BSY ಕೆಳಗಿಳಿಸಲು ಲಾಭಿ, ರಿಯಲ್ ಹೀರೋಸ್‌ಗೆ ನಮಿಸಿದ ಆರ್‌ಸಿಬಿ; ಸೆ.13ರ ಟಾಪ್ 10 ಸುದ್ದಿ!

By Suvarna News  |  First Published Sep 13, 2020, 4:50 PM IST

ಮುಖ್ಯಮಂತ್ರಿ ಬದಲಿಸುವ ಕುರಿತು ಬಿಜೆಪಿ ನಾಯಕರು ಸಜ್ಜಾಗಿದ್ದಾರೆ ಎಂದು ಜೆಡಿಎಸ್ ನಾಯಕ ಹೊಸ ಬಾಂಬ್ ಸಿಡಿಸಿದ್ದಾರೆ.  ಇತ್ತ ಅಮಿತ್ ಶಾ ಆರೋಗ್ಯ ಏರುಪೇರಾಗಿದ್ದು ಆಸ್ಪತ್ರೆ ದಾಖಲಾಗಿದ್ದಾರೆ. ಬಾಲಿವುಡ್ ನಿರ್ಮಾಪಕ ಸಾಜಿದ್ ಖಾನ್ ಮುಂದೆ ಬೆತ್ತಲಾದರೆ ಮಾತ್ರ ಅವಕಾಶ ಇದೆ ಎಂದು ನಟಿ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ. ಕೊರೋನಾ ವಾರಿಯರ್ಸ್‌ಗೆ ಆರ್‌ಸಿಬಿ ಸಲ್ಯೂಟ್, ಸನ್ನಿ ಲಿಯೋನ್ ಡೇಟಿಂಗ್ ಸೇರಿದಂತೆ ಸೆಪ್ಟೆಂಬರ್ 13ರಂದು ಸದ್ದು ಮಾಡಿದ ಟಾಪ್ 10 ಸುದ್ದಿ ವಿವರ.


ಬಿಎಸ್‌ವೈ ಕೆಳಗಿಳಿಸಲು ತೀವ್ರ ಲಾಭಿ: ಬಿಜೆಪಿ ಹಿರಿಯರೇ ನನ್ನ ಬಳಿ ಹೇಳಿದ್ದಾರೆ ಎಂದ ಜೆಡಿಎಸ್ ನಾಯಕ...

Latest Videos

undefined

ಮುಖ್ಯಮಂತ್ರಿ ಬದಲಾಗಲಿದ್ದಾರೆ ಎಂಬ ವಿಚಾರವನ್ನು ಬಿಜೆಪಿಯ ಹಿರಿಯ ಮುಖಂಡರೇ ತಮ್ಮ ಬಳಿ ಹೇಳಿದ್ದಾರೆ ಎಂದು ಜೆಡಿಎಸ್ ಹಿರಿಯ ನಾಯಕ ಸ್ಫೋಟಕ ಹೇಳಿಕೆ ನೀಡಿ, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.

ಅಮಿತ್ ಶಾ ಆರೋಗ್ಯದಲ್ಲಿ ಏರುಪೇರು, ಮತ್ತೆ ಆಸ್ಪತ್ರೆಗೆ ದಾಖಲು!...

ಎರಡು ವಾರದ ಹಿಂದಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಶನಿವಾರ ರಾತ್ರಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಆಫ್‌ ಫೀಲ್ಡ್‌ನಲ್ಲೂ ಆರ್‌ಸಿಬಿ ಸ್ಫೂರ್ತಿ: ಕೊರೋನಾ ವಾರಿಯರ್ಸ್‌ಗೆ ಸೆಲ್ಯೂಟ್!...

ಹೆಮ್ಮಾರಿ ಕೊರೋನಾದಿಂದ ಇಡೀ ಜಗತ್ತೇ ನಲುಗಿ ಹೋಗಿದೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ದೇಶದಲ್ಲಿ ಉದ್ಯೋಗ, ವ್ಯಾಪಾರ ಹಾಗೂ ಆರ್ಥಿಕತೆಗೆ ಬಲವಾದ ಪೆಟ್ಟು ಬಿದ್ದಿದೆ. ಈ ಮಹಾಮಾರಿ ನಿಯಂತ್ರಣಕ್ಕೆ ಕೊರೋನಾ ವಾರಿಯರ್ಸ್‌ ಜೀವವನ್ನು ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಇಂತಹ ರಿಯಲ್ ಹೀರೋಗಳನ್ನು ನಮ್ಮ ಆರ್‌ಸಿಬಿ ತಂಡ ಗುರತಿಸಿಎ. ಸೆಲ್ಯೂಟ್ ಹೇಳುವ ಮೂಲಕ ಧೈರ್ಯ ತುಂಬಿದೆ. 

ಪತಿಯ ಜೊತೆ ಆಫ್ಟರ್‌ನೂನ್ ಡೇಟ್, ಸ್ಟನ್ನಿಂಗ್ ಫೋಟೋ ಶೇರ್ ಮಾಡಿದ ಸನ್ನಿ...

ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಇರೋ ಸನ್ನಿ ಲಿಯೋನ್ ಹಾಗೂ ಪತಿ ಡಾನಿಯಲ್ ವೆಬರ್ ತಮ್ಮ ದಿನ ನಿತ್ಯದ ಚಟುವಟಿಗಳನ್ನು ಫ್ಯಾನ್ಸ್ ಜೊತೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಪತಿಯ ಜೊತೆ ಸ್ಪೆಷಲ್ ಆಫ್ಟರ್‌ನೂನ್ ಫೋಟೋವನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ.

ಈತನ ಮುಂದೆ ಬೆತ್ತಲಾದ್ರೆ ಮಾತ್ರ ಸಿನಿಮಾ ಅವಕಾಶ..!...

ಸಿನಿಮಾ ಅವಕಾಶ ಬೇಕಾ, ಹಾಗಾದ್ರೆ ನನ್ನ ಮುಂದೆ ಬಟ್ಟೆ ಬಿಚ್ಚಬೇಕು ಎಂದಿದ್ದಾರೆ ಬಾಲಿವುಡ್ ನಿರ್ಮಾಪಕ. ಇತ್ತೀಚೆಗಷ್ಟೇ ಎಂಟ್ರಿ ಕೊಟ್ಟ ಬಾಲಿವುಡ್ ನಟಿ ಈ ಬಗ್ಗೆ ಬಾಯ್ಬಿಟ್ಟಿದ್ದಾರೆ. ಅವಕಾಶ ಬೇಕು ಅಂದ್ರೆ ಮಂಚಕ್ಕೆ ಬರಲೇ ಬೇಕು ಅಂತ ನಿರ್ಮಾಪಕ ಸಾಜಿದ್ ಖಾನ್ ಹೇಳ್ತಾನಂತೆ.

ಮಿತಿ ಮೀರಿ ಪ್ಲಾಸ್ಟಿಕ್‌ ಬಳಕೆ: ಅಮೆಜಾನ್‌, ಫ್ಲಿಪ್‌ಕಾರ್ಟ್‌ಗೆ ಕಂಟಕ!...

ಗ್ರಾಹಕರ ವಸ್ತುಗಳ ಪ್ಯಾಕಿಂಗ್‌ಗೆ ಮಿತಿಮೀರಿದ ಪ್ಲಾಸ್ಟಿಕ್‌ ಬಳಕೆ ಮೂಲಕ ಪರಿಸರ ರಕ್ಷಣಾ ಕ್ರಮಗಳನ್ನು ಉಲ್ಲಂಘಿಸಿರುವ ದೇಶದ ಪ್ರಮುಖ ಇ-ಕಾಮರ್ಸ್‌ ಸಂಸ್ಥೆಗಳಾದ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಸಂಸ್ಥೆಗಳಿಗೆ ದಂಡ ವಿಧಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ನಿರ್ದೇಶನ ನೀಡಿದೆ.

ಪ್ರಾಣಿಗಳ ಸಂರಕ್ಷಣೆಗಾಗಿ ತನ್ನ ಮಾರುತಿ ಸುಜುಕಿ ಜಿಪ್ಸಿ ಕಾರು ಗಿಫ್ಟ್ ನೀಡಿ ಜಾನ್ ಅಬ್ರಹಾಂ!...

ನಟ ಜಾನ್ ಅಬ್ರಹಾಂ ಸೈಲೆಂಟ್ ಆಗಿ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾರೆ. ಇತರರಂತೆ ಹೆಚ್ಚು ಪ್ರಚಾರ ಮಾಡಿಕೊಂಡಿಲ್ಲ. ಇದೀಗ ಜಾನ್ ಪ್ರಾಣಿಗಳ ಸಂರಕ್ಷಣೆ ಮಾಡುವ NGO ಸಂಸ್ಥೆಗೆ ತನ್ನ ಮಾರುತಿ ಸುಜುಕಿ ಜಿಪ್ಸಿ ನೀಡಿದ್ದಾರೆ. 

ದಕ್ಷಿಣ ಕನ್ನಡದಲ್ಲಿ ಕೊರೋನಾ ಅಟ್ಟಹಾಸ : ಹೆಚ್ಚು ಸಂಖ್ಯೆಯಲ್ಲಿ ಪಾಸಿಟಿವ್...

ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಏರಿಕೆ ಹಾದಿಯಲ್ಲಿದ್ದು, ಶನಿವಾರ 401 ಮಂದಿಗೆ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 17 ಸಾವಿರದ ಗಡಿಗೆ ಬಂದು ತಲುಪಿದೆ. ಕೋವಿಡ್‌ಗೆ ಶನಿವಾರ ಮತ್ತೆ ಐವರು ಮೃತಪಟ್ಟಿದ್ದಾರೆ. 204 ಮಂದಿ ಗುಣಮುಖರಾಗಿದ್ದಾರೆ.

'200 ಬಾಂಗ್ಲಾ ದೇಶಿಯರನ್ನು 8-10 ಬಸ್‌ಗಳಲ್ಲಿ ಕರೆದೊಯ್ದಿದ್ದ ಜಮೀರ್‌'...

ಡ್ರಗ್ಸ್‌ ಮಾಫಿಯಾ ಪ್ರಕರಣದಲ್ಲಿ ಬಾಂಗ್ಲಾದೇಶಿಯರೊಂದಿಗೆ ಶಾಸಕ ಜಮೀರ್‌ ಅಹಮ್ಮದ್‌ಗೆ ನಂಟಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಶನಿವಾರ ಆರೋಪಿಸಿದರು.


ತನ್ನನ್ನು ಅರೆಸ್ಟ್ ಮಾಡಿದ್ದ ಪೊಲೀಸಪ್ಪನಿಗೇ ಕಿಡ್ನಿ ದಾನ ಮಾಡಿದ ಮಹಿಳೆ!...

ಅಲ್ಬಾಮಾದ ಮಹಿಳೆಯೊಬ್ಬಳು ತನ್ನನ್ನು ಕೆಲವು ವರ್ಷಗಳ ಹಿಂದೆ ಅರೆಸ್ಟ್ ಮಾಡಿದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ತನ್ನ ಕಿಡ್ನಿ ದಾನ ಮಾಡಿ ಅವರ ಪ್ರಾಣ ಉಳಿಸಿದ್ದಾರೆ. 
 

click me!