ಕೊರೋನಾ ಎಂಬ ಮಹಾಮಾರಿ ಯಾರನ್ನೂ ಬಿಡುತ್ತಿಲ್ಲ. ಜನ ಸಮಾನ್ಯರಿಂದ ಹಿಡಿದು ಇದೀಗ ಜನಪ್ರತಿನಧಿಗಳಿಗೂ ಕೊರೋನಾ ವಕ್ಕರಿಸುತ್ತಿದ್ದು, ಮತ್ತಿಬ್ಬರು ಶಾಸಕರುಗಳಿಗೆ ಕೊರೋನಾ ಅಟ್ಯಾಕ್ ಆಗಿದೆ.
ಬೆಂಗಳೂರು, (ಜುಲೈ.09): ಕರ್ನಾಟಕದ ಮತ್ತೆ ಇಬ್ಬರು ಶಾಸಕರುಗಳಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರಿಗೆ ಕೊರೋನಾ ಪಾಸಿಟಿವ್ ಬಂದಿದೆ.
ಶೃಂಗೇರಿಯ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ಅವರಿಗೆ ಕೋವಿಡ್19 ದೃಢಪಟ್ಟಿದ್ದು, ಸದ್ಯ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜೇಗೌಡ ಅವರು ಎನ್.ಆರ್.ಪುರ, ಶೃಂಗೇರಿ, ಕೊಪ್ಪದಲ್ಲಿ ನಡೆದ ಸಭೆಗಳಲ್ಲಿ ಭಾಗವಹಿಸಿದ್ದ, ಪ್ರಾಥಮಿಕ ಸಂಪರ್ಕದಲ್ಲದ್ದವರ ಮಾಹಿತಿ ಕಲೆಹಾಕಲಾಗುತ್ತಿದೆ.
ಕೊರೋನಾ ವೈರಸ್‌ಗೆ ತುತ್ತಾದ ಕರ್ನಾಟಕದ ಪ್ರಮುಖ ರಾಜಕಾರಣಿಗಳಿವರು....
ಸೇಡಂ ಶಾಸಕನಿಗೂ ವಕ್ಕರಿಸಿದ ಕೊರೋನಾ
ಹೌದು...ಕಲಬುರಗಿ ಜಿಲ್ಲೆಯ ಸೇಡಂ ಕ್ಷೇತ್ರದ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರಲ್ಲೂ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ.
ಶಾಸಕರ ಆಪ್ತ ಸಹಾಯಕರಿಗೆ ಎರಡು ದಿನಗಳ ಹಿಂದೆ ಪಾಸಿಟಿವ್ ಬಂದಿದ್ದರಿಂದ ಶಾಸಕರೂ ಪರೀಕ್ಷೆಗೆ ಒಳಗಾಗಿದ್ದರು. ಗುರುವಾರ ಶಾಸಕರಿಗೆ ಕೋವಿಡ್ ತಗುಲಿರುವುದು ದೃಢಪಟ್ಟಿದ್ದು, ಅವರು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.