ದುರ್ಯೋಧನ ‘ಮದ್ಯ’ದ ಪ್ರಶ್ನೆಗೆ ಉತ್ತರ ನೀಡದ ಧರ್ಮರಾಯ!

By Web DeskFirst Published Dec 18, 2018, 5:25 PM IST
Highlights

ಮತ್ತು ಏರಿಸುವ ಮದ್ಯ ಸದನದಲ್ಲಿ ಮಾತ್ರ ನಗುವಿನ ಅಲೆ ಮೂಡಿಸಿತು. ಇದಕ್ಕೆ ಕಾರಣವಾಗಿದ್ದು ಎಲ್ಲ ಪಕ್ಷದ ನಾಯಕರು ಮತ್ತು ಸ್ಪೀಕರ್.

ಬೆಳಗಾವಿ [ಡಿ.18]  ಮಂಗಳವಾರದ ಸದನದಲ್ಲಿ ಮದ್ಯದ ಬಗ್ಗೆ ತರೇವಾರಿ ಚರ್ಚೆ ನಡೆಯಿತು. ಮದ್ಯದಂಗಡಿ ಸನ್ನದ್ದು ನೀಡುವ ಕುರಿತು ಶಾಸಕ ದುರ್ಯೋಧನ ಐಹೊಳೆ ಮೊದಲಿಗೆ ಪ್ರಶ್ನೆ ಮಾಡಿದರು.

ಆದರೆ ಇದಕ್ಕೆ ಸರಿಯಾದ ಉತ್ತರ ಬರಲಿಲ್ಲ. ಪ್ರಶ್ನೆಗೆ ಸರಿಯಾದ ಉತ್ತರ ಮುದ್ರಿಸಿ ನೀಡದ ಅಬಕಾರಿ ಇಲಾಖೆ ಅಧಿಕಾರಿಗಳ ಮೇಲೆ ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದರು. ಮಧ್ಯೆ ಎದ್ದು ನಿಂತು ಉಪಪ್ರಶ್ನೆ ಕೇಳಲು ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಸಿದ್ಧರಾದರು.

ಭತ್ತದ ತಳಿ ಬಗ್ಗೆ ವೈದ್ಯರ ಮಾತು, ಮೇಸ್ಟ್ರಿಂದ ಶಹಭಾಸ್ ಪಡಕೊಂಡ ಡಾಕ್ಟರ್!

ನಿಮಗೇನು ಮದ್ಯದ ಬಗ್ಗೆ ಗೊತ್ರಿ...? ನೀವ್ಯಾಕೆ ಎದ್ದು ನಿಲ್ತೀರಾ ಎಂದ ಸ್ಪೀಕರ್ ಮಹಾದೇವಪ್ಪ ಅವರನ್ನು ಕೇಳಿದರು. ನಮಗೆ ಗೊತ್ತಿಲ್ಲದ್ದು ನಿಮಗೆ ಗೊತ್ತೇನ್ರೀ ಅಂತ ತಮಾಷೆ ಸ್ಪೀಕರ್ ತಮಾಷೆ ಮಾಡಿದ ನಂತರ ಬಿಜೆಪಿ ಸದಸ್ಯರು ಆಖಾಡಕ್ಕೆ ಇಳಿದರು.

ಎದ್ದು ನಿಂತ ಸಿ.ಟಿ.ರವಿ ‘ ಸ್ಪೀಕರ್ ಅವರು ಎಲ್ಲಾ ವಿಚಾರದಲ್ಲಿ ನನಗೆ ಗುರುಗಳು, ಆದರೆ ನಾನು ಈ ವಿಚಾರದಲ್ಲಿ ಮಾತ್ರ ನಿಮ್ಮ ಹಿಂದೆ ಬಂದಿಲ್ಲ  ಎಂದರು. ನಾನು ನಿನಗೆ ಯಾವಾಗ ಶಿಷ್ಯತ್ವ ಕೊಟ್ಟೆ..? ಅಂತ ಸಿಟಿ ರವಿಗೆ ಸ್ಪೀಕರ್ ಮರು ಪ್ರಶ್ನೆ ಎಸೆದರು.

ದುರ್ಯೋಧನ ಅವರೇ ನಿಮ್ಮ ಪ್ರಶ್ನೆಗೆ ಉತ್ತರ ಕೊಡಲು ಧರ್ಮರಾಯರಿಗೆ ಹೇಳಿದ್ದೇನೆ. ಅವರೇ ಈ ವಿಚಾರದಲ್ಲಿ ( ಮದ್ಯದ ವಿಚಾರದಲ್ಲಿ ) ಹೆಚ್ಚಿನ ವಿವರ ಇವರು ನೀಡಬಹುದು ಅಂತ ಸಿಎಂ ಕಡೆ ತೋರಿಸಿ ಸ್ಪೀಕರ್ ಹೇಳಿದಾಗ ಸದನದಲ್ಲಿ  ನಗೆ ಬುಗ್ಗೆ ಉಕ್ಕಿತು.

click me!