ರಾಜ್ಯಕ್ಕೆ ಮತ್ತೆ ಲಾಕ್‌ಡೌನ್ ಸಂಕಷ್ಟ, ವಿದಾಯ ಹೇಳ್ತಾರಾ ಅನುಷ್ಕಾ? ಜು.13ರ ಟಾಪ್ 10 ಸುದ್ದಿ!

By Chethan KumarFirst Published Jul 13, 2020, 5:04 PM IST
Highlights

ಬೆಂಗಳೂರು ಲಾಕ್‌ಡೌನ್ ಬೆನ್ನಲ್ಲೇ ಇತರ ರಾಜ್ಯಗಳ ಪರಿಸ್ಥಿತಿ ಕುರಿತು ಸಿಎಂ ಬಿಸ್ ಯಡಿಯೂರಪ್ಪ ಆಯಾ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ರಾಜ್ಯಾದ್ಯಂತ ಲಾಕ್‌ಡೌನ್ ಸೂಕ್ತ ಎಂದು ಮಾಜಿ ಪ್ರಧಾನಿ ದೇವೇಗೌಡ ಆಗ್ರಹಿಸಿದ್ದಾರೆ.   ಪ್ರಧಾನಿ ಮೋದಿ ಹಾಗೂ  ಗೂಗಲ್ ಸಿಇಓ ಸುಂದರ್ ಪಿಚೈ ಮಹತ್ವ ಮಾತುಕತೆ ನಡೆಸಿದ್ದಾರೆ. ದಕ್ಷಿಣ ಭಾರತದ ನಟಿ ಅನುಷ್ಕಾ ಶೆಟ್ಟಿ ಸಿನಿಮಾಗೆ ವಿದಾಯ ಹೇಳುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದೆ.  ಕತ್ರಿನಾ ಕೈಫ್ ಮದುವೆ ಸೀಕ್ರೆಟ್, ತಿರುವಾಂಕೂರು ರಾಮಜನೆತನದ ಹಕ್ಕು ಎತ್ತಿ ಹಿಡಿದ ಸುಪ್ರೀಂ ಸೇರಿದಂತೆ ಜುಲೈ 13ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಪದ್ಮನಾಭಸ್ವಾಮಿ ದೇವಸ್ಥಾನ: ತಿರುವಾಂಕೂರು ರಾಮಜನೆತನದ ಹಕ್ಕು ಎತ್ತಿ ಹಿಡಿದ ಸುಪ್ರೀಂ

‌ನ್ಯಾ.ಉದಯ್ ಲಲಿತ್, ನ್ಯಾ.ಇಂದು ಮಲೋತ್ರ ಅವರಿದ್ದ ಪೀಠ ಮಹತ್ವದ ತೀರ್ಪನ್ನು ಪ್ರಕಟಿಸಿದ್ದು, ಮಧ್ಯಂತರ ಕ್ರಮವಾಗಿ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಸಮಿತಿ ರಚನೆ ಮಾಡಲು ಸೂಚನೆ ನೀಡಲಾಗಿದೆ.ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಪರಸ್ತ್ರೀಯೊಂದಿಗೆ ಹೊರಟ ಬಹದ್ದೂರ್‌ 'ಗಂಡ'  ರಸ್ತೆ ಮಧ್ಯೆ ಪತ್ನಿ ಕೊಟ್ಟ ಒದೆಗೆ ಫುಲ್ ಥಂಡಾ!...

ಬೀದಿಗೆ ಬಂದ ಜೋಡಿ ಜಗಳ ಜನರಿಗೆ ತಾಪತ್ರಯವಾಗಿ ಪರಿಣಮಿಸಿದೆ. ಮನೆಯಲ್ಲಿ ಸಾಲದು ಅಂಥ ಜೋಡಿಯೊಂದು ಮುಂಬೈನಲ್ಲಿ ರಸ್ತೆಗೆ ಬಂದಿ ಕಿತ್ತಾಡಿಕೊಂಡಿದ್ದಾರೆ. ಜನ ಮಾತ್ರ ಪುಕ್ಕಟೆ ಮನರಂಜನೆ  ಕಂಡಿದ್ದು ಟ್ರಾಫಿಕ್ ಸಮಸ್ಯೆ ಅನುಭವಿಸಬೇಕಾಗಿ ಬಂದಿದೆ.

ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ BSY ವಿಡಿಯೋ ಕಾನ್ಫರೆನ್ಸ್: ಸಿಎಂ ಮಹತ್ವದ ಆದೇಶ

ಸೋಂಕು ಹೆಚ್ಚುತ್ತಿರುವುದರಿಂದ ಮುಂದೆ ಜಿಲ್ಲೆಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿಗಳನ್ನು ಪಡೆದು ಕೆಲವು ಕಟ್ಟುನಿಟ್ಟಿನ ಸಲಹೆ ಸೂಚನೆ ನೀಡಿದ್ದಾರೆ. ಇದೇ ವೇಳೆ ಸದ್ಯ ಮಾನ್ಸೂನ್ ಆರಂಭವಾಗಿರುವುದರಿಂದ ಕೃಷಿ ಚಟುವಟಿಕೆ, ಪ್ರವಾಹ ಪರಿಸ್ಥಿತಿ ನಿಭಾಯಿಸುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. 

ರಾಜ್ಯಾದ್ಯಂತ ಲಾಕ್‌ಡೌನ್‌ಗೆ ದೇವೇಗೌಡರ ಆಗ್ರಹ

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಸರ್ಕಾರದ ಈ ನಿಲುವನ್ನು ಸ್ವಾಗತಿಸುತ್ತಲೇ ರಾಜ್ಯಾದ್ಯಂತ ಲಾಕ್‌ಡೌನ್ ಮಾಡಲು ಆಗ್ರಹಿಸಿದ್ದಾರೆ. ಇದೇ ವೇಳೆ ಜೆಡಿಎಸ್ ಹಿರಿಯ ನಾಯಕ ಸರ್ಕಾರಕ್ಕೆ ಎಚ್ಚರಿಕೆಯ ಜತೆಗೆ ಕಿವಿ ಮಾತುಗಳನ್ನು ಆಡಿದ್ದಾರೆ. 

ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಮೊದಲ ಟೆಸ್ಟ್ ಗೆದ್ದ ವಿಂಡೀಸ್

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ವೆಸ್ಟ್‌ ಇಂಡೀಸ್‌ ತಂಡವು 4 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿಂಡೀಸ್ 1-0 ಮುನ್ನಡೆ ಸಾಧಿಸಿದೆ. 

ಸಿನಿಮಾ ಲೋಕಕ್ಕೆ ಬಾಯ್ ಹೇಳ್ತಾರಾ ಬಾಹುಬಲಿಯ ದೇವಸೇನಾ..?

ಬಾಹುಬಲಿ ಸಿನಿಮಾಗಳ ಮೂಲಕ ಭಾರತ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ದಕ್ಷಿಣದ ನಟಿ ಅನುಷ್ಕಾ ಶೆಟ್ಟಿ ಸಿನಿಮಾ ಲೋಕಕ್ಕೆ ವಿದಾಯ ಹೇಳ್ತಿದ್ದಾರಾ ಎಂಬ ಮಾತು ಕೇಳಿ ಬರುತ್ತಿದೆ. ಅದಕ್ಕೆ ಪೂರಕವಾದಂತಿದೆ ಇತ್ತೀಚಿನ ಕೆಲವು ಬೆಳವಣಿಗೆಗಳು.

ಎರಡೆರಡು ಸಾರಿ ಬ್ರೇಕ್‌ಅಪ್ ಆದ್ರೂ ಸಿಂಗಲ್ಲಾಗಿರಲ್ಲಾ ಅಂತಾರೆ ಕತ್ರೀನಾ..! ಏನು ಕಾರಣ..?

ನೀಳ ಸುಂದರಿ ಕತ್ರೀನಾ ಕೈಫ್ ಲೈಫ್‌ನಲ್ಲಿ ಈಗಾಗಲೇ ಎರಡು ಸಾರಿ ಬ್ರೇಕ್ ಅಪ್ ಆಗಿದೆ. ಸಲ್ಮಾನ್ ಖಾನ್ ಮತ್ತು, ರಣಬೀರ್ ಕಪೂರ್ ಜೊತೆ ಇನ್ನೇನು ಮದ್ವೇನೇ ಆಗ್ಬಿಡ್ತಾರೆ ಅನ್ನೋ ಹೊತ್ತಿಗೆ ಬ್ರೇಕ್ ಅಪ್ ಆಗಿದೆ. ಇನ್ಯಾರೋ ಆಗಿದ್ದರೆ ಪ್ರೀತಿ ಪ್ರೇಮ ಸಹವಾಸವೇ ಬೇಡ ಎಂದು ಓಡಿ ಬಿಡುತ್ತಿದ್ದರು. ಆದ್ರೆ ಇನ್ನೂ ಸಿಂಗಲ್ಲಾಗಿರಲ್ಲಾ ಅಂತಾರೆ ನಟಿ.ಕತ್ರೀನಾ

ಟಿಕ್‌ಟಾಕ್ ಗೆ ಪರ್ಯಾಯವಾಗಿ ರೀಲ್ಸ್ ಬಿಟ್ಟ ಇನ್‌ಸ್ಟಾಗ್ರಾಂ!

ಈಗೇನಿದ್ದರೂ ಸೋಷಿಯಲ್ ಮೀಡಿಯಾದ್ದೇ ಆಟ. ಜನರು ತಮಗನ್ನಿಸಿದ್ದನ್ನು ಹೇಳಿಕೊಳ್ಳಲು, ವಿಡಿಯೋ ಮಾಡಿ ಅಪ್ಲೋಡ್ ಮಾಡಲು, ಬರೆದುಕೊಳ್ಳಲು ಈ ವೇದಿಕೆಯನ್ನೇ ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಈ ಮೂಲಕ ಸಖತ್ ಫೇಮಸ್ ಕೂಡಾ ಆಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹುಟ್ಟಿಕೊಂಡಿದ್ದೇ ಟಿಕ್‌ಟಾಕ್. ಆದರೆ.., ಇದು ಬ್ಯಾನ್ ಆಗಿದೆ. ಹೀಗಾಗಿ  ಮುಂದೆ ಏನು ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ಇನ್‌ಸ್ಟಾಗ್ರಾಂ ಈಗ ಪರಿಹಾರವನ್ನು ಸೂಚಿಸಲು ಹೊರಟಿದೆ.

ಪ್ರಧಾನಿ ಮೋದಿ, Goolge ಸಿಇಓ ಪಿಚೈ ಮಾತುಕತೆ, ಭಾರತದಲ್ಲಿ 75,000 ಕೋಟಿ ಹೂಡಿಕೆ!

ಕೊರೋನಾ ವೈರಸ್‌ನಿಂಗ ಕಂಗೆಟ್ಟ ಸಂದರ್ಭದಲ್ಲಿ ಗೂಗಲ್ ಭಾರತಕ್ಕೆ ಸಿಹಿ ಸುದ್ದಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಜೊತೆ ಚರ್ಚೆ ನಡೆಸಿದ ಗೂಗಲ್ CEO ಸುಂದರ್ ಪಿಚೈ ಭಾರತದಲ್ಲಿ ಬರೋಬ್ಬರಿ 75,000 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಡಿಜಿಟಲ್ ಇಂಡಿಯಾ ಸೇರಿದಂತೆ ಪ್ರಧಾನಿ ಮೋದಿ ಕನಸಿಗೆ ಮತ್ತಷ್ಟು ವೇಗ ನೀಡಲು ಗೂಗಲ್ ಸಜ್ಜಾಗಿದೆ.

ಇನೋವಾ ಪ್ರತಿಸ್ಪರ್ಧಿ MG ಹೆಕ್ಟರ್ ಪ್ಲಸ್ ಕಾರು ಬಿಡುಗಡೆ!...

ಕಳೆದ ವರ್ಷ MG ಮೋಟಾರ್ಸ್ ಹೆಕ್ಟರ್ ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಇದೀಗ ಈ ಯಶಸ್ಸಿನ ಬೆನ್ನಲ್ಲೇ 6 ಸೀಟಿನ ಹೆಕ್ಟರ್ ಪ್ಲಸ್ ಕಾರು ಬಿಡುಗಡೆ ಮಾಡಿದೆ. ಕೊರೋನಾ ವೈರಸ್ ಕಾರಣ ಎಂಜಿ ಹೆಕ್ಟರ್ ಪ್ಲಸ್ ಕಾರು ಬಿಡುಗಡೆ ಕೊಂಚ ವಿಳಂಬವಾಗಿತ್ತು. ಕೊನೆಗೂ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಿದೆ. 

click me!