DKS ಮೇಲೆ ಸುಳ್ಳು ದಾಖಲೆ ಭೂತ, ನೊಂದವ್ರಿಗೆ ಹಣತೆ ಹಚ್ಚಿದ ದೀಪಿಕಾ; ಇಲ್ಲಿವೆ ಸೆ.18ರ ಟಾಪ್ 10 ಸುದ್ದಿ!

By Web DeskFirst Published Sep 18, 2019, 5:16 PM IST
Highlights

ಡಿಕೆ ಶಿವಕುಮಾರ್ ವಿಚಾರಣೆಯಿಂದ ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿದೆ. ಇದೀಗ ಪ್ರಭಾವಿ ಮಠದ ಸ್ವಾಮೀಜಿಯೊಬ್ಬರ ಸಾವಿನ ಸುಳ್ಳು ದಾಖಲೆ ಸೃಷ್ಟಿಸುವವರ ಬೆಂಬಲಕ್ಕೆ ಡಿಕೆಶಿ ನಿಂತಿದ್ದರು ಅನ್ನೋ ಆರೋಪವೂ ಕೇಳಿ ಬಂದಿದೆ. ಬಿಎಸ್ ಯಡಿಯೂರಪ್ಪ ಸರ್ಕಾರ ಟಿಪ್ಪು ಜಯಂತಿ ರದ್ದು ಮಾಡಿದರೂ ವಿವಾದ ಇನ್ನೂ ಅಂತ್ಯವಾಗಿಲ್ಲ. ವಿಷ್ಣುದಾದಾ ಮೇಲೆ ಕಿಚ್ಚ ಸುದೀಪ್‌ಗಿರೋ ಕೋಪ, ಪ್ರಧಾನಿ ಮೋದಿ ಉಡುಗೊರೆಗಳ ಇ ಹರಾಜು ಸೇರಿದಂತೆ ಸೆ.18ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿಗಳು ಇಲ್ಲಿವೆ.

1) ಪ್ರಭಾವಿ ಸ್ವಾಮೀಜಿಯ ನಕಲಿ ‘ಮರಣ’: ಡಿಕೆಶಿ ವಿರುದ್ಧ ಹೊರಬಿತ್ತು ಮತ್ತೊಂದು ‘ಫ್ರಾಡ್’ಪುರಾಣ!


ಅಕ್ರಮ ಹಣ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಅವರ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಪ್ರಭಾವಿ ಮಠದ ಸ್ವಾಮೀಜಿಯೊಬ್ಬರ ಸಾವಿನ ಸುಳ್ಳು ದಾಖಲೆ ಸೃಷ್ಟಿಸುವವರ ಬೆಂಬಲಕ್ಕೆ ಡಿಕೆಶಿ ನಿಂತಿದ್ದರು ಎಂದು ವಕೀಲರೊಬ್ಬರು ಆರೋಪಿಸಿದ್ದಾರೆ.


2) ಅಯೋಧ್ಯೆ ವಿವಾದ: ವಿಚಾರಣೆಗೆ ಕೊನೆಗೂ ಡೆಡ್ ಲೈನ್ ಫಿಕ್ಸ್ ಮಾಡಿದ ಸುಪ್ರೀಂ!

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ತರ ಆದೇಶವೊಂದನ್ನು ಹೊರಡಿಸಿದೆ. ಕಕ್ಷಿದಾರರು ತಮ್ಮೆಲ್ಲಾ ವಾದ-ಪ್ರತಿವಾದಗಳನ್ನು ಮಂಡಿಸಲು ಸುಪ್ರೀಂ ಕೋರ್ಟ್ ಸಿಜೆಐ ರಂಜನ್ ಗೊಗೋಯ್ ಅಂತಿಮ ಗಡುವು ವಿಧಿಸಿದ್ದಾರೆ. ಈ ಮೂಲಕ ಡಿಸೆಂಬರ್ ತಿಂಗಳಿನೊಳಗೆ ತೀರ್ಪು ಬರುವುದು ಬಹುತೇಕ ಖಚಿತವಾಗಿದೆ.

3) ಟಿಪ್ಪು ಜಯಂತಿ ರದ್ದು : ಸರ್ಕಾರಕ್ಕೆ ಸಂಕಷ್ಟ?

ಟಿಪ್ಪು ಜಯಂತಿ ಆಚರಣೆ ಮಾಡುವುದನ್ನು ರದ್ದುಪಡಿಸಿ ಸರ್ಕಾರ ಹೊರಡಿಸಿದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ಮಂಗಳವಾರ ವಿಚಾರಣೆ ನಡೆಯಿತು.

4) ರವಿ​ಶಾಸ್ತ್ರಿ ಬಳಿಕ ಸೌರವ್ ಗಂಗೂಲಿ ಟೀಂ ಇಂಡಿಯಾ ಕೋಚ್‌?

ರವಿಶಾಸ್ತ್ರಿ ಗುತ್ತಿಗೆ ಮುಕ್ತಾ​ಯ​ಗೊಂಡ ಬಳಿಕ ಭಾರತ ತಂಡದ ಕೋಚ್‌ ಆಗುವ ಬಗ್ಗೆ ಯೋಚಿ​ಸು​ತ್ತೇನೆ ಎಂದು ಭಾರ​ತದ ಮಾಜಿ ನಾಯಕ ಸೌರವ್‌ ಗಂಗೂಲಿ ಹೇಳಿ​ದ್ದಾರೆ. ಮಂಗ​ಳ​ವಾರ ಇಲ್ಲಿ ಖಾಸಗಿ ಕಾರ್ಯಕ್ರ​ಮ​ವೊಂದ​ರಲ್ಲಿ ಮಾತ​ನಾ​ಡಿದ ಗಂಗೂ​ಲಿ, ‘ಭಾರತ ತಂಡದ ಕೋಚ್‌ ಆಗುವ ಆಸಕ್ತಿ ಖಂಡಿ​ತ​ವಾ​ಗಿಯೂ ಇದೆ. ಆದರೆ ಒಬ್ಬ ಕೋಚ್‌ ಗುತ್ತಿಗೆ ಮುಕ್ತಾ​ಯ​ಗೊ​ಳ್ಳಲಿ, ಆ ಬಳಿಕ ಯೋಚಿ​ಸು​ತ್ತೇನೆ’ ಎಂದರು.

5) ವಿಷ್ಣುದಾದನ ಮೇಲಿತ್ತು ಕಿಚ್ಚನಿಗೆ ಕೋಪ! ಕಾರಣ ಬಿಚ್ಚಿಟ ಪೈಲ್ವಾನ್...

ವಿಷ್ಣುವರ್ಧನ್ ಅಗಲಿ 10 ವರ್ಷವಾದರೂ ಅಭಿಮಾನಿಗಳ ಮನದಲ್ಲಿ ಇಂದಿಗೂ ಎಂದಿಗೂ ಶಾಶ್ವತವಾಗಿರುತ್ತಾರೆ. ಈಗಲೂ ವಿಷ್ಣು ಸಿನಿಮಾ ನೋಡುವುದರಲ್ಲಿ ಸಂತೋಷವಿದೆ, ಅವರು ಹೆಸರಿನಲ್ಲಿ ಅಭಿಮಾನಿಗಳು ದಾನ ಧರ್ಮದ ಕೆಲಸಗಳನ್ನು ಮಾಡುತ್ತಾರೆ.


6) ದೀಪಿಕಾ ಪಡುಕೋಣೆ ಹಚ್ಚಿದ ಸಣ್ಣ ಹಣತೆ ‘ಲೈವ್‌, ಲವ್‌, ಲಾಫ್‌’!

ತಾನೂ ಒಂದು ಕಾಲದಲ್ಲಿ ಖಿನ್ನತೆಯಿಂದ ಬಳಲಿ ಅದರಿಂದ ಹೊರ ಬಂದವರು ದೀಪಿಕಾ ಪಡುಕೋಣೆ. ತಾನು ಸರಿಯಾದೆ ಎಂದು ಸುಮ್ಮನೆ ಕೂರದೇ ತನ್ನಂತೆ ಕಷ್ಟಅನುಭವವಿಸುತ್ತಿರುವವರ ಪಾಲಿಗೆ ನಾನೊಂದು ಸಣ್ಣ ದೀಪವನ್ನು ಹಚ್ಚಿಯೇ ತೀರುತ್ತೇನೆ ಎಂದು ಪಣ ತೊಟ್ಟು ‘ದಿ ಲೈವ್‌ ಲವ್‌ ಲಾಫ್‌ ಫೌಂಡೇಷನ್‌’ ಸ್ಥಾಪಿಸಿದ್ದರು ದೀಪಿಕಾ. ಈಗ ಅದು ದೊಡ್ಡ ಮಟ್ಟದಲ್ಲಿ ಫಲ ಕೊಡಲು ಆರಂಭವಾಗಿದೆ. ಅದರ ಭಾಗವೇ ಮೊನ್ನೆಯಿಂದ ಶುರುವಾಗಿರುವ ಹೊಸ ಉಪನ್ಯಾಸ ಮಾಲಿಕೆ.

7) ಬೆಳಗ್ಗೆ ಸಿದ್ದರಾಮಯ್ಯ ಜೊತೆಗಿದ್ದವರು - ಸಂಜೆ ಹೊತ್ತಿಗೆ BSY ಜೊತೆಗೆ ’

ಅನರ್ಹ ಶಾಸಕ ನಾರಾಯಣ ಗೌಡರಿಂದ ಬುದ್ದಿ ಹೇಳಿಸಿಕೊಳ್ಳುವ ಅಗತ್ಯ ನನಗಿಲ್ಲ ಎಂದು ಮಾಜಿ ಸಚಿವ ಪುಟ್ಟರಾಜು ವಾಗ್ದಾಳಿ ನಡೆಸಿದ್ದಾರೆ. ಪಾಂಡವರಪುರದಲ್ಲಿ ಮಾತನಾಡಿದ ಪುಟ್ಟರಾಜು ಕಾಂಗ್ರೆಸ್ ಮುಖಂಡ ಚೆಲುವರಾಯ ಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದ್ದು, ಅವರು ಯಾವ ಪಕ್ಷದಲ್ಲಿದ್ದಾರೆ. ಬೆಳಗ್ಗೆ ಸಿದ್ದರಾಮಯ್ಯ ಜೊತೆಗಿದ್ದರೆ ಸಂಜೆ ಯಡಿಯೂರಪ್ಪ ಜೊತೆಗೆ ಇರುತ್ತಾರೆ ಎಂದರು.

8) ಶತಮಾನಗಳೇ ಕಳೆದರೂ ಬ್ರ್ಯಾಂಡ್ ಕಳೆದುಕೊಳ್ಳದ ಭಾರತೀಯ ಕಂಪನಿಗಳಿವು!

ಭಾರತದ ಸ್ವಾತಂತ್ರ್ಯ ಹೋರಾಟ, ಆರ್ಥಿಕ ಪ್ರಗತಿಪರತೆ, ಸ್ಟಾಕ್ ಮಾರ್ಕೆಟ್ ಹಗರಣಗಳು... ಇಂಥ ಹತ್ತು ಹಲವು ದೇಶದ ತಲ್ಲಣಗಳನ್ನು ಸಮರ್ಥವಾಗಿ ಎದುರಿಸಿ ಇಂದಿಗೂ ಕಂಪನಿಯ ಹೆಸರನ್ನು ಉಳಿಸಿಕೊಂಡು ಬೆಳೆಯುತ್ತಿವೆ ಕೆಲ ಕಂಪನಿಗಳು. ಈ ಸಾಧನೆಯೇನೂ ಸಾಮಾನ್ಯದ್ದಲ್ಲ. 


9) ವರ್ಷದಲ್ಲಿ 43,600 ಬೈಕ್ ಸವಾರರು ಸಾವು; ಕಾರಣ ಕೇಳಿದ್ರೆ ನಿಯಮ ಪಾಲಿಸ್ತೀರಿ ನೀವು!

ನೂತನ ಮೋಟಾರ್‌ ವಾಹನ ಕಾಯ್ದೆ ಜಾರಿ ಬಳಿಕ ಕೆಲ ರಾಜ್ಯಗಳು ದಂಡದ ಪ್ರಮಾಣವನ್ನು ಇಳಿಸುವ ನಿರ್ಧಾರ ಕೈಗೊಂಡಿವೆ. ಗುಜರಾತ್‌ ಹಾಗೂ ಜಾರ್ಖಂಡ್‌ ಸರ್ಕಾರಗಳು ಹೆಲ್ಮೆಟ್‌ ಧರಿಸದ ಹಿಂಬದಿಯ ಸವಾರರಿಗೆ ದಂಡದಿಂದ ವಿನಾಯಿತಿ ನೀಡಿವೆ. ಆದರೆ, ಹೆಲ್ಮೆಟ್‌ ಧರಿಸದೇ ವಾಹನ ಚಾಲನೆ ಎಷ್ಟುಅಪಾಯಕಾರಿ ಎಂಬುದನ್ನು ರಾಜ್ಯ ಸರ್ಕಾರಗಳು ಬಿಡುಗಡೆ ಮಾಡಿರುವ ಅಂಕೆ ಸಂಖ್ಯೆಗಳೇ ಸಾರಿ ಹೇಳುತ್ತಿವೆ.


10) 500 ರು.ನ ಮೋದಿ ಸ್ಮರಣಿಕೆ 1 ಕೋಟಿ ರು.ಗೆ ಬಿಕರಿ!

ಕಳೆದ ಆರು ತಿಂಗಳ ಅವಧಿಯಲ್ಲಿ ವಿವಿಧ ರಾಜ್ಯಗಳಿಗೆ ಭೇಟಿ ನೀಡಿದಾಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೊರೆತ ಉಡುಗೊರೆ ಸಾಮಗ್ರಿಗಳನ್ನು ಇ-ಹರಾಜು ಹಾಕುವ ಪ್ರಕ್ರಿಯೆ ನಡೆಯುತ್ತಿದ್ದು, ಭಾರಿ ಸ್ಪಂದನೆ ವ್ಯಕ್ತವಾಗಿದೆ. ಮೋದಿ ಅವರು ನಿಂತಿರುವ ಭಂಗಿಯಲ್ಲಿನ ಚಿತ್ರ ಹಾಗೂ ಗುಜರಾತಿ ಭಾಷೆಯ ಸಂದೇಶ ಹೊಂದಿರುವ ಸ್ಮರಣಿಕೆಯೊಂದು ಬರೋಬ್ಬರಿ 1 ಕೋಟಿ ರು.ಗೆ ಬಿಕರಿಯಾಗಿದೆ. ಹರಾಜು ಆಯೋಜಕರು ಇದಕ್ಕೆ ಕೇವಲ 500 ರು. ಮೂಲ ಬೆಲೆ ನಿಗದಿಪಡಿಸಿದ್ದರು!

click me!