
ಕುದುರೆ ವ್ಯಾಪಾರಕ್ಕೆ ಕಾಂಗ್ರೆಸ್ ಅನ್ವರ್ಥ ನಾಮ: ಖರೀದಿ ವಿಚಾರದಲ್ಲಿ 2 ಪಕ್ಷಗಳೂ ಅಪರಾಧಿಗಳೇ ಎಂದ ಎಚ್‌ಡಿಕೆ.
ಶಾಸಕರನ್ನು ಖರೀದಿಸಿ ಸರ್ಕಾರ ಉರುಳಿಸುವ ವಿಚಾರವಾಗಿ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಕಾಂಗ್ರೆಸ್ ಹಾಗೂ ಬಿಜೆಪಿ ಬಗ್ಗೆ ವಾಗ್ದಾಳಿ ಮಾಡಿದ್ದಾರೆ. ಶಾಸಕರನ್ನು ಖರೀದಿಸಿ, ಸರ್ಕಾರಗಳನ್ನು ಉರುಳಿಸುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ "ಪ್ರಜಾಪ್ರಭುತ್ವ ಉಳಿಸಿ" ಎಂದು ಹೋರಾಟ ನಡೆಸುತ್ತಿದೆ. ಇದೇ ಕಾಂಗ್ರೆಸ್ ರಾಜಸ್ಥಾನದಲ್ಲಿ ಏನು ಮಾಡಿದೆ? ಎಂದು ಪ್ರಶ್ನಿಸಿದ್ದಾರೆ.
ಭಾರತದ ನೆರವಿಗೆ ಧಾವಿಸಿದ ಫ್ರಾನ್ಸ್, ರಾಫೆಲ್ ಯುದ್ಧ ವಿಮಾನ ಜೊತೆಗೆ ಬರುತ್ತಿದೆ ಮೆಡಿಕಲ್ ಕಿಟ್!
ಭಾರತದಲ್ಲಿ ಕೊರೋನಾ ಕೇಕೆ ಹಾಕುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಚಿಕಿತ್ಸೆಗಾಗಿ ಸರ್ಕಾರ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯುತ್ತಿದೆ. ಇದರ ಬೆನ್ನಲ್ಲೇ ಭಾರತಕ್ಕೆ ಇತರ ದೇಶಗಳು ಕೈಜೋಡಿಸಿದೆ. ಇಸ್ರೇಲ್ ವೆಂಟಿಲೇಟರ್ ನೀಡಿದ ಬೆನ್ನಲ್ಲೇ ಇದೀಗ ಫ್ರಾನ್ಸ್ ಕೂಡ ಭಾರತಕ್ಕೆ ವೆಂಟಿಲೇಟರ್ ನೀಡಿದೆ.
ನಟಿ ಸುಧಾರಾಣಿಗೆ ಖಾಸಗಿ ಆಸ್ಪತ್ರೆ ನೀಡಿದ ಶಾಕ್; ಅಣ್ಣನ ಪುತ್ರಿ ಅನಾರೋಗ್ಯ!...
ಸ್ಯಾಂಡಲ್‌ವುಡ್ ನಟಿ ಸುಧಾರಾಣಿ ಅಣ್ಣನ ಪುತ್ರಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ರಾತ್ರಿ 10 ಗಂಟಿಗೆ ಭೇಟಿ ನೀಡಿದ್ದಾರೆ. ಆದರೆ ಒಂದು ಗಂಟೆ ಕಳೆದರೂ ಬೆಡ್, ವೆಂಟಿಲೇಟರ್ ಇಲ್ಲವೆಂದು ಸಿಬ್ಬಂದಿ ಕಾಯಿಸಿದ್ದಾರೆ. ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ನಟಿ ಸುಧಾರಾಣಿಗೆ ಆದ ತೊಂದರೆ ಬಗ್ಗೆ ಟ್ಟೀಟ್ ಮಾಡಿದ್ದಾರೆ.
ಯುಎಇಯಲ್ಲಿ ಐಪಿಎಲ್ ಆಯೋಜನೆಗೆ ಬಿಸಿಸಿಐ ಪತ್ರ...
ದುಬೈನಲ್ಲಿ ಐಪಿಎಲ್ ಆಯೋಜಿಸುವ ಬಗ್ಗೆ ಬಿಸಿಸಿಐ ಒಲವು ತೋರಿದ್ದು, ಈ ಕುರಿತಂತೆ ಪತ್ರ ಬರೆದಿರುವುದಾಗಿ ಎಮಿರಾಟ್ಸ್ ಕ್ರಿಕೆಟ್ ಬೋರ್ಡ್ ಖಚಿತ ಪಡಿಸಿದೆ.
ನಿಕ್ ಮಾಡಿದ ವಿಡಿಯೋದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ರು ವಿಕ್ಕಿ-ಕತ್ರೀನಾ..!
ಇಶಾ ಅಂಬಾನಿ ಆಯೋಜಿಸಿದ ಹೋಳಿ ಪಾರ್ಟಿಯಲ್ಲಿ ನಿಕ್ ಜೋನಸ್ ಮಾಡಿದ ವಿಡಿಯೋ ತುಣುಕೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ಕತ್ರಿಕಾ ಕೈಫ್ ಮತ್ತು ವಿಕ್ಕಿ ಕೌಶಲ್ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಕೋವಿಡ್‌ನಿಂದ ಸಾಯ್ತೀರಿ ಎಂದವರಿಗೆ ಅಮಿತಾಭ್ ಕ್ಲಾಸ್..!
ಅನಾಮಧೇಯ ಟ್ರೋಲ್‌ಗೆ ಉತ್ತರಿಸಿದ ಅಮಿತಾಬ್ ಬಚ್ಚನ್ ತಮ್ಮ ಬ್ಲಾಗ್‌ನಲ್ಲಿ ಬಹಿರಂಗ ಪತ್ರದ ಮೂಲಕ ಟ್ರೋಲಿಗರಿಗೆ ಚಾಟಿ ಬೀಸಿದ್ದಾರೆ. ನೀವು ಕೊರೋನಾದಿಂದಲೇ ಸಾಯುತ್ತೀರಿ ಎಂದು ಬರುತ್ತಿರುವ ಅನಾಮಧೇಯ ಮೆಸೇಜುಗಳಿಗೆ ಅವರು ಬರಹದ ಮೂಲಕ ಉತ್ತರಿಸಿದ್ದಾರೆ.
ಶೀಘ್ರದಲ್ಲಿ iPhone 12 ಮಾರುಕಟ್ಟೆಗೆ; ಐಫೋನ್11ಗಿಂತ ಕಡಿಮೆ ಬೆಲೆ!...
ಚೀನಾ ಸ್ಮಾರ್ಟ್‌ಫೋನ್ ಖರೀದಿಗೆ ಜನರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಜನರು ಐಫೋನ್ ಸೇರಿದಂತೆ ಇತರ ಫೋನ್‌ಗಳತ್ತ ಜನ ಮುಖಮಾಡಿದ್ದಾರೆ. ಇದೀಗ ಆ್ಯಪಲ್ iPhone 12 ಬಿಡುಗಡೆ ಮಾಡಲು ಸಜ್ಜಾಗಿದೆ. ನೂತನ ಫೋನ್ iPhone 11ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.
ರಿಲಯನ್ಸ್ ಈಗ ಜಗತ್ತಿನ ನಂ.2 ಇಂಧನ ಕಂಪನಿ!
ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಇದೀಗ ಸೌದಿ ಅರೇಬಿಯಾದ ಅರಾಮ್ಕೋ ಬಳಿಕ ವಿಶ್ವದ ಎರಡನೇ ಅತಿ ದೊಡ್ಡ ಇಂಧನ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾರುಕಟ್ಟೆಮೌಲ್ಯದಲ್ಲಿ ಅಮೆರಿಕದ ಎಕ್ಸೋನ್‌ಮೊಬಿಲ್ ಕಾರ್ಪೊರೇಷನ್ ಅನ್ನು ರಿಲಯನ್ಸ್ ಹಿಂದಿಕ್ಕಿದೆ.
ಅಪಾರ್ಟ್‌ಮೆಂಟ್‌ನಲ್ಲೇ ಭಾರೀ ಜೂಜಾಟ ನಡೆಸ್ತಿದ್ದ ಬಹುಭಾಷಾ ನಟ ಅರೆಸ್ಟ್!
ಬಹುಭಾಷಾ ನಟ ಶ್ಯಾಮ್ ಅವರನ್ನು ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ. ನಟ ಶ್ಯಾಮ್ ಜೊತೆಗೆ 13 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಾಹೋರ್ ಗುರುದ್ವಾರವ ಮಸೀದಿಯಾಗಿಸಲು ಮುಂದಾದ ಪಾಕ್‌ಗೆ ಭಾರತದ ಬಿಸಿ...
ಗುರುದ್ವಾರವನ್ನು ಮಸೀದಿಯನ್ನಾಗಿ ಬದಲಾಯಿಸಲು ಪಾಕಿಸ್ತಾನ ಮುಂದಾಗಿದ್ದು ಪ್ರತಿಭಟನೆ ಎದುರಿಸಿದೆ. ಲಾಹೋರ್ ನ ಗುರುದ್ವಾರವನ್ನು ಮಸೀದಿಯನ್ನಾಗಿ ಪರಿವರ್ತಿಸಲು ಮುಂದಾಗಿದ್ದಕ್ಕೆ ಪಾಕಿಸ್ತಾನ ಹೈ ಕಮಿಷನ್ ಭಾರತದ ವಿರೋಧ ಎದುರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.