ಟ್ರಂಪ್‌ಗಾಗಿ ಖರ್ಚು 100 ಕೋಟಿ, ಒಲಿಂಪಿಕ್ಸ್‌ಗೆ ಕಂಬಳದ ಜಾಕಿ? ಫೆ.15ರ ಟಾಪ್ 10 ಸುದ್ದಿ!

By Suvarna NewsFirst Published Feb 15, 2020, 4:50 PM IST
Highlights

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎರಡು ದಿನಗಳ ಭಾರತ ಪ್ರವಾಸಕ್ಕೆ ಕೇಂದ್ರ ಸರ್ಕಾರ 100 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಅನ್ನೋದು ಭಾರಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ನಾಯಕರನ್ನು ಬಂಧಿಸಲಾಗಿದೆ. ಕಂಬಳ ಕ್ರೀಡೆಯಲ್ಲಿ ಮಿಂಚಿನಂತೆ ಓಡಿ ವಿಶ್ವವಿಖ್ಯಾತ ಉಸೇನ್ ಬೋಲ್ಟ್ ಹಿಂದಿಕ್ಕಿದ ಶ್ರೀನಿವಾಸ ಗೌಡ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹ ಅನ್ನೋ ಮಾತುಗಳು ಕೇಳಿಬಂದಿದೆ. ಫೆ.15ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.

'ಮೋದಿ ರಜೆ ಇಲ್ಲದೇ ಕೆಲಸ ಮಾಡುವುದು ವಿಶೇಷವಲ್ಲ'

Latest Videos

ಸರ್ಕಾರಿ ನೌಕರರ ಕೆಲಸವನ್ನು ಐದು ದಿನಕ್ಕೆ ಇಳಿಸಿದ ಉದ್ಧವ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸಲು ಶಿವಸೇನಾ ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರಧಾನಿ ಮೋದಿಯನ್ನು ಲೇವಡಿ ಮಾಡಿದೆ.

CM ನಿವಾಸಕ್ಕೆ ಮುತ್ತಿಗೆ ಯತ್ನ: ಸಿದ್ದರಾಮಯ್ಯ ಸೇರಿ ‘ಕೈ’ ನಾಯಕರು ಪೊಲೀಸ್ ವಶಕ್ಕೆ

ಸರ್ಕಾರವು ದೇಶದ್ರೋಹದ ಕೇಸುಗಳನ್ನು ಹಾಕಿಸುವ ಮೂಲಕ ಪೊಲೀಸ್ ಇಲಾಖೆಯ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಕರ್ನಾಟಕ ಕಾಂಗ್ರೆಸ್ ಪ್ರತಿಭಟನೆ ಮಾಡಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿತು. ಆದ್ರೆ, ಪೊಲೀಸರು ಪ್ರತಿಭಟನೆಯನ್ನು ನಿಲ್ಲಿಸಿ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸೇರಿದಂತೆ ಕಾಂಗ್ರೆಸ್‌ ನಾಯಕರನ್ನ ವಶಕ್ಕೆ ಪಡೆದುಕೊಂಡರು.

3 ಗಂಟೆ ಇರಲಿರುವ ಟ್ರಂಪ್‌ಗಾಗಿ 100 ಕೋಟಿ ರೂ. ಖರ್ಚು ಮಾಡಿದ ಸರ್ಕಾರ! 

 ಇದೇ ಫೆ. 24ರಿಂದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಗುಜರಾತ್’ನ ಅಹಮದಾಬಾದ್’ಗೆ ಬರಲಿರುವ ಟ್ರಂಪ್, ‘ಕೇಮ್‌ಛೋ ಟ್ರಂಪ್’ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಟ್ರಂಪ್ ಸ್ವಾಗತಕ್ಕಾಗಿ ಗುಜರಾತ್ ಸರ್ಕಾರ 100 ಕೋಟಿ ರೂ. ಹಣ ಖರ್ಚು ಮಾಡುತ್ತಿದೆ.


ಪ್ರೇಮಿಗಳ ದಿನದಂದೇ ಯುವಕನ ಮರ್ಮಾಂಗಕ್ಕೆ ಕತ್ತರಿ.


ಪ್ರೇಮಿಗಳ ದಿನದಂದೇ ಅಪ್ರಾಪ್ತ ಯುವಕನ ಮರ್ಮಾಂಗ ಕತ್ತರಿಸಿರುವ ಪೈಶಾಚಿವ ಘಟನೆ ಮಂಡ್ಯದಲ್ಲಿ ನಡೆದಿದೆ. ಕಿಡ್ನಾಪ್‌ ಮಾಡಿ ಅಪ್ರಾಪ್ತ ಯುವಕನ ಮರ್ಮಾಂಗಕ್ಕೆ ಕತ್ತರಿ ಹಾಕಲಾಗಿದೆ.


ಕಂಬಳ ಜಾಕಿ ಶ್ರೀನಿವಾಸ್ ಗೌಡ ಒಲಿಂಪಿಕ್ಸ್‌ಗೆ ..?.

ಮಹೀಂದ್ರ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ, ಶ್ರೀನಿವಾಸ್ ಗೌಡ ಕಂಬಳದ ಓಟವನ್ನು ಗಮನಿಸಿ ಈತನಿಗೆ ಸೂಕ್ತ ತರಬೇತಿ ನೀಡಿದರೆ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವುದು ಪಕ್ಕಾ ಎಂದು ಕೀಡಾ ಸಚಿವ ಕಿರಣ್ ರಿಜಿಜು ಉದ್ದೇಶಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಕ್ರೀಡಾ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜೋಡಿಯಾದ ಈ ನಟಿಯರೆಲ್ಲಿದ್ದಾರೀಗ?

ಕನ್ನಡ ಚಿತ್ರರಂಗದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸುಮಾರು 55 ಚಿತ್ರಗಳಲ್ಲಿ ಅಭಿನಯಿಸಿ, ತಮ್ಮ ನಿರ್ಮಾಣ ಸಂಸ್ಥೆಯಾದ 'ತೂಗುದೀಪ ಪ್ರೊಡಕ್ಷನ್‌'ನ ಮೂಲಕ ಪ್ರತಿಭಾನ್ವಿತ ನಾಯಕಿಯರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ದಾಸನಿಗೆ ಜೋಡಿಯಾಗಿ ಕಾಣಿಸಿಕೊಂಡ ಪ್ರಮುಖ ನಟಿಯರಲ್ಲಿ ಕೆಲವರು ಕಣ್ಮರೆಯಾಗಿದ್ದಾರೆ. 

ಮಾರ್ಚ್ 31 ರೊಳಗೆ ಆಧಾರ್ ಜೊತೆ ಲಿಂಕ್ ಮಾಡದಿದ್ರೆ ಪಾನ್ ನಿಷ್ಕ್ರಿಯವಾಗುತ್ತೆ!

ಆಧಾರ್‌ ಸಂಖ್ಯೆ ಜೊತೆ ಪಾನ್‌ ಜೋಡಣೆಗೆ ಹಲವು ಗಡುವುಗಳನ್ನು ನೀಡುತ್ತಾ ಬಂದಿದ್ದ ಆದಾಯ ತೆರಿಗೆ ಇಲಾಖೆ ಇದೀಗ, 2020ರ ಮಾ.31ರ ಒಳಗೆ ಆಧಾರ್‌ ಸಂಖ್ಯೆಯೊಂದಿಗೆ ಜೋಡಣೆಯಾಗದ ಪಾನ್‌ ಸಂಖ್ಯೆ ನಿಷ್ಕ್ರಿಯವಾಗಲಿವೆ ಎಂದು ಎಚ್ಚರಿಕೆ ನೀಡಿದೆ.

BS4 ವಾಹನ ಮಾರಾಟ ದಿನಾಂಕ ವಿಸ್ತರಣೆ ಇಲ್ಲ, ಸುಪ್ರೀಂ ಶಾಕ್ ಬೆನ್ನಲ್ಲೇ ಭರ್ಜರಿ ಡಿಸ್ಕೌಂಟ್!...

ಭಾರತದಲ್ಲಿ BS4  ಎಮಿಶನ್ ಎಂಜಿನ್ ಮಾರಾಟಕ್ಕೆ ನೀಡಿರುವ ಗಡುವು ವಿಸ್ತರಣೆ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಕೋರ್ಟ್ ಆದೇಶ ಭಾರತೀಯ ಆಟೋಮೊಬೈಲ್ ಕಂಪನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗಾಗಲೇ ಮಾರಾಟ ಕುಸಿತ, ಕೊರೋನಾ ವೈರಸ‌್‌ನಿಂದ ಹಿನ್ನಡೆ ಅನುಭವಿಸಿರುವ ಆಟೋಮೊಬೈಲ್ ಕಂಪನಿಗಳು ಇದೀಗ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಲು ಮುಂದಾಗಿದೆ. 


ಪುಲ್ವಾಮಾ ದಾಳಿ: ಹುತಾತ್ಮ ಯೋಧರಿಗೆ ಅವಮಾನ ಮಾಡಿದ್ರಾ ರಾಹುಲ್ ಗಾಂಧಿ?

ಪುಲ್ವಾಮಾ ದಾಳಿಯ ಬಗ್ಗೆ ಲಘುವಾಗಿ ಮಾತನಾಡಿ ಹುತಾತ್ಮ ಯೋಧರಿಗೆ ರಾಹುಲ್ ಗಾಂಧಿ ಅವಮಾನ ಮಾಡಿದ್ದಾರೆ ಎಂಬ ಆಕ್ರೋಶ ಕೇಸರಿ ಪಾಳಯದಿಂದ ಕೇಳಿ ಬರುತ್ತಿದೆ. 

BIG 3 Impact: ಅಂದು ಬೀದಿ ಬದಿ ಹಾಡುತ್ತಿದ್ದ ಅಂಧರು ಇಂದು ಸೆಲೆಬ್ರೆಟಿಗಳು!

ಜಿಲ್ಲೆಯ ಮಧುಗಿರಿ ತಾಲೂಕಿನ ಗ್ರಾಮದವೊಂದರಲ್ಲಿ ಒಂದೇ ಕುಟುಂಬದ ಮೂವರು ಅಂಧರಿಗೆ ಏಳು ತಿಂಗಳಿಂದ ಪೆನ್ಷನ್ ಬಂದಿರಲಿಲ್ಲ ಅಂತ 20-06-2018 ರಂದು ಸುವರ್ಣ ನ್ಯೂಸ್ ಬಿಗ್ 3 ಕಾರ್ಯಕ್ರಮದಲ್ಲಿ ವರದಿ ಪ್ರಸಾರ ಮಾಡಿತ್ತು. ವರದಿ ಮಾಡಿದ ಕೇವಲ ಒಂದೇ ದಿನದಲ್ಲಿ ಇವರಿಗೆ ಸರ್ಕಾರದಿಂದ ಪೆನ್ಷನ್ ಸಿಕ್ಕಿತ್ತು. 

click me!