೆ ವ್ಯವಸ್ಥೆ ಸ್ಥಗಿತ ಸೇರಿದಂತೆ ಹಲವು ಕಾರಣಗಳಿಂದ ಜನರು ಕಾರು ಖರೀದಿಗೆ ಒಲವು ತೋರುತ್ತಿದ್ದಾರೆ. ಇದೀಗ ಗ್ರಾಹಕರ ಅನುಕೂಲಕ್ಕೆ ಮಾರುತಿ ಸುಜುಕಿ, ಆ್ಯಕ್ಸಿಸ್ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಇಷ್ಟೇ ಅಲ್ಲ ಕೇವಲ 8,99 ರೂಪಾಯಿ ತಿಂಗಳ ಕಂತಿನ ಆಯ್ಕೆ ನೀಡಿದೆ.

ಮತ್ತೆ ಲಾಕ್‌ಡೌನ್; ಪಾಟ್ನಾದಲ್ಲಿ ಏನಿರುತ್ತೆ? ಏನಿರಲ್ಲಾ? ಇಲ್ಲಿದೆ ವಿವರ!

ಭಾರತದಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. ನಿಯಂತ್ರಣ ಮೀರಿ ಹರಡುತ್ತಿರುವ ಕಾರಣ ಒಂದೊಂದೆ ನಗರಗಳು ಲಾಕ್‌ಡೌನ್ ಆಗುತ್ತಿದೆ.  ಇದೀಗ ಬಿಹಾರದ ಪಾಟ್ನ ಸಂಪೂರ್ಣ ಲಾಕ್‌ಡೌನ್ ಆಗುತ್ತಿದೆ. ಜುಲೈ 10ರಿಂದ ಪಾಟ್ನಾ ಲಾಕ್‌ಡೌನ್ ಆರಂಭವಾಗಲಿದೆ. 

ಕರಾವಳಿ, ಮಲೆನಾಡಲ್ಲಿ ವರುಣನ ಅಬ್ಬರ: ಇನ್ನು ಮೂರು ದಿನ ಭಾರೀ ಮಳೆ ಸಾಧ್ಯತೆ

ರಾಜಧಾನಿ ಬೆಂಗಳೂರು ಸೇರಿದಂತೆ ಪಶ್ಚಿಮ ಘಟ್ಟಪ್ರದೇಶ ಮತ್ತು ಕರಾವಳಿ ಭಾಗ ವಿವಿಧೆಡೆ ಬುಧವಾರ ಉತ್ತಮ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ತುಂಗೆ, ಭದ್ರೆ, ಶರಾವತಿ ನದಿಗಳು ತುಂಬಿ ಹರಿಯುತ್ತಿವೆ. ತುಂಗಾ ಜಲಾನಯನ ಪ್ರದೇಶದಲ್ಲಿ ನದಿ ನೀರಿನ ಹರಿವು ಹೆಚ್ಚಿದೆ. ಇನ್ನು ಉತ್ತರ ಕನ್ನಡ ಜಿಲ್ಲೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭರ್ಜರಿ ಮಳೆಯಾಗಿದ್ದು, ನದಿಗಳು ತುಂಬಿ ಹರಿಯುತ್ತಿವೆ.

click me!