ಕಾಶ್ಮೀರ ವಿವಾದ ಕುರಿತು ಟ್ರಂಪ್ ಮಧ್ಯಸ್ಥಿಕೆ ವಿಚಾರ| ಮೋದಿ-ಇಮ್ರಾನ್ ಪರಸ್ಪರ ಮಾತುಕತೆಗೆ ಟ್ರಂಪ್ ಒತ್ತು| ಮೋದಿ-ಇಮ್ರಾನ್ ಮಾತನಾಡಿದರೆ ಅದ್ಭುತ ಎಂದ ಅಮೆರಿಕ ಅಧ್ಯಕ್ಷ| ಮಾತುಕತೆ ವಾತಾವರಣದ ನಿರ್ಮಾಣಕ್ಕೆ ಅಮೆರಿಕದ ನೆರವು ಎಂದ ಟ್ರಂಪ್|
ವಾಷಿಂಗ್ಟನ್(ಸೆ.25): ಕಾಶ್ಮೀರ ವಿಚಾರವಾಗಿ ಮಧ್ಯಸ್ಥಿಕೆಯ ಮಾತನಾಡುತ್ತಿದ್ದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಇದೀಗ ಭಾರತದ ಪ್ರಧಾನಿ ಮೋದಿ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೇ ಪರಸ್ಪರ ಮಾತುಕತೆ ನಡೆಸಲು ಎಂದಿದ್ದಾರೆ.
ಕಾಶ್ಮೀರ ವಿವಾದದ ಶಾಶ್ವತ ಪರಿಹಾರಕ್ಕೆ ಭಾರತ-ಪಾಕ್ ಮುಂದಾಗಬೇಕು ಎಂದಿರುವ ಟ್ರಂಪ್, ಮೋದಿ-ಇಮ್ರಾನ್ ಖಾನ್ ಪರಸ್ಪರ ಚರ್ಚಿಸಿ ಕಾಶ್ಮೀರ ಕುರಿತು ನಿರ್ಣಯ ಕೈಗೊಂಡರೆ ಅದ್ಭುತವಾಗಿರುತ್ತದೆ ಎಂದು ಹೇಳಿದ್ದಾರೆ.
undefined
ಮೋದಿ-ಇಮ್ರಾನ್ ಪರಸ್ಪರ ಮಾತುಕತೆ ನಡೆಸುವಂತ ವಾತಾವರಣ ನಿರ್ಮಾಣವಾಗಬೇಕಿದ್ದು, ಇದಕ್ಕಾಗಿ ಅಮೆರಿಕ ಯಾವುದೇ ರೀತಿಯ ನೆರವು ನೀಡಲು ಸಾಧ್ಯ ಎಂದು ಟ್ರಂಪ್ ಭರವಸೆ ನೀಡಿದ್ದಾರೆ.
ಇದಕ್ಕೂ ಮೊದಲು ಟ್ರಂಪ್ ಜೊತೆಗಿನ ದ್ವಿಪಕ್ಷೀಯ ಮಾತುಕತೆ ವೇಳೆ, ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸುವವರೆಗೂ ಪಾಕಿಸ್ತಾನದೊಂದಿಗೆ ಮಾತುಕತೆ ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಟ್ರಂಪ್’ಗೆ ಸ್ಪಷ್ಟಪಡಿಸಿದ್ದರು.