
ಬಿಜಿಂಗ್(ಅ.01): ಚೀನಿ ಕಮ್ಯೂನಿಸ್ಟ್ ಸರ್ಕಾರ ತನ್ನ 70ನೇ ವರ್ಷಾಚರಣೆ ಆಚರಿಸುತ್ತಿದ್ದು, ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನೇತೃತ್ವದಲ್ಲಿ ರಾಷ್ಟ್ರೀಯ ದಿನಾಚರಣೆ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.
ಇನ್ನು ರಾಷ್ಟ್ರೀಯ ದಿನಾಚರಣೆ ನಿಮಿತ್ತ ಚೀನಾ ಸಶಸ್ತ್ರ ಪಡೆಗಳು ತಮ್ಮ ಶಕ್ತಿ ಪ್ರದರ್ಶನ ನಡೆಸಿದವು. ಈ ವೇಳೆ ಕೇವಲ 30 ನಿಮಿಷದಲ್ಲಿ ಅಮೆರಿಕ ತಲುಪಬಲ್ಲ DF-41 ಮಿಸೈಲ್ ನ್ನು ಪ್ರದರ್ಶಿಸಲಾಯಿತು.
ಒಟ್ಟು 9,320 ಮೈಲು (15,000 ಕಿ.ಮೀ) ವ್ಯಾಪ್ತಿಯ DF-41 ಮಿಸೈಲ್ ಇಡೀ ವಿಶ್ವದಲ್ಲೇ ಅತ್ಯಂತ ಪ್ರಬಲ ಕ್ಷಿಪಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟು 10 ಪರಮಾಣು ಬಾಂಬ್‌ಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ DF-41 ಮಿಸೈಲ್, ಕೇವಲ ಅರ್ಧ ಗಂಟೆಯಲ್ಲಿ ಅಮೆರಿಕದ ಮೇಲೆ ದಾಳಿ ಮಾಡಬಹುದು.
ಈ ವೇಳೆ ಮಾತನಾಡಿದ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಚೀನಾ ಮತ್ತು ಚೀನಿಯರನ್ನು ತಡೆಯುವ ಶಕ್ತಿ ಈ ಜಗತ್ತಿನಲ್ಲಿ ಇಲ್ಲ ಎಂದು ಹೂಂಕರಿಸಿದರು.
ಅಕ್ಟೋಬರ್ 01ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.