ಬಾಬ್ರಿ ಧ್ವಂಸ ಆರೋಪಿಗಳಿಗೆ ಕ್ಲೀನ್ ಚಿಟ್, ಶೂಟಿಂಗ್ ನಡುವೆ ಕಿಚ್ಚನ ಕ್ರಿಕೆಟ್: ಸೆ.30ರ ಟಾಪ್ 10 ಸುದ್ದಿ!

Published : Sep 30, 2020, 05:51 PM ISTUpdated : Sep 30, 2020, 05:54 PM IST
ಬಾಬ್ರಿ ಧ್ವಂಸ ಆರೋಪಿಗಳಿಗೆ ಕ್ಲೀನ್ ಚಿಟ್, ಶೂಟಿಂಗ್ ನಡುವೆ ಕಿಚ್ಚನ ಕ್ರಿಕೆಟ್: ಸೆ.30ರ ಟಾಪ್ 10 ಸುದ್ದಿ!

ಸಾರಾಂಶ

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ತೀರ್ಪು ಪ್ರಕಟಿಸಿರುವ  ಲಕ್ನೋನ ಸಿಬಿಐ ಕೋರ್ಟ್‌  ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಈ ತೀರ್ಪಿಗೆ ಕೆಲ ಪರ ವಿರೋಧಗಳು ಎದ್ದಿವೆ. ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ಇತ್ತ ಸಿಎಂ ಯಡಿಯೂರಪ್ಪ ಸವಾಲನ್ನು ಮಾಡಿ ಸಿಎಂ ಸಿದ್ದರಾಮಯ್ಯ ಸ್ವೀಕರಿಸಿದ್ದಾರೆ. ಫ್ಯಾಂಟಮ್ ಶೂಟಿಂಗ್ ನಡುವೆ ಕ್ರಿಕೆಟ್‌ನಲ್ಲಿ ಬ್ಯುಸಿಯಾದ ಕಿಚ್ಚ ಸುದೀಪ್, ಸೋನು ಸೂದ್‌ಗೆ‌ ವಿಶ್ವಸಂಸ್ಥೆ ಪ್ರಶಸ್ತಿ ಸೇರಿದಂತೆ ಸೆಪ್ಟೆಂಬರ್ 30ರ ಟಾಪ್ 10 ಸುದ್ದಿ.

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ, ಜೋಶಿ ಸೇರಿ ಎಲ್ಲಾ ಆರೋಪಿಗಳು ಖುಲಾಸೆ!...

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ತೀರ್ಪು ಪ್ರಕಟಿಸಿರುವ  ಲಕ್ನೋನ ಸಿಬಿಐ ಕೋರ್ಟ್‌  ಧ್ವಂಸ ಪ್ರಕರಣ ಪೂರ್ವ ನಿಯೋಜಿತ ಕೃತ್ಯವಲ್ಲ, ಕ್ರಿಮಿನಲ್ ಪಿತೂರು ನಡೆದಿಲ್ಲ ಎಂದಿದೆ. ಈ ಮೂಲಕ ಅಡ್ವಾಣಿ, ಜೋಶಿ ಸೇರಿ ಎಲ್ಲಾ ಆರೋಪಿಗಳು ನಿರ್ದೋಷಿಗಳೆಂದು ತೀರ್ಪು ನೀಡಿದೆ

ನ್ಯಾಯಾಂಗಕ್ಕೆ ಇದು ಕಪ್ಪು ಚುಕ್ಕೆ: ಬಾಬ್ರಿ ತೀರ್ಪಿಗೆ ಮಾಜಿ ಸಿಎಂ ಮಗನ ಪ್ರತಿಕ್ರಿಯೆ!...

ಬಾಬ್ರಿ ಧ್ವಂಸ ಪ್ರಕರಣ ಸಂಬಂಧ ಐತಿಹಾಸಿಕ ತೀರ್ಪು ಹೊರ ಬಿದ್ದಿದೆ. ಅಡ್ವಾಣಿ, ಜೋಷಿ ಸೇರಿ ಎಲ್ಲಾ ಆರೋಪಿಗಳು ನಿರ್ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ. ಈ ತೀರ್ಪು ಹೊರಬಿದ್ದ ಬೆನ್ನಲ್ಲೇ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ಈ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ಮಗ, ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಈ ಸಂಬಂಧ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ನ್ಯಾಯಾಂಗಕ್ಕೆ ಕಪ್ಪು ಚುಕ್ಕೆ ಎಂದಿದ್ದಾರೆ.

ಕೃಷಿ ಮಸೂದೆಯಿಂದ ವಿಪಕ್ಷದ ಕಪ್ಪುಹಣ ಮೂಲ ಬಂದ್: ಮೋದಿ ವಾಗ್ದಾಳಿ!...

ಪ್ರತಿಪಕ್ಷಗಳಿಗೆ ದಲ್ಲಾಳಿಗಳು ಉದ್ಧಾರವಾಗುವುದು ಬೇಕಿದೆಯೇ ಹೊರತು ರೈತರು ಉದ್ಧಾರವಾಗುವುದು ಬೇಕಿಲ್ಲ. ಆದ್ದರಿಂದಲೇ ರೈತರ ಬದುಕನ್ನು ಹಸನುಗೊಳಿಸುವ ಕೃಷಿ ಮಸೂದೆಗಳನ್ನು ವಿರೋಧಿಸುತ್ತಿವೆ. ಈ ಮಸೂದೆಯಿಂದಾಗಿ ಪ್ರತಿಪಕ್ಷಗಳಿಗೆ ಕಪ್ಪು ಹಣ ಬರುತ್ತಿದ್ದ ಇನ್ನೊಂದು ಮೂಲವೂ ಮುಚ್ಚಿಹೋಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ  ವಾಗ್ದಾಳಿ ನಡೆಸಿದ್ದಾರೆ.

ಮಾನವೀಯ ಕಾರ್ಯಗಳಿಗೆ ಗೌರವ: ಸೋನು ಸೂದ್‌ಗೆ‌ ವಿಶ್ವಸಂಸ್ಥೆ ಪ್ರಶಸ್ತಿ..!...

ನಟ ಸೋನು ಸೂದ್ ಅವರ ಮಾನವೀಯ ಕಾರ್ಯಗಳನ್ನು ಗುರುತಿಸಿ ವಿಶ್ವಸಂಸ್ಥೆ ಎಸ್‌ಡಿಜಿ ವಿಶೇಷ ಮಾನವೀಯ ಕ್ರಿಯಾ ಪ್ರಶಸ್ತಿ (Special Humanitarian Action Award) ನೀಡಿ ಗೌರವಿಸಿದೆ.

ಮುಂಬೈ ಸಂಹಾರ: RCB ಗೆಲುವನ್ನು ಹಬ್ಬವಾಗಿ ಆಚರಿಸಿದ ಫ್ಯಾನ್ಸ್..!...

ಆರ್‌ಸಿಬಿ ಟೂರ್ನಿಯಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ಎದುರು ಎರಡನೇ ಗೆಲುವು ದಾಖಲಿಸುತ್ತಿದ್ದಂತೆ ಅಭಿಮಾನಿಗಳು ಹುಚ್ಚೆದ್ದು ಸಂಭ್ರಮಿಸಿದ್ದಾರೆ. ಇದರ ಜತೆಗೆ ಟೀಕಾಕಾರರು ಬಾಯಿ ಮುಚ್ಚಿಕೊಂಡಿರುವಂತೆ ತಿರುಗೇಟು ನೀಡಿದ್ದಾರೆ.

ಹೈದರಾಬಾದ್‌ನಲ್ಲಿ ಕ್ರಿಕೆಟ್ ಆಡ್ತಿದ್ದಾರೆ ಕಿಚ್ಚ: ವಿಡಿಯೋ ನೋಡಿ...

ಕಿಚ್ಚ ಸುದೀಪ್ ಫ್ಯಾಂಟಮ್ ಸಿನಿಮಾ ಬ್ರೇಕ್‌ನಲ್ಲಿ ಜೋಶ್‌ನಲ್ಲಿ ಕ್ರಿಕೆಟ್ ಆಡ್ತಾ ಇದ್ದಾರೆ. ಒಂದೇ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ನಡುವಲ್ಲಿ ಗ್ಯಾಪ್ ಸಿಕ್ಕಾಗ ನಟ ಕ್ರಿಕೆಟ್ ಆಡುತ್ತಿದ್ದಾರೆ.

ಕಿಂಗ್ ಖಾನ್‌ನಿಂದ ತಲೈವಾಗೆ BMW ಗಿಫ್ಟ್..! ಸಹನಟರಿಗೆ ದುಬಾರಿ ವಾಹನ ಕೊಡಿಸ್ತಾರೆ ಶಾರೂಖ್...

ಬಾಲಿವುಡ್ ಕಿಂಗ್‌ ಖಾನ್ ಶಾರುಖ್ ಖಾನ್ ಹಲವರಿಗೆ ದುಬಾರಿ ಗಿಫ್ಟ್ ನೀಡಿದ್ದಾರೆ. ಇದರಲ್ಲಿ ಕಾಲಿವುಡ್ ತಲೈವಾ, ಸೂಪರ್ ಸ್ಟಾರ್ ರಜನಿಕಾಂತ್‌ಗೆ ಕಾರು ಗಿಫ್ಟ್ ಕೊಟ್ಟಿದ್ದಾರೆ.

ದಾಖಲೆ ಬರೆದ ಜೀಪ್: ಮೊದಲ ಮಹೀಂದ್ರ ಥಾರ್ 1.1 ಕೋಟಿಗೆ ಹರಾಜು!...

ಮಹೀಂದ್ರ ಥಾರ್ ಅಕ್ಟೋಬರ್ 2 ರಂದು ಬಿಡುಗಡೆಯಾಗುತ್ತಿದೆ. ಆಗಸ್ಟ್ 15 ರಂದು ಥಾರ್ ಜೀಪ್ ಅನಾವರಣಗೊಂಡಿತ್ತು. ಭಾರಿ ಸಂಚಲನ ಸೃಷ್ಟಿಸಿರುವ ಮಹೀಂದ್ರ ಥಾರ್ ಬಿಡುಗಡೆಗೂ ಮುನ್ನ ದಾಖಲೆ ಬರೆದಿದೆ. ಮೊತ್ತ ಮೊದಲ ಮಹೀಂದ್ರ ಥಾರ್ ಜೀಪ್ ಹರಾಜಿಗೆ ಇಡಲಾಗಿತ್ತು. ಇದೀಗ ಬರೊಬ್ಬರಿ 1.1 ಕೋಟಿಗೆ ಹರಾಜಾಗಿದೆ.

ಯುಪಿಎಸ್‍ಸಿ ಪೂರ್ವ ಪರೀಕ್ಷೆ: ಮಹತ್ವದ ತೀರ್ಪು ನೀಡಿದ ಸುಪ್ರೀಂಕೋರ್ಟ್...

ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಗಳನ್ನು ಮುಂದೂಡುಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಮಹತ್ವದ ತೀರ್ಪು ಪ್ರಕಟಿಸಿದೆ.

ಸಿಎಂ ಸವಾಲು ಸ್ವೀಕರಿಸಿದ ಮಾಜಿ ಸಿಎಂ: ರಾಜೀನಾಮೆ ನೀಡುತ್ತೇನೆಂದ ಸಿದ್ದರಾಮಯ್ಯ...!...

ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಮೇಲಿನ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸವಾಲನ್ನು ಸಿದ್ದರಾಮಯ್ಯ ಅವರು ಸ್ವೀಕರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರ್ಚಕನ ಭೀಕರ ಕೊ*ಲೆಗೆ ಕಾರಣವಾಗಿತ್ತು ಒನ್ ವೇ ಲವ್..! ಅಪ್ರಾಪ್ತ ಬಾಲಕ ಅಂದರ್
Ambari Double-Decker: ಹೇಗಿದೆ ಬೆಂಗಳೂರಿಗೆ ಬಂದಿರೋ ಅಂಬಾರಿ ಡಬಲ್ ಡೆಕ್ಕರ್ ಬಸ್?