ಅರ್ಜಿ ವಿಚಾರಣೆ ತಾತ್ಕಾಲಿಕವಾಗಿ ಮುಂದೂಡಿದ ಸುಪ್ರೀಂ: ಅನರ್ಹ ಶಾಸಕರಿಗೆ ಢವ-ಢವ

Published : Sep 25, 2019, 01:01 PM ISTUpdated : Sep 25, 2019, 01:26 PM IST
ಅರ್ಜಿ ವಿಚಾರಣೆ ತಾತ್ಕಾಲಿಕವಾಗಿ ಮುಂದೂಡಿದ ಸುಪ್ರೀಂ: ಅನರ್ಹ ಶಾಸಕರಿಗೆ ಢವ-ಢವ

ಸಾರಾಂಶ

ಅನರ್ಹ ಶಾಸಕರ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ|  ಸುಮಾರು ಒಂದುವರೆ ಗಂಟೆ ವಾದ ಮಂಡಿಸಿದ ಮುಕುಲ್ ರೋಹಟಗಿ| ಬಳಿಕ ಅನರ್ಹ ಶಾಸಕ ಸುಧಾಕರ್ ಪರ ವಕೀಲರ ವಾದ ಶುರು|

ನವದೆಹಲಿ, (ಸೆ.25): ಕಾಂಗ್ರೆಸ್-ಜೆಡಿಎಸ್ 17 ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮತ್ತೆ ಮುಂದೂಡಿದೆ.

ಇಂದು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ, ಭೋಜನ ವಿರಾಮ ನಂತರ 2 ಗಂಟೆಗೆ ವಿಚಾರಣೆ ಮುಂದೂಡಿದೆ.

ನನ್ನ ಕ್ಷೇತ್ರಕ್ಕೆ ಬೈ ಎಲೆಕ್ಷನ್ ನಡೆಯಲ್ಲ: ಸುಪ್ರೀಂ ತೀರ್ಪು ಮುಂಚೆ ಅನರ್ಹ ಶಾಸಕ ಅಚ್ಚರಿ ಹೇಳಿಕೆ

ಇದಕ್ಕೂ ಮುನ್ನ ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಅನರ್ಹ ಶಾಸಕರ ಪರ ಮುಕುಲ್ ರೋಹಟಗಿ ವಾದ ಆರಂಭಿಸಿದ್ದು, ಸುಮಾರು ಒಂದುವರೆ ಗಂಟೆಗಳ ಕಾಲ ಬಲವಾದ ವಾದ ಮಂಡನೆ ಮಾಡಿದರು. ಅನೇಕ ವಿಚಾರಗಳನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟು ತಮ್ಮ ವಾದ ಮೊಟಕುಗೊಳಿಸಿದರು. ರೋಹಟಗಿ ವಾದ ಮುಗಿಯುತ್ತಿದ್ದಂತೆಯೇ ಇದೀಗ ಚಿಕ್ಕಬಳ್ಳಾಪುರ ಕಾಂಗ್ರೆಸ್ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಪರ ವಕೀಲ ಸುದಂರಂ ಅವರ ವಾದ ಮಂಡನೆ ಶುರುವಾಗಿದೆ. ಊಟದ ವಿರಾಮದ ಬಳಿಕ ಸುದಂರಂ ಅವರು ತಮ್ಮ ವಾದ ಮುಂದುವರಿಸಲಿದ್ದಾರೆ.

ರೋಹಟಗಿ ವಾದದ ಹೈಲೆಟ್ಸ್
* ಸ್ಪೀಕರ್ ಕಾನೂನು ವ್ಯಾಪ್ತಿ ಮೀರಿದ್ದು, ಕಾನೂನು ಬಾಹೀರ ತೀರ್ಮಾನ ಕೈಗೊಂಡಿದ್ದಾರೆ.  ಶಾಸಕರ ರಾಜೀನಾಮೆ ಅವರ ವೈಯಕ್ತಿಕ . ಅದನ್ನು ಪ್ರಶ್ನಿಸುವ ಅಧಿಕಾರ ಸ್ಪೀಕರ್‌ಗೆ ಇಲ್ಲ. 

* ಸರ್ಕಾರ ಅಂದ್ರೆ ಸ್ಕೂಲ್ ಅಲ್ಲಾ? ಸ್ಪೀಕರ್‌ ಹೆಡ್ ಮಾಸ್ಟರ್ ಅಲ್ಲ. ಸರ್ಕಾರ ಇರಬೇಕೋ ಬೇಡವೋ ಎನ್ನುವುದನ್ನು ಸದನದ ಸದಸ್ಯರು ನಿರ್ಧರಿಸುತ್ತಾರೆ.

* ಉಮೇಶ್ ಜಾಧವ್ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿರುವುದನ್ನು ವಿವರಿಸಿದ ರೋಹಟಗಿ, ಜಾಧವ್ ಅನರ್ಹತೆ ಬಗ್ಗೆ ಸ್ಪೀಕರ್  ಯೋಚಿಸಿಯೇ ಇಲ್ಲ. ಉಮೇಶ್ ಜಾಧವ್‌ಗೆ ಒಂದು ನ್ಯಾಯ ಇವರಿಗೆ ಒಂದು ನ್ಯಾಯ ಅಂದ್ರೆ ಹೇಗೆ? ಎಂದು ರೋಹಟಗಿ ವಾದ ಮಂಡಿಸಿದರು.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!