ಪೊಲೀಸರು ಬೆಂಗಳೂರು ಗಲಭೆಯ ಕಿಂಗ್ ಪಿನ್ ಬಂಧನಕ್ಕೆ ಪೊಲೀಸರು ಹುಡುಕಾಟ ಆರಂಭಿಸಿದ ಬೆನ್ನಲ್ಲೇ, ಗಲಭೆ ರೂವಾರಿ ಕಾಂಗ್ರೆಸ್ ನಾಯಕನ ಜೊತೆ ಕಾಣಿಸಿಕೊಂಡಿದ್ದಾನೆ. ನೇರ ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ತೆರಿಗೆದಾರಸ್ನೇಹಿ ಆಗಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೂತನ ತೆರಿಗೆ ಸುಧಾರಣಾ ಕ್ರಮಗಳನ್ನು ಪ್ರಕಟಿಸಿದ್ದಾರೆ. ರಷ್ಯಾ ಬಿಡುಮಾಡಿದ ಕೊರೋನಾ ಲಸಿಕೆ ಬಳಸದಂತೆ ಭಾರತದ ಸಂಶೋಧನಾ ಸಂಸ್ಥೆ ಸೂಚನೆ ನೀಡಿದೆ. ಕೊರೋನಾ ಟೆಸ್ಟ್ ಮಾಡಿಸಿದ ಧೋನಿ, ಜಾಕಿ & ಅನುಷ್ಕಾ ವಾಟರ್ ಬೇಬಿ ಅವತಾರ ಸೇರಿದಂತೆ ಆಗಸ್ಟ್ 13ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.
ಕಾಂಗ್ರೆಸ್ ನಾಯಕನ ಜತೆ ಓಡಾಡುತ್ತಿರುವ ಬೆಂಗ್ಳೂರು ಗಲಭೆ ಕಿಂಗ್ ಪಿನ್....!...
ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಕಿಂಗ್ ಪಿನ್ ಕಾಂಗ್ರೆಸ್ ನಾಯಕನ ಜೊತೆ ಸುತ್ತಾಡುತ್ತಿದ್ರೆ, ಮತ್ತೊಂದೆಡೆ ಕಿಂಗ್ ಪಿನ್ ನನ್ನು ಹಿಡಿಯಲು ಪೊಲೀಸರು ಅಲೆಯುತ್ತಿದ್ದಾರೆ. ಹಾಗಾದ್ರೆ ಯಾರು ಆ ಕಿಂಗ್ ಪಿನ್..? ಯಾರ ಜೊತೆ ಸುತ್ತಾಡುತ್ತಿದ್ದಾ..? ಎನ್ನುವ ಸಂಪೂರ್ಣ ಮಾಹಿತಿ ವಿಡಿಯೋನಲ್ಲಿ ನೋಡಿ.
ಪ್ರಾಮಾಣಿಕರಿಗೆ ಮೋದಿ ಗೌರವ: 'ತೆರಿಗೆದಾರ ಚಾರ್ಟರ್'ನಲ್ಲಿ ಮಹತ್ವದ ಬದಲಾವಣೆ!...
ಪ್ರಾಮಾಣಿಕ ತೆರಿಗೆದಾರರನ್ನು ಗೌರವಿಸಲು ಹಾಗೂ ನೇರ ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ತೆರಿಗೆದಾರಸ್ನೇಹಿ ಆಗಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೂತನ ತೆರಿಗೆ ಸುಧಾರಣಾ ಕ್ರಮಗಳನ್ನು ಪ್ರಕಟಿಸಿದ್ದಾರೆ.
'ರಾಮಮಂದಿರ ಸಂಭ್ರಮಿಸಿದ್ದಕ್ಕೆ ನನ್ನ ಮಗನ ಮೇಲೆ ದಾಳಿ'...
ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪ ಎದುರಿಸುತ್ತಿರುವ ನವೀನ್ ನನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ. ನನ್ನ ಮಗ ಅಮಾಯಕ ಎಂದು ನವೀನ್ ತಾಯಿ ಕಣ್ಣೀರು ಹಾಕಿದ್ದಾರೆ.
ಕೊರೋನಾಗೆ ರಷ್ಯಾ ಲಸಿಕೆ: ಬಯಲಾಯ್ತು ಶಾಕಿಂಗ್ ಮಾಹಿತಿ!...
ರಷ್ಯಾದಲ್ಲಿ ಬಿಡುಗಡೆಯಾದ ಜಗತ್ತಿನ ಮೊದಲ ಕೊರೋನಾ ಲಸಿಕೆ ‘ಸ್ಪುಟ್ನಿಕ್-5’ ಸುರಕ್ಷಿತವಲ್ಲ. ದಕ್ಷತೆ ಹಾಗೂ ಸುರಕ್ಷತೆಯ ಬಗ್ಗೆ ನಡೆಸಿದ ಪ್ರಯೋಗದ ಅಂಕಿ-ಅಂಶಗಳು ಇಲ್ಲದೆ ಅದನ್ನು ಬಳಸಬಾರದು ಎಂದು ಭಾರತದ ಪ್ರಸಿದ್ಧ ಸಂಶೋಧನಾ ಸಂಸ್ಥೆ ಸೆಂಟರ್ ಫಾರ್ ಸೆಲ್ಯುಲರ್ ಅಂಡ್ ಮಾಲೆಕ್ಯುಲರ್ ಬಯಾಲಜಿ (ಸಿಸಿಎಂಬಿ) ಹೇಳಿದೆ.
ಕೊರೋನಾ ಟೆಸ್ಟ್: ಸ್ಯಾಂಪಲ್ ನೀಡಿದ ಎಂ ಎಸ್ ಧೋನಿ, ಸದ್ಯದಲ್ಲೇ ಫಲಿತಾಂಶ ಪ್ರಕಟ...
ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಸಹ ಆಟಗಾರ ಮೋನು ಕುಮಾರ್ ಕೊರೋನಾ ಟೆಸ್ಟ್‌ಗೆ ಒಳಗಾಗಿದ್ದಾರೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರಬೀಳಲಿದೆ.
ಜಾಕಿ & ಅನುಷ್ಕಾ ವಾಟರ್ ಬೇಬಿ ಅವತಾರ ಇದು..! ಇಲ್ನೋಡಿ ಫೋಟೋಸ್
ಬಾಲಿವುಡ್ ನಟಿಯರಾದ ಅನುಷ್ಕಾ ಶರ್ಮಾ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಜಲಕನ್ಯೆಯರಾಗಿ ಮಿಂಚಿದ್ದಾರೆ. ಸ್ವಿಮ್ಮಿಂಗ್ ಮೂಡ್‌ನಲ್ಲಿ ಹೀಗಿರ್ತಾರೆ ಈ ಕ್ಯೂಟ್ ನಟಿಯರು
SBI ಬ್ಯಾಂಕ್ ಗ್ರಾಹಕರು ನೆಟ್ ಬ್ಯಾಂಕಿಂಗ್ ರಿಜಿಸ್ಟ್ರೇಶನ್ ಮಾಡುವುದು ಹೇಗೆ?...
ಆನ್‌ಲೈನ್ ಬ್ಯಾಂಕಿಂಗ್ ಅಥವಾ ನೆಟ್‌ಬ್ಯಾಂಕಿಂಗ್ ಈಗ ಅತ್ಯವಶ್ಯಕ. ಕೊರೋನಾ ಕಾರಣ ಬ್ಯಾಂಕ್‌ಗೆ ತೆರಳಿ ವ್ಯವಹಾರ ಮುಗಿಸುವುದು ಸುಲಭದ ಮಾತಲ್ಲ. ಹೀಗಾಗಿ ನೆಟ್‌ಬ್ಯಾಂಕಿಂಗ್ ನೋಂದಾವಣಿ ಮಾಡದ SBI ಗ್ರಾಹಕರಿಗೆ ಸುಲಭವಾಗಿ ರಿಜಿಸ್ಟ್ರೇಶನ್ ಮಾಡುವ ವಿಧಾನದ ಕುರಿತ ಮಾಹಿತಿ ಇಲ್ಲಿದೆ.
ಸ್ಪೊರ್ಟಿ ಲುಕ್, 6 ಏರ್‌ಬ್ಯಾಗ್; ಫೋರ್ಡ್ ಫ್ರೀ ಸ್ಟೈಲ್ ಫ್ಲೇರ್ ಎಡಿಶನ್ ಕಾರು ಬಿಡುಗಡೆ!...
ಭಾರತದಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳ ಪೈಕಿ ಫೋರ್ಡ್ ಫ್ರೀ ಸ್ಟೈಲ್ ಹೆಚ್ಚು ಯಶಸ್ವಿಯಾಗಿದೆ. ಇದೀಗ ಈ ಯಶಸ್ಸಿನ ಬೆನ್ನಲ್ಲೇ ಫೋರ್ಡ್ ಇಂಡಿಯಾ ಫ್ರೀ ಸ್ಟೈಲ್ ಫ್ಲೇರ್ ಎಡಿಶನ್ ಕಾರು ಬಿಡುಗಡೆಯಾಗಿದೆ. ಆಕರ್ಷಕ ಲುಕ್, ಅಗ್ರೆಸ್ಸೀವ್ ಹಾಗೂ ಸ್ಪೋರ್ಟ್ಸ್ ಸ್ಟೈಲ್ ಹಾಗೂ ಹೆಚ್ಚು ಸುರಕ್ಷತಾ ಫೀಚರ್ಸ್‌ನೊಂದಿಗೆ ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ವಿವರ ಇಲ್ಲಿದೆ.
ಬೆಂಗಳೂರು ಗಲಭೆ: ಪೊಲೀಸ್ ಫೈರಿಂಗ್‌ನಲ್ಲಿ ಸತ್ತವರ ಅಂತ್ಯಕ್ರಿಯೆಲ್ಲಿ ಜಮೀರ್ ಭಾಗಿ...
ಬೆಂಗಳೂರು ಗಲಭೆ ಗೋಲಿಬಾರ್‌ನಲ್ಲಿ ಮೃತಪಟ್ಟವರ ಅಂತ್ಯ ಕ್ರಿಯೆಯಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಭಾಗಿದ್ದಾರೆ. ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಜಮೀರ್ ಯಾವ ಸಂದೇಶ ಕೊಡ್ತಿದ್ದಾರೆ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಶಾಲೆ ಪ್ರಾರಂಭದ ಸುದ್ದಿಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ ಸುರೇಶ್ ಕುಮಾರ್...
ಸೆಪ್ಟೆಂಬರ್‌ನಿಂದ ಶಾಲೆ ಪ್ರಾರಂಭಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎನ್ನುವ ಸುದ್ದಿ ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.