
ನವದೆಹಲಿ(ಮೇ 21) ಕೊರೋನಾ ಸಂದರ್ಭದ ಕಾಂಗ್ರೆಸ್ ಟೂಲ್ ಕಿಟ್ ಮತ್ತು ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಟ್ವೀಟ್ ಬಹುದೊಡ್ಡ ಚರ್ಚೆಯ ವಿಷಯವಾಗಿದೆ. ಮ್ಯಾನುಪಿಲೇಟೇಡ್ ಮೀಡಿಯಾ ಈ ಕೆಲಸ ಮಾಡಿದೆ ಎಂದು ಟ್ವೀಟರ್ ಹೇಳಿದೆ.
ಟ್ವೀಟ್ ಜತೆ ಸಂಬೀತ್ ಅಳವಡಿಕೆ ಮಾಡಿದ್ದ ಪೋಟೋ, ವಿಡಿಯೋ ಮತ್ತು ಇಮೇಜ್ ಗಳನ್ನು ಕೆಲವರು ಗೊತ್ತಾಗದಂತೆ ಬದಲಾಯಿಸಿದ್ದಾರೆ ಎಂದು ಟ್ವಿಟರ್ ಹೇಳಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಸಚಿವೆ ಸ್ಮೃತಿ ಇರಾನಿ, ವಕ್ತಾರ ಸಂಬೀತ್ ಪಾತ್ರಾ ವಾರ ಟ್ವಿಟರ್ ಖಾತೆಯನ್ನು ಅಮಾನತು ಮಾಡಲು ಕಾಂಗ್ರೆಸ್ ಒತ್ತಾಯ ಮಾಡಿತ್ತು.
ಟೂಲ್ ಕಿಟ್ ಗೆ ಸಂಬಂಧಿಸಿ ಬಿಜೆಪಿ ಮತ್ತು ಬಿಜೆಪಿ ನಾಯಕರು ಹಂಚಿಕೊಂಡಿದ್ದ ಮಾಹಿತಿಗಳು ನಕಲಿ ಎಂದು ಆರೋಪಿಸಿದ್ದ ಕಾಂಗ್ರೆಸ್ ದೂರು ನೀಡಿತ್ತು. ಛತ್ತೀಸ್ ಘಡ ಪೊಲೀಸರು ಎಫ್ ಐ ಆರ್ ಸಹ ದಾಖಲಿಸಿಕೊಂಡಿದ್ದರು.
ಚೌಕಿದಾರ್ ಚೋರ್ ಹೇ.. ಎಂದಿದ್ದರಾ ಸಂಬೀತ್?
ಕಾಂಗ್ರೆಸ್ ಟೂಲ್ ಕಿಟ್ ಗೆ ಸಂಬಂಧಿಸಿ ಸಂಬೀತ್ ಸರಣಿ ಟ್ವೀಟ್ ಮಾಡಿದ್ದರು. ಕಾಂಗ್ರೆಸ್ ಇದನ್ನೇ ದೊಡ್ಡ ಪ್ರಚಾರದ ವಸ್ತು ಮಾಡಿಕೊಂಡಿದೆ ಎಂದಿದ್ದರು. ಆದರೆ ಸಂಬೀತ್ ಟ್ವೀಟ್ ನ್ನು ಕೆಲ ಶಕ್ತಿಗಳು ತಮಗೆ ಬೇಕಾದಂತೆ ಬದಲಸಿಕೊಂಡಿದ್ದು ಗೊಂದಲಕ್ಕೆ ಕಾರಣವಾಗಿದೆ ಎಂದು ಟ್ವಿಟರ್ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ