60ರಲ್ಲಿ ಕಾಂಗ್ರೆಸ್ ನಾಯಕನಿಗೆ ಚುಟು ಚುಟು, ಬಿಜೆಪಿ ಸೇರ್ಪಡೆಗೆ ಸಿದ್ದು ತಿರುಗೇಟು; ಮಾ.9ರ ಟಾಪ್ 10 ಸುದ್ದಿ!

By Suvarna News  |  First Published Mar 9, 2020, 5:05 PM IST

ಭಾರತದಲ್ಲೀಗ ಕೊರೋನಾ ವೈರಸ್ ಆತಂಕ ಹೆಚ್ಚಾಗುತ್ತಿದೆ. ದೇವಸ್ಥಾನಗಳಲ್ಲೂ ಭಕ್ತರ ತಪಾಸಣೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಕೊರೋನಾ ಜೊತೆಗೆ ಕಾಲರ ರೋಗವೂ ಕಾಣಿಸಿಕೊಂಡಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ತಮ್ಮ 60ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಿಜೆಪಿ ಸೇರ್ಪಡೆ ಕುರಿತ ಸುದ್ದಿಗೆ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ದುಬಾರಿಯಾದ ಬಂಗಾರ, ಧೋನಿ ಕಮ್‌ಬ್ಯಾಕ್ ಸೇರಿದಂತೆ ಮಾರ್ಚ್ 9ರ ಟಾಪ್ 10 ಸುದ್ದಿ ಇಲ್ಲಿವೆ.
 


60ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಂಗ್ರೆಸ್‌ ಹಿರಿಯ ನಾಯಕ!

Tap to resize

Latest Videos

ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ತಮ್ಮ 60ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಅಚ್ಚರಿ ಮೂಡಿಸಿದ್ದಾರೆ. ಇವರ ವಿವಾಹಕ್ಕೆ ಕಾಂಗ್ರೆಸ್‌ನ ಪ್ರಮುಖ ನಾಯಕರು ಸಾಕ್ಷಿಯಾದರು. 

ಕೆಮ್ಮು, ಶೀತ ಇದ್ದವರಿಗೆ ತಿಮ್ಮಪ್ಪನ ದರ್ಶನಕ್ಕಿಲ್ಲ ಅವಕಾಶ!

ಕೇರಳ ಮಾತ್ರವಲ್ಲ, ತಿರುಪತಿ ತಿಮ್ಮಪ್ಪನಿಗೂ ಕೊರೋನಾ ಬಿಸಿ ತಟ್ಟಿದೆ. ಶೀತ, ಜ್ವರ, ಕೆಮ್ಮು ಇದ್ದವರಿಗೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶವಿಲ್ಲ. ಮಾಸ್ಕ್, ಸ್ಯಾನಿಟೈಸರ್ ಜೊತೆ ಬನ್ನಿ ಎಂದು ಟಿಟಿಡಿ ಭಕ್ತರಲ್ಲಿ ಮನವಿ ಮಾಡಿಕೊಂಡಿದೆ.  2 ಗಂಟೆಗೊಮ್ಮೆ ಸ್ವಚ್ಛತಾ ಕಾರ್ಯ ನಡೆಯಲಿದೆ. ದರ್ಶನಕ್ಕೆ ಬರುವವರಿಗೂ ತಪಾಸಣೆ ನಡೆಸಲಾಗುತ್ತಿದೆ. 

ಕೊರೋನಾ ಬೆನ್ನಲ್ಲೇ ಬೆಂಗಳೂರಿಗೆ ಮತ್ತೊಂದು ಗಂಡಾಂತರ!

ಕೊರೋನಾ ಬಗ್ಗೆ ಗಾಬರಿಪಟ್ಟಿರುವ ಬೆಂಗ್ಳೂರು ಮಂದಿಗೆ ಮತ್ತೊಂದು ಟೆನ್ಶನ್ ಶುರುವಾಗಿದೆ.  ನಗರದ ಹಲವೆಡೆ ಕಾಲರಾ ರೋಗ ಪ್ರಕರಣಗಳು ದಾಖಲಾಗಿವೆ.  17 ಮಂದಿಯಲ್ಲಿ  ಕಾಲರಾ ರೋಗ ಕಾಣಿಸಕೊಂಡಿದೆ

ಮೋದಿ ಆಹ್ವಾನ ತಿರಸ್ಕರಿಸಿದ 8 ವರ್ಷದ ಬಾಲಕಿ!:ಕಾರಣ?

ಮಹಿಳಾ ದಿನದ ಅಂಗವಾಗಿ ಮೋದಿ ಅವರ ಟ್ವೀಟರ್‌ ಖಾತೆಯನ್ನು ನಿರ್ವಹಿಸಿ ಗೌರವಕ್ಕೆ ಪಾತ್ರವಾಗುವಂತೆ ಮೋದಿ ಅವರು ನೀಡಿದ್ದ ಆಹ್ವಾನವನ್ನು ಮುಣಿಪುರದ 8 ವರ್ಷದ ಬಾಲಕಿಯೊಬ್ಬಳು ತಿರಸ್ಕರಿಸಿದ್ದಾಳೆ.

ಧೋನಿ ಆಯ್ಕೆ ಕುರಿತು ನೂತನ ಆಯ್ಕೆ ಸಮಿತಿ ನಿರ್ಧಾರ ಬಹಿರಂಗ!

ಟೀಂ ಇಂಡಿಯಾ ನೂತನ ಆಯ್ಕೆ ಸಮಿತಿ ಮುಖ್ಯಸ್ಥ ಕನ್ನಡಿಗ ಸುನಿಲ್ ಜೋಶಿ, ಮೊದಲ ಅಗ್ನಿಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಬಲಿಷ್ಠ ತಂಡ ಆಯ್ಕೆ ಮಾಡೋ ಮೂಲಕ ಪ್ರತಿಭೆಗಳಿಗೆ ಮಣೆಹಾಕಿದೆ. ಆದರೆ ಹಿರಿಯ ಕ್ರಿಕೆಟಿಗರು ಧೋನಿ ಭವಿಷ್ಯದ ಕತೆ ಏನು? ಅನ್ನೋ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿದೆ. ಇದೀಗ ನೂತನ ಆಯ್ಕೆ ಸಮಿತಿಯ ನಿರ್ಧಾರ ಬಹಿರಂಗವಾಗಿದೆ.

ಸಣ್ಣ ವಯಸ್ಸಲ್ಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಪುನೀತ್ ಮಗಳು ದೃತಿ

ಸ್ಯಾಂಡಲ್‌ವುಡ್‌ ಓನ್‌ ಆ್ಯಂಡ್ ಓನ್ಲಿ ಪವರ್‌ ಸ್ಟಾರ್‌ ಅಂದ್ರೆ ಪುನೀತ್‌ ರಾಜ್‌ಕುಮಾರ್‌. 1999ರಲ್ಲಿ ಅಶ್ವಿನಿ ಹಾಗೂ ಪುನೀತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಇಬ್ಬರು ಪವರ್‌ಫುಲ್‌ ಹೆಣ್ಣು ಮಕ್ಕಳಿದ್ದಾರೆ - ದೃತಿ ಹಾಗೂ ವಂದಿತಾ.

ಬಿಜೆಪಿ ಸೇರ್ಪಡೆ ಸುದ್ದಿಗೆ ಸಿದ್ದರಾಮಯ್ಯ ಖಡಕ್ ಪ್ರತಿಕ್ರಿಯೆ..!

'ನಾನು ಬಿಜೆಪಿ ಸೇರುತ್ತೇನೆ ಎಂದು ಹೇಳಿರುವುದು ಮೂರ್ಖತನದ ಹೇಳಿಕೆ' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. 

ಏರಿದ ಬಂಗಾರ, ಇಳಿದ ಬೆಳ್ಳಿ: ನಿಮಗೇನು ಬೇಕು ತಗೊಳ್ಳಿ

ಚಿನ್ನದ ಬೆಲೆ ಏರುತ್ತಲೇ ಇದೆ. ಇವತ್ತು ಕೂಡಾ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಾಗಿದೆ. ಆದರೆ ಬೆಳ್ಳಿ ದರ ಕೊಂಚ ಕಡಿಮೆಯಾಗಿದೆ.


ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗೆ ನೇಮಕಾತಿ

 ರಾಯಚೂರು ಜಿಲ್ಲಾ ಪ್ರಧಾನ  ಮತ್ತು ಸತ್ರ ನ್ಯಾಯಾಲಯದಲ್ಲಿ ಖಾಲಿ ಇರುವ 24 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. 12  ಶೀಘ್ರಲಿಪಿಗಾರ, 6 ಬೆರಳಚ್ಚುಗಾರರು,  2 ಬೆರಳಚ್ಚು ನಕಲುಗಾರರು, 4  ಆದೇಶ ಜಾರಿಕಾರ ಒಟ್ಟು   24 ಹುದ್ದೆಗಳು ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕಳ್ಳರ ಕೈಗೆ ಗನ್ನು ಕೊಟ್ಟಿತೇಕೆ ಅರಣ್ಯ ಇಲಾಖೆ?

ತಮಿಳುನಾಡಿನ ಪೆರಿಯಾರ್‌ ಹುಲಿ ರಕ್ಷಿತಾರಣ್ಯದಲ್ಲಿ ಸುಮಾರು ಹದಿನೈದಿಪ್ಪತ್ತು ವರ್ಷಗಳ ಕೆಳಗೆ ತುಂಬಾ ಕಳ್ಳ ಬೇಟೆ ನಡೆಯುತ್ತಿತ್ತು. ಕಳೆದೆರಡು ದಶಕಗಳಿಂದ ಹೊಸ ಕ್ರಮದ ಪರಿಣಾಮ ಕಳ್ಳಬೇಟೆ, ನಾಟಾ ಸಾಗಣೆ ನಿಂತಿದೆ.

click me!