15 ಕ್ಷೇತ್ರಗಳಿಗೆ ಉಪ ಚುನಾವಣೆ: ಪೆಂಡಿಂಗ್ ಇದ್ದ ಮತ ಎಣಿಕೆ ದಿನಾಂಕ ಪ್ರಕಟ

By Web Desk  |  First Published Sep 29, 2019, 4:03 PM IST

ರಾಜ್ಯ 15 ಕ್ಷೇತ್ರಗಳಿಗೆ ಉಪ ಚುನಾವಣೆ ಮತ ಎಣಿಕೆ ದಿನಾಂಕ ಪ್ರಕಟ| ಈ ಮೋದಲು ಮತ ಎಣಿಕೆ ದಿನಾಂಕವನ್ನು ಪೆಂಡಿಂಗ್ ಇಡಲಾಗಿತ್ತು| ಇದೀಗ ಕೌಟಿಂಗ್ ಡೇಟ್‌ ಘೋಷಿಸಿದ ಚುನಾವಣೆ ಆಯೋಗ.


ಬೆಂಗಳೂರು, (ಸೆ. 29) : ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಹೊಸ ದಿನಾಂಕವನ್ನು ಕೇಂದ್ರ ಚುನಾವಣೆ ಆಯೋಗ ಪ್ರಕಟಿಸಿತ್ತು. ಆದ್ರೆ ಮತ ಎಣಿಕೆ ದಿನಾಂಕವನ್ನು ಮಾತ್ರ ಪ್ರಕಟಿಸದೇ ಪೆಡ್ಡಿಂಗ್ ಇಟ್ಟಿತ್ತು. ಇದೀಗ ಮತ ಎಣಿಕೆ ದಿನಾಂಕವನ್ನು ಘೋಷಣೆ ಮಾಡಿದ್ದು, ಡಿಸೆಂಬರ್ 9 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ಬೈ ಎಲೆಕ್ಷನ್: ಮಸ್ಕಿ, RR ನಗರ ಕ್ಷೇತ್ರಗಳಿಗೆ ಚುನಾವಣೆಯಾಕಿಲ್ಲ? ಕಾರಣ ಇಲ್ಲಿದೆ

Latest Videos

undefined

ಇದಕ್ಕೂ ಮೊದಲು 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಬೈ ಎಲೆಕ್ಷನ್ ಘೋಷಣೆ ಮಾಡಲಾಗಿತ್ತು. ಆದ್ರೆ, ಅನರ್ಹ ಶಾಸಕ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರಿಂದ ಚುನಾವಣೆಯನ್ನು ಮುಂದೂಡಲಾಗಿತ್ತು. ಅದರಂತೆ ಇದೀಗ ಚುನಾವಣೆ ಆಯೋಗ ಬೈ ಎಲೆಕ್ಷನ್‌ಗೆ ಹೊಸ ಡೇಟ್ ಫಿಕ್ಸ್ ಮಾಡಿದೆ.

ಬೈ ಎಲೆಕ್ಷನ್‌ಗೆ ಹೊಸ ಡೇಟ್ ಫಿಕ್ಸ್: ಅನರ್ಹ ಶಾಸಕರಿಗೆ ಮತ್ತೆ ಟೆನ್ಷನ್ ಶುರು

ನವೆಂಬರ್ 11ರಂದು ಉಪ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಅಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಈಗಾಗಲೇ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. 

ಹೊಸ ಉಪ ಚುನಾವಣೆ ವೇಳಾಪಟ್ಟಿ 
ನವೆಂಬರ್ 11 : ನಾಮಪತ್ರ ಸಲ್ಲಿಕೆ ಆರಂಭ
ನವೆಂಬರ್ 18 ನಾಮಪತ್ರ ಸಲ್ಲಿಕೆಗೆ ಕೊನೆ ದಿನ,
ನವೆಂಬರ್ 19 ನಾಮಪತ್ರಗಳ ಪರಿಶೀಲನೆ
 ನವೆಂಬರ್ 21 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ
 ಡಿಸೆಂಬರ್ 5 ಮತದಾನ (7 ಗಂಟೆಯಿಂದ 6)
 ಡಿಸೆಂಬರ್ 9 ಮತ ಎಣಿಕೆ.

ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳು
1) ಚಿಕ್ಕಬಳ್ಳಾಪುರ 2) ಮಹಾಲಕ್ಷ್ಮಿ ಲೇಔಟ್ 3) ಹೊಸಕೋಟೆ 4) ಹುಣಸೂರು 5) ಗೋಕಾಕ್, 6) ಯಶವಂತಪುರ 7) ಅಥಣಿ 8) ಕಾಗವಾಡ 9)ಶಿವಾಜಿನಗರ 10) ಕೆ.ಆರ್.ಪೇಟೆ 11) ಕೆ.ಆರ್.ಪುರಂ 12) ಹಿರೇಕೆರೂರು 13) ರಾಣೆಬೆನ್ನೂರು 14) ವಿಜಯನಗರ 15) ಯಲ್ಲಾಪುರ

click me!