ವರದಿ : ಕಾಗತಿ ನಾಗರಾಜಪ್ಪ.
 
ಚಿಕ್ಕಬಳ್ಳಾಪುರ(ಅ.05):
 ಗ್ರಾಪಂಗಳಿಗೆ ತೆರಿಗೆ ಮೂಲಕ ಹರಿದು ಬರುವ ಆದಾಯವನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗ್ರಾಪಂಗಳು ವಿಧಿಸುತ್ತಿದ್ದ ತೆರಿಗೆ ಪರಿಷ್ಕರಣೆಗೆ ವೇಳಾಪಟ್ಟಿ ಪ್ರಕಟಿಸುವ ಮೂಲಕ ಒಂದಡೆ ಗ್ರಾಪಂಗಳ ಆರ್ಥಿಕ ಸಬಲೀಕರಣಕ್ಕೆ ಹೆಜ್ಜೆ ಹಾಕಿದರೆ ಮತ್ತೊಂದಡೆ ತೆರಿಗೆ ಪರಿಷ್ಕರಣೆ ಮೂಲಕ ಗ್ರಾಮೀಣ ಜೇಬಿಗೆ ಕೈ ಹಾಕಲು ಹೊರಟಿದೆ.

ಹೌದು, ಹಲವು ವರ್ಷಗಳಿಂದ ತೆರಿಗೆ ಪರಿಷ್ಕರಣೆ ಆಗದಿರುವುದನ್ನು ಗಮನಿಸಿ ಸರ್ಕಾರದ ಪಂಚಾಯತ್ ರಾಜ್ ಆಯುಕ್ತಾಲಯ ರಾಜ್ಯದ ಎಲ್ಲಾ ಗ್ರಾಪಂಗಳಲ್ಲಿ ತೆರಿಗೆ ಪರಿಷ್ಕರಣೆಗೆ ವೇಳಾ ಪಟ್ಟಿ ಸಿದ್ದಪಡಿಸಿದ್ದು ಅ.7 ರಿಂದ ತೆರಿಗೆ ಪರಿಷ್ಕರಣೆಗೆ ಅಧಿಕೃತವಾಗಿ ಚಾಲನೆ ಸಿಗಲಿದ್ದು ತೆರಿಗೆ ಪರಿಷ್ಕರಣೆ ಗ್ರಾಮೀಣ ಜನರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನ.115 ರೊಳಗೆ ಪರಿಷ್ಕೃತ ತೆರಿಗೆ ವಿವರಗಳು ಪಂಚತಂತ್ರದಲ್ಲಿ ಅಳವಡಿಸಬೇಕೆಂದು ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚಾಯತ್ ರಾಜ್ ಆಯುಕ್ತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.

ಕೇಂದ್ರದಿಂದ ಗುಡ್‌ ನ್ಯೂಸ್: ಇಎಂಐ ವಿನಾಯ್ತಿ ಪಡೆದವರಿಗೆ ಚಕ್ರಬಡ್ಡಿ ಮನ್ನಾ! ...

ಗ್ರಾಪಂಗಳ ಮಟ್ಟದಲ್ಲಿ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ವಸೂಲಾತಿ ಆಗುತ್ತಿಲ್ಲ ಎಂಬ ಕಾರಣ ನೀಡಿ ಸರ್ಕಾರ ಗ್ರಾಪಂಗಳ ತೆರಿಗೆ ಪರಿಷ್ಕರಣೆಗೆ ಮುಂದಾಗಿದ್ದು ಗ್ರಾಪಂಗಳ ವ್ಯಾಪ್ತಿಯಲ್ಲಿ ಬರುವ ಮನೆ, ಖಾಲಿ ನಿವೇಶನ, ಬಡಾವಣೆ, ಕಾರ್ಖಾನೆ, ಇಟ್ಟಿಗೆ ಪ್ಯಾಕ್ಟರಿ, ವಾಣಿಜ ಮಳಿಗೆಗಳು, ಕಲ್ಯಾಣ ಮಂಪಟ, ವ್ಯಾಪಾರ ವಾಣಿಜ್ಯ ಮಳಿಗೆಗಳು, ದನ, ಕುರಿ, ಮೇಕೆ ಸಂತೆ, ಕುಡಿಯುವ ನೀರು ನಳ ಸಂಪರ್ಕ, ಮನೆಗೆ ಕುಡಿಯುವ ನೀರಿನ ನೇರ ಸಂಪರ್ಕ, ವಾಹನ ನಿಲ್ದಾಣ ಸ್ಥಳ. ಮೊಬೈಲ್ ಟವರ್, ವಸತಿ ನಿವೇಶನಗಳಿಗೆ ಸದ್ಯಕ್ಕೆ 100 ರುಗೆ 40 ಪೈಸೆಯಂತೆ ತೆರಿಗೆ ವಿಧಿಸಲಾಗುತ್ತಿದೆ. ಅದೇ ರೀತಿ 25 ಲಕ್ಷ ರು ಮೌಲ್ಯದ ಮೇಲ್ಪಟ್ಟ ಕಟ್ಟಡಗಳಿಗೆ, ನಿವೇಶಗಳಿಗೆ 100ಕ್ಕೆ 60 ಪೈಸೆಯಂತೆ ಹಾಲಿ ತೆರಿಗೆ ವಿಧಿಸಲಾಗುತ್ತಿದೆ. ಆದರೆ ಹಾಲಿ ವಿಧಿಸುತ್ತಿರುವ ತೆರಿಗೆಗಳನ್ನು ಪರಿಷ್ಕರಣೆಗೆ ಸರ್ಕಾರ ಮುಂದಾಗಿರುವುದರಿಂದ ಮುಂದಿನ ದಿನಗಳಲ್ಲಿ ಗ್ರಾಪಂಗಳಲ್ಲಿ ವಿಧಿಸುವ ತೆರಿಗೆ ಪ್ರಮಾಣ ಹೆಚ್ಚಾಗಲಿದ್ದು ತೆರಿಗೆ ಬಿಸಿ ಸಹಜವಾಗಿಯೆ ಗ್ರಾಮೀಣ ಭಾಗದ ಜನ ಸಾಮಾನ್ಯರ, ರೈತಾಪಿ ಕೃಷಿ ಕೂಲಿಕಾರರ ಕೈ ಕಚ್ಚಿಲಿದೆ.

ಕೊರೋನಾ ಕಾಲದಲ್ಲಿ 6 ತಿಂಗಳು ಇಎಂಐ ವಿನಾಯ್ತಿ ಪಡೆಯದವರಿಗೂ ಕೇಂದ್ರದ ಗುಡ್‌ ನ್ಯೂಸ್?

ಜಿಲ್ಲೆಯಲ್ಲಿವೆ 157 ಗ್ರಾಪಂಗಳು:   ಜಿಲ್ಲೆಯಲ್ಲಿ ಒಟ್ಟು 157 ಗ್ರಾಪಂಗಳಿದ್ದು ಆ ಪೈಕಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 23, ಗೌರಿಬಿದನೂರು ತಾಲೂಕಿನಲ್ಲಿ 38, ಶಿಡ್ಲಘಟ್ಟ ತಾಲೂಕಿನಲ್ಲಿ 28,  ಗುಡಿಬಂಡೆ ತಾಲೂಕಿನಲ್ಲಿ 8 ಗ್ರಾಪಂಗಳು ಹಾಗೂ ಚಿಂತಾಮಣಿ ತಾಲೂಕಿನಲ್ಲಿ 35, ಬಾಗೇಪಲ್ಲಿ ತಾಲೂಕಿನಲ್ಲಿ 25 ಗ್ರಾಪಂಗಳು ಇವೆ. 

ಜಿಲ್ಲೆಯ ಗ್ರಾಪಂಗಳ ತೆರಿಗೆ ವಸೂಲಿ ಶೇ.10ರಷ್ಟು ಮಾತ್ರ
ಜಿಲ್ಲೆಯಲ್ಲಿರುವ 157 ಗ್ರಾಪಂಗಳಿಂದ ಒಟ್ಟು ಇದುವರೆಗೂ  3,945.76  ಲಕ್ಷ ರೂ,ತೆರಿಗೆ ವಸೂಲಿ ಆಗಬೇಕಿದೆ. ಆದರೆ ಜಿಲ್ಲೆಯಲ್ಲಿ ತೆರಿಗೆ ವಸೂಲಿ ಆಗಿರುವುದು ಕೇವಲ 399.28 ಲಕ್ಷ ರು ಮಾತ್ರ. ಜಿಲ್ಲೆಯಲ್ಲಿ ಇನ್ನು 3,546.49 ಲಕ್ಷ ರು, ತೆರಿಗೆ ವಸೂಲಿ ಬಾಕಿ ಇದೆ. ಒಟ್ಟಾರೆ ಗ್ರಾಪಂಗಳ ತೆರಿಗೆ ವಸೂಲಿ ಸಾದನೆ ಗಮಿಸಿದರೆ ಶೇ.10.12 ರಷ್ಟು ಪ್ರಗತಿ ಮಾತ್ರ ಇದೆ. ಜಿಲ್ಲೆಯ 112 ಗ್ರಾಪಂಗಳಲ್ಲಿ ಕಳೆದ ನಾಲ್ಕು ವರ್ಷಗಳಿಂದ ತೆರಿಗ ಪರಿಷ್ಕರಣೆ ನಡೆದಿಲ್ಲ ಎಂದು ಪಂಚಾಯತ್ ರಾಜ್  ಆಯುಕ್ತಾಲಯ ತಿಳಿಸಿದೆ.
 
ತೆರಿಗೆ ಪರಿಷ್ಕರಣೆಗೆ ವೇಳಾಪಟ್ಟಿ ಹೀಗಿದೆ?

* ಅ.7 ರಿಂದ 12 ರವರೆಗೂ ತಾಪಂ ಇಒಗಳು ತಮ್ಮ ವ್ಯಾಪ್ತಿಗೆ ಬರುವ ಗ್ರಾಪಂಗಳ ಪಟ್ಟಿ ಮಾಡಿಕೊಳ್ಳಬೇಕು.
* ಅ.14 ರಿಂದ 19ರ ವರೆಗೂ ಸಿಇಒಗಳ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಮಿತಿ ತಾಲೂಕುವಾರು ಸಭೆ ನಡೆಸಿ ಪ್ರತಿ ಗ್ರಾಪಂನಲ್ಲಿ ತೆರಿಗೆ ಪರಿಷ್ಕರಣೆಗೆ ಗ್ರಾಮಸಭೆ ದಿನಾಂಕ ಗೊತ್ತಾಪಡಿಸಬೇಕು.
* ಅ.21 ರಿಂದ 29ರ ವರೆಗೂ ತೆರಿಗೆ ಪರಿಷ್ಕರಣೆಗೆ ಗ್ರಾಮ ಸಭೆಗಳಲ್ಲಿ ಅನುಮೋಧನೆ ಪಡೆಯಬೇಕು. ಪ್ರತಿ ಗ್ರಾಪಂಗೆ ತಾಲೂಕು ಮಟ್ಟದ ನೋಡಲ್ ಅಧಿಕಾರಿಯನ್ನು ಜಿಪಂ ಸಿಇಒ ನೇಮಿಸಬೇಕು.
* ನ.2 ರಿಂದ 10ರ ವರೆಗೂ ಪರಿಷ್ಕರಿಸಿ ವಿಧಿಸಿರುವ ತೆರಿಗೆ ಆಕ್ಷೇಪಣೆಗಳನ್ನು ಸಾರ್ವಜನಿಕರಿಂದ ಸ್ಪೀಕರಿಸಲು ಅವಕಾಶ ಕಲ್ಪಿಸಿ ಆ ಆಕ್ಷೇಪಣೆಗಳನ್ನು ಪರಿಶೀಲಿಸಿ ಪರಿಷ್ಕೃತ ತೆರಿಗೆ ಅಂತಿಮಗೊಳಿಸಬೇಕು.
* ಅ.15 ರೊಳಗೆ ಪರಿಷ್ಕೃತ ತೆರಿಗೆ ವಿವರಗಳನ್ನು ಕಡ್ಡಾಯವಾಗಿ ಪಂಚತಂತ್ರದಲ್ಲಿ ಅಳವಡಿಸಬೇಕು.