ಭಾರತಕ್ಕೆ ಬಂತು ಅಮೆರಿಕ ಪರಿಹಾರ, ಕಿಚ್ಚ ಫ್ಯಾನ್ಸ್‌ಗೆ ಸಂತಸದ ವಿಚಾರ; ಏ.30ರ ಟಾಪ್ 10 ಸುದ್ದಿ!

By Suvarna NewsFirst Published Apr 30, 2021, 4:48 PM IST
Highlights

ಯುವಕನಿಗ ಆಕ್ಸಿಜನ್ ಸಿಲಿಂಡರ್ ಕಸಿದುಕೊಂಡ ಉತ್ತರ ಪ್ರದೇಶ ಪೊಲೀಸರ ಅಮಾನವೀಯ ಘಟನೆಗೆ ಆಕ್ರೋಶ ಹೆಚ್ಚಾಗುತ್ತಿದೆ. 9ನೇ ಬಾರಿ ಪ್ಲಾಸ್ಮಾ ದಾನ ಮಾಡಿ ಹಲವರ ಜೀವ ಉಳಿಸಿದ ಬೆಂಗಳೂರಿನ ವೈದ್ಯನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಆಕ್ಸಿಜನ್ ಪೂರೈಕೆಗೆ ಸಚಿನ್ ತೆಂಡುಲ್ಕರ್ 1 ಕೋಟಿ ರೂ ನೆರವು, ಚೇತರಿಸಿಕೊಂಡ ಕಿಚ್ಚ ಸುದೀಪ್ ಸೇರಿದಂತೆ ಏಪ್ರಿಲ್ 30ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಯುವಕ ಸಂಗ್ರಹಿಸಿದ ಆಕ್ಸಿಜನ್ ಸಿಲಿಂಡರ್ ಕಸಿದ ಯುಪಿ ಪೊಲೀಸ್; ಆಮ್ಲಜನಕ ಸಿಗದೆ ತಾಯಿ ಸಾವು!...

ಕೊರೋನಾ ಸಂಕಷ್ಟ ಕಾಲದಲ್ಲಿ ಹಲವು ಕಣ್ಣೀರ ಕತೆಗಳು ಪ್ರತಿ ದಿನ ನಮ್ಮ ಮನ ಕಲುಕುತ್ತಿದೆ. ಆಕ್ಸಿಜನ್ ಸಿಗದೆ ಸಾವು, ಚಿಕಿತ್ಸೆ ಸಿಗದೆ ಸಾವು, ತಬ್ಬಲಿಯಾದ ಮಕ್ಕಳು, ಮಕ್ಕಳ ಕಳೆದುಕೊಂಡ ಪೋಷಕರು ಹೀಗೆ ಒಂದೆರಡಲ್ಲ. ಆದರೆ ಇಲ್ಲೊಂದು ಘಟನೆ ನಡೆದಿದೆ. ಇದು ಅತ್ಯಂತ ಘನಘೋರ. ಪೊಲೀಸರ ತಪ್ಪಿನಿಂದ ಅಮಾಯಕ ಜೀವವೊಂದು ಬಲಿಯಾಗಿದೆ

ಪ್ರಾಣಿಗಳ ಚಿತಾಗಾರದಲ್ಲಿಯೇ ಸೋಂಕಿತರ ಮೃತದೇಹ ಅಂತ್ಯಸಂಸ್ಕಾರ...

ದೆಹಲಿಯಲ್ಲಿ ಕೊರೋನಾ ಸಾವಿನ ಪ್ರಕರಣ ಹೆಚ್ಚಾಗಿದ್ದು, ಇದೀಗ ಸೋಂಕಿತರ ಮೃತದೇಹದ ಅಂತ್ಯ ಸಂಸ್ಕಾರಕ್ಕೆ ಸಮಸ್ಯೆ ಶುರುವಾಗಿದೆ. ಈಗಾಗಲೇ ದೆಹಲಿ ಪಾರ್ಕ್, ಪಾರ್ಕಿಂಗ್ ಸ್ಲಾಟ್‌, ಮೈದಾನಗಳಂತ ಪ್ರದೇಶದಲ್ಲಿ ಮೃತದೇಹ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದೆ. ಆದರೂ ಸಮಸ್ಯೆಗೆ ಮುಕ್ತಿ ದೊರೆತಿಲ್ಲ.

9ನೇ ಬಾರಿ ಪ್ಲಾಸ್ಮಾ ದಾನ ಮಾಡಿ ಹಲವರ ಜೀವ ಉಳಿಸಿದ ಬೆಂಗಳೂರಿನ ವೈದ್ಯ!...

ಕೊರೋನಾ ಸೋಂಕಿತರ ಚಿಕಿತ್ಸೆಗೆ ಪ್ಲಾಸ್ಮಾ ಥೆರಪಿ ಉತ್ತಮ ವಿಧಾನವಾಗಿದೆ. ಇದೀಗ ಬೆಂಗಳೂರು ವೈದ್ಯ 9ನೇ ಬಾರಿಗೆ ಪ್ಲಾಸ್ಮಾ ದಾನ ಮಾಡೋ ಮೂಲಕ ಹಲವರ ಜೀವ ಉಳಿಸಿದ್ದಾರೆ. 

ಭಾರತಕ್ಕೆ ಅಮೆರಿಕದಿಂದ ನೆರವಿನ ಪೂರ: ತುರ್ತು ನೆರವಿನ ವಸ್ತುಗಳೊಂದಿಗೆ ತಲುಪಿದ ಮೊದಲ ವಿಮಾನ...

ಅಮೆರಿಕದಿಂದ ಹಲವಾರು ತುರ್ತು COVID-19 ಪರಿಹಾರ ಸಾಗಣೆ ವಿಮಾನಗಳಲ್ಲಿ ಮೊದಲನೆಯ ವಿಮಾನ ಭಾರತಕ್ಕೆ ತಲುಪಿದೆ. ಇಲ್ನೋಡಿ ಪೋಟೋಸ್

ಆಕ್ಸಿಜನ್ ಪೂರೈಕೆಗೆ ಸಚಿನ್ 1 ಕೋಟಿ ರೂ ಬೆಂಬಲ...

ಕ್ರಿಕೆಟ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್‌ ತೆಂಡುಲ್ಕರ್ ದೇಶದ ಕೊರೋನಾ ವಿರುದ್ದದ ಹೋರಾಟಕ್ಕೆ ಕೈಜೋಡಿಸಿದ್ದು, ಮಿಷನ್ ಆಕ್ಸಿಜನ್‌ ಅಭಿಯಾನಕ್ಕೆ ಒಂದು ಕೋಟಿ ರುಪಾಯಿ ದೇಣಿಗೆ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಅನಾರೋಗ್ಯದಿಂದ ಚೇತರಿಸಿಕೊಂಡ ಕಿಚ್ಚನಿಂದ ಬಿಗ್‌ಬಾಸ್‌ virtual ಪಂಚಾಯ್ತಿ...

ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ is back to ಬಿಗ್ ಬಾಸ್‌ ಸೀಸನ್‌ 8 ರಿಯಾಲಿಟಿ ಶೋ. ಎರಡು ವಾರಗಳಿಂದ ಕಾಯುತ್ತಿದ್ದ ಸ್ಪರ್ಧಿಗಳಿಗೆ ಸಂತಸದ ವಿಚಾರ....

ಬಜಾಜ್‌ ಮುಖ್ಯಸ್ಥ ಹುದ್ದೆಗೆ ರಾಹುಲ್‌ ರಾಜೀನಾಮೆ...

ಪ್ರಮುಖ ವಾಹನ ತಯಾರಿಕಾ ಕಂಪನಿಗಳ ಪೈಕಿ ಒಂದಾದ ಬಜಾಜ್‌ ಆಟೋ ಕಂಪನಿಯ ಮುಖ್ಯಸ್ಥ ಹುದ್ದೆಗೆ ರಾಹುಲ್‌ ಬಜಾಜ್‌ ರಾಜೀನಾಮೆ ನೀಡಿದ್ದಾರೆ. ವಯಸ್ಸಿನ ಕಾರಣದಿಮದ ರಾಜೀನಾಮೆ ನಿಡಿದ್ದಾರೆ. 

ಸಿಎಂ ತವರು ಜಿಲ್ಲೆ ಶಿವಮೊಗ್ಗ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ...

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ತವರು ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಗೆ ಮುಖಭಂಗವಾಗಿದೆ.

ಪತ್ನಿಗಾಗಿ ಕೊಹ್ಲಿಯ ರೊಮ್ಯಾಂಟಿಕ್ ಹಾಡು: ಕಣ್ಣೀರಾದ ಅನುಷ್ಕಾ...

ಸ್ವರ್ಗದಲ್ಲಿ ಮಾಡಿದ ಜೋಡಿ ಅಂತ ವಿರುಷ್ಕಾರನ್ನು ಅಭಿಮಾನಿಗಳು ಹೊಗಳೋದು ಸುಮ್ಮನೆ ಅಲ್ಲ. ಇವರ ರೊಮ್ಯಾಂಟಿಕ್ ಮೊಮೆಂಟ್, ಬಾಂಡಿಂಗ್ ಮತ್ತು ಲವ್ ಹಾಗಿದೆ. ಸ್ಟಾರ್ ಸೆಲೆಬ್ರಿಟಿ ಕಪಲ್‌ಗಳಲ್ಲಿ ಯಾವತ್ತೂ ಸುದ್ದಿಯಲ್ಲಿರುವ ಕಪಲ್ ಇವರು. ಇವರಿಗೆ ಅಭಿಮಾನಿಗಳೂ ಹೆಚ್ಚಿದ್ದಾರೆ.

ಟಾಲಿವುಡ್‌ನಲ್ಲಿ ಮಂಗಳೂರು ಚೆಲುವೆ ಕೃತಿ ಶೆಟ್ಟಿ ಹವಾ ಜೋರು!...

ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ಸರಿಗಮ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಂಗಳೂರು ಚೆಲುವೆ ಕೃತಿ ಶೆಟ್ಟಿ ಇದೀಗ ಟಾಲಿವುಡ್‌ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ ಒಂದು ಸಿನಿಮಾ ಸೆಟ್ಟೇರಿ ರಿಲೀಸ್ ಆಗುವ ಮುನ್ನವೇ ತೆಲುಗಿನಲ್ಲಿ 5 ಚಿತ್ರಕ್ಕೆ ಸಹಿ ಮಾಡಿದ್ದಾರೆ.
 

click me!