ಬದಲಾಯ್ತು ರಾಮ ಮಂದಿರ ವಿನ್ಯಾಸ, ಬ್ಯಾಂಕ್ ಖಾಸಗೀಕರಣಕ್ಕೆ ಸಾಹಸ; ಜು.21ರ ಟಾಪ್ 10 ಸುದ್ದಿ!

By Suvarna News  |  First Published Jul 21, 2020, 4:47 PM IST

ರಾಮ ಮಂದಿರ ವಿನ್ಯಾಸದಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿದ ನಂತರ ಇದೀಗ ಅಂತಿಮ ರೂಪ ನೀಡಲಾಗಿದೆ. ಇತ್ತ  ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಮತ್ತೆ ಲಾಕ್‌ಡೌನ್ ವಿಸ್ತರಣೆ ಸಾಧ್ಯತೆಗಳಿಲ್ಲ. ಆದರೆ ಬೆಂಗಳೂರಿನಿಂದಲೇ ಗ್ರಾಮೀಣ ಭಾಗಕ್ಕೆ ಕೊರೋನಾ ಹರಡುತ್ತಿದೆ ಅನ್ನೋ ಆರೋಪಗಳು ಕೇಳಿ ಬರುತ್ತಿದೆ. ಫ್ರಾನ್ಸ್‌ನಿಂದ ಹಾರಾಟ ಆರಂಭಿಸಿರುವ 5 ರಾಫೆಲ್ ಯುದ್ಧ ವಿಮಾನ ಜುಲೈ 29ಕ್ಕೆ ಭಾರತದಲ್ಲಿ ಲ್ಯಾಂಡ್ ಆಗಲಿದೆ. ಕಂಗನಾ ಕುರಿತು ನಿರ್ದೇಶಕರ ಮಾತು, ಹೊಸ ರೂಪದಲ್ಲಿ ಹಳೇ ಲೂನಾ ಸ್ಕೂಟರ್ ಸೇರಿದಂತೆ ಜುಲೈ 21ರ ಟಾಪ್ 10 ಸುದ್ದಿ ಇಲ್ಲಿವೆ.


ಫ್ರಾನ್ಸ್‌ನಿಂದ ಹಾರಾಟ ಆರಂಭಿಸಿರುವ 5 ರಾಫೆಲ್ ಯುದ್ಧ ವಿಮಾನ ಜುಲೈ 29ಕ್ಕೆ ಭಾರತದಲ್ಲಿ ಲ್ಯಾಂಡ್!

Latest Videos

undefined

ಭಾರತ ಖರೀದಿಸಿದ ರಾಫೆಲ್ ಯುದ್ಧವಿಮಾನಗಳ ಪೈಕಿ ಮೊದಲ ಹಂತದಲ್ಲಿ 5 ಯುದ್ಧ ವಿಮಾನಗಳು ಭಾರತೀಯ ಸೇನೆ ಸೇರಿಕೊಳ್ಳುತ್ತಿದೆ. ಚೀನಾ ಗಡಿ ಬಿಕ್ಕಟ್ಟಿನ ಬೆನ್ನಲ್ಲೇ  ಅತ್ಯಾಧುನಿಕ ಹಾಗೂ ಭಾರಿ ಶಸ್ತ್ರಾಸ್ತ್ರ ತುಂಬಿದ ಈ ಯುದ್ಧವಿಮಾನ ಭಾರತ ವಾಯು ಪಡೆ ಸೇರಿಕೊಳ್ಳುತ್ತಿರುವುದು ಮಹತ್ವ ಪಡೆದುಕೊಂಡಿದೆ. 2016ರಲ್ಲಿ ಮಾಡಿದ ಖರೀದಿ ಒಪ್ಪಂದ ಪ್ರಕಾರ ಫ್ರಾನ್ಸ್ ಮೊದಲ ಹಂತದಲ್ಲಿ 5 ಯುದ್ಧವಿಮಾನ ಪೂರೈಸುತ್ತಿದೆ. ವಿಶೇಷ ಅಂದರೆ ಫ್ರಾನ್ಸ್‌ನಿಂದ ಭಾರತಕ್ಕೆ ಈ ಯುದ್ಧವಿಮಾನಗಳನ್ನು ಭಾರತೀಯ ವಾಯುಪಡೆ ಪೈಲೈಟ್‌ಗಳು ವಾಯುಮಾರ್ಗದ ಮೂಲಕ ತರಲಿದ್ದಾರೆ. 

ವಿನ್ಯಾಸದಲ್ಲಿ ಸಣ್ಣ ಬದಲಾವಣೆ: ರಾಮ ಮಂದಿರ ಜಗತ್ತಿನಲ್ಲಿಯೇ ಮೂರನೇ ದೊಡ್ಡ ಹಿಂದೂ ದೇಗುಲ ..!

ಮೊದಲೇ ಹೇಳಲಾದ ರಾಮ ಮಂದಿರ ವಿನ್ಯಾಸದಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿದ ನಂತರ ಇದೀಗ ಅಂತಿಮ ಮಾಡಲಾದ ರೂಪುರೇಷೆಯ ಪ್ರಕಾರ ಅಯೋಧ್ಯೆಯ ರಾಮ ಮಂದಿರ ಜಗತ್ತಿನಲ್ಲಿಯೇ ಮೂರನೇ ಅತ್ಯಂತ ದೊಡ್ಡ ದೇಗುಲವಾಗಿರಲಿದೆ.

ಬುಧವಾರದಿಂದ ಬೆಂಗಳೂರು ಅನ್‌ಲಾಕ್‌: ಲಾಕ್‌ಡೌನ್‌ ವಿಸ್ತರಣೆ ಇಲ್ಲ!...

ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ವಿಧಿಸಲಾಗಿದ್ದ ಲಾಕ್‌ಡೌನ್‌ ವಿಸ್ತರಣೆ ಆಗುವ ಸಾಧ್ಯತೆ ಬಹುತೇಕ ಕ್ಷೀಣಿಸಿದೆ. ಹೀಗಾಗಿ ಬುಧವಾರದಿಂದ ಜನಜೀವನ ಹಾಗೂ ಆರ್ಥಿಕ ಚಟುವಟಿಕೆಗಳು ಎಂದಿನಂತೆ ಆರಂಭವಾಗುವ ನಿರೀಕ್ಷೆಯಿದೆ.

ಸೆಪ್ಟೆಂಬರ್‌ನಲ್ಲಿ ಆಸೀಸ್‌ ತಂಡ ಇಂಗ್ಲೆಂಡ್‌ಗೆ ಪ್ರಯಾಣ...

ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಸೆಪ್ಟೆಂಬರ್‌ ಆರಂಭದಲ್ಲೇ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಮೂರು ಪಂದ್ಯಗಳ ಟಿ20 ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. 

ನಟಿ ಅಮೂಲ್ಯ ಸಹೋದರಿ ಈಗ ಕಿರುತೆರೆಯ ಖ್ಯಾತ ನಟಿ; ಯಾರು ಗೊತ್ತಾ?...

ಕಿರುತೆರೆ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಧಾರಾವಾಹಿಯ ಪ್ರಮುಖ ಪಾತ್ರಧಾರಿಯೊಬ್ಬರು ನಟಿ ಅಮೂಲ್ಯ ಸಹೋದರಿ ಎಂಬ ವಿಷಯ ಸದ್ಯ ಹೊರಬಿದ್ದಿದೆ. 

ಕಂಗನಾ ನನ್ನ ಒಳ್ಳೆಯ ಗೆಳತಿಯಾಗಿದ್ಲು, ಈ ಹೊಸ ಕಂಗನಾ ನಂಗೊತ್ತಿಲ್ಲ ಎಂದ ಖ್ಯಾತ ನಿರ್ದೇಶಕ..!

ನಟಿ ಕಂಗನಾ ರಣಾವತ್ ನನ್ನ ಉತ್ತಮ ಸ್ನೇಹಿತೆಯಾಗಿದ್ದರು. ಈ ಹೊಸ ಕಂಗನಾ ಅವರನ್ನು ನಂಗೊತ್ತಿಲ್ಲ ಎಂದು ಖ್ಯಾತ ನಿರ್ದೇಶಕ ಅನುರಾಗ್ ಕಷ್ಯಪ್ ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಖಾಸಗೀಕರಣ; 12 ರಿಂದ 5ಕ್ಕೆ ಇಳಿಸಲು ನಿರ್ಧಾರ!...

ಪ್ರತಿ ವಲಯದಲ್ಲಿ ಖಾಸಗೀಕರಣಕ್ಕೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಈ ಮೂಲಕ ಹೆಚ್ಚಿನ ಆದಾಯವನ್ನು ಸರ್ಕಾರ ನಿರೀಕ್ಷೆ ಮಾಡಲಾಗುತ್ತಿದೆ. ಬ್ಯಾಂಕ್ ವಿಲೀನ ಪದ್ದತಿಯನ್ನು ಕೈಬಿಟ್ಟ ಕೇಂದ್ರ ಸರ್ಕಾರ ಇದೀಗ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಖಾಸಗೀಕರಣಕ್ಕೆ ಮುಂದಾಗಿದೆ. 

ಎಲೆಕ್ಟ್ರಿಕ್‌ ರೂಪದಲ್ಲಿ ಬರಲಿದೆ ಚಲ್‌ ಮೇರಿ ಲೂನಾ!...

80- 90ರ ದಶಕದ ಜನರಿಗೆ ‘ಚಲ್‌ ಮೇರಿ ಲೂನಾ’ ಎಂಬ ಲೂನಾ ದ್ವಿಚಕ್ರ ವಾಹನದ ಜಾಹಿರಾತು ಪರಿಚಯವಿದ್ದೇ ಇರುತ್ತದೆ. ಸೈಕಲ್‌ ರೀತಿ ಪೆಡಲ್‌ ತುಳಿದು ಚಾಲು ಮಾಡಬೇಕಿದ್ದ ಲೂನಾ, ಕಾಲಾಂತರದಲ್ಲಿ ಹೊಸ ವಾಹನಗಳ ಮುಂದೆ ಮಂಕಾಗಿ ಮಾರುಕಟ್ಟೆಯಿಂದ ಮಾಯವಾಗಿತ್ತು. ಆದರೆ ದಶಕಗಳ ನಂತರ ಮತ್ತೆ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರಲು ಲೂನಾ ಸಜ್ಜಾಗಿದೆ.

'ಬೆಂಗಳೂರಿನಿಂದ ಬಂದವರಿಂದಲೇ ಗ್ರಾಮೀಣ ಭಾಗಕ್ಕೂ ಕೊರೋನಾ ಸೋಂಕು ವ್ಯಾಪ್ತಿಸಿದೆ'...

ರಾಜ್ಯ ರಾಜಧಾನಿ ಬೆಂಗಳೂರಿನ ಸಮೀಪದಲ್ಲಿಯೇ  ಇರುವ ತುಮಕೂರಿನಲ್ಲೂ ಜಿಲ್ಲೆಯಲ್ಲೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆಲ್ಲ ಕಾರಣ ಬೆಂಗಳೂರಿನಿಂದ ಬಂದವರು ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ನಾಪತ್ತೆಯಾಗಿದ್ದ ಡ್ರೋಣ್ ಪ್ರತಾಪ್ ಪೊಲೀಸ್ ವಶಕ್ಕೆ...

ನಾಪತ್ತೆಯಾಗಿದ್ದ ಡ್ರೋನ್ ಪ್ರತಾಪ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆಯಲ್ಲಿ ಮೈಸೂರಿನಲ್ಲಿ  ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ ಪೊಲೀಸರು. ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ಸಹೋದರಿಯ ಸ್ನೇಹಿತೆ ಮನೆಯಲ್ಲಿ ಪತ್ತೆಯಾಗಿದ್ದಾರೆ. ತಲಘಟ್ಟಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

click me!