
ಚಂಡಿಘಡ್(ಅ.26): ಅತಂತ್ರ ವಿಧಾನಸಭೆ ರಚೆನೆಯಾಗಿರುವ ಹರಿಯಾಣದಲ್ಲಿ, ಸರ್ಕಾರ ರಚಿಸಲು ಬಿಜೆಪಿಗೆ ದುಷ್ಯಂತ್ ಚೌಟಾಲಾ ನೇತೃತ್ವದ ಜೆಜೆಪಿ ಬೆಂಬಲ ನೀಡಿದೆ. ಸರ್ಕಾರ ರಚನೆಗೆ ಪಕ್ಷೇತರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದ ಬಿಜೆಪಿಗೆ ಇದೀಗ ಸುಲಭ ಬಹುಮತ ದೊರೆತಂತಾಗಿದೆ.
ಸೇನೆಯಲ್ಲಿ ಭ್ರಷ್ಟಾಚಾರ: ಇನ್ನೊಂದು ವಿಡಿಯೋ ಸ್ಫೋಟಿಸಿದ ತೇಜ್ ಬಹಾದ್ದೂರ್
ಈ ಮಧ್ಯೆ ಬಿಜೆಪಿಗೆ ಜೆಜೆಪಿ ಬೆಂಬಲ ವಿರೋಧಿಸಿ ಮಾಜಿ ಬಿಎಸ್'ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಪಕ್ಷ ತೊರೆದಿದ್ದಾರೆ. ಬಿಜೆಪಿಗೆ ಬೆಂಬಲ ನೀಡುವ ಮೂಲಕ ಜೆಜೆಪಿ ಹರಿಯಾಣ ಜನತೆಗೆ ದ್ರೋಹ ಬಗೆದಿದೆ ಎಂದು ತೇಜ್ ಬಹದ್ದೂರ್ ಆರೋಪಿಸಿದ್ದಾರೆ.
ಬಿಎಸ್ ಎಫ್ ಯೋಧ ತೇಜ್ ಬಹದ್ದೂರ್ ರನ್ನು ಬಂಧಿಸಿಲ್ಲ, ಬೇರೆಡೆಗೆ ವರ್ಗಾವಣೆ: ಗೃಹ ಇಲಾಖೆ
ಸಿಎಂ ಮನೋಹರ್ ಲಾಲ್ ಖಟ್ಟರ್ ವಿರುದ್ಧ ಜೆಜೆಪಿಯಿಂದ ಸ್ಪರ್ಧಿಸಿದ್ದ ತೇಜ್ ಬಹದ್ದೂರ್ ಚುನಾವಣೆಯಲ್ಲಿ ಸೋಲುಂಡಿದ್ದರು. ಇದೀಗ ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿರುವ ಜೆಜೆಪಿ ಪಕ್ಷವನ್ನು ಅವರು ತೊರೆದಿದ್ದಾರೆ.
ಯೋಧರ ಆರೋಪದಲ್ಲಿ ಹುರುಳಿಲ್ಲ: ಪ್ರಧಾನಿ ಕಾರ್ಯಾಲಯಕ್ಕೆ ಗೃಹ ಇಲಾಖೆ ಸ್ಪಷ್ಟನೆ
ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಸೆಣೆಸಿದ್ದ ಜೆಜೆಪಿ, ಇದೀಗ ಅದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿರುವುದು ಅಸಹ್ಯ ತರಿಸಿದೆ ಎಂದು ತೇಜ್ ಬಹದ್ದೂರ್ ಹರಿಹಾಯ್ದಿದ್ದಾರೆ.
ಯೋಧ ತೇಜ್ ಹೇಳಿದ್ದು ನಿಜ!, ಅಧಿಕಾರಿಗಳು ಪಡಿತರ ಮಾರಾಟ ನಡೆಸುತ್ತಿದ್ದಾರೆ: ಪರಿಶೀಲನೆ ವೇಳೆ ಸತ್ಯ ಒಪ್ಪಿಕೊಂಡ ಶ್ರೀನಗರ
ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವುದಾಗಿ ತೇಜ್ ಬಹದ್ದೂರ್ ಆರೋಪಿಸಿದ್ದ ವೀಡಿಯೋ ವೈರಲ್ ಆದ ನಂತರ ಬಿಎಸ್'ಎಫ್‌ನಿಂದ 2017ರಲ್ಲಿ ಅವರನ್ನು ವಜಾಗೊಳಿಸಲಾಗಿತ್ತು.
ತೇಜ್ ಬಹದ್ದೂರ್ ಯಾದವ್ ಮದ್ಯ ವ್ಯಸನಿಯಾಗಿದ್ದ: ಸತ್ಯ ಬಿಚ್ಚಿಟ್ಟ ಯೋಧನ ವಿರುದ್ಧವೇ ಗಂಭೀರ ಆರೋಪ!
ಕಳೆದ ಲೋಕಸಭಾ ಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ತೇಜ್ ಬಹದ್ದೂರ್, ನಂತರ ಬಿಸ್'ಪಿ ಹಾಗೂ ಆರ್‌ಎಲ್‌ಡಿ ಮೈತ್ರಿಕೂಟದ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು.
ಯೋಧ ಬಿಚ್ಚಿಟ್ಟ ಕರಾಳ ಸತ್ಯ: ವಿಡಿಯೋ ಬಗ್ಗೆ ವರದಿ ಕೇಳಿದ ಗೃಹ ಸಚಿವ ರಾಜನಾಥ್ ಸಿಂಗ್
ಕಳೆದ ಸೆಪ್ಟೆಂಬರ್‌ನಲ್ಲಿ ಜೆಜೆಪಿ ಸೇರಿದ್ದ ತೇಜ್ ಬಹದ್ದೂರ್ ಯಾದವ್, ಹರಿಯಾಣ ಮುಖ್ಯಮಂತ್ರಿ ಹಾಗೂ ಬಿಜೆಪಿ ಅಭ್ಯರ್ಥಿ ಮನೋಹರ್‌ಲಾಲ್ ಖಟ್ಟರ್ ವಿರುದ್ಧ ಸ್ಪರ್ಧಿಸಿದ್ದರು.
ಅಕ್ಟೋಬರ್ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.