ಲಾಹೋರ್ ಗುರುದ್ವಾರವ ಮಸೀದಿಯಾಗಿಸಲು ಮುಂದಾದ ಪಾಕ್‌ಗೆ ಭಾರತದ ಬಿಸಿ

By Suvarna News  |  First Published Jul 28, 2020, 4:07 PM IST

ಗುರುದ್ವಾರವನ್ನು ಮಸೀದಿಯನ್ನಾಗಿಸಲು ಮುಂದಾದ ಪಾಕಿಸ್ತಾನ/ಪಾಕಿಸ್ತಾನ ಹೈ ಕಮಿಷನ್ ವಿರುದ್ಧ  ಪ್ರತಿಭಟನೆ / ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆಗೆ ಹೋರಾಟ


ಲಾಹೋರ್(ಜು. 27)  ಗುರುದ್ವಾರವನ್ನು ಮಸೀದಿಯನ್ನಾಗಿ  ಬದಲಾಯಿಸಲು ಪಾಕಿಸ್ತಾನ ಮುಂದಾಗಿದ್ದು ಪ್ರತಿಭಟನೆ ಎದುರಿಸಿದೆ.  ಲಾಹೋರ್ ನ ಗುರುದ್ವಾರವನ್ನು ಮಸೀದಿಯನ್ನಾಗಿ ಪರಿವರ್ತಿಸಲು ಮುಂದಾಗಿದ್ದಕ್ಕೆ  ಪಾಕಿಸ್ತಾನ ಹೈ ಕಮಿಷನ್ ಭಾರತದ ವಿರೋಧ ಎದುರಿಸಿದೆ. 

ಪಾಕಿಸ್ತಾನದ ಲಾಹೋರ್‌ನ ನೌಲಾಖಾ ಬಜಾರ್‌ನಲ್ಲಿರುವ ಪ್ರಸಿದ್ಧ ಗುರುದ್ವಾರವನ್ನು ಮಸೀದಿಯಾಗಿ ಪರಿವರ್ತಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ವರದಿಗಳು ಹೊರ ಬೀಳುತ್ತಿದ್ದಂತೆ, ಇದನ್ನು ವಿರೋಧಿಸಿರುವ ಭಾರತ ಸರ್ಕಾರ ಪಾಕಿಸ್ತಾನದ ಹೈಕಮಿಷನ್ ಎದುರು ಕ್ರಮ ಖಂಡಿಸಿದೆ.

Latest Videos

undefined

ಕಾರ್ಗಿಲ್ ಯೋಧರ ಮತ್ತೆ ಮತ್ತೆ ನೆನೆಯೋಣ

ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್, ಈ ಘಟನೆಯ ಬಗ್ಗೆ ಭಾರತ ಸರ್ಕಾರ ತನ್ನ ಕಳವಳವನ್ನು ವ್ಯಕ್ತಪಡಿಸಿದೆ ಮತ್ತು ಈ ಬಗ್ಗೆ ತನಿಖೆ ನಡೆಸಿ ತಕ್ಷಣ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದೆ ಎಂದು ತಿಳಿಸಿದ್ದಾರೆ.

ಲಾಹೋರ್‌ನಲ್ಲಿರುವ 'ಶಾಹಿದಿ ಅಸ್ತಾನ್ ಭಾಯಿ ತರು ಜಿ'  ಐತಿಹಾಸಿಕ ಗುರುದ್ವಾರವಾಗಿದ್ದು, ಭಾಯಿ ತರು ಜಿ 1745 ರಲ್ಲಿ ಇದೇ ಜಾಗದಲ್ಲಿ ಹುತಾತ್ಮರಾಗಿದ್ದರು. ಪರಿಣಾಮ ಈ ಗುರುದ್ವಾರವು ಪೂಜ್ಯ ಸ್ಥಳವಾಗಿದ್ದು, ಸಿಖ್ ಸಮುದಾಯದಿಂದ ಪವಿತ್ರವೆಂದು ಪರಿಗಣಿಸಲಾಗಿದೆ. 

click me!