ಡಿಕೆಶಿಗೆ ಅದ್ಧೂರಿ ಸ್ವಾಗತ, ತಡಬಡಾಯಿಸಿದ ರಶ್ಮಿಕಾ; ಅ.26ರ ಟಾಪ್ 10 ಸುದ್ದಿ!

By Web DeskFirst Published Oct 26, 2019, 4:50 PM IST
Highlights

ಜೈಲು ಸೇರಿದ್ದ ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಬಿಡುಗಡೆಯಾಗಿ ತವರಿಗೆ ಆಗಮಿಸಿದ್ದಾರೆ. ಬೆಂಗಳೂರಲ್ಲಿ ಡಿಕೆಶಿಗೆ ಅದ್ಧೂರಿ ಸ್ವಾಗತವನ್ನು ನೀಡಲಾಗಿದೆ. ಡಿಕೆಶಿ ಸ್ವಾಗತಿಸಲು ಜನಸಾಗರವೇ ಹರಿದುಬಂದಿತ್ತು. ತಮಿಳು ವೇದಿಕೆಯಲ್ಲಿ ರಶ್ಮಿಕಾ ಮಂದಣ್ಣ ಕನ್ನಡ ತರ್ಜುಮೆ ಮಾಡಲು ತಡಬಡಾಯಿಸಿದ್ದಾರೆ. ಶಿವಸೇನೆಗೆ ಕಾಂಗ್ರೆಸ್ ಆಹ್ವಾನ, ಮೌನ ಮುರಿದ ಕೋಚ್ ರವಿ ಶಾಸ್ತ್ರಿ ಸೇರಿದಂತೆ ಅ.26ರ ಟಾಪ್ 10 ಸುದ್ದಿ ಇಲ್ಲಿವೆ.
 

1) ಡಿಕೆಶಿ ಸಾಹೇಬಾಗೆ ಗ್ರ್ಯಾಂಡ್‌ ವೆಲ್‌ಕಮ್: ಈ ಶಕ್ತಿ ಪ್ರದರ್ಶನದ ಮರ್ಮವೇನು?

ಹವಾಲಾ ಹಣ ಪ್ರಕರಣದಲ್ಲಿ ಸುಮಾರು ಒಂದುವರೆ ತಿಂಗಳು ತಿಹಾರ್ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿರುವ ಡಿಕೆ ಶಿವಕುಮಾರ್‌ಗೆ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನದಲ್ಲಿ ಗ್ರ್ಯಾಂಡ್ ವೆಲ್‌ಕಮ್ ಸಿಕ್ಕಿದೆ.  ಬಳಿಕ ತೆರೆ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಗಿದೆ. 


2) ಬಿಜೆಪಿಗೆ ಜೆಜೆಪಿ ಬೆಂಬಲ: ಪಕ್ಷ ತೊರೆದ ಬಿಎಸ್‌ಎಫ್ ಮಾಜಿ ಯೋಧ!

ಬಿಜೆಪಿಗೆ ಜೆಜೆಪಿ ಬೆಂಬಲ ವಿರೋಧಿಸಿ ಮಾಜಿ ಬಿಎಸ್'ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಪಕ್ಷ ತೊರೆದಿದ್ದಾರೆ. ಬಿಜೆಪಿಗೆ ಬೆಂಬಲ ನೀಡುವ ಮೂಲಕ ಜೆಜೆಪಿ ಹರಿಯಾಣ ಜನತೆಗೆ ದ್ರೋಹ ಬಗೆದಿದೆ ಎಂದು ತೇಜ್ ಬಹದ್ದೂರ್ ಆರೋಪಿಸಿದ್ದಾರೆ.


3) ಒಂದು ಹೆಜ್ಜೆ ಇಡುತ್ತಲೇ ಭೂಮಿಯಲ್ಲಿ ಹುದುಗಿ ಹೋದ, ಭಯಾನಕ ದೃಶ್ಯ ಸೆರೆ!

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿದೆ. ಚೆನ್ನಾಗಿದ್ದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ಮುಂದಿನ ಹೆಜ್ಜೆ ಇಡುತ್ತಿದ್ದಂತೆಯೇ ಭೂಮಿಯೊಳಗೆ ಹುದುಗಿ ಹೋದ ವಿಡಿಯೋ ಇದಾಗಿದ್ದು, ಸದ್ಯ ಪಾದಾಚಾರಿಗಳಲ್ಲಿ ಇದು ನಡುಕ ಹುಟ್ಟಿಸಿದೆ.

4) 'ಮಹಾ' ರಾಜಕೀಯದಲ್ಲಿ ಬಿಗ್ ಟ್ವಿಸ್ಟ್: ಕಾಂಗ್ರೆಸ್‌ನಿಂದ ಶಿವಸೇನೆಗೆ ಬಿಗ್ ಆಫರ್!

ಮುಖ್ಯಮಂತ್ರಿ ಹುದ್ದೆಗಾಗಿ ಮಹಾರಾಷ್ಟ್ರದ ಬಿಜೆಪಿ- ಶಿವಸೇನೆ ನಡುವೆ ಹಗ್ಗಜಗ್ಗಾಟ ನಡೆಯುತ್ತಿರುವಾಗಲೇ, ಶಿವಸೇನೆಯನ್ನು ಸೆಳೆಯಲು ಕಾಂಗ್ರೆಸ್‌ ಬಹಿರಂಗ ಆಹ್ವಾನ ನೀಡಿದೆ. ಒಂದು ವೇಳೆ, ಶಿವಸೇನೆ ಏನಾದರೂ ಬಿಜೆಪಿ ಸಂಗ ತೊರೆಯುವ ಧೈರ್ಯ ತೋರಿದರೆ, ಉದ್ಧವ್‌ ಠಾಕ್ರೆ ನೇತೃತ್ವದ ಪಕ್ಷದ ಜತೆ ಕೈಜೋಡಿಸಲು ತಾವು ಸಿದ್ಧವಾಗಿದ್ದೇವೆ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ಬಾಳಾಸಾಹೇಬ್‌ ಥೋರಟ್‌ ಹೇಳಿದ್ದಾರೆ.

5) ಮರಳಿ ಬಿಜೆಪಿ ಸೇರಿ, ನಾವು ಬರ್ತೀವಿ: ಸಿದ್ದು ಆಪ್ತನಿಗೆ ಅಭಿಮಾನಿಗಳ ಒತ್ತಾಯ

ಮಾಜಿ ಸಂಸದ ಸಿ.ಎಚ್‌. ವಿಜಯಶಂಕರ್‌ ಮರಳಿ ಬಿಜೆಪಿಗೆ ಸೇರ್ಪಡೆಗೊಳ್ಳಬೇಕೆಂದು ಅವರ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಎರಡು ವರ್ಷಗಳ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದ ಮಾಜಿ ಶಾಸಕ ಸಿ.ಎಚ್‌. ವಿಜಯಶಂಕರ್‌ರ ಹುಣಸೂರು ಸ್ವಗೃಹದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾನ ಮನಸ್ಕರ ಸಭೆಯಲ್ಲಿ ಸಿಎಚ್‌ವಿ ಅಭಿಮಾನಿಗಳು ಬಿಜೆಪಿ ಮರಳಲು ಒತ್ತಡ ಹೇರಿದ್ದಾರೆ.

6) ಗಂಗೂಲಿಗೆ BCCI ಅಧ್ಯಕ್ಷ ಪಟ್ಟ; ಕೊನೆಗೂ ಪ್ರತಿಕ್ರಿಯೆ ನೀಡಿದ ರವಿ ಶಾಸ್ತ್ರಿ!

ಬಿಸಿಸಿಐ ಅಧ್ಯಕ್ಷ ಪಟ್ಟ ಮುಡಿಗೇರಿಸಿಕೊಂಡ ಸೌರವ್ ಗಂಗೂಲಿಗೆ ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರೆಟಿಗಳು, ಗಣ್ಯರು ಸೇರಿದಂತೆ ಅಭಿಮಾನಿಗಳು ಶುಭಕೋರಿದ್ದರು. ಆದರೆ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಯಾವುದೇ ಪ್ರತಿಕ್ರಿಯೆ ನೀಡಿದ ಮೌನಕ್ಕೆ ಶರಣಾಗಿದ್ದರು. ಕೊನೆಗೂ ಶಾಸ್ತ್ರಿ ಗಂಗೂಲಿ ಆಯ್ಕೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. 

7) 'ಪಬ್ಲಿಕ್‌ನಲ್ಲೇ ಪತಿಗೆ ಲಿಪ್ ಲಾಕ್ ಮಾಡಿದ ನಟಿ; ವಿಡಿಯೋ ವೈರಲ್!...

ಕೆಲ ತಿಂಗಳುಗಳ ಹಿಂದೆ ರಷ್ಯಾ ಮೂಲದ ಅಂಡ್ರೇ ಕೊಸ್ಚೀವ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶ್ರೀಯಾ ಚಿತ್ರರಂಗದಿಂದ ದೂರ ಉಳಿದು ಪತಿಯೊಂದಿಗೆ ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಶ್ರೀಯಾ ಹೀಗೂ ಆಂಡ್ರೆ ಪಬ್ಲಿಕ್‌ನಲ್ಲಿ ಲಿಪ್ ಲಾಕ್ ಮಾಡಿದ ವಿಡಿಯೋ ವೈರಲ್ ಆಗಿದೆ. 

 
8) ಸಾಲು ಮರದ ತಿಮ್ಮಕ್ಕ ಬಗ್ಗೆ ಗೊತ್ತಿಲ್ವಾ? ತಮಿಳು ವೇದಿಕೆ ಮೇಲೆ ತಡಬಡಾಯಿಸಿದ ರಶ್ಮಿಕಾ!

ರಶ್ಮಿಕಾ ಮಂದಣ್ಣ ಕನ್ನಡದ ಬಗ್ಗೆ ಅಸಡ್ಡೆ ತೋರುವುದು ಪದೇ ಪದೇ ಪುನಾರಾವರ್ತನೆಯಾಗುತ್ತಲೇ ಇದೆ. ಕನ್ನಡ ಗೊತ್ತಿಲ್ಲ ಎಂದು ಇತ್ತೀಚಿಗೆ ಟ್ರೋಲ್ ಆಗಿದ್ದರು. ಈಗ ಕನ್ನಡದ ಹೆಮ್ಮೆ ಸಾಲು ಮರದ ತಿಮ್ಮಕ್ಕ ಬಗ್ಗೆ ತಮಿಳು ವೇದಿಕೆಯಲ್ಲಿ ಮಾತನಾಡುವಾಗ ತಡಬಡಾಯಿಸಿ ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ. 


9) ಮೋದಿ ಗಿಫ್ಟ್‌ ಹರಾಜು ಮುಕ್ತಾಯ: ಗಾಂಧೀಜಿ ಫೋಟೋ 25 ಲಕ್ಷಕ್ಕೆ ಸೇಲ್‌!

ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾಗಿದ್ದ ಉಡುಗೊರೆ ರೂಪದ ವಸ್ತುಗಳ ಇ-ಹರಾಜು ಪ್ರಕ್ರಿಯೆ ಶುಕ್ರವಾರ ಮುಕ್ತಾಯವಾಗಿದೆ. ಮಹಾತ್ಮ ಗಾಂಧೀಜಿ ಅವರ ಜೊತೆಗಿನ ಮೋದಿ ಅವರ ಪೇಂಟಿಂಗ್‌ ಭರ್ಜರಿ 25 ಲಕ್ಷ ರು.ಗೆ ಬಿಕರಿಯಾಗಿದೆ.

10) 'ಬೈ ಎಲೆಕ್ಷನ್‌ನಲ್ಲಿ ನಾವು ಗೆದ್ದ ಮೇಲೆ ಸರ್ಕಾರ ಅದಾಗಿಯೇ ಬೀಳುತ್ತೆ

ಉಪಚುನಾವಣೆಗೆ ನಾವು ಎಲ್ಲ ಬಗೆಯ ಸಿದ್ಧತೆ ಮಾಡಿಕೊಂಡಿದ್ದೇವೆ. ಸುಪ್ರೀಂ ಕೋರ್ಟ್ ನಿಂದ ಬರುವ ಅನರ್ಹ ಶಾಸಕರ ತೀರ್ಪಿನ ಬಗ್ಗೆ ನಾವು ಕಾಯುತ್ತಿದ್ದೇವೆ. ಇಷ್ಟೇ ಸ್ಥಾನ ಗೆಲ್ತೀವಿ ಅಂತ ಶಾಸ್ತ್ರ ಹೇಳೋಕಾಗುತ್ತಾ, ಮೆಜಾರಿಟಿಯಲ್ಲೇ ಗೆಲ್ತೀವಿ, ನಾವು ಗೆದ್ದ ಮೇಲೆ ಸರ್ಕಾರ ಅದಾಗಿಯೇ ಬೀಳುತ್ತೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

click me!