ಹೆಲ್ತ್ ಎಮರ್ಜೆನ್ಸಿಯತ್ತ ಭಾರತ, ನಿರ್ಭಯಾ ಹಂತಕರಿಗೆ ಗಲ್ಲು ಖಚಿತ; ಮಾ.19ರ ಟಾಪ್ 10 ಸುದ್ದಿ!

By Suvarna News  |  First Published Mar 19, 2020, 5:07 PM IST

ದೇಶದಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತ ಕೊರೋನಾದಿಂದ ಸಾವನ್ನಪ್ಪಿದ ಸಂಖ್ಯೆ 4ಕ್ಕೇರಿದೆ. ಈಗಾಗಲೇ ಹಲವು ಸೇವೆಗಳು ಸ್ಥಗಿತಗೊಂಡಿದ್ದು, ಇದೇ ಮೊದಲ ಬಾರಿಗೆ ಭಾರತ ಹೆಲ್ತ್ ಎಮರ್ಜೆನ್ಸಿ ಹೇರಲು ಮುಂದಾಗಿದೆ. ಇದರ ನಡುವೆ ಕೇಂದ್ರ ಆರೋಗ್ಯ ಸಚಿವ ಕೊರೋನಾ ತಡೆಯಲು ಬಿಟ್ಟಿ ಸಲಹೆ ನೀಡಿ ಮಂಗಳಾರತಿ ಮಾಡಿಸಿಕೊಂಡಿದ್ದಾರೆ. ಇತ್ತ ನಿರ್ಭಯಾ ಹಂತಕರ ಎಲ್ಲಾ ಹಾದಿಗಳು ಬಂದ್ ಆಗಿದ್ದು, ನಾಳೆ ಗಲ್ಲು ಶಿಕ್ಷೆ ಫಿಕ್ಸ್ ಆಗಿದೆ. ಮುಜುಗರಕ್ಕೀಡಾದ ನಟಿ, ರೇವಣ್ಣ ಕಿರಿಕ್ ಸೇರಿದಂತೆ ಮಾರ್ಚ್ 19ರ ಟಾಪ್ 10 ಸುದ್ದಿ ಇಲ್ಲಿವೆ.
 


ನಿನ್ನೆ ಥರ್ಮಲ್ ಸ್ಕ್ರೀನಿಂಗ್ ಮಾಡಿಸದ ರೇವಣ್ಣ ಇಂದು ಮತ್ತೊಂದು ಕಿರಿಕ್!...

Tap to resize

Latest Videos

undefined

ಜೆಡಿಎಸ್‌ ನಾಯಕ ಎಚ್‌.ಡಿ. ರೇವಣ್ಣ ತನ್ನ ಮೊಂಡುತನವನ್ನು ಇವತ್ತೂ ಕೂಡಾ ಮುಂದುವರಿಸಿದ್ದಾರೆ. ಬುಧವಾರ ವಿಧಾನಸೌಧ ಪ್ರವೇಶಿಸುವಾಗ ಥರ್ಮಲ್ ಸ್ಕ್ರೀನಿಂಗ್‌ ಮಾಡಿಸಲು ನಿರಾಕರಿಸಿದ್ದ ರೇವಣ್ಣ ಇವತ್ತು ಸ್ಕ್ರೀನಿಂಗ್‌ ಮಾಡಿಸಿದರೂ, ಮತ್ತೊಂದು ಕಿರಿಕ್‌ ಮಾಡಿದ್ದಾರೆ. 

ಈ ಸಂಸದೆ ಮೇಲೆ ಕೊರೋನಾ 'ಕರಿ ನೆರಳು': ಲಂಡನ್‌ನಿಂದ ಮರಳುವಾಗ ಸಿಕ್ಕಾಕ್ಕೊಂಡ್ರು!

ವಿಶ್ವದ 167 ದೇಶಗಳಿಗೆ ಕೊರೋನಾ ವೈರಸ್ ವ್ಯಾಪಿಸಿದೆ. ಈವರೆಗೆ ಸುಮಾರು 8 ಸಾವಿರಕ್ಕೂ ಅಧಿಕ ಮಂದಿ ಈ ವೈರಸ್ ಗೆ ಬಲಿಯಗಿದ್ದಾರೆ. ಹಲವಾರು ಸೆಲೆಬ್ರಿಟಿಗಳಲ್ಲೂ ಈ ಸೋಂಕು ಕಾಣಿಸಿಕೊಂಡಿದೆ. ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಟಿಎಂಸಿ ಸಂಸದೆ ಹಾಗೂ ನಟಿ ಮಿಮಿ ಚಕ್ರವರ್ತಿಗೆ 14 ದಿನ ದಿಗ್ಭಂಧನ ವಿಧಿಸಲಾಗಿದೆ. ಹೀಗಾಗಿ ಮನೆಯಲ್ಲಿ ಮಿಮಿ ಏಕಾಂಗಿಯಾಗೇ ಉಳಿಯಬೇಕಿದೆ.

ಉರಿ ಬಿಸಿಲು ಕಾಯಿಸ್ಕೊಳ್ಳಿ ಕೊರೋನಾ ಸಾಯುತ್ತೆ: ಕೇಂದ್ರ ಸಚಿವರ ಹುಚ್ಚು ಸಲಹೆ!

ವಿಶ್ವದಲ್ಲಿ ಅಟ್ಟಹಾಸ ಮೂಡಿಸಿರುವ ಕೊರೋನಾ ವೈರಸ್ ಸದ್ಯ ದೇಶದಲ್ಲೂ ತನ್ನ ರುದ್ರ ತಾಂಡವ ಮುಂದುವರೆಸಿದೆ.  ಹೀಗಿರುವಾಗ ಕೇಂದ್ರ ಆರೋಗ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಕೊರೋನಾವನ್ನು ನಿಯಂತ್ರಿಸಲು ಮಧ್ಯಾಹ್ನದ ಉರಿ ಬಿಸಿಲಿಗೆ ಕುಳಿತುಕೊಳ್ಳುವಂತೆ ಸೂಚಿಸಿದ್ದಾರೆ.

ನಿರ್ಭಯಾ ಹಂತಕರಿಗೆ ನಾಳೆಯೇ ಗಲ್ಲು, ಕ್ಯುರೇಟಿವ್ ಅರ್ಜಿ ವಜಾ!

ನಿರ್ಭಯಾ ಅತ್ಯಾಚಾರಿಗಳಿಗೆ ಕೊನೆಗೂ ಗಲ್ಲು ಶಿಕ್ಷೆ ಖಚಿತವಾಗಿದ್ದು, ಬರೋಬ್ಬರಿ 7 ವರ್ಷಗಳ ಬಳಿಕ ಕಾಮುಕರ ಅಟ್ಟಹಾಸಕ್ಕೆ ನಲುಗಿದ ಯುವತಿಗೆ ನ್ಯಾಯ ಸಿಗುವ ಸಮಯ ಬಂದಿದೆ.

ಬಾಗಿದಾಗ ಜಾರಿದ ಡ್ರೆಸ್, ಮುಜುಗರಕ್ಕೊಳಗಾದ ನಟಿ!

ನಟಿಯರು ತಾವು ತೊಟ್ಟ ಡ್ರೆಸ್‌ನಿಂದ ಪೇಚಿಗೆ ಸಿಕ್ಕಿ ಹಾಕಿಕೊಳ್ಳುವುದನ್ನು  ಹಲವು ಬಾರಿ ನೋಡಿದ್ದೇವೆ. ಆಶಿಕಿ 2 ಸುಂದರಿ ಶ್ರದ್ಧಾ ಕಪೂರ್‌ ಇಂಥದ್ದೊಂದು ಪ್ರಸಂಗಕ್ಕೆ ಒಳಗಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶ್ರದ್ಧಾ ತಾವು ಹಾಕಿಕೊಂಡ ಡೀಪ್‌ ನೆಕ್‌ನ ಡ್ರೆಸ್‌ ಬಗ್ಗೆ ಗಮನವಿಲ್ಲದೆ ಕೆಳಗೆ ಬಗ್ಗಿದ್ದರು, ಈ ವೇಳೆ ಮುಜುಗರದ ಸನ್ನಿವೇಶ ಎದುರಾಗಿದೆ. ಸುಂದರಿ ಸಂಕಷ್ಟಕ್ಕೆ ಸಿಲುಕಿ ಹಾಕಿಕೊಂಡ ವೀಡೀಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಕೊರೋನಾ ಕನ್ಫರ್ಮ್ ಕೇಸ್: ಮಡಿಕೇರಿಯಲ್ಲಿ ಹೆಲ್ತ್ ಎಮರ್ಜೆನ್ಸಿ

ಮಡಿಕೇರಿಯಲ್ಲಿ ಕೊರೋನಾ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಹೆಲ್ತ್‌ ಎಮರ್ಜೆನ್ಸಿ ಘೋಷಿಸಿದ್ದಾರೆ. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಕೊಡಗು ಡಿಸಿ ಕೊಡಗಿನಲ್ಲಿ ಹೆಲ್ತ್ ಎಮರ್ಜೆನ್ಸಿ ಘೋಷಣೆ ಮಾಡಿದ್ದಾರೆ.

ಕೊರೋನಾ ಭೀತಿ: 165 ವರ್ಷದಲ್ಲಿ ಇದೇ ಮೊದಲ ಬಾರಿ 155 ರೈಲು ರದ್ದು

ದೇಶಾದ್ಯಂತ ಕೊರೊನಾವೈರಸ್‌ ಪರಿಣಾಮದಿಂದ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದ್ದು, 155 ರೈಲು ಸಂಚಾರ ರದ್ದುಪಡಿಸಲಾಗಿದೆ. ಶೇ. 40ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಟಿಕೆಟ್​ ಬುಕ್ಕಿಂಗ್​​ ನಡೆಯುತ್ತಿದ್ದು ರೈಲ್ವೆ ಇಲಾಖೆ ಟ್ರೈನ್‌ಗಳನ್ನು ಕ್ಯಾನ್ಸಲ್ ಮಾಡಿದೆ.

ಮಂಗಗಳಿಗೂ ತಟ್ಟಿದ ಕೊರೋನಾ ಬಿಸಿ: ಆಹಾರ ಸಿಗದೆ ಮೂಕ ಪ್ರಾಣಿಗಳ ಒದ್ದಾಟ

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಐತಿಹಾಸಿಕ ತಾಣಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲಿಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಹೀಗಾಗಿ ಪ್ರವಾಸಿಗರು ಬರದಿದ್ದರಿಂದ ಮಂಗಗಳಿಗೆ ಆಹಾರ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ತಿನ್ನಲು ಆಹಾರ ಸಿಗದೆ ಮಂಗಗಳು ಪರದಾಡುತ್ತಿವೆ. 

ನೂತನ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್, ಬೆಲೆ 1.21 ಲಕ್ಷ ರೂ!

ಕೊರೋನಾ ವೈರಸ್ ಆತಂಕದ ನಡುವೆಯೂ BS6 ಎಂಜಿನ್ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಹಲವು ಹೊಸತನಗಳೊಂದಿಗೆ ಬೈಕ್ ಡೀಲರ್ ಬಳಿ ತಲುಪಿದೆ. ರಾಯಲ್ ಎನ್‌ಫೀಲ್ಡ್ ಬೈಕಗಳ ಪೈಕಿ ಬುಲೆಟ್ 350 ಬೈಕ್ ಅತ್ಯಂತ ಕಡಿಮೆ ಬೆಲೆ ಬೈಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಕೊರೋನಾ ಎಫೆಕ್ಟ್: CBSE, ICSE ಮತ್ತು ISC ಪರೀಕ್ಷೆ ಮುಂದೂಡಿಕೆ!...

ಪರೀಕ್ಷೆಗೂ ಕೊರೋನಾ ವೈರಸ್ ತಟ್ಟಿದ್ದು, CBSE, ICSE ಮತ್ತು ISC ಪರೀಕ್ಷೆಗಳು ಮುಂದೂಡಲಾಗಿದೆ. 10 ಮತ್ತು 12ನೇ ತರಗತಿ ಪರೀಕ್ಷೆ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ ಬೋರ್ಡ್ ಪೋಸ್ಟ್ ಪೋನ್ ಮಾಡಲಾಗಿದೆ. ಮಾರ್ಚ್ 31ರ ಬಳಿಕ ಪರೀಕ್ಷೆ ನಡೆಸುವಂತೆ ICSE ಬೋರ್ಡ್ ನಿರ್ಧರಿಸಿದೆ.

click me!