ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ, ನಾಯಕರಿಗೆ ಅಂಟಿಕೊಂಡ ಪಕ್ಷಾಂತರ ಗಾಳಿ; ಅ.5ರ ಟಾಪ್ 10 ಸುದ್ದಿ!

By Suvarna News  |  First Published Oct 5, 2020, 5:03 PM IST

ಕೆಪಿಪಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನ ಮೇಲೆ ನಡೆದ ಸಿಬಿಐ ದಾಳಿ ಇದೀಗ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಇದರ ನಡುವೆ ಕಾಂಗ್ರೆಸ್ ನಾಯಕ ಮೋದಿ ಆದರ್ಶಕ್ಕೆ ಮೆಚ್ಚಿ ಬಿಜೆಪಿ ಸೇರಿಕೊಂಡಿದ್ದಾರೆ. ಕೊರೋನಾ ಕಾಲದಲ್ಲಿ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸಿದವರಿಗೂ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಆರ್‌ಸಿಬಿಗೆ ಡೆಲ್ಲಿ ಸವಾಲು, ಪಾಕ್‌​ನಲ್ಲಿ ಗಿಲ್ಗಿ​ಟ್‌-ಬಾಲ್ಟಿ​ಸ್ತಾನ ವಿಲೀ​ನ ಸೇರಿದಂತೆ ಅಕ್ಟೋಬರ್ 5ರ ಟಾಪ್ 10 ಸುದ್ದಿ ವಿವರ.


ಚೀನಾ ಒತ್ತ​ಡ​: ಪಾಕ್‌​ನಲ್ಲಿ ಗಿಲ್ಗಿ​ಟ್‌-ಬಾಲ್ಟಿ​ಸ್ತಾನ ವಿಲೀ​ನ?...

Tap to resize

Latest Videos

undefined

ಪಾಕಿ​ಸ್ತಾ​ನ​ದ​ಲ್ಲಿ​ದ್ದರೂ ಸ್ವಾಯತ್ತೆ ಹೊಂದಿ​ರುವ ಗಿಲ್ಗಿ​ಟ್‌-ಬಾಲ್ಟಿ​ಸ್ತಾ​ನ​ವನ್ನು ಪಾಕಿ​ಸ್ತಾ​ನ​ದಲ್ಲಿ ಸಂಪೂರ್ಣ ವಿಲೀ​ನ​ಗೊ​ಳಿಸಿ, ದೇಶದ 5ನೇ ಪ್ರಾಂತ್ಯ ಎಂದು ಘೋಷಿ​ಸಲು ಇಮ್ರಾನ್‌ ಖಾನ್‌ ಸರ್ಕಾರ ಸಿದ್ಧತೆ ನಡೆ​ಸಿ​ದೆ. ಇದು ಭಾರ​ತದ ವಿರುದ್ಧ ಕತ್ತಿ ಮಸೆ​ಯು​ತ್ತಿ​ರುವ ಚೀನಾ ರಣ​ತಂತ್ರದ ಒಂದು ಭಾಗ ಎಂದು ಹೇಳ​ಲಾ​ಗಿ​ದೆ

KPCC ಅಧ್ಯಕ್ಷ ಡಿಕೆಶಿಗೆ ಸಿಬಿಐ ಶಾಕ್, ಬೆಳ್ಳಂ ಬೆಳಗ್ಗೆ ದಾಳಿ!...

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮನೆ ಮೇಲೆ ಬೆಳ್ಳಂ ಬೆಳಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐವರು ಅಧಿಕಾರಿಗಳ ತಂಡ ಈ ದಾಳಿ ನಡೆಸಿದೆ.ಡಿಕೆಶಿ ಮಾತ್ರವಲ್ಲದೇ ಸಹೋದರ ಡಿಕೆ ಸುರೇಶ್ ಮನೆ ಮೇಲೂಲ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿಗೆ ಮೊದಲೇ ನಡೆದಿತ್ತು ಪ್ಲಾನ್; ಕೊನೆ ಕ್ಷಣದಲ್ಲಿ ಸಿಬಿಐ ಪ್ಲಾನ್ ಬದಲಿಸಿದ್ದೇಕೆ?...

ಡಿಕೆಶಿ ಮನೆ ದಾಳಿ ಮಾಡಲು ಸಿಬಿಐ ಮೊದಲೇ ಪ್ರೀ ಪ್ಲಾನ್ ನಡೆಸಿತ್ತು. ಶುಕ್ರವಾರ ದಾಳಿ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಸಿಬಿಐ ಪ್ಲಾನ್ ಬದಲಾಯಿಸಿದೆ. 

ಕೊರೋನಾ ಕಾಲದಲ್ಲಿ 6 ತಿಂಗಳು ಇಎಂಐ ವಿನಾಯ್ತಿ ಪಡೆಯದವರಿಗೂ ಕೇಂದ್ರದ ಗುಡ್‌ ನ್ಯೂಸ್?...

ಕೊರೋನಾ ಸಂಕಷ್ಟದಿಂದಾಗಿ ಸಾಲದ ಕಂತು (ಇಎಂಐ) ಪಾವತಿಯನ್ನು ಆರು ತಿಂಗಳು ಮುಂದೂಡುವ ಸೌಲಭ್ಯ ಪಡೆದವರಿಗೆ ಚಕ್ರಬಡ್ಡಿ ವಿಧಿಸದಿರುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಸಕಾಲಕ್ಕೆ ಇಎಂಐ ಕಟ್ಟಿದವರಿಗೂ ಪರಿಹಾರ ನೀಡಲು ಮುಂದಾಗಿದೆ.

ಡೆಲ್ಲಿ ವಿರುದ್ಧ ಹೋರಾಟಕ್ಕೆ ಬದಲಾವಣೆ ಮಾಡ್ತಾರಾ ಕೊಹ್ಲಿ? ಇಲ್ಲಿದೆ ಸಂಭವನೀಯ ತಂಡ!...

ಸೋಮವಾರದ ಹೋರಾಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿದೆ. ಗೆಲುವಿನ ಲಯದಲ್ಲಿರುವ ಉಭಯ ತಂಡಗಳು ರೋಚಕ ಹೋರಾಟ ನೀಡಲಿದೆ. ಇಂದಿನ ಪಂದ್ಯಕ್ಕೆ ತಂಡದಲ್ಲಿನ ಬದಲಾವಣೆ ಏನು? ಇಲ್ಲಿದೆ ಸಂಭವನೀಯ ತಂಡ.

ಟಾಲಿವುಡ್‌ನಲ್ಲೂ ಬರುತ್ತಿದೆ Lust stories; ಹಸ್ತ ಮೈಥುನ ದೃಶ್ಯದಲ್ಲಿ ಶ್ರುತಿ ಹಾಸನ್?...

ಕಿಯಾರ ಅಡ್ವಾನಿಗೆ ಖ್ಯಾತಿ ತಂದುಕೊಟ್ಟಂಥ ಚಿತ್ರವೇ 'ಲಸ್ಟ್ ಸ್ಟೋರಿಸ್' ಸಿನಿಮಾ. ಈಗ ಅದೇ ಸಿನಿಮಾವನ್ನು ತೆಲುಗುನಲ್ಲಿ ರಿಮೇಕ್ ಮಾಡಲಾಗುತ್ತಿದೆ. ಹಸ್ತ ಮೈಥುನ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರಾ ಶ್ರುತಿ ಹಾಸನ್‌?

ಹಳ್ಳಿ ಜನರ ಜೇಬಿಗೆ ಕತ್ತರಿ ಹಾಕಲು ಹೊರಟ ಸರ್ಕಾರ...

ಗ್ರಾಪಂಗಳಿಗೆ ತೆರಿಗೆ ಮೂಲಕ ಹರಿದು ಬರುವ ಆದಾಯವನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗ್ರಾಪಂಗಳು ವಿಧಿಸುತ್ತಿದ್ದ ತೆರಿಗೆ ಪರಿಷ್ಕರಣೆಗೆ ವೇಳಾಪಟ್ಟಿ ಪ್ರಕಟಿಸುವ ಮೂಲಕ ಒಂದಡೆ ಗ್ರಾಪಂಗಳ ಆರ್ಥಿಕ ಸಬಲೀಕರಣಕ್ಕೆ ಹೆಜ್ಜೆ ಹಾಕಿದರೆ ಮತ್ತೊಂದಡೆ ತೆರಿಗೆ ಪರಿಷ್ಕರಣೆ ಮೂಲಕ ಗ್ರಾಮೀಣ ಜೇಬಿಗೆ ಕೈ ಹಾಕಲು ಹೊರಟಿದೆ.

ಅಕ್ಟೋಬರ್ ಆಫರ್: ಕಾರಿನ ಮೇಲೆ 2.5 ಲಕ್ಷ ರೂ ಡಿಸ್ಕೌಂಟ್ ಘೋಷಿಸಿದ ಹೊಂಡಾ!

ಹಬ್ಬದ ಪ್ರಯುಕ್ತ ಹೊಂಡಾ ಅಕ್ಟೋಬರ್ ತಿಂಗಳ ಆಫರ್ ಘೋಷಿಸಿದೆ. ಹೊಂಡಾ ಕಾರುಗಳ ಮೇಲೆ ಗರಿಷ್ಠ 2.5 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಡಿಸ್ಕೌಂಟ್ ಕುರಿತ ಹೆಚ್ಚಿನ ವಿವರ ಇಲ್ಲಿವೆ.

ಮೋದಿ ಆದರ್ಶಕ್ಕೆ ಮೆಚ್ಚಿದೆ : ಕೈ ತೊರೆದ ನಾಯಕ ಬಿಜೆಪಿಗೆ...

ಕಾಂಗ್ರೆಸ್ ನಾಯಕರೋರ್ವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮೋದಿ ಆದರ್ಶಕ್ಕೆ ಮೆಚ್ಚಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ

ಗುಂಡಿಟ್ಟು ಬಿಜೆಪಿ ನಾಯಕನ ಹತ್ಯೆ, ಕಾರಣ ನಿಗೂಢ!...

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯರೊಬ್ಬರ ಹತ್ಯೆಯಾಗಿದೆ. ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಿಜೆಪಿ ಮುಖಂಡ ಮನೀಶ್ ಶುಕ್ಲಾ  ಎಂಬುವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.  ಪಶ್ಚಿಮ ಬಂಗಾಳದ ತಿತಾಘರ್ ಸಮೀಪ ಉತ್ತರ 24 ಪರಗಣ ಜಿಲ್ಲೆಯಲ್ಲಿ ಘಟನೆ ನಡೆದಿದೆ.

click me!