ಬೆಂಗಳೂರಲ್ಲಿ ಲಾಕ್‌ಡೌನ್ ಇಲ್ಲ, ಪೆಟ್ರೋಲ್-ಡೀಸೆಲ್ ಕೈಗೆಟುಕುತ್ತಿಲ್ಲ; ಜೂ.26ರ ಟಾಪ್ 10 ಸುದ್ದಿ!

By Suvarna News  |  First Published Jun 26, 2020, 5:04 PM IST

ಕರ್ನಾಟಕದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದೆ. ಬೆಂಗಳೂರಿನ ಪರಿಸ್ಥಿತಿ ಕೈಮೀರುತ್ತಿದೆ. ಆದರೆ ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ಮಾಡುವುದಿಲ್ಲ ಎಂದು ಸರ್ಕಾರ ಹೇಳಿದೆ. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದ್ದು, 100ರತ್ತ ದಾಪುಗಾಲಿಟ್ಟಿದೆ.  ಪುಲ್ವಾಮದಲ್ಲಿ ಉಗ್ರರ ಸದ್ದಗಡಿಸಿ ದುರಂತ ತಪ್ಪಿಸಿದ ಭಾರತೀಯ ಸೇನೆ. ಟಿಕ್‌ಟಾಕ್ ಸ್ಟಾರ್ ಸಿಯಾ ಕಕ್ಕರ್ ಆತ್ಮಹತ್ಯೆ, ಲಾಡೆನ್‌ಗೆ ಹುತಾತ್ಮ ಪಟ್ಟ ಸೇರಿದಂತೆ ಜೂ.26ರ ಟಾಪ್ 10 ಸುದ್ದಿ ಇಲ್ಲಿವೆ.


ಕೊರೋನಾ ರಣಕೇಕೆ: ಬೆಂಗಳೂರಲ್ಲಿ ಲಾಕ್‌ಡೌನ್‌ ಮಾಡೋ ಪ್ರಶ್ನೆಯೇ ಇಲ್ಲ

Tap to resize

Latest Videos

ಕೊರೋನಾ ಪ್ರಕರಣಗಳು ಹೆಚ್ಚಿರುವ ಪ್ರದೇಶಗಳಲ್ಲಿ ಸೀಲ್‌ಡೌನ್‌: ಸಚಿವ ಆರ್. ಅಶೋಕ್‌| ಲಾಕ್‌ಡೌನ್‌ ಮಾಡುವ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಸೂಚನೆಗಳು ಬಂದಿಲ್ಲ|

'ರೇಪ್ ವೇಳೆ ನಿದ್ರಿಸುತ್ತಿದ್ದೆ' ಭಾರತೀಯ ಮಹಿಳೆ ಪ್ರತಿಕ್ರಿಯೆ ಇದಲ್ಲವೆಂದ ಕೋರ್ಟ್!.

ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ಪ್ರಕರಣ ಅತ್ಯಾಚಾರ/ ಆರೋಪಿ ರಾಕೇಶ್ ಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು/ ತಮ್ಮ ಕಚೇರಿಯಲ್ಲಿ ರಾತ್ರಿ 11 ಗಂಟೆಗೆ ಅತ್ಯಾಚಾರವೆಂದು ಮಹಿಳೆ ದೂರು/  ನಂತರ ರಾಜಿಯಾಗುವುದಾದರೆ ಕೇಸ್ ಹಿಂಪಡೆಯುವುದಾಗಿ ಪತ್ರ / ಅತ್ಯಾಚಾರದ ವೇಳೆ ನಿದ್ರೆ ಮಾಡುತ್ತಿದ್ದೆ

ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತಷ್ಟು ಏರಿಕೆ..!

ಒಂದು ಲೀಟರ್‌ ಡೀಸೆಲ್ ಬೆಲೆ ಇದೇ ಮೊದಲ ಬಾರಿಗೆ 80 ರುಪಾಯಿ ಗಡಿ ದಾಟಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯನ್ನು ಗಮನಿಸಿದರೆ ಇನ್ನು ಕೆಲವೇ ದಿನಗಳಲ್ಲಿ ನೂರು ರುಪಾಯಿಗೆ ತಲುಪಿದರೂ ಅಚ್ಚರಿಯಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಒಸಮಾ ಬಿನ್‌ ಲಾಡೆನ್‌ಗೆ ಹುತಾತ್ಮ ಪಟ್ಟ ಕೊಟ್ಟ ಪಾಕ್‌ ಪ್ರಧಾನಿ!

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಂಸತ್ತಿನ ಬಜೆಟ್‌ ಅಧಿವೇಶನವನ್ನುದ್ದೇಶಿಸಿ ಮಾತನಾಡುವ ವೇಳೆ ಅಲ್‌ಖೈದಾ ಉಗ್ರ ಸಂಘಟನೆ ಮುಖ್ಯಸ್ಥನಾಗಿದ್ದ ಒಸಮಾ ಬಿನ್‌ ಲಾಡೆನ್‌ನನ್ನು ಹುತಾತ್ಮ ಎಂದು ಸಂಬೋಧಿಸಿದ್ದಾರೆ. 

ಜೆಂಡರ್‌ ಸ್ವ್ಯಾಪ್‌ನಲ್ಲಿ ಹೆಣ್ಣಾದ ಧೋನಿ, ರೈನಾ..!_

ಐಪಿಎಲ್‌ನ ತಂಡವಾದ ಚೆನ್ನೈ ಸೂಪರ್‌ ಕಿಂಗ್ಸ್‌ನ ಆಟಗಾರರ ‘ಜೆಂಡರ್‌ ಸ್ವ್ಯಾಪ್‌ ಫಿಲ್ಟರ್‌’ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಪುರುಷ ಆಟಗಾರರು ಮಹಿಳೆಯರಾದರೆ ಹೇಗೆ ಕಾಣುತ್ತಾರೆ ಎನ್ನುವುದನ್ನು ತೋರಿಸುವ ಆ್ಯಪ್‌ ಫಿಲ್ಟರ್‌ ಇದಾಗಿದೆ. 

ಟಿಕ್‌ಟಾಕ್‌ ಸ್ಟಾರ್, ಡ್ಯಾನ್ಸರ್ ಸಿಯಾ ಕಕ್ಕರ್ ಆತ್ಮಹತ್ಯೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್, ಕ್ರೈಂ ಪೆಟ್ರೋಲ್ ನಟಿ ಪ್ರೇಕ್ಷಾ ಮೆಹ್ತಾ ಸಾವಿನ ನಂತರ ಇದೀಗ ಮನೋರಂಜನಾ ಲೋಕದ 16ರ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಕೇನ್ಸ್ ಫಿಲ್ಮಂ ಫೆಸ್ಟಿವಲ್‌‌ಗೆ ಫ್ಲಾಟ್‌ ಚಪ್ಪಲಿ ಧರಿಸಿ ಗೇಲಿಗೆ ಗುರಿಯಾಗಿದ್ರು ಐಶ್ವರ್ಯಾ

 ಬಾಲಿವುಡ್‌ ನಟಿ ಕಮ್‌ ಮಾಜಿ ಭುವನ ಸುಂದರಿ ಐಶ್ವರ್ಯಾ ರೈ ಕಳೆದ 18 ವರ್ಷಗಳಿಂದಲೂ ಕೇನ್ಸ್‌ನಲ್ಲಿ ಇಂಟರ್‌ನ್ಯಾಷನಲ್‌ ಫಿಲ್ಮ್ ಫೆಸ್ಟಿವಲ್‌ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸುತ್ತಿದ್ದಾರೆ. ಒಮ್ಮೆ, ಬಚ್ಚನ್ ಫ್ಯಾಮಿಲಿಯ ಸೊಸೆ ಫ್ಲಾಟ್‌ ಚಪ್ಪಲಿಗಳನ್ನು ಧರಿಸಿ ಕೇನ್ಸ್  ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ನೆಡೆಯಬೇಕಾಯಿತು. ಅದಕ್ಕೆ ಸಿಕ್ಕಾಪಟ್ಟೆ ಟೀಕೆಗಳೂ ಕೇಳಿ ಬಂದಿದ್ದವು. 

ಕೆಪಿಎಸ್‌ಸಿಯಲ್ಲಿ ಉದ್ಯೋಗಾವಕಾಶ: ಅರ್ಜಿ ಹಾಕಿ

ಕರ್ನಾಟಕ ಲೋಕಸೇವಾ ಆಯೋಗ ಉಳಿಕೆ ಮೂಲ ವೃಂದ ಮತ್ತು ಹೈದರಾಬಾದ್ -ಕರ್ನಾಟಕ ವೃಂದದಲ್ಲಿನ ಗ್ರೂಪ್ "ಎ" ತಾಂತ್ರಿಕ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

ಪುಲ್ವಾಮದಲ್ಲಿ ಮೂವರು ಉಗ್ರರ ಹತ್ಯೆ, ತಪ್ಪಿತು ಮತ್ತೊಂದು ದುರಂತ!...

ಕೊರೋನಾ ವೈರಸ್ ಹೋರಾಟ, ಲಡಾಖ್ ಗಡಿಯಲ್ಲಿ ಚೀನಿ ಸೈನಿಕರ ಜೊತೆ ತಿಕ್ಕಾಟದ ನಡುವೆ ಭಾರತೀಯ ಸೇನೆ ಮತ್ತೊಂದು ಭಾರಿ ವಿಧ್ವಂಸಕ ಕೃತ್ಯಕ್ಕೆ ಮುಂದಾಗಿದ್ದ ಉಗ್ರರಿಗೆ ಭಾರತೀಯ ಸೇನೆ ನರಕ ದರ್ಶನ ಮಾಡಿದೆ. ಈ ಮೂಲಕ ಬಹುದೊಡ್ಡ ದುರಂತವೊಂದು ತಪ್ಪಿದೆ.

ಕೊರೋನಾ ವೈರಸ್‌ಗೆ ಔಷಧಿ ಇಲ್ಲ, ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆಗೆ ಬಿಡಿಗಾಸು ಮನ್ನಣೆ ಇಲ್ಲ!...

ಕೊರೋನಾ ವೈರಸ್ ವಕ್ಕರಿಸಿ ವಿಶ್ವವೇ ಅಪಾಯಕ್ಕೆ ಸಿಲುಕಿದೆ. ಜಗತ್ತಿಗೆ ಮೊದಲೇ ಎಚ್ಚರಿಸಬೇಕಿದ್ದ ವಿಶ್ವ ಆರೋಗ್ಯ ಸಂಸ್ಥೆ ಮೆಲ್ಲನೆ ಪಿಸುಗುಟ್ಟು ಸುಮ್ಮನಾಗಿತ್ತು. ಮಾರ್ಗಸೂಚಿ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡಿತು. ಜಾಗೃತಿ ಮೂಡಿಸುವ ಯಾವ ಕಾರ್ಯಕ್ರಮವನ್ನು ವಿಶ್ವ ಆರೋಗ್ಯ ಸಂಸ್ಥೆ ಹಮ್ಮಿಕೊಂಡಿಲ್ಲ. ಇದೀಗ ಕೊರೋನಾ ಮೀತಿ ಮೀರಿದಾಗ ನಮ್ಮಲ್ಲಿ ಔಷಧಿ ಇಲ್ಲ ಎಂಬ ಹೇಳಿಕೆ ನೀಡಿದೆ.
 

click me!