ಕೊರೋನಾ ವೈರಸ್ ಹರಡದಂತೆ ತಡೆಯಲು ಜನರಲ್ಲಿ ಪ್ರಧಾನಿ ಮೋದಿ ಮನವಿ ಮಾಡಿದ್ದರು. ಆದರೆ ಜನರು ಒಂದು ದಿನ ಕರ್ಫ್ಯೂ ಮಾಡಿ, ಬಳಿಕ ತಮಟೆ, ಜಾಗಟೆ ಹಿಡಿದು ರೋಡಿಗಿಳಿದಿದ್ದರು. ಇಷ್ಟೇ ಅಲ್ಲ ಇಂದು ಎಲ್ಲರೂ ಮಾರುಕಟ್ಟೆ, ಬಸ್, ಟಂಟಂ ವಾಹನಗಳಲ್ಲಿ ಗುಂಪುಗುಂಪಾಗಿ ಪ್ರಯಾಣಿಸಿದ್ದಾರೆ. ಹೀಗಾಗಿ ಜನರ ನಿರ್ಲಕ್ಷ್ಯಕ್ಕೆ ಪ್ರಧಾನಿ ಗರಂ ಆಗಿದ್ದಾರೆ. ಇತ್ತ ಕರ್ನಾಟಕದಲ್ಲಿ ಕೊರೋನಾವೈರಸ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲು ಸಿಎಂ ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ.ಕಿಚ್ಚ ಸುದೀಪ್‌ಗೆ ಕೊರೋನಾ ವೈರಸ್ ಪಾಠ, ಸುರೇಶ್ ರೈನಾ ಮನೆಗೆ ಹೊಸ ಅತಿಥಿ ಸೇರಿದಂತೆ ಮಾರ್ಚ್ 23ರ ಟಾಪ್ 10 ಸುದ್ದಿ ಇಲ್ಲಿವೆ.
ಕೊರೋನಾ ಸಮರ: ಈ ಕಲೆಕ್ಟರ್ ಕೊಟ್ಟ ಆದೇಶದ ಬಳಿಕ ಜನ ಹೊರಗ್ಬರೋದು ಡೌಟೇ ಬಿಡಿ!...
ಕೊರೋನಾ ಅಡ್ಡಹಾಸ ಮಿತಿ ಮೀರುತ್ತಿದ್ದು, ಇಡೀ ದೇಶವೇ ಸದ್ಯ ಅಪಾಯದಲ್ಲಿದೆ. ಹೀಗಿರುವಾಗ ರಾಜಸ್ಥಾನ ಸರ್ಕಾರ ಇಡೀ ರಾಜ್ಯದಲ್ಲಿ ಮಾರ್ಚ್ 31ರವರೆಗೆ ಲಾಕ್‌ಡೌನ್ ಘೋಷಿಸಿದೆ. ಹೀಗಿರುವಾಗ ಅತ್ತ ಅಲ್ವರ್ ಜಿಲ್ಲೆಯ ಕಲೆಕ್ಟರ್ ಇಂದ್ರಜೀತ್ ಸಿಂಗ್ ಜಿಲ್ಲೆಯಲ್ಲಿ ಐದಕ್ಕಿಂತ ಹೆಚ್ಚು ಜನರು ಒಟ್ಟಾಗಿ ಕಾಣಿಸಿಕೊಂಡರೆ ಅವರ ವಿರುದ್ಧ ಕಠಿಣ ಕ್ರಮ ಕೈಗಗೊಳ್ಳುವುದಾಗಿ ಆದೇಶಿಸಿದ್ದಾರೆ.
ಗಂಭೀರವಾಗಿ ಪರಿಗಣಿಸಿ, ಜನತಾ ಕರ್ಫ್ಯೂ ಬಳಿಕ ಜನರ ಮೇಲೆ ಕೋಪಗೊಂಡ ಪಿಎಂ!...
ಕೊರೋನಾ ವೈರಸ್ ನಿಂದಾಗಿ 16 ರಾಜ್ಯಗಳ 331 ನಗರಗಳು ಲಾಕ್‌ಡೌನ್ ಆಗಿವೆ. ೬೦ಕೋಟಿಗೂ ಹೆಚ್ಚು ಜನರು ತಮಗೆ ತಾವು ದಿಗ್ಬಂಧನ ಹೇರಿದ್ದಾರೆ.. ಹೀಗಿರುವಾಗ ಪಿಎಂ ಮೋದಿ ಮತ್ತೊಂದು ಬಾರಿ ಟ್ವೀಟ್ ಮಾಡಿ ಜನರಿಗೆ ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ.
5 ವರ್ಷದ ಮಗು ಬಿಟ್ಟು ಭಾರತೀಯರ ರಕ್ಷಣೆಗೆ ಇಟಲಿತ್ತ ಮಹಿಳಾ ಪೈಲಟ್!
ಕೊರೋನಾ ಮಾರಿಗೆ ಅತಿಹೆಚ್ಚು ಬಲಿಯಾಗುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಇಟಲಿಯಲ್ಲಿ ಸಿಲುಕಿದ್ದ ಹಲವು ಭಾರತೀಯರ ಪೈಕಿ ಭಾನುವಾರ ಮತ್ತೆ 263 ಭಾರತೀಯರನ್ನು ಏರ್‌ಲಿಫ್ಟ್ ಮೂಲಕ ರಕ್ಷಣೆ ಮಾಡಲಾಗಿದೆ. ಹೀಗೆ, ಈ ಭಾರತೀಯರ ರಕ್ಷಣೆಗೆ ಹೋಗಿದ್ದವರು ಏರಿಂಡಿಯಾ ಪೈಲಟ್ ಕ್ಯಾಪ್ಟನ್ ಸ್ವಾತಿ ರಾವಲ್ ಎಂಬುವರು.
ಕೊರೋನಾ ಭೀತಿಯಿಂದ ಕೇರಳದಿಂದ ತವರಿಗೆ ಹೋದವರಿಗೆ ಲಾಟರಿ
ಉದ್ಯೋಗಕ್ಕಾಗಿ ದೂರದ ಪಶ್ಚಿಮ ಬಂಗಾಳದಿಂದ ಕೇರಳಕ್ಕೆ ಬಂದು, ಕೊರೋನಾ ಭೀತಿಯಿಂದ ಮತ್ತೆ ತವರಿಗೆ ಮರಳಿದ ಇಜರುಲ್ ಎಂಬಬ ಬಡಗಿಯೊಬ್ಬನಿಗೆ ಅದೃಷ್ಟಲಾಟರಿ ರೂಪದಲ್ಲಿ ಬಂದಿದೆ.
ಸುರೇಶ್ ರೈನಾ ಮನೆಗೆ ಹೊಸ ಅತಿಥಿ ಆಗಮನ..!
ಟೀಂ ಇಂಡಿಯಾ ಅನುಭವಿ ಬ್ಯಾಟ್ಸ್‌ಮನ್ ಸುರೇಶ್ ರೈನಾ-ಪ್ರಿಯಾಂಕಾ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ರೈನಾ ಪತ್ನಿ ಪ್ರಿಯಾಂಕಾ ಸೋಮವಾರ(ಮಾ.23) ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆಂದು ತಿಳಿದು ಬಂದಿದೆ.
ಕೊರೋನಾ ವೈರಸ್: ಕಿಚ್ಚನಿಗೇ ಬುದ್ಧಿ ಹೇಳಿದ 'ಅ ದಿನಗಳು' ಚೇತನ್?
ಕೊರೋನಾ ವೈರಸ್ ಎಂಬ ಯುದ್ಧವನ್ನು ಎದುರಿಸುವ ಆರಂಭಿಕ ಹಂತದಲ್ಲಿದೆ ಭಾರತ. ಈ ಬಗ್ಗೆ ಎಚ್ಚರಿಸಲು ಜನತಾ ಕರ್ಫ್ಯೂಗೆ ಕರೆ ನೀಡದ ಪ್ರಧಾನಿ ಮೋದಿ, ಸಂಜೆ 5ಕ್ಕೆ ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ನೈಜ ಯೋಧರಿಗೆ ನಮನ ಸಲ್ಲಿಸಲು ಆಗ್ರಹಿಸಿದ್ದರು. ಆದರೆ, ಇದಕ್ಕೆ ಸಾಥ್ ನೀಡೋಣ ಎಂದ ಕಿಚ್ಚಿನಿಂಗ ಚೇತನ್ ಬುದ್ಧಿ ಮಾತು ಹೇಳಿದ್ದಾರೆ.
ರಾಜ್ಯದಲ್ಲಿ ಮತ್ತೊಂದು ಕೊರೋನಾ ಕೇಸ್: ಸೋಂಕಿತ ಸಂಖ್ಯೆ 27ಕ್ಕೇರಿಕೆ
ರಾಜ್ಯದಲ್ಲಿ ಮತ್ತೋಂದು ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.
ಕೊರೋನಾ ವಿರುದ್ಧ ಹೋರಾಟಕ್ಕೆ ಉದ್ಯಮಿಗಳು ಸಾಥ್, ಒಬ್ಬರಿಂದ 100 ಕೋಟಿ ಘೋಷಣೆ
ದೇಶೆದೆಲ್ಲೆಡೆ ಕೊರೋನಾ ವೈರಸ್ ಹರಡುತ್ತಿರುವುದ ವಿರುದ್ಧ ಹೋರಾಡಲು ಸರ್ಕಾರಗಳು ಇನ್ನಿಲ್ಲದ ಕಸರತ್ತು ನಡೆಸಿವೆ. ಇದರ ನಡುವೆ ಉದ್ಯಮಿಗಳು ಕೂಡ ಕೊರೋನಾ ವೈರಸ್ ವಿರುದ್ಧ ಸಮತಕ್ಕೆ ಆರ್ಥಿಕ ನೆರವು ಘೋಷಿಸಿದ್ದಾರೆ. ಅದರಲ್ಲೂ ಬೆಂಗಳೂರಿನ ವಿದ್ಯಾರ್ಥಿನಿ, ತಮ್ಮ ತಂದೆ-ತಾಯಿ ಕೊಟ್ಟ ಹಣದಿಂದ ಕೂಡಿಟ್ಟಿದ್ದ 1 ಲಕ್ಷ ರೂ. ಹಣವನ್ನ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೊರೋನಾ ವೈರಸ್: ಭಾರತದ ಆಟೋಮೊಬೈಲ್ ಉತ್ಪಾದನೆ ಸ್ಥಗಿತಕ್ಕೆ ಖಡಕ್ ಸೂಚನೆ!
ಕೊರೋನಾ ವೈರಸ್ ಹತೋಟಿ ಬರದ ಹಿನ್ನಲೆಯಲ್ಲಿ ಜನರು ಮನೆಯಿಂದ ಹೊರಬರದಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಇತ್ತ ಕರ್ನಾಟಕದಲ್ಲೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜನರಿಗೆ ವಿಶೇಷ ಮನವಿ ಮಾಡಿದ್ದಾರೆ. ಆದರೆ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಲಾಕ್‌ಡೌನ್ ಚಿಂತನೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಭಾರತದ ಬಹುತೇಕಾ ಎಲ್ಲಾ ಆಟೋಮೇಕರ್‌ಗಳು ಉತ್ಪಾದನೆ ಸ್ಥಗಿತಗೊಳಿಸಿದೆ.
ಕೊರೋನಾ ಸೋಂಕಿಗೆ ಮಲೇರಿಯಾ ಔಷಧಿ ಬಳಕೆಗೆ ICMR ಸಲಹೆ!
ಕೊರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಇಲ್ಲದೆ ಪರದಾಡುತ್ತಿದ್ದ ಭಾರತದಲ್ಲಿ ಇದೀಗ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮಹತ್ವದ ಸಲಹೆ ನೀಡಿದೆ.