
ನವದೆಹಲಿ (ಡಿ. 18): ಹಿಂದಿ ರಾಜ್ಯಗಳ ಸೋಲಿನ ನಂತರ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕಾಂಗ್ರೆಸ್ ಮೇಲೆ ಇನ್ನಷ್ಟು ಟೀಕೆ ಹೆಚ್ಚು ಮಾಡಿದ್ದಾರೆಯೇ ಹೊರತು ಕೋರ್ ಕಮಿಟಿಯಲ್ಲಾಗಲಿ, ಪಾರ್ಲಿಮೆಂಟ್ ಬೋರ್ಡ್‌ನಲ್ಲಾಗಲಿ ಸೋಲಿನ ಕಾರಣಗಳ ಬಗ್ಗೆ ಯಾವುದೇ ಚರ್ಚೆ ನಡೆಸುವ ಗೊಡವೆಗೆ ಹೋಗಿಲ್ಲ.
ಬದಲಾಗಿ ಸೋತ ಮರುದಿನವೇ ಅಮಿತ್ ಶಾ ಮುಂದಿನ 4 ತಿಂಗಳ ಲೋಕಸಭಾ ಚುನಾವಣೆ ತಯಾರಿಯ ರೋಡ್ ಮ್ಯಾಪ್ ಬಿಡುಗಡೆ ಮಾಡಿದ್ದಾರೆ. ಈಗ ಸೋಲಿನ ಬಗ್ಗೆ ತಾವೇ ಚರ್ಚೆ ಆರಂಭಿಸಿದರೆ ಲೋಕಸಭೆ ಮೇಲೆ ಎಲ್ಲ ಕಡೆಗೂ ನೆಗೆಟಿವ್ ಪರಿಣಾಮ ಬೀರಬಹುದು.
ಹೀಗಾಗಿ ನಾವೇ ಕಾಯಂ ಯುದ್ಧದ ಮೂಡ್‌ನಲ್ಲಿ ಇರೋಣ. ಆಗ ಕಾರ್ಯಕರ್ತರೂ ಹಾಗೇ ಇರುತ್ತಾರೆ ಎಂದು ಇಬ್ಬರು ನಿರ್ಧರಿಸಿರಬೇಕು. ಮತ್ತು ಸೋಲಿನ ಚರ್ಚೆಗೆ ಆಸ್ಪದ ನೀಡಿದರೆ ಕೆಲ ಹೊರ ಹೋಗಲೇಬೇಕು ಎಂದು ತೀರ್ಮಾನಿಸಿರುವ ನಾಯಕರು ಬಂಡಾಯ ಆರಂಭಿಸಬಹುದು ಎಂಬ ಆತಂಕವೂ ಇರಬಹುದು.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.