ಹುಡ್ಗೀರ ಕಣ್ಮಣಿ BBK ಅರವಿಂದ್, 10 ಜಿಲ್ಲೆ ಸಂಪೂರ್ಣ ಬಂದ್; ಮೇ.21ರ ಟಾಪ್ 10 ಸುದ್ದಿ!

Published : May 21, 2021, 04:50 PM ISTUpdated : May 21, 2021, 04:57 PM IST
ಹುಡ್ಗೀರ ಕಣ್ಮಣಿ BBK ಅರವಿಂದ್, 10 ಜಿಲ್ಲೆ ಸಂಪೂರ್ಣ ಬಂದ್; ಮೇ.21ರ ಟಾಪ್ 10 ಸುದ್ದಿ!

ಸಾರಾಂಶ

ಕೊರೋನಾ ಅಟ್ಟಹಾಸ ಕಾರಣ ಕರ್ನಾಟಕದ 10 ಜಿಲ್ಲೆಗಳು ಸಂಪೂರ್ಣ ಬಂದ್ ಆಗಿವೆ. ಮೇ 27 ರಂದು ಶಾಲೆ ಆರಂಭ ಸೇರಿದಂತೆ ಇತರ ನಿರ್ಧಾರಗಳು ಹೊರಬೀಳಲಿದೆ. ಇಸ್ರೇಲ್-ಹಮಾಸ್ ಕದನ ಅಂತ್ಯಗೊಂಡಿದೆ. ಮಿಶ್ರ ಕೋವಿಡ್ ಲಸಿಕೆ ನೀಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಬಿಗ್‌ಬಾಸ್ ಅರವಿಂದ್ ರೀತಿ ಹುಡುಗನೇ ಬೇಕು ಅಂತಿದ್ದಾರೆ ಹುಡುಗಿಯರು, 13 ನಕ್ಸಲರ ಹತ್ಯೆ ಸೇರಿದಂತೆ ಮೇ.21ರ ಟಾಪ್ 10 ಸುದ್ದಿ ವಿವರ.

ಮೇ.27ಕ್ಕೆ ರಾಜ್ಯ ಸಂಪುಟ ಸಭೆಯಲ್ಲಿ ಹೊರಬೀಳಲಿದೆ ಶಾಲೆ ಆರಂಭ-ಹೊಸ ಪ್ಯಾಕೇಜ್ ಬಗ್ಗೆ ನಿರ್ಣಯ...

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯದ ವಿವಿಧ ವ್ಯವಸ್ಥೆಗಳ ಸುಧಾರಣೆ ಸಂಬಂಧ ಮೇ 27 ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. 

ಶುಕ್ರವಾರ ಮುಂಜಾನೆ 13 ನಕ್ಸಲರಿಗೆ ಮುಕ್ತಿ ಕಾಣಿಸಿದ ಭದ್ರತಾ ಪಡೆ...

ಮಹಾರಾಷ್ಟ್ರದ ಗಡಚಿರೋಲಿಯಲ್ಲಿ 13 ನಕ್ಸಲರನ್ನು ಎನ್‌ ಕೌಂಟರ್ ಮಾಡಲಾಗಿದೆ.  ಶುಕ್ರವಾರ ಮುಂಜಾನೆ 5.30 ರ ಸುಮಾರಿಗೆ ಎಟಪಲ್ಲಿಯ ಕೋಟ್ಮಿ ಕಾಡಿನಲ್ಲಿ ಗುಂಡಿನ ಚಕಮಕಿ ನಡೆದಿದೆ.

ಘನಘೋರ 11 ದಿನಗಳ ಇಸ್ರೇಲ್-ಹಮಾಸ್ ಕದನ ಅಂತ್ಯ; ಆತಂಕ ತಂದ ಉಗ್ರರ ಹೇಳಿಕೆ!...

ಹಮಾಸ್ ಉಗ್ರರನ್ನು ಸದೆಬಡೆಯಲು ಇಸ್ರೇಲ್ ಸತತ 11 ದಿನಗಳ ಕಾಲ ಗಾಜಾ ಪಟ್ಟಿಯಲ್ಲಿ ನಡೆಸಿದ ಕದನ ಇಂದು(ಮೇ.21) ಅಂತ್ಯಗೊಂಡಿದೆ. ಈಜಿಪ್ಟ್ ಮಧ್ಯಪ್ರವೇಶದಿಂದ ಇಸ್ರೇಲ್ ಕದನ ವಿರಾಮ ಘೋಷಿಸಿದೆ. ಇತ್ತ ಹಮಾಸ್ ಹೋರಾಟ ಅಂತ್ಯಗೊಳಿಸಲು ಒಪ್ಪಿಕೊಂಡಿದ್ದು, ಇಂದು ಮುಂಜಾನೆ 2 ಗಂಟೆಯಿಂದ ಕದನ ವಿರಾಮ ಜಾರಿಯಾಗಿದೆ.

#SexualAssaultCase: ತೆಹೆಲ್ಕಾ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ ದೋಷಮುಕ್ತ...

ತೆಹಲ್ಕಾ ನಿಯತಕಾಲಿಕದ ಸಂಸ್ಥಾಪಕ ತರುಣ್ ತೇಜ್‌ಪಾಲ್ ಅವರನ್ನು ಗೋವಾ ನ್ಯಾಯಾಲಯವು ಅತ್ಯಾಚಾರ, ಲೈಂಗಿಕ ಕಿರುಕುಳ ಆರೋಪದಿಂದ ದೋಷ ಮುಕ್ತಗೊಳಿಸಿ ಖುಲಾಸೆಗೊಳಿಸಿದೆ.

ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ತಂದೆ ಇನ್ನಿಲ್ಲ...

ಶೇ.5 ವೋಟ್, ದಿವ್ಯಾ ನನ್ನ ಲಕ್ಕಿ ಚಾರ್ಮ್; ಎಲ್ಲಿ ನೋಡಿದರೂ ಅರವಿಂದ್ ವಿಡಿಯೋ!...

ಬಿಗ್ ಬಾಸ್ ಸ್ಪರ್ಧಿ ಅರವಿಂದ್ ಮನೆಯಿಂದ ಹೊರ ಬಂದ ನಂತರ ಹಲವು ವಾಹಿನಿಗಳಲ್ಲಿ ಸಂದರ್ಶನ ನೀಡಿದ್ದಾರೆ. ಅವುಗಳಲ್ಲಿ ಕೆಲವೊಂದು ವಿಡಿಯೋಗಳು ಸಖತ್ ವೈರಲ್ ಅಗುತ್ತಿವೆ. ಸಿಕ್ಕರೆ ಇಂಥದ್ದೇ ಹುಡುಗ ಸಿಗಬೇಕು ಎನ್ನುತ್ತಿದ್ದಾರೆ  ಹುಡುಗಿಯರು.

ಹೊಸ ಐಟಿ ರಿಟರ್ನ್ಸ್‌ಗೆ ನೂತನ ವೆಬ್‌ಸೈಟ್‌ : ಜೂ.7ರಂದು ಬಿಡುಗಡೆ...

ತೆರಿಗೆದಾರರು ತಮ್ಮ ಆದಾಯ ತೆರಿಗೆ ಪಾವತಿ ವಿವರ ಸಲ್ಲಿಸಲು ಈಗ ಬಳಕೆ ಮಾಡುತ್ತಿರುವ ವೆಬ್‌ಸೈಟ್‌ ಬದಲು ನೂತನ ವೆಬ್‌ಸೈಟ್‌ ಅನ್ನು ತೆರಿಗೆ ಇಲಾಖೆ ಜೂ.7ರಂದು ಬಿಡುಗಡೆ ಮಾಡಲಿದೆ.

ಆಫ್‌-ರೋಡ್ ಸ್ಕೂಟರ್ ಯಮಹಾ ಝುಮಾ ಹೇಗಿದೆ ಗೊತ್ತಾ?...

ಶಕ್ತಿಶಾಲಿ ಬೈಕ್ ಮತ್ತು ಸ್ಕೂಟರ್‌ಗಳ ಉತ್ಪಾದಕ ಕಂಪನಿ ಯಮಹಾ, ಹಲವು ವಿಶಿಷ್ಟ ಮಾದರಿಯ ದ್ವಿಚಕ್ರವಾಹನಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಸಾಮಾನ್ಯವಾಗಿ ಆಫ್‌ ರೋಡ್ ಬೈಕ್‌ಗಳಿರುವುದು ಸಾಮಾನ್ಯ. ಯಮಹಾ ಈ ಸೆಗ್ಮೆಂಟ್‌ನಲ್ಲಿ ಆಫ್‌ ರೋಡ್ ಸ್ಕೂಟರ್ ಝುಮಾ 125 ಸಿಸಿ ಸ್ಕೂಟರ್ ಪರಿಚಯಿಸುತ್ತಿದೆ.

ಮಿಶ್ರ ಕೋವಿಡ್ ಲಸಿಕೆ ನೀಡುವ ಕುರಿತು ಸರ್ಕಾರ ಚಿಂತನೆ; ಅಧ್ಯಯನ ವರದಿ ಆಧರಿಸಿ ನಿರ್ಧಾರ!...

 ಕೊರೋನಾ ವೈರಸ್ ವಿರುದ್ಧದ ಹೋರಾಟ ಗೆಲ್ಲಲು ಭಾರತ ಸರ್ಕಾರ ಎಲ್ಲಾ ದಾರಿಗಳನ್ನು ಬಳಸಿಕೊಳ್ಳುತ್ತಿದೆ. ಸದ್ಯ ಕೊರೋನಾ ಲಸಿಕೆ ಅಭಾವದಿಂದ ಮೊದಲ ಡೋಸ್ ಪಡೆದವರಿಗೆ 2ನೇ ಡೋಸ್ ಸಿಗುತ್ತಿಲ್ಲ. ಈ ಕೊರತೆ ನೀಗಿಸಲು ಇದೀಗ ಮಿಶ್ರ ಲಸಿಕೆ ನೀಡುವಿಕೆ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ.

ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್‌...

ಕೊರೋನಾ ನಿಯಂತ್ರಿಸುವ ಹಿನ್ನೆಲೆಯಲ್ಲಿ ಹೇರಿರುವ ಸೆಮಿ ಲಾಕ್‌ಡೌನ್‌ ಅಷ್ಟೊಂದು ಪರಿಣಾಮಕಾರಿಯಾಗದ ಹಿನ್ನೆಲೆಯಲ್ಲಿ 10 ಜಿಲ್ಲೆಗಳಲ್ಲಿ ಬಿಗಿ ಲಾಕ್‌ಡೌನ್‌ ಘೋಷಿಸಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!
ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!