ಕರ್ನಾಟಕದಲ್ಲಿ HAL-IISc ಕೌಶಲ್ಯ ಅಭಿವೃದ್ಧಿ ಕೇಂದ್ರ ಉದ್ಘಾಟಿಸಿದ ರಾಜನಾಥ್ ಸಿಂಗ್!

Published : Aug 13, 2020, 04:05 PM IST
ಕರ್ನಾಟಕದಲ್ಲಿ HAL-IISc ಕೌಶಲ್ಯ ಅಭಿವೃದ್ಧಿ ಕೇಂದ್ರ ಉದ್ಘಾಟಿಸಿದ ರಾಜನಾಥ್ ಸಿಂಗ್!

ಸಾರಾಂಶ

HAL-IISc ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ್ದಾರೆ. ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ವಿಶಾಲವಾದ ಕ್ಯಾಂಪಸ್‌ನ್ನು ವಿಡಿಯೋ ಕಾನ್ಫೆರೆನ್ಸ್ ಮೂಲಕ ರಾಜನಾಥ್ ಸಿಂಗ್ ಉದ್ಘಾಟಿಸಿದ್ದಾರೆ.   

ಚಿತ್ರದುರ್ಗ(ಆ.13): ಮೇಕ್ ಇನ್ ಇಂಡಿಯಾ ಯೋಜನೆಯಡಿ ಭಾರತ ಶಕ್ತಿಶಾಲಿಯಾಗುತ್ತಿದೆ. ರಕ್ಷಣಾ ಸಾಮಾಗ್ರಿ ಸೇರಿದಂತೆ ಬಹುತೇಕ ವಸ್ತುಗಳು ಇದೀಗ ಭಾರತದಲ್ಲೇ ನಿರ್ಮಾಣ ಮಾಡುವ ವಾತವರಣ ಸೃಷ್ಟಿ ಮಾಡಲಾಗುತ್ತಿದೆ. ಇದೀಗ ಮೇಕ್ ಇನ್ ಇಂಡಿಯಾ ಯೋಜನೆಯಡಿ HAL ಹಾಗೂ IISC ಜಂಟಿಯಾಗಿ ಕೌಶಲ್ಯ ಅಭಿವೃದ್ಧಿ ಕೇಂದ್ರ ತೆರೆದಿದೆ. ಚಿತ್ರದುರ್ಗದ ಚಳ್ಳಕೆರೆಯಲ್ಲಿನ ಬೃಹತ್ ಕ್ಯಾಂಪಸ್‌ನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ್ದಾರೆ.

ರಕ್ಷಣಾ ಉತ್ಪನ್ನಗಳ ಆಮದಿಗೆ ಬ್ರೇಕ್: ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ!...

ವಿಡಿಯೋ ಕಾನ್ಫೆರೆನ್ಸ್ ಮೂಲಕ ರಾಜನಾಥ್ ಸಿಂಗ್, HAL-IISc ಕೌಶಲ್ಯ ಅಭಿವೃದ್ಧಿ ಕೇಂದ್ರ ಉದ್ಘಾಟನೆ ಮಾಡಿದರು. ಈ ವಿಶೇಷ ಕಾರ್ಯಕ್ರಮದಲ್ಲಿ ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್, ರಕ್ಷಣಾ ಕಾರ್ಯದರ್ಶಿ ಡಾ.ಅಜಯ್ ಕುಮಾರ್, HAL ನಿರ್ದೇಶಕ ಆರ್ ಮಾಧವನ್, IISc ನಿರ್ದೇಶಕ ಫ್ರೋ ರಂಗರಾಜನ್ ಸೇರಿದಂತೆ ಪ್ರಮುಖರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

'ಭಾರತದ ಒಂದಿಂಚು ಭೂಮಿಯನ್ನೂ ಸ್ಪರ್ಶಿಸಲು ವಿಶ್ವದ ಯಾವುದೇ ಶಕ್ತಿಗಳಿಂದ ಆಗದು

ಕೌಶಲ್ಯ ಅಭಿವೃದ್ಧಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ರಾಜನಾಥ್ ಸಿಂಗ್, ಜ್ಞಾನವೇ ನಮ್ಮ ಸಂಪತ್ತು. ಹೊಸತನ, ಸೃಜನಶೀಲತೆ, ಹಾಗೂ ಕ್ರಿಯಾತ್ಮಕ ಕೆಲಸಗಳಿಗೆ ಜ್ಞಾನವೇ ಶಕ್ತಿಯಾಗಿದೆ. ದೇಶದ ಪ್ರಮುಖ ಏರೋಸ್ಪೇಸ್ ದೈತ್ಯ HAL ಮತ್ತು ಕ್ಲಾಸ್ ಪ್ರೀಮಿಯರ್ ಅಕಾಡೆಮಿ IISc ಸಹಭಾಗಿತ್ವದಲ್ಲಿ ಇದೀಗ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆಯಾಗಿದ್ದು, ಭಾರತದ ಸರ್ವತೋಮುಖ ಅಭಿವೃದ್ಧಿ ದಿಟ್ಟ ಹೆಜ್ಜೆ ಇಟ್ಟಂತಾಗಿದೆ ಎಂದರು.

ಕೌಶಲ್ಯ ಅಭಿವೃದ್ಧಿ ಕೇಂದ್ರ ಮೇಕ್ ಇನ್ ಇಂಡಿಯಾ ಅರ್ಥವನ್ನು ವಿಸ್ತರಿಸಲಿದೆ. ಇಲ್ಲಿ ಸ್ಥಳೀಯ ಸಮುದಾಯದಿಂದ ಹಿಡಿದು ಎಂಜೀನಿಯರ್ ವರೆಗಿನ ಕೌಶಲ್ಯಗಳು ಪ್ರಮುಖ್ಯತೆಯನ್ನು ಪಡೆಯಲಿದೆ ಎಂದು HAL ನಿರ್ದೇಶಕ ಆರ್ ಮಾಧವನ್ ಹೇಳಿದರು.

ನೂತನ ಕೌಶಲ್ಯ ಅಭಿವೃದ್ಧಿ ಕೇಂದ್ರ ಭಾರತದಲ್ಲಿನ ಪ್ರತಿಭೆಗೆ ವೇದಿಕೆ ಒದಗಿಸಲಿದೆ. ಅವರಲ್ಲಿನ ಕೌಶಲ್ಯಕ್ಕೆ ಪುಷ್ಠಿ ನೀಡಲಿದೆ. ಇದು ಭಾರತದ ಆರ್ಥಿಕತೆ ಹಾಗೂ ಸ್ವಸಾಮರ್ಥ್ಯಕ್ಕೆ ನೆರವಾಗಲಿದೆ. ಈಗಾಗಲೇ HAL ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಇದೀಗ ನೂತನ ಕೇಂದ್ರದ ಮೂಲಕ ಈ ಸೇವೆ ಮತ್ತಷ್ಟು ವಿಸ್ತರಣೆಗೊಳ್ಳಲಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ