ಬೆಂಗಳೂರಿಗೆ ಹೊಸ ಮೇಯರ್, ಚಿನ್ನ ಖರೀದಿದಾರರಿಗೆ ಬಂಪರ್; ಇಲ್ಲಿವೆ ಅ.1ರ ಟಾಪ್ 10 ಸುದ್ದಿ!

By Web Desk  |  First Published Oct 1, 2019, 5:01 PM IST

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ನೂತನ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿ ಗೌತಮ್ ಕುಮಾರ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್‌ಗೆ ಮತ್ತೆ ಹಿನ್ನಡೆಯಾಗಿದೆ. ಇಡಿ ಕೋರ್ಟ್ ಡಿಕೆ ಶಿವಕುಮಾರ್ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ. ಪ್ರಧಾನಿ ಮೋದಿ ಪರ ಬ್ಯಾಟ್ ಬಿಸಿದ ವಿದೇಶಾಂಗ ಸಚಿವ ಎಸ್.ಜೈಶಂಕರ್, ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಟ್ರೋಲ್, ನಟಿ ಜೊತೆ ನಗ್ನವಾಗಿ ನಿಂತ ನಿರ್ದೇಶಕನ ಪುತ್ರ ಸೇರಿದಂತೆ ಅ.1 ರಂದ ಸದ್ದು ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ.


1) ಗೌತಮ್ ಕುಮಾರ್ ಬೆಂಗಳೂರಿನ ನೂತನ ಮೇಯರ್! 

Tap to resize

Latest Videos

undefined

ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಯಂತೆ ತೀವ್ರ ಕುತೂಹಲ ಮೂಡಿಸಿದ್ದ ಬಿಬಿಎಂಪಿ ಚುನಾವಣೆ ನಡೆದಿದ್ದು, ಬೆಂಗಳೂರಿನ ನೂತನ ಮೇಯರ್ ಆಗಿ ಗೌತಮ್ ಕುಮಾರ್ ಆಯ್ಕೆಯಾಗಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಯೊಬ್ಬರು ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಬೆಂಗಳೂರಿನ ಮೇಯರ್ ಗದ್ದುಗೆ ಏರಲು ಯಶಸ್ವಿಯಾಗಿದೆ.

2) ಡಿಕೆ ಶಿವಕುಮಾರ್‌ಗೆ ಮತ್ತೆ ಆಘಾತ: ನ್ಯಾಯಾಂಗ ಬಂಧನ ವಿಸ್ತರಣೆ...

ಕರ್ನಾಟಕ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್‌ಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಕೋರ್ಟ್ ಆದೇಶ ಹೊರಡಿಸಿದೆ.  ಅವರಿಗೆ ವಿಧಿಸಿದ್ದ ನ್ಯಾಯಾಂಗ ಬಂಧನದ ಅವಧಿಯನ್ನು ಜಾರಿ ನಿರ್ದೇಶನಾಲಯ(ಇ.ಡಿ.)ದ ವಿಶೇಷ ಕೋರ್ಟ್​ ವಿಸ್ತರಿಸಿದೆ. ಅಲ್ಲದೆ ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ನಿಗದಿಪಡಿಸಿದೆ. ಹೀಗಾಗಿ ಡಿಕೆಶಿ ಅಕ್ಟೋಬರ್ 15ರವರೆಗೆ ತಿಹಾರ್​ ಜೈಲಿನಲ್ಲೇ ಇರಬೇಕಾಗಿದೆ.


3) ಮೋದಿ ಅಂದಿದ್ರಂತೆ ಟ್ರಂಪ್ ಸರ್ಕಾರ್: ಹಾಗೇನಿಲ್ವಲ್ಲಾ ಅಂದ್ರು ಜೈಶಂಕರ್!

2020ರಲ್ಲಿ ಅಮೆರಿಕದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರ ಪ್ರಧಾನಿ ಮೋದಿ ಚುನಾವಣಾ ಪ್ರಚಾರ ಮಾಡಿದ್ದಾರೆ ಎಂಬ ಆರೋಪವನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅಲ್ಲಗಳೆದಿದ್ದಾರೆ.   


4) ಅರ್ಧ ಗಂಟೇಲಿ ಅಮೆರಿಕ ಉಡೀಸ್: DF-41 ಮಿಸೈಲ್ ಲಾಂಚ್ ಮಾಡಿದ ಚೀನಾ!...

 


ಚೀನಿ ಕಮ್ಯೂನಿಸ್ಟ್ ಸರ್ಕಾರ ತನ್ನ 70ನೇ ವರ್ಷಾಚರಣೆ ಆಚರಿಸುತ್ತಿದ್ದು, ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನೇತೃತ್ವದಲ್ಲಿ ರಾಷ್ಟ್ರೀಯ ದಿನಾಚರಣೆ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಇನ್ನು ರಾಷ್ಟ್ರೀಯ ದಿನಾಚರಣೆ ನಿಮಿತ್ತ ಚೀನಾ ಸಶಸ್ತ್ರ ಪಡೆಗಳು ತಮ್ಮ ಶಕ್ತಿ ಪ್ರದರ್ಶನ ನಡೆಸಿದವು. ಈ ವೇಳೆ ಕೇವಲ 30  ನಿಮಿಷದಲ್ಲಿ  ಅಮೆರಿಕ ತಲುಪಬಲ್ಲ DF-41 ಮಿಸೈಲ್ ನ್ನು ಪ್ರದರ್ಶಿಸಲಾಯಿತು.

5) ನವರಾತ್ರಿಗೆ ಕೋಚ್ ಶಾಸ್ತ್ರಿ ವಿಶ್; ಮತ್ತೆ ಕಾಲೆಳೆದ ಫ್ಯಾನ್ಸ್!

ಹೆಜ್ಜೆ ಹೆಜ್ಜೆಗೂ ಟ್ರೋಲ್ ಆಗುತ್ತಿರುವವರ ಪೈಕಿ  ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಗೆ ಮೊದಲ ಸ್ಥಾನ. ಪಂದ್ಯ ಗೆದ್ರೂ ಸೋತರೂ ಶಾಸ್ತ್ರಿ ಟ್ರೋಲ್ ಆಗ್ತಾರೆ.  ಇದೀಗ ನವರಾತ್ರಿ ಹಬ್ಬಕ್ಕೆ ಶುಭಕೋರಿದ ರವಿ ಶಾಸ್ತ್ರಿಯನ್ನು ಮತ್ತೆ ಕಾಲೆಳೆದಿದ್ದಾರೆ. ಈ ಮೂಲಕ ಶಾಸ್ತ್ರಿಗೆ ಹಲವು ಸೂಚನೆಯನ್ನು ನೀಡಲಾಗಿದೆ.

6) ಅಯ್ಯೋ ಇದೇನಿದು! ನಟಿ ಜೊತೆ ನಗ್ನವಾಗಿ ನಿಂತ ಖ್ಯಾತ ನಿರ್ದೇಶಕನ ಮಗ!


ಮೆಹಬೂಬ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಪುತ್ರ ಆಕಾಶ್ ಪುರಿ ‘ರೊಮ್ಯಾಂಟಿಕ್’ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದು ಫಸ್ಟ್ ಲುಕ್ ರಿಲೀಸ್ ಆಗಿದೆ. ಟೈಟಲ್ಲೇ ಹೇಳುವಂತೆ ಲುಕ್ ಕೂಡಾ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿಯೇ ಇದೆ. 

7) ಕಿಚ್ಚ ಸುದೀಪ್ ಮಾಡಿರೋ ದೋಸೆ ತಿನ್ನೋಣ ಬನ್ನಿ!

ಮೆಗಾಸ್ಟಾರ್ ಚಿರಂಜೀವಿ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಳ್ಳುತ್ತಿರುವುದು ಗೊತ್ತೇ ಇದೆ. ಚಿತ್ರದ ಪೋಸ್ಟರ್, ಟ್ರೇಲರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಕ್ಟೋಬರ್ 2 ರಂದು ಸೈರಾ ತೆರೆಗೆ ಬರಲಿದೆ. ಸೈರಾ ಸೆಟ್ ನಲ್ಲಿ ಫನ್ ಟೈಮಲ್ಲಿ ಕಿಚ್ಚ ಸುದೀಪ್ ಆಮ್ಲೆಟ್ ದೋಸೆ ಹೊಯ್ದಿದ್ದಾರೆ.

8) ಸಿದ್ದರಾಮಯ್ಯರಿಂದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ : ಈಶ್ವರಪ್ಪ!

 ನನ್ನ ಹಾಗೂ ಬಿ.ಎಸ್. ಯಡಿಯೂರಪ್ಪ ರನ್ನು ಪರಸ್ಪರ ದೂರ ಮಾಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಈ ಸಂಬಂಧ ಪ್ರಕಟವಾದ ವರದಿಗಳೆಲ್ಲವೂ ಸತ್ಯಕ್ಕೆ ದೂರ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.

9) ಹೊಸ ತಿಂಗಳ ಭರ್ಜರಿ ಶುಭಾರಂಭ: ಇಳಿದ ಚಿನ್ನ, ಬೆಳ್ಳಿ ಬೆಲೆ!

ನಿರಂತರವಾಗಿ ಏರಿಕೆ ಕಂಡಿದ್ದ ಚಿನ್ನದ ದರದಲ್ಲಿ ಹೊಸ ತಿಂಗಳ ಆರಂಭದ ದಿನದಲ್ಲೇ ಇಳಿಕೆ ಕಂಡು ಬಂದಿದ್ದು, ಮಲ್ಟಿ ಕಮೋಡಿಟಿ ಎಕ್ಸಚೇಂಜ್ ನಲ್ಲಿ ಚಿನ್ನದ ಬೆಲೆಯಲ್ಲಿ ಶೇ.0.1ರಷ್ಟು ಕುಸಿತ ಕಂಡಿದೆ.

10) ಮಾರುತಿ ಸುಜುಕಿ s presso ಕಾರು ಲಾಂಚ್; ಬೆಲೆ ಕೇವಲ 3.69 ಲಕ್ಷ!...

ಬಹುನಿರೀಕ್ಷಿತ ಮಾರುತಿ ಸುಜುಕಿ ಸಂಸ್ಥೆಯ ಸಣ್ಣ SUV ಕಾರು ಬಿಡುಗಡೆಯಾಗಿದೆ. s presso ಮಿನಿ SUV ಕಾರು ಆಕರ್ಷಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನ, ಸುರಕ್ಷತಾ ಸೌಲಭ್ಯಗಳನ್ನೊಳಗೊಂಡಿದೆ. ವಿಶೇಷ ಅಂದರೆ ನೂತನ s presso ಕಾರಿನ ಬೆಲೆ 3.69 ಲಕ್ಷ ರೂಪಾಯಿಯಿಂದ ಆರಂಭವಾಗುತ್ತಿದೆ.

click me!