ರಾಜೀನಾಮೆ ನೀಡಿದ ಫಡ್ನವಿಸ್, ಆಲಿಯಾ ರಣಬೀರ್ ಮದ್ವೆ ಫಿಕ್ಸ್; ನ.26ರ ಟಾಪ್ 10 ಸುದ್ದಿ!

By Web DeskFirst Published Nov 26, 2019, 5:07 PM IST
Highlights

ಮಹಾರಾಷ್ಟ್ರ ಸರ್ಕಾರ ರಚನೆಯಿಂದ ಸಿಎಂ ದೇವಿಂದ್ರ ಫಡ್ನವಿಸ್ ಹಿಂದೆ ಸರಿದಿದ್ದಾರೆ. ಅಜಿತ್ ಪವಾರ್ ಜೊತೆ ಸೇರಿದ್ದ ಫಡ್ನವಿಸ್ ದಿಢೀರ್ ರಾಜಿನಾಮೆ ನೀಡಿದ್ದಾರೆ. ಈ ಮೂಲಕ ಮಹಾರಾಷ್ಟ್ರದಲ್ಲಿ 2 ದಿನದ ಬಿಜೆಪಿ ಆಡಳಿತ ಅಂತ್ಯಗೊಂಡಿದೆ. ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ನಡುವಿನ ಮದುವೆ ಸೀಕ್ರೆಟನ್ನು ಮಾಜಿ ಗೆಳತಿ ದೀಪಿಕಾ ಪಡುಕೋಣೆ ಬಹಿರಂಗ ಪಡಿಸಿದ್ದಾರೆ.  ಮುಂಬೈ ದಾಳಿಗೆ 11 ವರ್ಷ, ಸೌರವ್ ಗಂಗೂಲಿ ಅಚ್ಚರಿ ಹೇಳಿಕೆ ಸೇರಿದಂತೆ ನವೆಂಬರ್ 26ರ ಟಾಪ್ 10 ಸುದ್ದಿ ಇಲ್ಲಿವೆ.

1) ಮಾತೋಶ್ರೀ ಸಂಬಂಧಕ್ಕೆ ಇತಿಶ್ರೀ: ರಾಜೀನಾಮೆ ನೀಡಿದ ಫಡ್ನವೀಸ್ ಹೇಳಿದ್ದಿಷ್ಟು!

ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಅಜಿತ್ ಪವಾರ್ ಬೆಂಬಲ ವಾಪಸ್ ಪಡೆದ ಬೆನ್ನಲ್ಲೇ, ಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಿದ್ದಾರೆ. ಮುಂಬೈನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಂದ್ರ ಫಡ್ನವೀಸ್, ಬಿಜೆಪಿಗೆ ಬಹುಮತ ಇರದ ಕಾರಣ ಸರ್ಕಾರ ರಚನೆಯ ಪ್ರಯತ್ನದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದರು.

2) ನಿನ್ನೆ ರಾತ್ರಿ ನಡೆಯಲಿದ್ದ ಸ್ಫೋಟ ಜಸ್ಟ್‌ ಮಿಸ್‌!

 ಜಗತ್ತಿನ ಕುಖ್ಯಾತ ಉಗ್ರ ಸಂಘಟನೆಗಳಲ್ಲಿ ಒಂದಾಗಿರುವ ಐಸಿಸ್‌ (ಇಸ್ಲಾಮಿಕ್‌ ಸ್ಟೇಟ್‌)ನಿಂದ ಪ್ರೇರಿತರಾಗಿ ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ಅಸ್ಸಾಂನಲ್ಲಿ ಬಾಂಬ್‌ ಸ್ಫೋಟ ನಡೆಸಲು ಸುಧಾರಿತ ಸ್ಫೋಟಕವನ್ನು ಒತೆಯಲ್ಲೇ ಇಟ್ಟುಕೊಂಡು ಸನ್ನದ್ಧರಾಗಿದ್ದ ಮೂವರು ಯುವಕರನ್ನು ದೆಹಲಿ ಪೊಲೀಸರು ಅಸ್ಸಾಂನಲ್ಲಿ ಬಂಧಿಸಿದ್ದಾರೆ. ಇದರಿಂದಾಗಿ ಸೋಮವಾರ ರಾತ್ರಿ ನಡೆಯಬಹುದಾಗಿದ್ದ ಘೋರ ಅನಾಹುತವೊಂದು ತಪ್ಪಿದಂತಾಗಿದೆ.

3) ಚಡ್ಡಿಯಲ್ಲಿ ಸೂಸು ಮಾಡಿದ ಮಗುವಿಗೆ ಚಾಕುವಿನಿಂದ ಹಲ್ಲೆ

ಅಂಗನವಾಡಿಯಲ್ಲಿ ಮಗು ಚಡ್ಡಿಯಲ್ಲಿ ಸೂಸು ಮಾಡಿದ್ದಕ್ಕೆ ಆಯಾ ಮಾಡಿದ್ದೇನು ಗೊತ್ತಾ..? ಶಿಕ್ಷಕಿ ಚಾಕುವಿನಿಂದ ಮಗುವಿನ ಮೇಲೆ ಹಲ್ಲೆ ಮಾಡಿದ ಪರಿಣಾಮ ಮಗುವಿನ ತಲೆಗೆ ಮೂರು ಹೊಲಿಗೆ ಹಾಕಲಾಗಿದೆ.

4) ಮುಂಬೈ ದಾಳಿಗೆ 11 ವರ್ಷ: ಉಸಿರಿರುವವರೆಗೂ ಹುತಾತ್ಮರನ್ನು ನೆನೆಯುವ ಉದ್ಘೋಷ!


26/11..ಈ ದಿನವನ್ನು ಭಾರತವಷ್ಟೇ ಅಲ್ಲ, ಇಡೀ ಜಗತ್ತು ತುಂಬು ಕಣ್ಣುಗಳಿಂದ ನೆನಯುತ್ತದೆ. ಮನುಕುಲದ ಮೇಲೆ ಭಯೋತ್ಪಾದನೆಯ ಪೈಶಾಚಿಕ ದಾಳಿಯನ್ನು ಇಡೀ ಜಗತ್ತು ದು:ಖದಿಂದ ಸ್ಮರಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ಮಾನವೀಯತೆಯನ್ನು ಉಳಿಸಲು ತಮ್ಮ ಪ್ರಾಣವನ್ನೇ ಸಮರ್ಪಿಸಿದ ಸಮವಸ್ತ್ರದ ಧೀರರನ್ನು ಅತ್ಯಂತ ಹೆಮ್ಮೆಯಿಂದ ನೆನೆಯುತ್ತದೆ.

5) ಶಬರಿಮಲೆಗೆ ಪ್ರವೇಶ ಯತ್ನ, ಪೊಲೀಸ್ ಕಮಿಷನರ್ ಕಚೇರಿ ಎದುರೇ ಮಹಿಳೆ ಕಣ್ಣಿಗೆ ಪೆಪ್ಪರ್ ಸ್ಪ್ರೇ!

ಬರಿಮಲೆ ಮಂದಿರಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದ ಮಹಿಳಾ ಕಾರ್ಯಕರ್ತೆಯ ಮೇಲೆ ವ್ಯಕ್ತೊಯೊಬ್ಬ ದಾಳೀ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳಾ ಕಾರ್ಯಕರ್ತೆ ಬಿಂದು ಅಮ್ಮಿನಿ ಎಂಬಾಕೆ ಶಬರಿಮಲೆ ಅಯ್ಯಪ್ಪ ಮಂದಿರಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದರು. ಈ ವೆಳೆ ಪೊಲೀಸ್ ಕಮಿಷನರ್ ಕಚೇರಿ ಎದುರು ಬಿಂದು ಮೇಲೆ ಅನಾಮಿಕ ವ್ಯಕ್ತಿಯೊಬ್ಬ ದಾಳಿ ನಡೆಸಿದ್ದಾರೆ. ಅವರ ಕಣ್ಣಿಗೆ ಪೆಪ್ಪರ್ ಸ್ಪ್ರೇ ಹೊಡೆದು ಆತ ಪರಾರಿಯಾಗಿದ್ದಾನೆ. 

6) ಪಿಂಕ್ ಬಾಲ್‌ ಟೆಸ್ಟ್ ಯಶಸ್ವಿ ಬೆನ್ನಲ್ಲೆ ಅಚ್ಚರಿಯ ಹೇಳಿಕೆ ನೀಡಿದ ದಾದಾ

ಭಾರತ-ಬಾಂಗ್ಲಾದೇಶ ನಡುವಿನ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಪ್ರೇಕ್ಷಕರ ಅಭೂತಪೂರ್ವ ಬೆಂಬಲ ವ್ಯಕ್ತವಾದ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಈ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. 

7) ಜಯಲಲಿತಾ ಪಾತ್ರಕ್ಕೆ ಫೈಟ್; ಕನ್ನಡದ ನಟಿ ಗಿಟ್ಟಿಸಿಕೊಂಡ್ರು ಅವಕಾಶ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈ ಪಾತ್ರಕ್ಕೆ ಕಂಗನಾಳಿಗಿಂತ ನಾನೇ ಹೆಚ್ಚು ಪರ್ಫೆಕ್ಟ್ ಎಂದು ಕನ್ನಡದ ನಟಿಯೊಬ್ಬರು ಹೇಳಿದ್ದಾರೆ. 

8) ಆಲಿಯಾ ಭಟ್- ರಣಬೀರ್‌ ಮದ್ವೆ ಫಿಕ್ಸ್‌; ಸತ್ಯ ರಿವೀಲ್ ಮಾಡಿದ ಮಾಜಿ ಪ್ರೇಯಸಿ!

ಬಿ-ಟೌನ್ ಲವ್ಲಿ ಕಪಲ್ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮದುವೆ ವಿಚಾರದಲ್ಲಿ ಸಿಕ್ಕಾಪಟ್ಟೆ ಗುಸುಗುಸು ಕೇಳಿ ಬರುತ್ತಿದ್ದು ಅದಕ್ಕೆ ದೀಪಿಕಾ ಪಡುಕೋಣೆ ಉತ್ತರ ನೀಡುವ ಮೂಲಕ ಹರಿದಾಡುತ್ತಿರುವ ರೂಮರ್ಸ್‌ಗೆ ಬ್ರೇಕ್ ಹಾಕಿದ್ದಾರೆ.

9) 3 ಇನ್ಸೂರೆನ್ಸ್ ಕಂಪನಿಗಳು ಒಂದಾಗುತ್ತಿವೆ: ನೀವು ಮಾಡಬೇಕಿರುವುದು ಬಹಳಷ್ಟಿದೆ!

ಮಹತ್ವದ ಬೆಳವಣಿಗೆಯೊಂದರಲ್ಲಿ ಸರ್ಕಾರಿ ಸ್ವಾಮ್ಯದ ಮೂರು ಪ್ರಮುಖ ಇನ್ಸೂರೆನ್ಸ್ ಕಂಪನಿಗಳ ವಿಲೀನಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ನ್ಯಾಶನಲ್ ಇನ್ಸೂರೆನ್ಸ್, ಓರಿಯೆಂಟಲ್ ಇನ್ಸೂರೆನ್ಸ್, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಗಳನ್ನು ವಿಲೀನಗೊಳಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.


10) ಪ್ರಯಾಣಿಕರಿಗೆ ಸುರಕ್ಷತೆ ನೀಡುವಲ್ಲಿ ವಿಫಲ; ಉಬರ್ ಲೈಸೆನ್ಸ್ ರದ್ದು?

https://kannada.asianetnews.com/automobile/london-transport-authority-denied-to-renew-uber-taxi-licence-q1knyw

ಪ್ರಯಾಣಿಕರ ಸುರಕ್ಷತೆಯಲ್ಲಿ ಯಾವದೇ ರಾಜಿಯಿಲ್ಲ ಎಂದಿರುವ ಟ್ರಾನ್ಸ್‌ಪೋರ್ಟ್ ಅಥಾರಿಟಿ ಉಬರ್ ಲೈಸೆನ್ಸ್ ನವೀಕರಿಸಲು ನಿರಾಕರಿಸಿದೆ. ಹೀಗಾಗಿ ಉಬರ್ ತನ್ನ ಸೇವೆಯನ್ನು ಸ್ಥಗಿತಗೊಳಿಸುವ ಅನಿವಾರ್ಯತೆಗೆ ಸುಲಿಕಿದೆ.
 

click me!