ಪೆಟ್ರೋಲ್, ಡೀಸೆಲ್ ತೆರಿಗೆ ದರ ಏರಿಸಿದ ಸಿಎಂ, ರಾಜ್ಯದಲ್ಲಿನ್ನು ತೈಲ ಮತ್ತಷ್ಟು ತುಟ್ಟಿ

Published : Jul 05, 2018, 01:45 PM IST
ಪೆಟ್ರೋಲ್, ಡೀಸೆಲ್ ತೆರಿಗೆ ದರ ಏರಿಸಿದ ಸಿಎಂ, ರಾಜ್ಯದಲ್ಲಿನ್ನು ತೈಲ ಮತ್ತಷ್ಟು ತುಟ್ಟಿ

ಸಾರಾಂಶ

'ನಿನ್ನದೆ  ನೆಲ, ನಿನ್ನದೆ ಹೊಲ'  ಎಂಬ ಕುವೆಂಪು  ಕವನವನ್ನು ಭಾಷಣದಲ್ಲಿ ಉಲ್ಲೇಖಿಸಿರುವ ಕುಮಾರಸ್ವಾಮಿ, ಮಾತೃ ಮಮತೆಯಿಂದ ಜನಪರ ಯೋಜನೆಗಳನ್ನು ಮುಂದುವರಿಸಲು ಯತ್ನಿಸಿದ್ದಾರೆ. ಕಳೆದ ಸರಕಾರದ ಕೆಲವು ಯೋಜನೆಗಳನ್ನು ಮುಂದುವರಿಸಲು ಅನುದಾನ ನೀಡಿದ್ದಾರೆ. ಆದರೆ, ಪೆಟ್ರೋಲ್, ಡೀಸೆಲ್ ತೆರಿಗೆ ದರ ಏರಿಸುವ ಮೂಲಕ ತೈಲ ಬೆಲೆ ಮತ್ತಷ್ಟು ತುಟ್ಟಿಯಾಗುವಂತೆ ಮಾಡಿದ್ದಾರೆ.

ಬೆಂಗಳೂರು (ಜು.7): ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಪ್ರಥಮ ಮುಂಗಡ ಪತ್ರವನ್ನು ವಿತ್ತ ಇಲಾಖೆಯ ಜವಾಬ್ದಾರಿಯನ್ನೂ ಹೊತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮಂಡಿಸಿದ್ದಾರೆ. 

ಒಲವು-ನಿಲುವು, ಕನಸು-ನನಸು, ಸಂಕಷ್ಟ-ಸವಾಲುಗಳು ಬಜೆ‌ಟ್‌ನಲ್ಲಿ ಪ್ರತಿಬಿಂಬಿತವಾಗಿದ್ದು, ಚುನಾವಣೆಗೆ ಮುನ್ನ ಸೆಣಸಾಡಿದ ಎರಡು ಪಕ್ಷಗಳು ಮೈತ್ರಿ ಸರ್ಕಾರ ರಚನೆ
ಪಕ್ಷದ ಪ್ರಣಾಳಿಕೆಯ ಪ್ರಮುಖಾಂಶ ಆಧರಿಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸಿಕೊಂಡಿವೆ. ಸಂಪನ್ಮೂಲ ಕ್ರೋಡಿಕರಿಸಲು ಸರ್ಕಾರದ ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಕಿರುವ ಎಚ್ಡಿಕೆ, ರೈತರ ಸಾಲಮನ್ನಾದ ಸವಾಲಿದ್ದರೂ 'ಆರ್ಥಿಕ  ಶಿಸ್ತು ಕಾಪಾಡಿದ್ದೇವೆ,' ಎಂದು ಹೇಳಿಕೊಂಡಿದ್ದಾರೆ.

'ನಿನ್ನದೆ  ನೆಲ, ನಿನ್ನದೆ ಹೊಲ'  ಎಂಬ ಕುವೆಂಪು  ಕವನವನ್ನು ಭಾಷಣದಲ್ಲಿ ಉಲ್ಲೇಖಿಸಿರುವ ಕುಮಾರಸ್ವಾಮಿ, ಮಾತೃ ಮಮತೆಯಿಂದ ಜನಪರ ಯೋಜನೆಗಳನ್ನು ಮುಂದುವರಿಸಿದ್ದಾಗಿ ಬಜೆಟ್ ಭಾಷಣದಲ್ಲಿ ಹೇಳಿದರು.

ಬೆಂಗಳೂರು ಸಾರಿಗೆ ನಿಯಂತ್ರಣಕ್ಕೆ ಕ್ರಮ

ಬಜೆಟ್‌ನಲ್ಲಿ ತೆರಿಗೆ ತೆರಿಗೆ ಪ್ರಸ್ತಾವನೆಗಳೇನು?
- ಸರಕು ಮತ್ತು ಸೇವಾ ತೆರಿಗೆಗಾಗಿ ಅತ್ಯಾಧುನಿಕ ಸ್ವಯಂಚಾಲಿತ ಸರಕು ಮತ್ತು ಸೇವಾ ತೆರಿಗೆ ಸಹಾಯ ಪೀಠ ಸ್ಥಾಪನೆ
- ತೆರಿಗೆ ಆಯುಕ್ತರ ಪೀಠದ ಸಹಾಯ ಪೀಠವಿರಲಿದ್ದು, ಜಿಎಸ್‌ಟಿ ಜಾರಿಗೊಳಿಸಲು ನೆರವಾಗುವುದು.
- ಈ ಸಹಾಯ ಪೀಠ ಎಲ್ಲಾ ವಿಭಾಗೀಯ ಕಚೇರಿಗಳಲ್ಲೂ ಸ್ಥಾಪಿಸಲಾಗುವುದು.
- ಸರಕು ಮತ್ತು ಸೇವಾ ತೆರಿಗೆಯ ಸವಾಲುಗಳ ನಿವಾರಣೆಗೆ ಸಾಮರ್ಥ್ಯವರ್ಧನೆ ಕಾರ್ಯಕ್ರಮಗಳ ಜಾರಿ.

ಮೌಲ್ಯವರ್ಧಿತ ತೆರಿಗೆ ಸುಧಾರಣಾ ಮತ್ತು ಆಡಳಿತಾತ್ಮಕ ಕ್ರಮಗಳು
-30 ಅಕ್ಟೋಬರ್ 2018ರೊಳಗೆ ಪೂರ್ತಿ ತೆರಿಗೆ ಪಾವತಿಸುವವರಿಗೆ ಶೇ.100ರಷ್ಟು ದಂಡ ಮತ್ತು ಬಡ್ಡಿ ಮನ್ನಾ.
-ಇದಕ್ಕಾಗಿ ಕರ ಸಮಾಧಾನ ಯೋಜನೆ ಜಾರಿಗೆ ತರಲು ಪ್ರಸ್ತಾಪ.
-ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ ಮೇಲ್ಮನವಿ ವಿಲೇವಾರಿ ಅವಧಿ 3 ವರ್ಷಕ್ಕೆ ವಿಸ್ತರಿಸುವಂತೆ ಪ್ರಸ್ತಾವನೆ.

- ಮಾರಾಟ ತೆರಿಗೆ
- ಅಧಿಕ ಸಂಪನ್ಮೂಲ ಕ್ರೋಢಿಕರಣ ಕ್ರಮ.
- ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಪನ್ಮೂಲ ಕ್ರೋಢಿಕರಣಕ್ಕೆ ಕ್ರಮ. 
- ಪೆಟ್ರೋಲ್ ಮೇಲಿನ ತೆರಿಗೆ ದರ ಪ್ರಸ್ತುತ ಶೇ.30ರಿಂದ 32ಕ್ಕೆ ಏರಿಕೆ. 
- ಡೀಸೆಲ್ ಮೇಲಿನ ತೆರಿಗೆ ದರ ಶೇ.19ರಿಂದ 21ಕ್ಕೆ ಏರಿಕೆ.
- ಇದರಿಂದ ಲೀಟರ್ ಪೆಟ್ರೋಲ್ ಗೆ 1.14 ರೂಪಾಯಿ ಏರಿಕೆ. 
- ಡೀಸೆಲ್ ಪ್ರತಿ ಲೀಟರ್ ಗೆ 1.12 ರೂಪಾಯಿ ಏರಿಕೆ

ಇಂಧನ ತೆರಿಗೆ
- ವಿದ್ಯುತ್ ಬಳಕೆ ಮೇಲಿನ ತೆರಿಗೆ ಶೇ.6ರಿಂದ ಶೇಕಡ 9ಕ್ಕೆ ಹೆಚ್ಚಳ
- ಸ್ವಂತ ಬಳಕೆಯ ವಿದ್ಯುತ್ ಮೇಲಿನ ತೆರಿಗೆ ದರ ಏರಿಕೆ
- ಪ್ರತಿ ಯೂನಿಟ್ ಗೆ 10 ಪೈಸೆಯಿಂದ 20 ಪೈಸೆ ಹೆಚ್ಚಳ

ಬಜೆಟ್ ಮಂಡನೆಗೂ ಮುನ್ನ ವಿಧಾನಸೌಧದಲ್ಲಿ ಕಾಗೆ ಪ್ರತ್ಯಕ್ಷ
ಮತ್ತೆ ಬದಲಾಯ್ತು ಬೆಟ್ರೋಲ್, ಡೀಸೆಲ್ ದರ
ಗರ್ಭಿಣಿಯರ ಭತ್ಯೆ: ಮಾತು ಮರೆತ ಕುಮಾರಣ್ಣ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಐಟಿ ಪಾರ್ಕ್‌ ಸ್ಥಾಪನೆ: ಸಚಿವ ಪ್ರಿಯಾಂಕ್‌ ಖರ್ಗೆ
ವೋಟ್‌ ಚೋರಿ ವಿರುದ್ಧ ಕಾಂಗ್ರೆಸ್ ರ್‍ಯಾಲಿ.. ನಮ್ಮ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ: ಡಿ.ಕೆ.ಶಿವಕುಮಾರ್‌